ಚಿತ್ರ ನಟ ಅನಂತ್ ನಾಗ್ ಸೇರಿದಂತೆ ಇಬ್ಬರು ಕನ್ನಡಿಗರಿಗೆ ಪದ್ಮ ಭೂಷಣ!
ಭಾರತ ಸರ್ಕಾರ ಶನಿವಾರ ಪದ್ಮ ಪ್ರಶಸ್ತಿಗಳನ್ನು ಘೋಷಿಸಿದೆ. ಕರ್ನಾಟಕದಿಂದ ಇಬ್ಬರು ಸಾಧಕರಯ ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕನ್ನಡ ಸಿನಿಮಾ ದಿಗ್ಗಜ ಅನಂತ್ ನಾಗ್ ಹಾಗೂ ಹಿರಿಯ ಪತ್ರಕರ್ತ ಎ ಸೂರ್ಯ ಪ್ರಕಾರ್ ಅವರನ್ನು ಪದ್ಮ ಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Surya Prakash- Anant Nag

ನವದೆಹಲಿ: ಭಾರತ ಸರ್ಕಾರ ಶನಿವಾರ 2025ರ ಸಾಲಿನ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಿದೆ. ರಾಷ್ಟ್ರಪತಿಗಳು ಈ ಬಾರಿ 139 ಪದ್ಮ ಪ್ರಶಸ್ತಿಗಳನ್ನು ಅನುಮೋದಿಸಿದ್ದಾರೆ. ಈ ಪಟ್ಟಿಯಲ್ಲಿ 7 ಪದ್ಮವಿಭೂಷಣ, 19 ಪದ್ಮಭೂಷಣ ಮತ್ತು 113 ಪದ್ಮಶ್ರೀ ಪ್ರಶಸ್ತಿಗಳು ಸೇರಿವೆ. ಪ್ರಶಸ್ತಿ ಪುರಸ್ಕೃತರಲ್ಲಿ 23 ಮಂದಿ ಮಹಿಳೆಯರು. ಈ ಪಟ್ಟಿಯಲ್ಲಿ 10 ವಿದೇಶಿಯರು ಮತ್ತು 13 ಮರಣೋತ್ತರ ಪ್ರಶಸ್ತಿ ಪುರಸ್ಕೃತರು ಸೇರಿದ್ದಾರೆ. ಅಂದ ಹಾಗೆ ಕರ್ನಾಟಕದಿಂದ ಇಬ್ಬರು ಸಾಧಕರನ್ನು ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕನ್ನಡ ಚಲನಚಿತ್ರ ನಟ ಅನಂತ್ ನಾಗ್ ಹಾಗೂ ಹಿರಿಯ ಪತ್ರಕರ್ತ ಎ ಸೂರ್ಯ ಪ್ರಕಾಶ್ ಅವರಿಗೆ ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಪದ್ಮ ಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಸಾಹಿತ್ಯ ಹಾಗೂ ಶಿಕ್ಷಣ ಹಾಗೂ ಪತ್ರಿಕೋದ್ಯಮದಲ್ಲಿ ಅಪಾರ ಸೇವೆ ಸಲ್ಲಿಸಿದ ಫಲವಾಗಿ ಕರ್ನಾಟಕದ ಎ ಸೂರ್ಯ ಪ್ರಕಾಶ್‌ಗೆ ಪದ್ಮ ಭೂಷಣ ಪ್ರಶಸ್ತಿ ನೀಡಲಾಗುತ್ತಿದೆ. ಇನ್ನು ಸಿನಿಮಾ ರಂಗದಲ್ಲಿ ಅಭೂತಪೂರ್ವ ಸೇವೆಯನ್ನು ಪರಿಗಣಿಸಿ ಅನಂತ್ ನಾಗ್ ಅವರನ್ನು ಪರಿಗಣಿಸಲಾಗಿದೆ.
Padma Awards 2025: ಕರ್ನಾಟಕದ ಮಡಿಲಿಗೆ 3 ಪದ್ಮಶ್ರೀ ಪ್ರಶಸ್ತಿ
ಎ ಸೂರ್ಯ ಪ್ರಕಾಶ್ ಯಾರು?
ಹಾಸನ ಜಿಲ್ಲೆಯ ಅರಕಲಗೂಡು ಮೂಲದ ಸೂರ್ಯ ಪ್ರಕಾಶ್ ಅವರು ಪ್ರಸಾರ ಭಾರತಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಆ ಮೂಲಕ ಹುದ್ದೆಯನ್ನು ನಿರ್ವಹಿಸಿದ ಎರಡನೇ ಕನ್ನಡಿಗ ಎಂಬ ಹೆಮ್ಮೆಗೂ ಇವರು ಪಾತ್ರರಾಗಿದ್ದಾರೆ.
