Jasprit Bumrah: ಕಪಿಲ್, ಇಶಾಂತ್ ದಾಖಲೆ ಮುರಿದ ಬುಮ್ರಾ
Jasprit Bumrah: ಮೂರನೇ ಪಂದ್ಯದಲ್ಲಿ ಜಸ್‌ಪ್ರೀತ್ ಬುಮ್ರಾ ಫಾತಕ ಬೌಲಿಂಗ್ ದಾಳಿ ನಡೆಸಿ ಮೊದಲ ಇನಿಂಗ್ಸ್‌ನಲ್ಲಿ 5 ಮತ್ತು ದ್ವಿತೀಯ ಇನಿಂಗ್ಸ್‌ನಲ್ಲಿ 3 ವಿಕೆಟ್ ಸೇರಿ ಒಟ್ಟು 9 ವಿಕೆಟ್ ಕಲೆಹಾಕಿದ್ದರು.
Abhilash BC
December 19, 2024
ಬ್ರಿಸ್ಬೇನ್: ಭಾರತ ಟೆಸ್ಟ್ ತಂಡದ ಉಪನಾಯಕ ಜಸ್‌ಪ್ರೀತ್ ಬುಮ್ರಾ(Jasprit Bumrah) ಅವರು ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ವಿದೇಶಿ ನೆಲದಲ್ಲಿ ಗರಿಷ್ಠ ಟೆಸ್ಟ್ ವಿಕೆಟ್ ಕಿತ್ತ ಮೊದಲ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. ಆಸೀಸ್ ವಿರುದ್ಧದ ಮೂರನೇ ಟೆಸ್ಟ್‌ನ ದ್ವಿತೀಯ ಇನಿಂಗ್ಸ್‌ನಲ್ಲಿ ಮೂರು ವಿಕೆಟ್ ಕೀಳುವ ಮೂಲಕ ಈ ಸಾಧನೆಗೈದರು. ಈ ಹಾದಿಯಲ್ಲಿ ದಿಗ್ಗಜ ಆಟಗಾರ ಕಪಿಲ್ ದೇವ್(51) ಮತ್ತು ಇಶಾಂತ್ ಶರ್ಮಾ(51) ಅವರನ್ನು ಹಿಂದಿಕ್ಕಿದರು.
ಮೂರನೇ ಪಂದ್ಯದಲ್ಲಿ ಜಸ್‌ಪ್ರೀತ್ ಬುಮ್ರಾ ಫಾತಕ ಬೌಲಿಂಗ್ ದಾಳಿ ನಡೆಸಿ ಮೊದಲ ಇನಿಂಗ್ಸ್‌ನಲ್ಲಿ 5 ಮತ್ತು ದ್ವಿತೀಯ ಇನಿಂಗ್ಸ್‌ನಲ್ಲಿ 3 ವಿಕೆಟ್ ಸೇರಿ ಒಟ್ಟು 9 ವಿಕೆಟ್ ಕಲೆಹಾಕಿದ್ದರು. 5 ವಿಕೆಟ್ ಕೀಳುವ ಮೂಲಕ ವಿದೇಶಿ ನೆಲದಲ್ಲಿ ಆಡಿದ್ದ ಟೆಸ್ಟ್ ಪಂದ್ಯದಲ್ಲಿಯೂ ಅತ್ಯಧಿಕ ಬಾರಿ 5 ವಿಕೆಟ್ ಗೊಂಚಲು ಪಡೆದ ಭಾರತದ ಮೊದಲ ವೇಗಿ ಎಂಬ ದಾಖಲೆಯನ್ನು ಬರೆದಿದ್ದರು.
