ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಬೆಂಗಳೂರಿನಲ್ಲಿ ಶಾಲಾ ಸಮಯ ಬದಲಾವಣೆ ಆಗುತ್ತಾ? ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಮಹತ್ವದ ಸಭೆ

ಬೆಂಗಳೂರಿನಲ್ಲಿ ಶಾಲಾ ಸಮಯ ಬದಲಾವಣೆ ಆಗುತ್ತಾ?

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸಂಚಾರ ದಟ್ಟಣೆಗೆ (Traffic Congestion) ಬ್ರೇಕ್ ಹಾಕಲು ರಾಜ್ಯ ಸರ್ಕಾರವು ಒಂದು ಮಹತ್ವದ ಹೆಜ್ಜೆಯನ್ನಿಟ್ಟಿದೆ. ನಗರದಾದ್ಯಂತ ಶಾಲಾ-ಕಾಲೇಜುಗಳ ಆರಂಭ ಮತ್ತು ಮುಕ್ತಾಯದ ವೇಳಾಪಟ್ಟಿಯನ್ನು ಪರಿಷ್ಕರಿಸುವ ಕುರಿತು ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಗಂಭೀರ ಚಿಂತನೆ ನಡೆಸಿದೆ.

ಕನಿಷ್ಠ ಸೇವಾವಧಿ ಪೂರ್ಣಗೊಳ್ಳುವ ಮುನ್ನ ವರ್ಗಾವಣೆಗೆ ಅವಕಾಶವಿಲ್ಲ

ಕನಿಷ್ಠ ಸೇವಾವಧಿ ಪೂರ್ಣಗೊಳ್ಳುವ ಮುನ್ನ ವರ್ಗಾವಣೆಗೆ ಅವಕಾಶವಿಲ್ಲ

ಭಾಸ್ಕರ್ ಮೇ 11ರಂದು ಬ್ಯಾಡರ ಹಳ್ಳಿ ಠಾಣೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದರಿಂದಲೇ ಒಂದು ವರ್ಷ ಅಲ್ಲಿಯೇ ಮುಂದುವರಿ ಯುವ ಪ್ರಶ್ನಾತೀತ ಹಕ್ಕು ಅವರಿಗೆ ದೊರೆಯುವುದಿಲ್ಲ. ಪೂರ್ವಾ ನುಮತಿ ಇಲ್ಲದಿರುವುದು ಸರಿಪಡಿಸಬಹುದಾದ ಲೋಪವಾಗಿದ್ದು, ವರ್ಗಾವಣೆ ಆದೇಶ ಅನೂರ್ಜಿತ ಗೊಳಿಸುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿಂದು ಗುಡುಗು ಸಹಿತ ಮಳೆ; ಬೆಂಗಳೂರಿನ ಹವಾಮಾನ ಹೇಗಿದೆ?

ರಾಜ್ಯದ ಹಲವು ಜಿಲ್ಲೆಗಳಲ್ಲಿಂದು ಗುಡುಗು ಸಹಿತ ಮಳೆ

Karnataka Weather: ರಾಜ್ಯದಲ್ಲಿ ನೈರುತ್ಯ ಮುಂಗಾರು ಚಟುವಟಿಕೆ ದುರ್ಬಲವಾಗಿದ್ದರೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆಯಂತೆ ಸೆಪ್ಟೆಂಬರ್ 14ರಂದು ದಕ್ಷಿಣ ಒಳನಾಡಿನ ಕೆಲವೆಡೆ ಗುಡುಗು-ಮಿಂಚು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಬೆಂಗಳೂರು ವಿವಿಯಲ್ಲಿ 46 ಉತ್ತರ ಪತ್ರಿಕೆ ನಾಪತ್ತೆ: ಕಳೆದ ಒಂದು ವರ್ಷದಿಂದ ಫಲಿತಾಂಶಕ್ಕಾಗಿ ಕಾಯುತ್ತಿರುವ ಬಿಕಾಂ ವಿದ್ಯಾರ್ಥಿಗಳಿಗೆ ಆತಂಕ

ಬೆಂಗಳೂರು ವಿವಿಯಲ್ಲಿ 46 ಉತ್ತರ ಪತ್ರಿಕೆ ನಾಪತ್ತೆ

ಜ್ಞಾನಭಾರತಿ ಆವರಣದಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬಿ.ಕಾಂ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಗಳು ಆಧುನಿಕ ಬ್ಯಾಂಕಿಂಗ್ ವಿಷಯಕ್ಕೆ ಬರೆದಿದ್ದ 46 ಉತ್ತರ ಪತ್ರಿಕೆಗಳು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ವಿದ್ಯಾರ್ಥಿಗಳು ಏಪ್ರಿಲ್ 2025ರಲ್ಲಿ ಪರೀಕ್ಷೆ ಬರೆದಿದ್ದು, ಇಂದಿಗೂ ಫಲಿತಾಂಶ ಕ್ಕಾಗಿ ಕಾಯುತ್ತಿದ್ದಾರೆ.

