ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Masood Azhar: ಮಸೂದ್‌ ಅಜರ್‌ ಸತ್ತಿಲ್ಲ..! ಕುಟುಂಬಸ್ಥರನ್ನು ಕಳೆದುಕೊಂಡ ಬೆನ್ನಲ್ಲೇ ಉಗ್ರನಿಂದ ಪೋಸ್ಟ್‌

ಲಾಹೋರ್‌ ನಿಂದ 400 ಕಿಲೋ ಮೀಟರ್‌ ದೂರದಲ್ಲಿರುವ ಬಹಾವಲ್ಪುರದಲ್ಲಿರುವ ಜೈಶ್‌ ಎ ಮೊಹಮ್ಮದ್‌ ನ ಪ್ರಧಾನ ಕಚೇರಿಯನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿತ್ತು. ಸುಮಾರು 18ಕ್ಕೂ ಅಧಿಕ ಎಕರೆ ಜಾಗದಲ್ಲಿರುವ ಜೈಶ್‌ ಇ ಮೊಹಮ್ಮದ್‌ ಪ್ರಧಾನ ಕಚೇರಿ ಉಗ್ರರ ನೇಮಕಾತಿ, ದೇಣಿಗೆ ಸಂಗ್ರಹ, ಉಗ್ರ ಚಟುವಟಿಕೆಯ ಕೇಂದ್ರ ಸ್ಥಾನವಾಗಿತ್ತು.

ಕುಟುಂಬಸ್ಥರನ್ನು ಕಳೆದುಕೊಂಡ ಬೆನ್ನಲ್ಲೇ ಮಸೂದ್‌ ಅಜರ್‌ ದಾಳಿಯ ಎಚ್ಚರಿಕೆ

Profile Abhilash BC May 7, 2025 1:13 PM

ಕರಾಚಿ: ಭಾರತದ ಆಪರೇಷನ್‌ ಸಿಂಧೂರ್‌(Operation Sindoor) ದಾಳಿಯಲ್ಲಿ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್(Masood Azhar) ತನ್ನ ಕುಟುಂಬದ 10 ಸದಸ್ಯರು ಮತ್ತು ನಾಲ್ವರು ಸಹಾಯಕರು ಸಾವನ್ನಪ್ಪಿದ್ದನ್ನು ಖಚಿತಪಡಿಸಿರುವಾಗಿ ಬಿಬಿಸಿ ಉರ್ದು ವರದಿ ಮಾಡಿದೆ. ಪಾಕಿಸ್ತಾನದ ಬಹಾವಲ್ಪುರದಲ್ಲಿ ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ. ದಾಳಿ ವೇಳೆ ಮಸೂದ್ ಅಜರ್ ಇಸ್ಲಾಮಾಬಾದ್‌ ಸೇನಾ ನೆಲೆಯಲ್ಲಿ ರಕ್ಷಣೆ ಪಡೆದಿದ್ದ ಎನ್ನಲಾಗಿದೆ.

ಮೃತರಾದವರಲ್ಲಿ ಅಜರ್‌ನ ಅಕ್ಕ ಮತ್ತು ಆಕೆಯ ಪತಿ, ಆತನ ಸೋದರಳಿಯ ಮತ್ತು ಪತ್ನಿ, ಮತ್ತೊಬ್ಬ ಸೊಸೆ ಮತ್ತು ಆತನ ಕುಟುಂಬದ ಐವರು ಮಕ್ಕಳು ಸೇರಿದ್ದಾರೆ ಎಂದು ಜೆಇಎಂ ಮುಖ್ಯಸ್ಥನ ಹೇಳಿಕೆಯನ್ನು ಉಲ್ಲೇಖಿಸಿ ಬಿಬಿಸಿ ಉರ್ದು ವರದಿ ಮಾಡಿದೆ. ಕುಟುಂಬದ ಸಾವಿಗೆ ಶೀಘ್ರದಲ್ಲೇ ಪ್ರತಿಕಾರ ತೀರಿಸುವುದಾಗಿ ಮಸೂದ್ ಅಜರ್ ಎಚ್ಚರಿಕೆ ನೀಡಿದ್ದಾಗಿಯೂ ವರದಿಯಾಗಿದೆ.