ಬ್ರಿಸ್ಬೇನ್ ಟೆಸ್ಟ್ ಪಂದ್ಯ ಡ್ರಾಗೊಂಡಿರುವ ಕಾರಣ ಭಾರತದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ ಕಠಿಣಗೊಂಡಿದೆ. ಫೈನಲ್ ಸಾಧ್ಯತೆಯನ್ನು ಹೆಚ್ಚಿಸಿಕೊಳ್ಳಬೇಕಾದರೆ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಉಳಿದೆರಡು ಪಂದ್ಯಗಳನ್ನು ಗೆಲ್ಲಬೇಕು. ಆಗ ಗೆಲುವಿನ ಶೇಕಡಾ ವಾರನ್ನು 60.52ಕ್ಕೆ ಏರಿಸಲು ಅವಕಾಶವಿದೆ. ಒಂದು ಪಂದ್ಯ ಸೋತರೂ ಭಾರತ ಫೈನಲ್ ರೇಸ್‌ನಿಂದ ಬಹುತೇಕ ಹೊರಬೀಳಲಿದೆ. ಒಂದು ವೇಳೆ ಭಾರತ 2 ಪಂದ್ಯದಲ್ಲಿ 1 ಪಂದ್ಯ ಸೋತು ಅಥವಾ ಡ್ರಾಗೊಳಿಸಿಕೊಂಡರೆ, ಆಗ ಆಸೀಸ್ -ಲಂಕಾ ನಡುವಿನ 2 ಪಂದ್ಯಗಳ ಸರಣಿಯ ಫಲಿತಾಂಶವನ್ನು ಭಾರತ ಅವಲಂಬಿಸಬೇಕಾಗುತ್ತದೆ. ಸದ್ಯ ಭಾರತದ ಗೆಲುವಿನ ಶೇಕಡವಾರು ಅಂಕ 55.88 ರಷ್ಟಿದೆ.
ಇದನ್ನೂ ಓದಿ AUS vs IND: ಬುಮ್ರಾಗೆ ಜನಾಂಗೀಯ ನಿಂದನೆ ಮಾಡಿದ ಇಂಗ್ಲೆಂಡ್ ಮಾಜಿ ಆಟಗಾರ್ತಿ
ದಕ್ಷಿಣ ಆಫ್ರಿಕಾಗೆ ಹೆಚ್ಚು ಅವಕಾಶ
ಅಗ್ರಸ್ಥಾನಿ ದಕ್ಷಿಣ ಆಫ್ರಿಕಾ ತಂಡಕ್ಕೆ ಫೈನಲ್ ಪ್ರವೇಶಿಸಲು ಇನ್ನೊಂದು ಗೆಲುವು ಸಾಧಿಸಿದರೆ ಸಾಕು. ಅದು ಕೂಡ ತವರಿನಲ್ಲಿ ನಡೆಯುತ್ತಿರುವ ಸರಣಿಯಾದ ಕಾರಣ ದಕ್ಷಿಣ ಆಫ್ರಿಕಾ ಮೇಲುಗೈ ಸಾಧಿಸುವುದರಲ್ಲಿ ಅನುಮಾನವೇ ಬೇಡ. ಒಂದೊಮ್ಮೆ ದಕ್ಷಿಣ ಆಫ್ರಿಕಾ ಫೈನಲ್ ಪ್ರವೇಶಿಸಿದರೆ ಚೊಚ್ಚಲ ಬಾರಿಗೆ ಫೈನಲ್ ಆಡಲಿದೆ. ದಕ್ಷಿಣ ಆಫ್ರಿಕಾ (63.33) ಅಂಕ ಹೊಂದಿದೆ.
ಆದಾಗ್ಯೂ, ದಕ್ಷಿಣ ಆಫ್ರಿಕಾ ಉಳಿದಿರುವ ಎರಡೂ ಪಂದ್ಯಗಳಲ್ಲಿ ಸೋತರೆ, ಎರಡನೇ ಫೈನಲಿಸ್ಟ್ ಅನ್ನು ನಿರ್ಧರಿಸಲು ಆಸ್ಟ್ರೇಲಿಯಾ-ಶ್ರೀಲಂಕಾ ಸರಣಿಯ ಫಲಿತಾಂಶವನ್ನು ಅವಲಂಬಿಸಬೇಕಿದೆ. ಒಂದೊಮ್ಮೆ ದಕ್ಷಿಣ ಆಫ್ರಿಕಾ ತಂಡ ಪಾಕ್ ವಿರುದ್ಧ ಸರಣಿ ಸೋತರೆ ಆಗ ಭಾರತ ಆಸೀಸ್ ವಿರುದ್ಧ ಒಂದು ಗೆಲುವು ಸಾಧಿಸಿದರೂ ಫೈನಲ್ ತಲುಪಬಹುದು.