KPSC Recruitment Scam: ಕೆಪಿಎಸ್‌ಸಿಯನ್ನೂ ಮೀರಿಸಿದೆ ಕೊಪ್ಪಳ ವಿವಿ, ನೇಮಕಾತಿ ಅಕ್ರಮ, ಲಂಚವೇ ಪರಪಂಚ

ಕೆಪಿಎಸ್‌ಸಿಯನ್ನೂ ಮೀರಿಸಿದೆ ಕೊಪ್ಪಳ ವಿವಿ

ಯಲಬುರ್ಗಾ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರ ಪುತ್ರನೊಬ್ಬ ಇಲ್ಲಿ ಹೊರಗುತ್ತಿಗೆ ನೌಕರನಾಗಿದ್ದು, ಇಡೀ ಅಕ್ರಮದ ಸೂತ್ರಧಾರ ಆತನೇ ಎಂದು ಆರೋಪಿಸಲಾಗಿದೆ. ಇಷ್ಟೆಲ್ಲ ಗೊತ್ತಿದ್ದರೂ ಸ್ವತಃ ತಮ್ಮ ಸ್ವಗ್ರಾಮ ದಲ್ಲಿರುವ ಕೊಪ್ಪಳ ವಿಶ್ವವಿದ್ಯಾಲಯದ ದಯನೀಯ ಸ್ಥಿತಿಯ ಬಗ್ಗೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಸಂಪೂರ್ಣ ನಿರ್ಲ ಕ್ಷ್ಯ ವಹಿಸಿದ್ದಾರೆ ಎಂದು ಜನ ಬೇಸರ ವ್ಯಕ್ತಪಡಿಸಿದ್ದಾರೆ.

Gauribidanur News: ಗಣೇಶೋತ್ಸವಕ್ಕೆ ಅನಗತ್ಯ ಷರತ್ತು ವಿಧಿಸಬೇಡಿ: ಹಿಂದೂ ಸಂಘಟನೆಗಳ ಆಗ್ರಹ

ಕಾನೂನು ಎಲ್ಲರಿಗೂ ಸಮಾನವಾಗಿರಲಿ

ನಗರದ ಶ್ರೀರಾಮ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ನಗರ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಧಾರ್ಮಿಕ ಹಾಗೂ ಶಾಸ್ತ್ರೋಕ್ತ ವಿಧಿ–ವಿಧಾನಗಳ ಮೂಲಕ ಗಣೇಶೋತ್ಸವ ಆಚರಿಸಲು ಮುಕ್ತ ಅವಕಾಶ ಕಲ್ಪಿಸಬೇಕು. ವರ್ಷಕ್ಕೊಮ್ಮೆ ನಡೆಯುವ ಗಣೇಶೋತ್ಸವಕ್ಕೆ ಅನಗತ್ಯ ನಿರ್ಬಂಧಗಳನ್ನು ವಿಧಿಸಬಾರದು ಎಂದು ಆಗ್ರಹಿಸಿದರು.

Chikkaballapur News: ಉರ್ದು ಭಾಷೆ ಬೆಳೆಸುವ ಜವಾಬ್ದಾರಿ ಹೊಸ ಪೀಳಿಗೆಯ ಮೇಲಿದೆ: ಮಹಮ್ಮದ್ ಉಬೇದುಲ್ಲಾ ಶರೀಫ್

ಉರ್ದು ಭಾಷೆಯಲ್ಲಿ ಸಾಧನೆ: 217 ವಿದ್ಯಾರ್ಥಿಗಳಿಗೆ ಸನ್ಮಾನ

ಕರ್ನಾಟಕ ಅಂಜುಮನ್ ತರಖ್ಖಿ ಉರ್ದು (ಹಿಂದ್) ರಾಜ್ಯಾಧ್ಯಕ್ಷ ಮಹಮ್ಮದ್ ಉಬೇದುಲ್ಲಾ ಶರೀಫ್ ಮಾತನಾಡಿ, ಉರ್ದು ಭಾಷೆಯ ಅಭಿವೃದ್ಧಿ ಹಾಗೂ ಉತ್ತೇಜನಕ್ಕಾಗಿ ಅಂಜುಮನ್ ನಿರಂತರವಾಗಿ ಶ್ರಮಿಸುತ್ತಿದೆ. ಕಳೆದ ಐದು ವರ್ಷಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉರ್ದು ವಿಷಯದಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.

