ಚಾಂಪಿಯನ್ಸ್ ಟ್ರೋಫಿಗೆ ಬುಮ್ರಾ ಅನುಮಾನ?; ಬದಲಿ ಬೌಲರ್ ಸಿದ್ಧಪಡಿಸಿದ ಬಿಸಿಸಿಐ!
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಬುಮ್ರಾ ಚಾಂಪಿಯನ್ಸ್ ಟ್ರೋಫಿಯ ಸಮಯದಲ್ಲಿ ಚೇತರಿಸಿಕೊಳ್ಳಲು ವಿಫಲವಾದರೆ ಹರ್ಷಿತ್ ರಾಣಾ ಅಥವಾ ಮೊಹಮ್ಮದ್ ಸಿರಾಜ್ ಅವರನ್ನು ಬುಮ್ರಾಗೆ 'ಬ್ಯಾಕ್ಅಪ್' ಬೌಲರ್ ಆಗಿ ಸಿದ್ಧಪಡಿಸಲು ಆಯ್ಕೆ ಸಮಿತಿ ಎದುರು ನೋಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮುಂಬಯಿ: ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ ಏಕದಿನ ಪಂದ್ಯಾವಳಿ ಆರಂಭಕ್ಕೆ ಇನ್ನು ಬೆರಳೆಣಿಕೆಯ ದಿನಗಳು ಮಾತ್ರ ಬಾಕಿ ಉಳಿದಿದೆ. ಇದಕ್ಕೂ ಮುನ್ನವೇ ಭಾರತ ತಂಡಕ್ಕೆ ಆಘಾತವೊಂದು ಎದುರಾಗಿದೆ. ಪ್ರಧಾನ ವೇಗಿ ಜಸ್‌ಪ್ರೀತ್ ಬುಮ್ರಾ(Jasprit Bumrah) ಸಂಪೂರ್ಣ ಫಿಟ್ ಆಗುವುದು ಅನುಮಾನ ಎಂದು ಹೇಳಲಾಗಿದೆ.
ಸದ್ಯ ಬುಮ್ರಾ ಬೆಂಗಳೂರಿನ ಎನ್‌ಸಿಎಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಬಿಸಿಸಿಐ ವೈದ್ಯಕೀಯ ತಂಡವು ನ್ಯೂಜಿಲೆಂಡ್‌ನಲ್ಲಿರುವ ನುರಿತ ಫಿಸಿಯೊ ಡಾ. ರೋವನ್ ಸ್ಕೌಟೆನ್ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ವರದಿಯಾಗಿದೆ. 2022ರ ವೇಳೆ ಬುಮ್ರಾ ಗಾಯಗೊಂಡಿದ್ದ ವೇಳೆ ಅವರಿಗೆ ಸ್ಕೌಟೆನ್ ಶಸ್ತ್ರಚಿಕಿತ್ಸೆ ಮಾಡಿದ್ದರು.
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಬುಮ್ರಾ ಚಾಂಪಿಯನ್ಸ್ ಟ್ರೋಫಿಯ ಸಮಯದಲ್ಲಿ ಚೇತರಿಸಿಕೊಳ್ಳಲು ವಿಫಲವಾದರೆ ಹರ್ಷಿತ್ ರಾಣಾ ಅಥವಾ ಮೊಹಮ್ಮದ್ ಸಿರಾಜ್ ಅವರನ್ನು ಬುಮ್ರಾಗೆ 'ಬ್ಯಾಕ್ಅಪ್' ಬೌಲರ್ ಆಗಿ ಸಿದ್ಧಪಡಿಸಲು ಆಯ್ಕೆ ಸಮಿತಿ ಎದುರು ನೋಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ ODI tri-series: ತ್ರಿಕೋನ ಸರಣಿ ಬಳಿಕ ಚಾಂಪಿಯನ್ಸ್ ಟ್ರೋಫಿಗೆ ಪಾಕ್ ತಂಡ ಪ್ರಕಟ
ಬಿಸಿಸಿಐ ವೈದ್ಯಕೀಯ ತಂಡವು ಬುಮ್ರಾ ಅವರನ್ನು ನ್ಯೂಜಿಲೆಂಡ್‌ಗೆ ಚಿಕಿತ್ಸೆಗೆ ಕಳುಹಿಸಲು ಯೋಚಿಸಿತ್ತು. ಆದರೆ ಅದು ಇನ್ನೂ ಸಂಭವಿಸಿಲ್ಲ. ಹರ್ಷಿತ್ ರಾಣಾ ಇಂಗ್ಲೆಂಡ್ ಸರಣಿಗಾಗಿ ಭಾರತದ ಏಕದಿನ ತಂಡದ ಭಾಗವಾಗಿದ್ದಾರೆ. ಒಂದೊಮ್ಮೆ ಬುಮ್ರಾ ಶೀಘ್ರವಾಗಿ ಚೇತರಿಸಿಕೊಳ್ಳದಿದ್ದರೆ ರಾಣಾ ಚಾಂಪಿಯನ್ಸ್ ಟೋರ್ಫಿ ತಂಡದಲ್ಲಿ ಆಯ್ಕೆಗೆ ಪರಿಗಣಿಸಬಹುದು.
19 ದಿನಗಳ ಕಾಲ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ. ಫೆಬ್ರವರಿ 19ರಂದು ಹಾಲಿ ಚಾಂಪಿಯನ್ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಕರಾಚಿಯಲ್ಲಿ ಉದ್ಘಾಟನಾ ಪಂದ್ಯ ಆಡುವ ಮೂಲಕ ಪಂದ್ಯಾವಳಿಗೆ ಚಾಲನೆ ಸಿಗಲಿದೆ.