Vishwavani Editorial: ಮಾಲ್ಡೀವ್ಸ್ ಗೆ ಬುದ್ದಿ ಬಂತಾ?
ಯಾರದ್ದೋ ಚಿತಾವಣೆಗೆ ಒಳಗಾಗಿ, ಕೆಲವೇ ತಿಂಗಳ ಹಿಂದೆ ಕಾರಣವಲ್ಲದ ಕಾರಣಕ್ಕೆ ತನ್ನ ಮೇಲೆ ಎಗರಾಡಿದ್ದ, ಕುಹಕವಾಡಿದ್ದ ಮತ್ತು ತೊಡೆತಟ್ಟಿ ಪಂಥಾಹ್ವಾನ ನೀಡಿದ್ದ ಮಾಲ್ಡೀವ್ಸ್ ಎಂಬ ಪುಟ್ಟ ರಾಷ್ಟ್ರಕ್ಕೆ ಭಾರತವು ಪಾಕಿಸ್ತಾನಕ್ಕೆ ಕಾಣಿಸಿದ ಗತಿಯನ್ನೇ ಕಾಣಿಸಬಹುದಿತ್ತು, ಅಂದರೆ ಜಾಗತಿಕ ಮಟ್ಟದಲ್ಲಿ ರಾಜತಾಂತ್ರಿಕವಾಗಿ ಮೂಲೆಗುಂಪು ಮಾಡಬಹುದಿತ್ತು.


ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ದ್ವೀಪ ರಾಷ್ಟ್ರ ಮಾಲ್ಡೀವ್ಸ್‌ನ 60ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರ ಸುದ್ದಿಯನ್ನು ನೀವು ಈಗಾಗಲೇ ಓದಿದ್ದೀರಿ. ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಆಹ್ವಾನದ ಮೇರೆಗೆ ಅಲ್ಲಿಗೆ ತೆರಳಿದ ಮೋದಿಯವರು ಮುಯಿಝು ಅವರೊಂದಿಗೆ ಸಭೆ ನಡೆಸಿ, ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳ ವರ್ಧನೆ ಹಾಗೂ ರಕ್ಷಣಾ ವಲಯದಲ್ಲಿನ ಸಹಕಾರ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಿದರು ಎಂಬುದು ಲಭ್ಯ ಮಾಹಿತಿ.
ಯಾರದ್ದೋ ಚಿತಾವಣೆಗೆ ಒಳಗಾಗಿ, ಕೆಲವೇ ತಿಂಗಳ ಹಿಂದೆ ಕಾರಣವಲ್ಲದ ಕಾರಣಕ್ಕೆ ತನ್ನ ಮೇಲೆ ಎಗರಾಡಿದ್ದ, ಕುಹಕವಾಡಿದ್ದ ಮತ್ತು ತೊಡೆತಟ್ಟಿ ಪಂಥಾಹ್ವಾನ ನೀಡಿದ್ದ ಮಾಲ್ಡೀವ್ಸ್ ಎಂಬ ಪುಟ್ಟರಾಷ್ಟ್ರಕ್ಕೆ ಭಾರತವು ಪಾಕಿಸ್ತಾನಕ್ಕೆ ಕಾಣಿಸಿದ ಗತಿಯನ್ನೇ ಕಾಣಿಸಬಹುದಿತ್ತು, ಅಂದರೆ ಜಾಗತಿಕ ಮಟ್ಟದಲ್ಲಿ ರಾಜತಾಂತ್ರಿಕವಾಗಿ ಮೂಲೆಗುಂಪು ಮಾಡಬಹುದಿತ್ತು. ಆದರೆ ತನ್ನ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ‘ದ್ವೇಷಸಾಧನೆ’ಗೆ ಜಾಗವಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಲೆಂದೇ ಭಾರತವು ಮಾಲ್ಡೀವ್ಸ್ ಅನ್ನು ಕ್ಷಮಿಸಿ ಹೀಗೆ ಸಹಕಾರ ಹಸ್ತವನ್ನು ಚಾಚಿದೆ ಎಂಬುದು ಬಲ್ಲವರ ಅಭಿಮತ.
ಇದನ್ನೂ ಓದಿ: Vishwavani Editorial: ದೊಣ್ಣೆ ನಾಯಕನ ಅಪ್ಪಣೆಯೇ?!
ಹಾಗೆ ನೋಡಿದರೆ, ಭಾರತವು ತಾನಾಗೇ ಯಾವ ದೇಶದ ಮೇಲೂ ದಂಡೆತ್ತಿ ಹೋದ ಇತಿಹಾಸ ವಿಲ್ಲ; ಒಂದೊಮ್ಮೆ ಭಾರತವು ಶತ್ರುರಾಷ್ಟ್ರಗಳ ವಿರುದ್ಧ ಶಸವನ್ನು ಎತ್ತಿರುವುದೇ ಹೌದಾದಲ್ಲಿ, ಅದು ತನ್ನ ಭದ್ರತೆ-ಸಮಗ್ರತೆ-ಸುರಕ್ಷತೆ-ಸಾರ್ವಭೌಮತೆಗಳ ಸಂರಕ್ಷಣೆಗೆ ಎಂಬುದು ಜಗಜ್ಜಾಹೀರು.
ಇತ್ತೀಚೆಗೆ ಪಾಕಿಸ್ತಾನದ ಉಗ್ರನೆಲೆಗಳ ಮೇಲೆ ಭಾರತವು ಕೈಗೊಂಡ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯೂ, ಪಹಲ್ಗಾಮ್‌ನಲ್ಲಿ ಪಾಕ್-ಪ್ರೇರಿತ ಉಗ್ರರು ನಡೆಸಿದ ಮಾರಣಹೋಮಕ್ಕೆ, ಪಾಕಿಸ್ತಾನದ ದುರಹಂಕಾರಕ್ಕೆ, ಧಾರ್ಷ್ಟ್ಯಕ್ಕೆ ಹಾಗೂ ಚಿತಾವಣೆಯ ಮಾತಿನ ಮೂಲಕ ಅದು ಎಸಗಿದ ಪ್ರಮಾದಕ್ಕೆ ಮಾಡಲಾದ ಶಾಸ್ತಿಯಷ್ಟೇ. ಅಷ್ಟಕ್ಕೂ, ‘ಜಾಣನಿಗೆ ಮಾತಿನ ಪೆಟ್ಟು, ದುರುಳ ನಿಗೆ ದೊಣ್ಣೆಪೆಟ್ಟು’ ಎಂಬ ಜಾಣನುಡಿಯೇ ಇದೆಯಲ್ಲಾ!