B N Ravikumar: ಕುಮಾರಸ್ವಾಮಿ ಮೂರನೇ ಬಾರಿ ಸಿಎಂ ಆದಾಗ ಕಾರ್ಯಕರ್ತರ ಸಮಸ್ಯೆಗಳಿಗೆ ಪರಿಹಾರ: ಬಿ.ಎನ್.ರವಿಕುಮಾರ್

ಮಹಿಳಾ ಕಾರ್ಯಕರ್ತೆಯರ ಗೌರವಕ್ಕೆ ಶಿಡ್ಲಘಟ್ಟದಲ್ಲಿ ವಿಶೇಷ ಬಾಗಿನೋತ್ಸವ

ತಾಲ್ಲೂಕಿನ ಹಂಡಿಗನಾಳ ಗ್ರಾಮದ ಕೆ.ವಿ. ಭವನದ ಆವರಣದಲ್ಲಿ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಅಂಗನವಾಡಿ, ಆಶಾ ಹಾಗೂ ಅಕ್ಷರ ದಾಸೋಹ ಕಾರ್ಯಕರ್ತೆಯರಿಗೆ ಆಯೋಜಿಸಿದ್ದ ಬಾಗಿನೋ ತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರನ್ನು ಗೌರವಿಸುವ ಹಾಗೂ ಅವರ ಸೇವೆಯನ್ನು ಗುರುತಿಸುವ ಇಂತಹ ಕಾರ್ಯಕ್ರಮಗಳು ಪ್ರತಿಯೊಂದು ತಾಲ್ಲೂಕಿನಲ್ಲೂ ನಡೆಯಬೇಕು

Bagepally News: ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎಂಬಂತಾಗಿದೆ ಮಣ್ಣನ್ನು ನಂಬಿಕೊಂಡವರ ಸ್ಥಿತಿ

ಉಚಿತ ಗಣೇಶ ವಿಗ್ರಹ ಹಂಚಿಕೆ: ಸ್ಥಳೀಯ ಕುಂಬಾರರ ಬದುಕಿಗೆ ಸಂಕಷ್ಟ

ಬಾಗೇಪಲ್ಲಿ, ಗುಡಿಬಂಡೆ ಹಾಗೂ ಚೇಳೂರು ತಾಲೂಕುಗಳಲ್ಲಿ ಅವಶ್ಯಕತೆಗಿಂತಲೂ ಹೆಚ್ಚಿನ ಪ್ರಮಾಣ ದಲ್ಲಿ ಉಚಿತ ಗಣೇಶ ವಿಗ್ರಹಗಳನ್ನು ವಿತರಿಸಲಾಗುತ್ತಿದ್ದು, ಇದರಿಂದ ಸ್ಥಳೀಯವಾಗಿ ತಯಾರಿಸಿರುವ ವಿಗ್ರಹಗಳಿಗೆ ಬೇಡಿಕೆ ಕುಸಿದಿದೆ. ವರ್ಷವಿಡೀ ಶ್ರಮಪಟ್ಟು ತಯಾರಿಸಿರುವ ನೂರಾರು ವಿಗ್ರಹಗಳು ಖರೀದಿಯಾಗದೆ ಗೋದಾಮುಗಳಲ್ಲಿ ಸಂಗ್ರಹವಾಗಿರುವ ಪರಿಸ್ಥಿತಿ ನಿರ್ಮಾಣ ವಾಗಿದೆ.

ಗಣೇಶೋತ್ಸವದಲ್ಲಿ ಡಿಜೆ ಬಳಕೆಗೆ ಸಂಪೂರ್ಣ ನಿಷೇಧ: ಉಲ್ಲಂಘಿಸಿದರೆ ಮೆರವಣಿಗೆ ಸ್ಥಗಿತ, ಉಪಕರಣ ಜಪ್ತಿ; ಪ್ರಕರಣ ದಾಖಲಿಸಲು ಸೂಚನೆ

ಗಣೇಶೋತ್ಸವದಲ್ಲಿ ಡಿಜೆ ಬಳಕೆಗೆ ಸಂಪೂರ್ಣ ನಿಷೇಧ

ಜಿಲ್ಲೆಯಾದ್ಯಂತ ಸೆ.13 ಮತ್ತು 14ರಂದು ಗಣೇಶೋತ್ಸವ ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ, ಸಾರ್ವಜನಿಕ ಶಾಂತಿ, ಆರೋಗ್ಯ ಹಾಗೂ ಸುರಕ್ಷತೆ ಕಾಪಾಡುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಈ ನಿಷೇಧ ಜಾರಿಗೊಳಿಸಲಾಗಿದೆ. ಹೆಚ್ಚಿನ ಶಬ್ದದಿಂದ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು, ವಯೋವೃದ್ಧರು ಹಾಗೂ ಮಕ್ಕಳಿಗೆ ತೊಂದರೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ

