MS Dhoni: ಐಪಿಎಲ್ ಆರಂಭಕ್ಕೂ ಮುನ್ನ ಟೆಂಪಲ್ ರನ್ ಆರಂಭಿಸಿದ ಧೋನಿ
18ನೇ ಆವೃತ್ತಿಯ ಐಪಿಎಲ್(IPL 2025) ಮಾರ್ಚ್ 23 ರಿಂದ ಆರಂಭವಾಗಲಿದೆ. ಅದಾಗಲೇ ಧೋನಿ ಅಭ್ಯಾಸ ಕೂಡ ಆರಂಭಿಸಿದ್ದಾರೆ. ಪ್ರತಿ ದಿನ ಸುಮಾರು 4-ರಿಂದ 5 ಗಂಟೆ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ರಾಂಚಿ: ಐಪಿಎಲ್ 2025 ಸಮೀಪಿಸುತ್ತಿರುವಂತೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರು ರಾಂಚಿಯಲ್ಲಿ 'ಮಾ ದೇವಾರಿ ದೇವಸ್ಥಾನ'ದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕಳೆದ ಬಾರಿಯ ಐಪಿಎಲ್ ವೇಳೆಯೂ ಧೋನಿ ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಅಭ್ಯಾಸ ಆರಂಭ
18ನೇ ಆವೃತ್ತಿಯ ಐಪಿಎಲ್ ಮಾರ್ಚ್ 23 ರಿಂದ ಆರಂಭವಾಗಲಿದೆ. ಅದಾಗಲೇ ಧೋನಿ ಅಭ್ಯಾಸ ಕೂಡ ಆರಂಭಿಸಿದ್ದಾರೆ. ಪ್ರತಿ ದಿನ ಸುಮಾರು 4-ರಿಂದ 5 ಗಂಟೆ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಧೋನಿ ಅಭ್ಯಾಸ ವಿಡಿಯೊ ಕೂಡ ಪ್ರತಿ ದಿನ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
It's a ritual for him to visit DEWRI MAA'S temple at the start of every cricketing season . Man of culture indeed ❤️🙏#MSDhoni #IPL2025 pic.twitter.com/r5BtTygmKh
— Chakri Dhoni (@ChakriDhonii) January 23, 2025
ಮಹೇಂದ್ರ ಸಿಂಗ್ ಧೋನಿ(MS Dhoni) ಅವರನ್ನು ಈ ಬಾರಿ ಅನ್‌ಕ್ಯಾಪ್ಡ್ ಆಟಗಾರನನ್ನಾಗಿ ಚೆನ್ನೈ ಸೂಪರ್ ಕಿಂಗ್ಸ್ ರಿಟೇನ್ ಮಾಡಿಕೊಂಡಿದೆ. ಆದರೆ, ಧೋನಿ ಈ ಬಾರಿ ಪೂರ್ಣ ಪ್ರಮಾಣದಲ್ಲಿ ಮೈದಾನದಲ್ಲಿ ಕಾಣಿಸಿಕೊಳ್ಳುವುದು ಅನುಮಾನ. ಮೂಲಗಳ ಪ್ರಕಾರ ಧೋನಿ ಈ ಇಂಪ್ಯಾಕ್ಟ್ ಆಟಗಾರನಾಗಿ ಬ್ಯಾಟ್ ಬೀಸಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ IPL 2025: ಆರ್‌ಸಿಬಿಗೆ ನಾಯಕನಾಗಲು ಕೊಹ್ಲಿ ಏಕೈಕ ಆಯ್ಕೆ; ಎಬಿಡಿ
ಕಳೆದ 2 ಆವೃತ್ತಿಯಲ್ಲಿ ಧೋನಿ ತಂಡಕ್ಕೆ ಪರ್ಯಾಯ ವಿಕೆಟ್ ಕೀಪರ್ ಇಲ್ಲದ ಕಾರಣ ಮೊಣಕಾಲಿಗೆ ನೋವು ನಿವಾರಕ ಪ್ಲಾಸ್ಟರ್ ಕಟ್ಟಿಕೊಂಡು ಕೀಪಿಂಗ್ ನಡೆಸಿದ್ದರು. ಗಾಯದ ಕಾರಣ ಐಪಿಎಲ್‌ಗೂ ನಿವೃತ್ತಿ ಘೋಷಿಸಲು ಮುಂದಾಗಿದ್ದರು. ಈ ಬಾರಿ ಧೋನಿ ಇಂಪ್ಯಾಕ್ಟ್ ಆಟಗಾರನಾಗಿ ಆಡಲಿದ್ದಾರೆ ಎನ್ನಲಾಗಿದೆ. ಈ ಬಾರಿ ತಂಡದಲ್ಲಿ ಪರಿಣಿತ ಕೀಪರ್ ಡೆವೋನ್ ಕಾನ್ವೆ ಇರುವ ಕಾರಣ ಇವರು ಕೀಪಿಂಗ್ ನಡೆಸುವ ಸಾಧ್ಯತೆ ಇದೆ.
Rare video of MS Dhoni using Mobile that too in the net session 😁❤️#MSDhoni #IPl2025pic.twitter.com/9RAPv3kUqR
— Digital Hunt 247 (@digitalhunt247) January 24, 2025
ಚೆನ್ನೈ ಸೂಪರ್ ಕಿಂಗ್ಸ್ ತಂಡ
ಋತುರಾಜ್ ಗಾಯಕ್ವಾಡ್, ಮಥೀಶ ಪತಿರಾಣ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ, ನೂರ್ ಅಹ್ಮದ್, ಆರ್. ಅಶ್ವಿನ್, ಡೆವೊನ್ ಕಾನ್ವೇ, ರಚಿನ್ ರವೀಂದ್ರ, ರಾಹುಲ್ ತ್ರಿಪಾಠಿ, ಖಲೀಲ್ ಅಹ್ಮದ್, ವಿಜಯ್ ಶಂಕರ್, ಸ್ಯಾಮ್ ಕರನ್, ಅಂಶುಲ್ ಕಂಬೋಜ್, ಶೇಕ್ ರಶೀದ್, ಮುಕೇಶ್ ಚೌಧರಿ, ದೀಪಕ್ ಹೂಡಾ, ಗುರುಜಪ್ನೀತ್ ಸಿಂಗ್ ,ನಾಥನ್ ಎಲ್ಲಿಸ್, ಜೇಮಿ ಓವರ್ಟನ್, ಕಮಲೇಶ್ ನಾಗರಕೋಟಿ, ರಾಮಕೃಷ್ಣ ಘೋಷ್, ಶ್ರೇಯಸ್ ಗೋಪಾಲ್, ವಂಶ್ ಬೇಡಿ, ಆಂಡ್ರೆ ಸಿದ್ಧಾರ್ಥ್.