ಸೂರ್ಯ ಪ್ರಕಾಶ್ ಅವರು‘ದಿ ಪಯೋನಿರ್’ನಲ್ಲಿ ಕಾರ್ಯನಿರ್ವಾಹಕ ಸಂಪಾದಕ, ‘ಈ ನಾಡು’ ನ್ಯೂಸ್‌ಪೇಪರ್ ಸಮೂಹದ ರಾಜಕೀಯ ಸಂಪಾದಕ, ‘ಜೀ ನ್ಯೂಸ್’ನಲ್ಲಿ ಸಂಪಾದಕ, ಬ್ಯಾಂಕಾಕ್ ಮತ್ತು ಸಿಂಗಾಪುರದಲ್ಲಿ ಪ್ರಕಟವಾಗುವ ‘ಏಷ್ಯಾ ಟೈಮ್ಸ್ ’ದೈನಿಕದಲ್ಲಿ ಇಂಡಿಯಾ ಎಡಿಟರ್, ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ದಿಲ್ಲಿ ಬ್ಯುರೋ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
Padma Awards 2025: ಪದ್ಮ ಪ್ರಶಸ್ತಿ ಪ್ರಕಟ; ಕರ್ನಾಟಕದ ವೆಂಕಪ್ಪ ಅಂಬಾಜಿ ಮುಡಿಗೆ ಪ್ರತಿಷ್ಠಿತ ಗೌರವ
ಅನಂತ್ ನಾಗ್ ಕುರಿತು ಮಾಹಿತಿ
ಕನ್ನಡ ಚಲನಚಿತ್ರದ ಸಾರ್ವಕಾಲಿಕ ಶ್ರೇಷ್ಠ ನಟರಲ್ಲಿ ಅನಂಗ್ ನಾಗ್ ಕೂಡ ಒಬ್ಬರು. ಅವರು ನಟರಾಗಿ ಮಾತ್ರವಲ್ಲದೆ, ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಲೇಖಕರಾಗಿಯೂ ಅನಂತ್ ನಾಗ್ ದೊಡ್ಡ ಹೆಸರು ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಲದವರಾದ ಅವರು, ಕನ್ನಡ ಭಾಷೆಯಲ್ಲಿ 150ಕ್ಕೂ ಹೆಚ್ಚಿನ ಸಿನಿಮಾಗಳಕ್ಕಿ ನಟಿಸಿದ್ದಾರೆ.
ಇವುಗಳ ಪೈಕಿ, ಅರುಣರಾಗ, ಅನುಪಮ, ಮುಳ್ಳಿನಗುಲಾಬಿ, ಹೊಸ ನೀರು , ಬಾಡದ ಹೂ, ಜನ್ಮಜನ್ಮದ ಅನುಬಂಧ ಅನಂತ್ ನಾಗ್ ನಟಿಸಿದ ಪ್ರಮುಖ ಚಿತ್ರಗಳು. ನಾಯಕನಾಗಿ ಹಾಸ್ಯಪಾತ್ರಗಳಲ್ಲಿ ಯಶಸ್ವಿಯಾದ ಕನ್ನಡದ ನಟರಲ್ಲಿ ಅನಂತ್ ನಾಗ್ ಮೊದಲಿಗರು. ಚಾಲೆಂಜ್ ಗೋಪಾಲಕೃಷ್ಣ, ಗೋಲ್ ಮಾಲ್ ರಾಧಾಕೃಷ್ಣ, ಸುಖ ಸಂಸಾರಕ್ಕೆ ಹನ್ನೆರಡು ಸೂತ್ರಗಳು, ಹೆಂಡ್ತೀಗ್ಹೇಳ್ಬೇಡಿ, ಗೌರಿ ಗಣೇಶ, ಗಣೇಶ ಸುಬ್ರಮಣ್ಯ, ಮನೇಲಿ ಇಲಿ ಬೀದೀಲಿ ಹುಲಿ, ಧೈರ್ಯಲಕ್ಷ್ಮಿ, ನಾರದ ವಿಜಯ, ಹಾಸ್ಯರತ್ನ ರಾಮಕೃಷ್ಣ, ಯಾರಿಗೂ ಹೇಳ್ಬೇಡಿ, ಗಾಯತ್ರಿ ಮದುವೆ, ಇನ್ನೊಂದು ಮದುವೆ, ಯಾರಿಗೆ ಸಾಲುತ್ತೆ ಸಂಬಳ ಪ್ರಮುಖ ಸಿನಿಮಾಗಳಾಗಿವೆ.