Koratagere News: ಕೊರಟಗೆರೆಯಲ್ಲಿ ಗಂಗಾಧರೇಶ್ವರ ನಗರ, ಅನ್ನಪೂರ್ಣೇಶ್ವರಿ ನಗರದ ನಾಮಫಲಕ ಅನಾವರಣ

ಕೊರಟಗೆರೆಯಲ್ಲಿ ಗಂಗಾಧರೇಶ್ವರ ನಗರದ ನಾಮಫಲಕ ಅನಾವರಣ

ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ಕೊರಟಗೆರೆ ಪಟ್ಟಣದ ಗಂಗಾಧರೇಶ್ವರ ಸ್ವಾಮಿಯ ಹೆಸರನ್ನು ನಾಮಕರಣ ಮಾಡಿರುವುದು ಸಂತಸ ತಂದಿದೆ. ಪಟ್ಟಣ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದೆ. ಮುಂದಿನ ದಿನಗಳಲ್ಲಿ ಕೊರಟಗೆರೆ ಇನ್ನಷ್ಟು ಬೃಹತ್ ಪಟ್ಟಣವಾಗಿ ಬೆಳೆಯಲಿ ಎಂದು ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾಶಾಖಾ ಮಠದ ಪೀಠಾಧ್ಯಕ್ಷ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹಾರೈಸಿದ್ದಾರೆ.

Tumkur News: ಶತಮಾನದ ಇತಿಹಾಸವಿರುವ ಸರಕಾರಿ ಶಾಲೆಯ ಜಾಗ ಉಳಿಸಲು ಒತ್ತಾಯ

ಶತಮಾನದ ಇತಿಹಾಸವಿರುವ ಸರಕಾರಿ ಶಾಲೆಯ ಜಾಗ ಉಳಿಸಲು ಒತ್ತಾಯ

ತುಮಕೂರಿನಲ್ಲಿ ಶತಮಾನದ ಇತಿಹಾಸವಿರುವ ಶಾಲೆಯ ಜಾಗವು ಮಾರುಕಟ್ಟೆಯಲ್ಲಿ ಅಧಿಕ ಬೆಲೆ ಬಾಳುತ್ತಿರುವುದರಿಂದ, ಕೆಲ ಖಾಸಗಿ ಸಂಸ್ಥೆಗಳು ಹಾಗೂ ರಿಯಲ್ ಎಸ್ಟೇಟ್ ಲಾಬಿ ಶಾಲೆಯ ಮೇಲೆ ಕಣ್ಣಿಟ್ಟಿವೆ. ಶಾಲಾ ಜಾಗವನ್ನು ಕಬಳಿಸುವ ದುರುದ್ದೇಶದಿಂದಲೇ ಶಾಲೆಗೆ ಸರಿಯಾದ ಮೂಲಭೂತ ಸೌಕರ್ಯಗಳು ಸಿಗದಂತೆ ತಡೆಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

Ganesh Chaturthi 2026: ಸಾರ್ವಜನಿಕ ಗಣೇಶೋತ್ಸವ: ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಪಡೆಯಲು ಬೆಸ್ಕಾಂನಿಂದ ಮಾರ್ಗಸೂಚಿ ಬಿಡುಗಡೆ

ಸಾರ್ವಜನಿಕ ಗಣೇಶೋತ್ಸವಕ್ಕೆ ಬೆಸ್ಕಾಂನಿಂದ ಮಾರ್ಗಸೂಚಿ ಬಿಡುಗಡೆ

ಗಣೇಶ ಉತ್ಸವಕ್ಕೆ ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರ ನೀಡಿದ ತಕ್ಷಣ ಸಂಬಂಧಪಟ್ಟ ಉಪ ವಿಭಾಗಗಳ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಪೆಂಡಾಲ್‌ ನಿರ್ಮಿಸಿರುವ ಸಮಾರಂಭ ಸ್ಥಳವನ್ನು ಪರಿಶೀಲಿಸಿ, ಸದರಿ ಸ್ಥಳವು ಸುರಕ್ಷತೆಯಿಂದ ಕೂಡಿದೆಯೇ ಎಂಬದನ್ನು ಖಾತ್ರಿ ಪಡಿಸಿಕೊಂಡು ವಿದ್ಯುತ್‌ ಸಂಪರ್ಕಕ್ಕೆ ನಿರಾಕ್ಷೇಪಣಾ ಪತ್ರ ನೀಡಬೇಕು ಎಂದು ಬೆಸ್ಕಾಂ ಸೂಚಿಸಿದೆ.

