ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Lottery Winner: 7.14 ಕೋಟಿ ರೂ.ಗಳ ಲಾಟರಿ ಗೆದ್ದ ಉದ್ಯೋಗಿ; ಕೊನೆಗೆ ಆಗಿದ್ದೇನು?

ಚೀನಾದ ಸ್ಪ್ರಿಂಗ್ ಫೆಸ್ಟಿವಲ್ ಸಮಯದಲ್ಲಿ ಚೀನಾದ ಕಂಪೆನಿಗಳು ಪಾರ್ಟಿಯ ವೇಳೆ ಉದ್ಯೋಗಿಗಳಿಗೆ ಲಾಟರಿ(Lottery Winner) ಟಿಕೆಟ್ ವಿತರಿಸುತ್ತಾರೆ. ಈ ರೀತಿ ಪಡೆದ ಲಾಟರಿಯಲ್ಲಿ ಉದ್ಯೋಗಿಯೊಬ್ಬರು 6 ಮಿಲಿಯನ್ ಯುವಾನ್ (ಅಂದಾಜು ರೂ 7.14 ಕೋಟಿ) ದೊಡ್ಡ ಮಟ್ಟದ ಬಹುಮಾನವನ್ನು ಗೆದ್ದಿದ್ದಾರೆ. ಆದರೆ ಲಾಟರಿ ಗೆದ್ದ ಖುಷಿ ಮಾತ್ರ ಇವರಿಗೆ ಹೆಚ್ಚು ಹೊತ್ತು ಉಳಿಯಲಿಲ್ಲ!ಅಷ್ಟಕ್ಕೂ ಆಗಿದ್ದೇನು? ಈ ಕುರಿತ ಮಾಹಿತಿ ಇಲ್ಲಿದೆ.

ಲಾಟರಿ ಗೆದ್ದ ಖುಷಿಯಲ್ಲಿದ್ದವನಿಗೆ ಹೀಗಾ ಆಗೋದು!

china lottery

Profile pavithra Jan 18, 2025 3:19 PM

ಬೀಜಿಂಗ್‌, ಜ.18, 2025: ಚೀನಾದ ಝೆಜಿಯಾಂಗ್ ಪ್ರಾಂತ್ಯದ ನಿಂಗ್ಬೊದಲ್ಲಿನ ಕಂಪನಿಯು ಇತ್ತೀಚೆಗೆ ತನ್ನ ವಾರ್ಷಿಕ ವರ್ಷಾಂತ್ಯದ ಪಾರ್ಟಿಯನ್ನು ನಡೆಸಿತು. ಈ ವೇಳೆ ಹಬ್ಬದ ವಾತಾವರಣವನ್ನು ಹೆಚ್ಚಿಸಲು ಉದ್ಯೋಗಿಗಳಿಗೆ 500ಕ್ಕೂ ಹೆಚ್ಚು ಲಾಟರಿ ಟಿಕೆಟ್‍ಗಳನ್ನು ವಿತರಿಸಲಾಗಿತ್ತು(Lottery Winner). ಅದರಲ್ಲಿ ಒಂದು ಟಿಕೆಟ್ 6 ಮಿಲಿಯನ್ ಯುವಾನ್ (ಅಂದಾಜು ರೂ. 7.14 ಕೋಟಿ) ದೊಡ್ಡ ಮೊತ್ತದ ಬಹುಮಾನವನ್ನು ಗೆದ್ದಿದೆ. ಈ ಟಿಕೆಟ್ ಪಡೆದ ಸಿಬ್ಬಂದಿ ಈ ವಿಚಾರ ಕೇಳಿ ಸಂತೋಷಪಟ್ಟಿದ್ದಾರೆ. ಆದರೆ ಈ ಸಂತೋಷ ಹೆಚ್ಚು ಹೊತ್ತು ಇರಲಿಲ್ಲ. ಯಾಕೆಂದರೆ ಕಂಪೆನಿಯು ವಿಜೇತರ ಬಳಿ ಬಹುಮಾನದ ಹಣವನ್ನು ಹಿಂದಿರುಗಿಸುವಂತೆ ವಿನಂತಿಸಿದೆ ಮತ್ತು ಅದನ್ನು ಭಾಗವಹಿಸಿದ ಎಲ್ಲಾ ಉದ್ಯೋಗಿಗಳಿಗೂ ಸಮಾನವಾಗಿ ಹಂಚುವುದಾಗಿ ತಿಳಿಸಿತ್ತು(Viral News).

