ಕಾಂಗ್ರೆಸ್ ಪರಿಚಯಿಸಿದ ನರೇಗಾ ಯೋಜನೆ ಗ್ರಾಮೀಣಾಭಿವೃದ್ಧಿಯಲ್ಲಿ ಕ್ರಾಂತಿ ರೂಪಿಸಿದೆ: ಶಾಸಕ ಎಸ್. ಎನ್.ಸುಬ್ಬಾರೆಡ್ಡಿ
ದೇವರಗುಡಿಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿ "ನರೇಗಾ ದಿನಾಚರಣೆಯ" ಅಂಗವಾಗಿ ದೀಪ ಬೆಳಗಿಸಿ ಮಾತನಾಡಿ ಗ್ರಾಮ ಭಾರತದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ನರೇಗಾ ಯೋಜನೆ ಮಹತ್ವದ ಪಾತ್ರ ವಹಿಸಿದೆ, ನರೇಗಾ ಯೋಜನೆ ಸಮರ್ಪಕ ಅನುಷ್ಠಾನ ನಮ್ಮ ಸರಕಾರದ ಸಂಕಲ್ಪ ವಾಗಿದೆ ಎಂದು ತಿಳಿಸಿ ದ್ದಾರೆ

೨೦೦೬ರ ಫೆಬ್ರವರಿ ೨ನೇ ತಾರೀಖಿನಂದು ನರೇಗಾ ಯೋಜನೆಯನ್ನು ದೇಶದಲ್ಲಿ ಅನುಷ್ಠಾನಕ್ಕೆ ತರಲಾಯಿತು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕಾಯ್ದೆ ರೂಪಿಸಿ ಜಾರಿಗೆ ತಂದ ಈ ನರೇಗಾ ಯೋಜನೆ ಗ್ರಾಮೀಣಾಭಿವೃದ್ಧಿಯಲ್ಲಿ ಕ್ರಾಂತಿ ಎಂದು ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಎಂದು ತಿಳಿಸಿದ್ದಾರೆ

ಬಾಗೇಪಲ್ಲಿ: ಗ್ರಾಮೀಣ ಭಾರತ ಕೌಶಲ್ಯರಹಿತ ನಿರುದ್ಯೋಗಿಗಳಿಗೆ, ಕಾರ್ಮಿಕರಿಗೆ ಉದ್ಯೋಗವನ್ನು ಖಾತರಿಗೊಳಿಸಲು ಹಾಗೂ ಗ್ರಾಮೀಣ ಆರ್ಥಿಕತೆಯನ್ನು ಸದೃಢಗೊಳಿಸಲು 2006ರ ಫೆಬ್ರವರಿ ೨ನೇ ತಾರೀಖಿನಂದು ನರೇಗಾ ಯೋಜನೆಯನ್ನು ದೇಶದಲ್ಲಿ ಅನುಷ್ಠಾನಕ್ಕೆ ತರಲಾಯಿತು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕಾಯ್ದೆ ರೂಪಿಸಿ ಜಾರಿಗೆ ತಂದ ಈ ನರೇಗಾ ಯೋಜನೆ ಗ್ರಾಮೀಣಾ ಭಿವೃದ್ಧಿಯಲ್ಲಿ ಕ್ರಾಂತಿ ಎಂದು ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಎಂದು ತಿಳಿಸಿದ್ದಾರೆ.
ಅವರು ದೇವರಗುಡಿಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿ "ನರೇಗಾ ದಿನಾಚರಣೆಯ" ಅಂಗವಾಗಿ ದೀಪ ಬೆಳಗಿಸಿ ಮಾತನಾಡಿ ಗ್ರಾಮ ಭಾರತದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ನರೇಗಾ ಯೋಜನೆ ಮಹತ್ವದ ಪಾತ್ರ ವಹಿಸಿದೆ, ನರೇಗಾ ಯೋಜನೆ ಸಮರ್ಪಕ ಅನುಷ್ಠಾನ ನಮ್ಮ ಸರಕಾರದ ಸಂಕಲ್ಪ ವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Chikkaballapur News: ಚಿಂತಾಮಣಿಯ ಅತಿಥಿ ಉಪನ್ಯಾಸಕ ಎಂ.ನರಸಿಂಹಪ್ಪ ಸಾವು: ಜಿಲ್ಲಾ ಸಂಘ ತೀವ್ರ ಸಂತಾಪ
ನರೇಗಾ ಯೋಜನೆಯಡಿ ಫಲಾನುಭವಿಗಳಿಗೆ ವೈಯಕ್ತಿಕ ಯೋಜನೆಗಳ ಅನುಷ್ಠಾನಕ್ಕೆ ಒತ್ತು ನೀಡಲಾಗಿದೆ. ವಿಶೇಷವಾಗಿ ಕೃಷಿ ಹೊಂಡ, ದನದಕೊಟ್ಟಿಗೆ, ಜಮೀನಿನಲ್ಲಿ ಬದುಗಳ ನಿರ್ಮಾಣ, ಕಾಲುವೆ ನಿರ್ಮಾಣ ಸೇರಿದಂತೆ ಜಲಮೂಲಗಳ ಅಭಿವೃದ್ಧಿ ಯೋಜನೆಗಳಿಗೆ ಒತ್ತು ನೀಡಲಾಗಿದೆ ಆದರೆ ಕೆಲವರು ಇದನ್ನು ಅಡ್ಡಿಪಡಿಸುವುದು ಸರಿ ಅಲ್ಲ ಇದನ್ನು ಸಮರ್ಪಕವಾಗಿ ಬಳಸಿಕೊಳ್ಳ ಬೇಕು ಎಂದು ಹೇಳಿದರು.
ನರೇಗಾ ಯೋಜನೆ ಯಾವ ಗ್ರಾಮ ಪಂಚಾಯಿತಿ ಹೆಚ್ಚು ಅಭಿವೃದ್ಧಿ ಪಡಿಸಿದರೆ ನನ್ನ ಅನುದಾನ ದಲ್ಲಿ ಹೆಚ್ಚುವರಿ 25 ಸಾವಿರ ರೂಗಳನ್ನು ನೀಡಲಾಗಿತ್ತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಇಓ ರಮೇಶ ಮಾತನಾಡಿ ‘ಮನರೇಗಾ ಎನ್ನುವುದು ಕೇವಲ ಒಂದು ಯೋಜನೆ ಯಾಗಿರದೆ, ಅದು ಗ್ರಾಮೀಣರ ಪಾಲಿನ ಕಲ್ಪವೃಕ್ಷವಾಗಿದೆ. 100 ದಿನಗಳ ಉದ್ಯೋಗ ಖಾತರಿ ನೀಡು ವದಷ್ಟೇ ಅಲ್ಲದೆ, ರೈತರ ಜಮೀನಿನಲ್ಲಿ ವಿವಿಧ ವೈಯಕ್ತಿಕ ಕಾಮಗಾರಿಗಳನ್ನು ಹಾಗೂ ಗ್ರಾಮಾಭಿ ವೃದ್ಧಿಗಾಗಿ ಸಮುದಾಯ ಕಾಮಗಾರಿಗಳನ್ನು ನೀಡುವ ಮೂಲಕ ಗ್ರಾಮೀಣರಿಗೆ ವರದಾನ ವಾಗಿದೆ’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ 25 ಗ್ರಾಮ ಪಂಚಾಯತಿಯಲ್ಲಿ ಉತ್ತಮವಾಗಿ ಅನುಷ್ಠಾನ ಮಾಡಿದ ಅಧಿಕಾರ ಗಳನ್ನು ಶಾಸಕರು ಆತ್ಮೀಯ ವಾಗಿ ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ಎಲ್ಲಾ ಗ್ರಾಮ ಪಂಚಾ ಯತಿ ಅಧಿಕಾರಗಳು, ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು, ಹಾಗೂ ಪಿಡಿಓ ಸಾರ್ವಜನಿಕರು ಹಾಜರಿದ್ದರು.