Pavagada Naxalites: ಪಾವಗಡದಲ್ಲಿ ನಕ್ಸಲ್ ಭೀತಿ; ಶಂಕಿತ ನಕ್ಸಲ್ ವೆಂಕಟೇಶ್‌ಗಾಗಿ ಬೃಹತ್ ಕೂಂಬಿಂಗ್ ಕಾರ್ಯಾಚರಣೆ

ಪಾವಗಡದಲ್ಲಿ ಶಂಕಿತ ನಕ್ಸಲ್ ವೆಂಕಟೇಶ್‌ಗಾಗಿ ಕೂಂಬಿಂಗ್ ಕಾರ್ಯಾಚರಣೆ

ಪಾವಗಡದಲ್ಲಿ ತಾಲೂಕಿನಲ್ಲಿ ಶಂಕಿತ ವೆಂಕಟೇಶ್‌ನ ಜಾಡು ಪತ್ತೆಹಚ್ಚಲು ಪೊಲೀಸರು ಅತ್ಯಾಧುನಿಕ ಡ್ರೋನ್ ಕ್ಯಾಮೆರಾಗಳ ಮೂಲಕವೂ ಕಣ್ಗಾವಲು ಇಟ್ಟಿದ್ದಾರೆ. ಗ್ರಾಮಗಳು, ಗುಡ್ಡಗಾಡು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ಕಾರ್ಯ ಮುಂದುವರಿದಿದ್ದು, ಶಂಕಿತನ ಬಂಧನಕ್ಕಾಗಿ ಪೊಲೀಸ್ ಇಲಾಖೆ ಕಾರ್ಯಾಚರಣೆ ತೀವ್ರಗೊಳಿಸಿದೆ.

Annabrahma Chaturmasya: ಸ್ಟೀಲ್, ಪ್ಲಾಸ್ಟಿಕ್ ಬಿಟ್ಟು ಪಾರಂಪರಿಕ ಪಾತ್ರೆಗಳನ್ನು ಬಳಸಿ: ರಾಘವೇಶ್ವರ ಶ್ರೀ ಸಲಹೆ

ಸ್ಟೀಲ್, ಪ್ಲಾಸ್ಟಿಕ್ ಬಿಟ್ಟು ಪಾರಂಪರಿಕ ಪಾತ್ರೆಗಳನ್ನು ಬಳಸಿ

Raghaveshwara Bharathi swamy: ಚಿನ್ನ, ಬೆಳ್ಳಿ, ತಾಮ್ರ, ಕಂಚು, ಹಿತ್ತಾಳೆ ಪಾತ್ರೆಗಳು ನೀರಿನ ಗುಣವನ್ನು ವೃದ್ಧಿಸಿದರೆ, ಗಾಜು ಗುಣವೃದ್ಧಿ ಮಾಡದೇ ಇದ್ದರೂ ಅದು ಗುಣಹಾನಿಯನ್ನು ಮಾಡುವುದಿಲ್ಲ. ಆದರೆ ಸ್ಟೇನ್ಲೆಸ್ ಸ್ಟೀಲ್, ಅಲ್ಯೂಮಿನಿಯಂ ಹಾಗೂ ಪ್ಲಾಸ್ಟಿಕ್ ಪಾತ್ರೆಗಳು ಸರ್ವದಾ ಬಳಕೆಗೆ ಅಯೋಗ್ಯ ಎಂದು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಸಮಾಜದಲ್ಲಿ ಅಶಾಂತಿ ಮೂಡಿಸಲು ಬಿಜೆಪಿ ಕುತಂತ್ರ: ಸಿಎಂ ಆರೋಪ

ಸಮಾಜದಲ್ಲಿ ಅಶಾಂತಿ ಮೂಡಿಸಲು ಬಿಜೆಪಿ ಕುತಂತ್ರ: ಸಿಎಂ ಆರೋಪ

ಗಣೇಶೋತ್ಸವ ಆಚರಣೆಗೆ ಸರ್ಕಾರ ಅನೇಕ ನಿರ್ಬಂಧ ಹೇರಿದೆ ಎಂಬ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರ ಹೇಳಿಕೆ ಬಗ್ಗೆ ಸಿಎಂ ಡಿ.ಕೆ.ಶಿವಕುಮಾರ್‌ ಅವರು ಪ್ರತಿಕ್ರಿಯಿಸಿದ್ದಾರೆ. ಈ ವಿಚಾರದಲ್ಲಿ ಬಿಜೆಪಿಯವರು ಕೋಮು ಪ್ರಚೋದನೆ ಮಾಡುತ್ತಿದ್ದಾರೆ. ಗಣೇಶ ಹಬ್ಬವನ್ನು ಬಹಳ ಶಾಂತಿಯುತವಾಗಿ ಆಚರಣೆ ಮಾಡಬೇಕು. ಮೆರವಣಿಗೆ ಹೋಗುವಾಗ ಶಿಸ್ತು ಪಾಲನೆ ಆಗಬೇಕು ಎಂದು ಸಿಎಂ ತಿಳಿಸಿದ್ದಾರೆ.