ಲಾಹೋರ್‌ ನಿಂದ 400 ಕಿಲೋ ಮೀಟರ್‌ ದೂರದಲ್ಲಿರುವ ಬಹಾವಲ್ಪುರದಲ್ಲಿರುವ ಜೈಶ್‌ ಎ ಮೊಹಮ್ಮದ್‌ ನ ಪ್ರಧಾನ ಕಚೇರಿಯನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿತ್ತು. ಸುಮಾರು 18ಕ್ಕೂ ಅಧಿಕ ಎಕರೆ ಜಾಗದಲ್ಲಿರುವ ಜೈಶ್‌ ಇ ಮೊಹಮ್ಮದ್‌ ಪ್ರಧಾನ ಕಚೇರಿ ಉಗ್ರರ ನೇಮಕಾತಿ, ದೇಣಿಗೆ ಸಂಗ್ರಹ, ಉಗ್ರ ಚಟುವಟಿಕೆಯ ಕೇಂದ್ರ ಸ್ಥಾನವಾಗಿತ್ತು.

ಜೈಷ್‌ –ಎ –ಮೊಹಮ್ಮದ್‌ ಸಂಘಟನೆ 2019, ಫೆ.14ರಂದು ಭಾರತದ ಭದ್ರತಾ ಪಡೆಗಳ ವಿರುದ್ಧ ನಡೆದ ಪುಲ್ವಾಮಾ ದಾಳಿಯಲ್ಲಿ ಪಾತ್ರವಹಿಸಿತ್ತು. ಮಸೂದ್‌ ಅಜರ್‌ನನ್ನು ಕಪ್ಪು ಪಟ್ಟಿಗೆ ಸೇರಿಸುವಭಾರತದ ಪ್ರಸ್ತಾವಕ್ಕೆ ಫ್ರಾನ್ಸ್‌, ಅಮೆರಿಕ ಮತ್ತು ಬ್ರಿಟನ್‌ ಭಾರತಕ್ಕೆ ಬೆಂಬಲವಾಗಿ ನಿಂತಿದ್ದವು. ಆ ಬಳಿಕ ವಿಶ್ವಸಂಸ್ಥೆ ಅಜರ್‌ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸಿತ್ತು. 001ರ ಸಂಸತ್‌ ದಾಳಿ, 2005ರ ಅಯೋಧ್ಯೆ ರಾಮನ ದೇಗುಲದ ಮೇಲಿನ ದಾಳಿಯ ರೂವಾರಿ ಕೂಡ ಆಗಿದ್ದ.

ಇದನ್ನೂ ಓದಿ Operation Sindoor: 'ರಫೇಲ್ ಬಗ್ಗೆ ನಿಂಬು-ಮಿರ್ಚಿ' ಹೇಳಿಕೆ ನೀಡಿದ್ದ ಕಾಂಗ್ರೆಸ್‌ ನಾಯಕನಿಂದ ಸೇನೆಗೆ ಶ್ಲಾಘನೆ

ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್‌, ಭಾರತ ದಾಳಿ ನಿಲ್ಲಿಸಿದರೆ ಉದ್ವಿಗ್ನತೆ ಶಮನಕ್ಕೆ ಸಿದ್ಧ ಎಂದು ಹೇಳಿದ್ದಾರೆ. ನಾವು ಭಾರತದ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳುತ್ತಿದ್ದೇವೆ. ಆದರೆ ನಮ್ಮ ಮೇಲೆ ದಾಳಿ ನಡೆದರೆ, ನಾವು ಪ್ರತಿಕ್ರಿಯಿಸುತ್ತೇವೆ. ಭಾರತ ಹಿಂದೆ ಸರಿದರೆ, ನಾವು ಖಂಡಿತವಾಗಿಯೂ ಈ ಉದ್ವಿಗ್ನತೆಯನ್ನು ಶಮನಗೊಳಿಸುತ್ತೇವೆ ಎಂದಿದ್ದಾರೆ.