ಸ್ಪ್ರಿಂಗ್ ಫೆಸ್ಟಿವಲ್ ಸಮೀಪಿಸುತ್ತಿದ್ದಂತೆ ಈ ಘಟನೆ ಚೀನಾದ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಕಾಣಿಸಿಕೊಂಡಿದೆ. ಈ ಸಮಯದಲ್ಲಿ ಅನೇಕ ಕಂಪನಿಗಳು ಇದೇ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಇದು ಕುಸಿಯುತ್ತಿರುವ ಲಾಟರಿ ಟಿಕೆಟ್ ಮಾರಾಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಕೆಲವರು ಊಹಿಸುತ್ತಾರೆ.

ಗೆಲುವಿನ ನಂತರ, ಹಲವಾರು ಉದ್ಯೋಗಿಗಳು ತಮ್ಮ ಉತ್ಸಾಹವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಾಗಾಗಿ ಇದು ಸಾರ್ವಜನಿಕ ಆಸಕ್ತಿಯನ್ನು ಸೆಳೆದಿದೆ. ಗೆದ್ದ ಹಣವನ್ನು ಮರುಹಂಚಿಕೆ ಮಾಡುವ ಕಂಪನಿಯ ನಿರ್ಧಾರವು ಹಬ್ಬದ ಆಚರಣೆಯ ಸಮಯದಲ್ಲಿ ಕಾರ್ಪೊರೇಟ್ ನೀತಿಗಳು ಮತ್ತು ಉದ್ಯೋಗಿಗಳ ಹಕ್ಕುಗಳ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ.

ಕಳೆದ ವರ್ಷ, ಓಹಿಯೋ ಮೂಲದ ರೋಜರ್ಸ್ ಸೋರ್ಸ್, ಟಿಫಿನ್‍ನ ಎನ್ ವಾಷಿಂಗ್ಟನ್ ಸ್ಟ್ರೀಟ್‍ನ ಪಿಟ್ ಸ್ಟ್ಯಾಂಪ್‍ನಲ್ಲಿ ಬುಧವಾರದ ಪಿಕ್ 5 ಡ್ರಾಯಿಂಗ್‍ಗಾಗಿ ಟಿಕೆಟ್ ಖರೀದಿಸಿದ್ದರು. ಅವರು ವಿಶಿಷ್ಟ ಸಂಖ್ಯೆಗಳ (1-0-8-2-2. )ಒಂದು ಸೆಟ್‍ ಅನ್ನು ಆಯ್ಕೆ ಮಾಡಿದರು. ಈ ಆಯ್ಕೆಯು ಅವರಿಗೆ ಜಾಕ್‌ಪಾಟ್‌ ಹೊಡೆಯಲು ಕಾರಣವಾಯಿತು. ಯಾಕೆಂದರೆ ಅದರಿಂದ ಅವರು $ 50,000 (ಸುಮಾರು ರೂ 41 ಲಕ್ಷ) ಹಣವನ್ನು ಗೆದ್ದಿದ್ದಾರೆ.

ಈ ಸುದ್ದಿಯನ್ನೂ ಓದಿ:Viral News: ಲಾಟರಿಯಲ್ಲಿ ಕೇರಳದ ನರ್ಸ್‌ಗೆ ಜಾಕ್‌ಪಾಟ್‌; ಇವರಿಗೆ ಸಿಕ್ಕ ಹಣ ನಿಮ್ಮ ಊಹೆಗೂ ಮೀರಿದ್ದು

"ನಾನು ಪಿಕ್ 5 ಗಾಗಿ ಎರಡು ಸೆಟ್ ಸಂಖ್ಯೆಗಳನ್ನು ಆಯ್ಕೆ ಮಾಡಿದ್ದೇನೆ ಮತ್ತು ಗೆದ್ದ ಸಂಖ್ಯೆ ವಾಸ್ತವವಾಗಿ ನನ್ನ ಜರ್ಮನ್ ಶೆಫರ್ಡ್‍ನ ಲೈಸೆನ್ಸ್ ಪ್ಲೇಟ್‍ನ ಸಂಖ್ಯೆಯಾಗಿದೆ. ಅದು ಈಗ ನಮ್ಮೊಂದಿಗಿಲ್ಲ" ಎಂದು ಅವರು ಹೇಳಿದ್ದಾರೆ.