BJP Protest in T Narasipura: ಟಿ.ನರಸೀಪುರ ಠಾಣೆ ಮುಂದೆ ಅಹೋರಾತ್ರಿ ಧರಣಿಗೆ ಮುಂದಾದ ಬಿಜೆಪಿ ನಾಯಕರು; ಪ್ರತಾಪ್ ಸಿಂಹ, ಅಶೋಕ್, ಯದುವೀರ್ ಸೇರಿ ಹಲವರು ಪೊಲೀಸರ ವಶಕ್ಕೆ

ಟಿ.ನರಸೀಪುರ ಠಾಣೆ ಮುಂದೆ ಪ್ರತಿಭಟನೆ; ಬಿಜೆಪಿ ನಾಯಕರು ಪೊಲೀಸರ ವಶಕ್ಕೆ

ಟಿ.ನರಸೀಪುರದ ಪೊಲೀಸ್ ಇನ್‌ಸ್ಪೆಕ್ಟರ್ ಧನಂಜಯ್ ಅವರು ಗಣೇಶ ಮೆರವಣಿಗೆ ವೇಳೆ ಮಸೀದಿ ಮುಂದೆ ಪಟಾಕಿ ಸಿಡಿಸಿದರೆ ಗ್ರಹಚಾರ ಬಿಡಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು. ಈ ವಿಡಿಯೊ ವೈರಲ್‌ ಆದ ಬಳಿಕ ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಬಿಜೆಪಿ ನಾಯಕರು ಟಿ.ನರಸೀಪುರ ಠಾಣೆ ಮುಂದೆ ಅಹೋರಾತ್ರಿ ಧರಣಿ ನಡೆಸಲು ಮುಂದಾದಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕುಮಾರಸ್ವಾಮಿ ಅವರ ಅಲ್ಲೋಲ ಕಲ್ಲೋಲ‌ವನ್ನು ಬಿಡಿಸಿ ಹೇಳಬೇಕೇ?; ನಮ್ಮನ್ನು ಸೀಳಿ ಇಡಿ, ಸಿಬಿಐಗೆ ನೀಡಲಿ ಎಂದ ಸಿಎಂ ಡಿಕೆಶಿ

ಕುಮಾರಸ್ವಾಮಿಯ ಅಲ್ಲೋಲ ಕಲ್ಲೋಲ‌ವನ್ನು ಬಿಡಿಸಿ ಹೇಳಬೇಕೇ? ಸಿಎಂ

ಕುಮಾರಸ್ವಾಮಿಯವರು ನನ್ನನ್ನು ಅಧಿಕಾರದಿಂದ ಇಳಿಸಿ ಬಿಡ್ತೇನೆ, ದೆಹಲಿಯಿಂದ ಬಾಂಬ್ ಹಾಕಿ ಬಿಡ್ತೇನೆ, ಅಲ್ಲೋಲ‌ ಕಲ್ಲೋಲ ಮಾಡಿ ಬಿಡ್ತೇನೆ ಅಂತ ಮಾತಾಡುತ್ತಿದ್ದಾರೆ. ನಮ್ಮನ್ನು ಏನು ಬೇಕಾದರೂ ಮಾಡಲಿ. ನಮ್ಮನ್ನು ಬೇಕಾದರೆ ಸೀಳಿ ಇಡಿ, ಸಿಬಿಐಗೆ ತೆಗೆದುಕೊಂಡು ಹೋಗಲಿ. ಆದರೆ ಅವರ ವಿರುದ್ಧ ತನಿಖೆ ಮಾಡಿದಾಗ ನ್ಯಾಯಾಲಯಕ್ಕೆ ಹೋಗಿ ಏಕೆ ತಡೆಯಾಜ್ಞೆ ತರಲಾಗುತ್ತಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಪ್ರಶ್ನಿಸಿದ್ದಾರೆ.

