Viral News: ಲಾಟರಿಯಲ್ಲಿ ಕೇರಳದ ನರ್ಸ್‌ಗೆ ಜಾಕ್‌ಪಾಟ್; ಇವರಿಗೆ ಸಿಕ್ಕ ಹಣ ನಿಮ್ಮ ಊಹೆಗೂ ಮೀರಿದ್ದು
Viral News: ಜೀವನದಲ್ಲಿ ಬಹಳಷ್ಟು ಕಷ್ಟವುಂಡ 36 ವರ್ಷದ ಮನು ಮೋಹನನ್ ಎಂಬ ಕೇರಳದ ವ್ಯಕ್ತಿ ಬಹ್ರೇನ್‍ನಲ್ಲಿ ಆಂಬ್ಯುಲೆನ್ಸ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಅವರಿಗೆ ಜಾಕ್‌ಪಾಟ್ ಹೊಡೆದಿದ್ದು, ಬಿಗ್ ಟಿಕೆಟ್ ಲಾಟರಿಯಲ್ಲಿ ಮಿಲಿಯನ್‍ಗಟ್ಟಲೆ ಹಣ ಗೆದ್ದಿದ್ದಾರೆ. ಅವರು ಗೆದ್ದ ಹಣವೆಷ್ಟು, ಮತ್ತು ಅದನ್ನು ಅವರು ಹೇಗೆ ಬಳಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
Source : Free press jounal
ಮನಮಃ, ಜ. 17,2025: ಬಹ್ರೇನ್‍ನಲ್ಲಿ ಆಂಬ್ಯುಲೆನ್ಸ್ ನರ್ಸ್ ಆಗಿ ಕೆಲಸ ಮಾಡುತ್ತಿರುವ 36 ವರ್ಷದ ಮನು ಮೋಹನನ್ ಎಂಬ ಕೇರಳದ ವ್ಯಕ್ತಿ ಬಿಗ್ ಟಿಕೆಟ್ ಲಾಟರಿಯಲ್ಲಿ 30 ಮಿಲಿಯನ್ ಬಹ್ರೇನ್ ದಿನಾರ್ (ಭಾರತೀಯ ಕರೆನ್ಸಿಯಲ್ಲಿ 71 ಕೋಟಿ ರೂ. ) ಗೆದ್ದಿದ್ದಾರೆ. ತಮಗೆ ಜಾಕ್‌ಪಾಟ್ ಹೊಡೆದ ನಂತರ ಅವರು ಈ ಸಂತೋಷದ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ.
ವರದಿಗಳ ಪ್ರಕಾರ, ಮನು ಮೋಹನನ್ ಚಿಕ್ಕವರಿರುವಾಗಲೇ ಅವರ ತಂದೆಯನ್ನು ಕಳೆದುಕೊಂಡಿದ್ದರು. ಅವರ ತಾಯಿ ಒಂಟಿಯಾಗಿದ್ದಕೊಂಡೇ ಸಾಕಿ ಬೆಳೆಸಿದ್ದರು. ಕಷ್ಟದ ನಡುವೆಯೇ ಬದುಕು ಕಟ್ಟಿಕೊಂಡ ಮನು ಕೆಲಸಕ್ಕೆಂದು ಬಹ್ರೇನ್‍ಗೆ ಹೋದ ನಂತರ ಕೂಡ ಅವರ ಬಳಿ ಹಣವಿರಲಿಲ್ಲವಂತೆ.
ಐದು ವರ್ಷಗಳಿಂದ ಮನು ಮತ್ತು ಅವರ ಸ್ನೇಹಿತರ ಗುಂಪು ಲಾಟರಿ ಟಿಕೆಟ್ ಖರೀದಿಸಲು ಹಣವನ್ನು ಸಂಗ್ರಹಿಸುತ್ತಿದ್ದರಂತೆ. ಅವರ ಈ ಸತತ ಪರಿಶ್ರಮ ಕೊನೆಗೂ ಫಲ ನೀಡಿದೆ. ಅವರು ಲಾಟರಿ ಗೆದ್ದ ವಿಚಾರ ತಿಳಿದು ಒಮ್ಮೆಲೆ ಶಾಕ್ ಆಗಿದ್ದಾರೆ. ಅವರು ತಕ್ಷಣ ತಮ್ಮ ಸ್ನೇಹಿತರ ಗುಂಪಿನೊಂದಿಗೆ ಈ ಸುದ್ದಿಯನ್ನು ಹಂಚಿಕೊಂಡು ಸಿಕ್ಕಾಪಟ್ಟೆ ಖುಷಿಪಟ್ಟಿದ್ದಾರೆ.
ಬಹುಮಾನದ ಹಣವನ್ನು ಸಾಲ ಮರುಪಾವತಿಸಲು, ಮನೆಗಳನ್ನು ಕಟ್ಟಲು ಮತ್ತು ತಮ್ಮ ಕುಟುಂಬಗಳ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಬಳಸುವುದಾಗಿ ಅವರು ತಿಳಿಸಿದ್ದಾರೆ. "ತಾಯಿ ನನಗಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದಾರೆ. ಅವಳು ಈಗ ಶಾಂತಿಯುತ ಮತ್ತು ಆರಾಮದಾಯಕ ಜೀವನವನ್ನು ಸಾಗಿಸಬಹುದು" ಎಂದು ಮನು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:Viral News : ರಾತ್ರೋರಾತ್ರಿ ಚೇಂಜ್ ಆಯ್ತು ಲಕ್! ಪ್ಲಂಬರ್‌ಗೆ 1.5 ಕೋಟಿ ರೂ ಲಾಟರಿ
ಲಾಟರಿಯಲ್ಲಿ ಸಿಕ್ಕ ಗೆಲುವಿನಿಂದ ಮನು ಅವರ ಜೀವನವು ಗಮನಾರ್ಹ ತಿರುವು ಪಡೆದುಕೊಂಡಿದೆ. ಈ ಹಣವು ಅವರಿಗೆ ಮತ್ತು ಅವನ ಸ್ನೇಹಿತರಿಗೆ ಆರ್ಥಿಕ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುವುದಲ್ಲದೇ ಅವರ ಕುಟುಂಬಗಳಿಗೆ ಉಜ್ವಲ ಭವಿಷ್ಯವನ್ನು ನೀಡಲಿದೆ ಎನ್ನಲಾಗಿದೆ.