T. Narasipur Ganesha festival: ಟಿ.ನರಸೀಪುರದಲ್ಲಿ ಗಣೇಶ ಮೆರವಣಿಗೆಗೆ ಯಾವುದೇ ನಿರ್ಬಂಧವಿಲ್ಲ: ಎಸ್‌ಪಿ ಬಾಲದಂಡಿ

ಟಿ.ನರಸೀಪುರದಲ್ಲಿ ಪ್ರತಿ ವರ್ಷದಂತೆ ಗಣೇಶ ಮೆರವಣಿಗೆಗೆ ಅವಕಾಶವಿದೆ: ಎಸ್‌ಪಿ

ಮಸೀದಿ ಇರುವ ರಸ್ತೆಯಲ್ಲಿ ಗಣೇಶ ಮೆರವಣಿಗೆ ಹೋದರೆ ಗ್ರಹಚಾರ ಬಿಡಿಸುತ್ತೇನೆ ಎಂಬ ಟಿ.ನರಸೀಪುರ ಇನ್‌ಸ್ಪೆಕ್ಟರ್‌ ಧನಂಜಯ ಅವರ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಸ್ಪಷ್ಟನೆ ನೀಡಿದ್ದು, ಮೆರವಣಿಗೆ ಹೊಸ ನಿರ್ಬಂಧಗಳು ಇಲ್ಲ, ಈ ಮೊದಲಿನಿಂದ ನಡೆಯುವ ಮಾರ್ಗಗಳಲ್ಲಿ ಗಣೇಶ ಮೆರವಣಿಗೆಗೆ ಅವಕಾಶ ಇದೆ ಎಂದು ಹೇಳಿದ್ದಾರೆ.

BJP Protest in T Narasipura: ಟಿ.ನರಸೀಪುರ ಠಾಣೆ ಮುಂದೆ ಹೈಡ್ರಾಮಾ; ಇನ್ಸ್‌ಪೆಕ್ಟರ್‌ ಧನಂಜಯ್ ವಿರುದ್ಧ ಕ್ರಮಕ್ಕೆ ಬಿಜೆಪಿ ನಾಯಕರ ಪಟ್ಟು

ಟಿ.ನರಸೀಪುರ ಠಾಣೆ ಮುಂದೆ BJP ಪ್ರತಿಭಟನೆ; ಇನ್ಸ್‌ಪೆಕ್ಟರ್‌ ಕ್ಷಮೆಗೆ ಪಟ್ಟು

T Narasipura Inspector Dhananjay: ಟಿ.ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್ ರಾಜೀನಾಮೆಗೆ ಪಟ್ಟು ಹಿಡಿದಿರುವ ಬಿಜೆಪಿ ನಾಯಕರು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪ್ರತಿಭಟನೆ ವೇಳೆ ಭಾರಿ ಹೈಡ್ರಾಮಾ ನಡೆದಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ.

Pravasi Prapancha: ಬಾಗಿಲಿಲ್ಲದ ಭಗವಂತ; ಕುಣಿಗಲ್‌ನ ಬೆಟ್ಟದ ರಂಗನಾಥಸ್ವಾಮಿ

ಬಾಗಿಲಿಲ್ಲದ ಭಗವಂತ: ಕುಣಿಗಲ್‌ನ ಬೆಟ್ಟದ ರಂಗನಾಥಸ್ವಾಮಿ

Bettada Ranganathaswamy Temple: ಬೆಟ್ಟದ ರಂಗನಾಥಸ್ವಾಮಿ ಕ್ಷೇತ್ರವನ್ನು ಜನರು ವಿಶೇಷವಾಗಿ ನೆನಪಿಸಿಕೊಳ್ಳುವುದು 'ಬಾಗಿಲಿಲ್ಲದ ದೇವರು' ಎಂಬ ಕಾರಣಕ್ಕೆ. ಒಮ್ಮೆ ದೇವಾಲಯವನ್ನು ನಿರ್ಮಿಸಿ ಬಾಗಿಲು ಹಾಕಿ ಪೂಜೆ ಸಲ್ಲಿಸಲಾಗುತ್ತಿತ್ತು ಎನ್ನುವುದು ಕ್ಷೇತ್ರದ ಇತಿಹಾಸದಲ್ಲಿದೆ. ಆದರೆ ಭಕ್ತರ ನಂಬಿಕೆಯ ಪ್ರಕಾರ 'ನನ್ನನ್ನು ನೋಡಲು ಬರುವ ಭಕ್ತರಿಗೆ ಸಮಯದ ಹಂಗೇಕೆ? ನನ್ನ ದರ್ಶನಕ್ಕೆ ಬಾಗಿಲಿನ ಬಂಧನವೇಕೆ?'ಎಂಬ ಭಾವದಿಂದ ರಂಗನಾಥಸ್ವಾಮಿಯೇ ಆ ಬಾಗಿಲುಗಳನ್ನು ಒದ್ದರೆಂದು ಹೇಳಲಾಗುತ್ತದೆ. ಆ ಬಾಗಿಲುಗಳು ಕುಣಿಗಲ್ ಕೆರೆಗೆ ಹೋಗಿ ಬಿದ್ದವು ಎಂಬುದು ಹಿರಿಯರು ಹೇಳಿಕೊಂಡು ಬಂದಿರುವ ನಂಬಿಕೆ.

Ganesh Chaturthi 2026: ಹಾವೇರಿ ಜಿಲ್ಲೆಯಲ್ಲಿ 2,315 ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ; ಡಿಜೆ ಸೌಂಡ್ ನಿಷೇಧ, ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್

ಹಾವೇರಿ ಜಿಲ್ಲೆಯಲ್ಲಿ ಗೌರಿ-ಗಣೇಶ ಹಬ್ಬಕ್ಕೆ ಬಿಗಿ ಬಂದೋಬಸ್ತ್

ಹಾವೇರಿ ಜಿಲ್ಲೆಯಲ್ಲಿ ಗಣೇಶೋತ್ಸವದ ಬಂದೋಬಸ್ತ್ ಕರ್ತವ್ಯಕ್ಕಾಗಿ ಒಬ್ಬರು ಎಸ್‌ಪಿ, ಒಬ್ಬರು ಹೆಚ್ಚುವರಿ ಎಸ್‌ಪಿ, ಐವರು ಡಿಎಸ್‌ಪಿ, 15 ಸಿಪಿಐ/ಪಿಐ, 45 ಪಿಎಸ್‌ಐ, 50 ಎಎಸ್‌ಐ, 500 ಎಚ್‌ಸಿ/ಪಿಸಿ, 400 ಗೃಹರಕ್ಷಕ ಸಿಬ್ಬಂದಿ ಸೇರಿದಂತೆ ಡಿಎಆರ್, ಕೆಎಸ್‌ಆರ್‌ಪಿ ಹಾಗೂ ಕ್ಯೂಆರ್‌ಟಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಎಪಿಎಂಸಿ ಭೇಟಿ ಬಳಿಕ ಬೀದಿಗಿಳಿದ ಪೊಲೀಸ್ ಇಲಾಖೆ: 800 ಬಾಲ ಕಾರ್ಮಿಕರ ರಕ್ಷಣೆ

800 ಬಾಲ ಕಾರ್ಮಿಕರ ರಕ್ಷಣೆ

ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ) ನಿಯಂತ್ರಣ ಕೊಠಡಿಯ ವರದಿ ಪ್ರಕಾರ, ರಾಜ್ಯದ 962 ಪೊಲೀಸ್ ಠಾಣೆಗಳ ವ್ಯಾಪ್ತಿ ಯಲ್ಲಿ ಈ ಬೃಹತ್ ತಪಾಸಣಾ ಕಾರ್ಯ ನಡೆಸಲಾಗಿದೆ. ಕಾರ್ಯಾಚರಣೆ ಯ ಭಾಗವಾಗಿ 16951 ವಾಣಿಜ್ಯ ಮಳಿಗೆಗಳು, ಕಾರ್ಖಾನೆಗಳು ಮತ್ತು ಇತರೆ ಅನುಮಾನಾಸ್ಪದ ಸ್ಥಳಗಳ ಮೇಲೆ ಪೊಲೀಸರು ಹಠಾತ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಇಡಿಗೆ ದೂರಿತ್ತವರು ಯಾರೆಂದು ಗೊತ್ತು: ಆಫ್ರಿಕಾದಲ್ಲಿ ಹೂಡಿಕೆ ಮಾಡಿದ್ದರೆ ಇಡಿ ದಾಖಲೆ ನೀಡಲಿ: ಸತೀಶ್

ಆಫ್ರಿಕಾದಲ್ಲಿ ಹೂಡಿಕೆ ಮಾಡಿದ್ದರೆ ಇಡಿ ದಾಖಲೆ ನೀಡಲಿ: ಸತೀಶ್

ಶನಿವಾರ ನಗರದ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಡಿ ಜಾರಿ ನಿರ್ದೇಶನಾಲಯದ ಮಾಧ್ಯಮ ಪ್ರಕಟಣೆಯಲ್ಲಿ ಹೂಡಿಕೆ ಮತ್ತು ಲೋಕೋಪಯೋಗಿ ಇಲಾಖೆ ಲಂಚ ಪಡೆದಿರುವ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿದೆ. ಈ ಸಂಬಂಧ ಇಡಿ ಅಧಿಕಾರಿಗಳು ನೋಟಿಸ್ ನೀಡಿದರೆ ಸೂಕ್ತ ಉತ್ತರ, ಸ್ಪಷ್ಟನೆ ನೀಡಲಾಗುವುದು ಎಂದರು.

Loading...