Om Prakash Murder Case: ಕೊಲೆಯಾದ ನಿವೃತ್ತ ಡಿಜಿಪಿ ಓಂ ಪ್ರಕಾಶ್‌ಗೆ ಒಂದು ವಾರದಿಂದ ಟಾರ್ಚರ್? ಪತ್ನಿ- ಮಗಳ ಮೇಲೆ ಎಫ್‌ಐಆರ್
ಕಳೆದ ಒಂದು ವಾರದಿಂದ ಓಂ ಪ್ರಕಾಶ್ ಅವರಿಗೆ ಪತ್ನಿ ಪಲ್ಲವಿ ಕೊಲೆ ಬೆದರಿಕೆ ಹಾಕುತ್ತಿದ್ದರು ಎನ್ನಲಾಗ್ತಿದೆ. ಇದರಿಂದ ಓಂ ಪ್ರಕಾಶ್ ಅವರು ತನ್ನ ತಂಗಿ ಸರೀತಾ ಕುಮಾರಿ ಮನೆಗೆ ಹೋಗಿದ್ದರು. ಅಲ್ಲೂ ಇರಲು ಬಿಡದ ಪತ್ನಿ ಪಲ್ಲವಿ, ಕರೆದುಕೊಂಡು ಬರಲು ಮಗಳನ್ನು ಕಳುಹಿಸಿದ್ದರು ಎನ್ನಲಾಗುತ್ತಿದೆ. ಎರಡು ದಿನಗಳ ಹಿಂದೆ ಮಗಳು ಕೃತಿ ಅತ್ತೆ ಮನೆಗೆ ಹೋಗಿ ತಂದೆಯನ್ನು ವಾಪಸ್ ಕರೆತಂದಿದ್ದರು ಎಂಬ ಮಾಹಿತಿ ತಿಳಿದುಬಂದಿದೆ.

ಮೃತ ಓಂ ಪ್ರಕಾಶ್, ಪತ್ನಿ

ಬೆಂಗಳೂರು: ಮಾಜಿ ಡಿಜಿಪಿ ಓಂ ಪ್ರಕಾಶ್ ಹತ್ಯೆ ಪ್ರಕರಣಕ್ಕೆ (Om Prakash Murder Case) ಸಂಬಂಧಿಸಿದಂತೆ ಅವರ ಪತ್ನಿ ಪಲ್ಲವಿ ಮತ್ತು ಮಗಳು ಕೃತಿ ಅವರನ್ನು ಬಂಧಿಸಿರುವ ಪೊಲೀಸರು (bengaluru Police) ಇಬ್ಬರ ವಿರುದ್ಧವೂ ಎಫ್ಐಆರ್ ದಾಖಲಿಸಿದ್ದಾರೆ. ಹೆಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಓಂ ಪ್ರಕಾಶ್ ಅವರ ಮಗ ಕಾರ್ತಿಕೇಶ್ ನೀಡಿದ ದೂರಿನ ಮೇರೆಗೆ ಈ ಎಫ್ಐಆರ್ (FIR) ದಾಖಲಾಗಿದೆ. ನನ್ನ ತಾಯಿ ಹಾಗೂ ಸಹೋದರಿ ಇಬ್ಬರು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಕಾರ್ತಿಕೇಶ್ ಹೇಳಿದ್ದಾರೆ ಎಂದು ವರದಿ ಆಗಿದೆ.
ಕಳೆದ ಒಂದು ವಾರದಿಂದ ಓಂ ಪ್ರಕಾಶ್ ಅವರಿಗೆ ಪತ್ನಿ ಪಲ್ಲವಿ ಕೊಲೆ ಬೆದರಿಕೆ ಹಾಕುತ್ತಿದ್ದರು ಎನ್ನಲಾಗ್ತಿದೆ. ಇದರಿಂದ ಓಂ ಪ್ರಕಾಶ್ ಅವರು ತನ್ನ ತಂಗಿ ಸರೀತಾ ಕುಮಾರಿ ಮನೆಗೆ ಹೋಗಿದ್ದರು. ಅಲ್ಲೂ ಇರಲು ಬಿಡದ ಪತ್ನಿ ಪಲ್ಲವಿ, ಕರೆದುಕೊಂಡು ಬರಲು ಮಗಳನ್ನು ಕಳುಹಿಸಿದ್ದರು ಎನ್ನಲಾಗುತ್ತಿದೆ. ಎರಡು ದಿನಗಳ ಹಿಂದೆ ಮಗಳು ಕೃತಿ ಅತ್ತೆ ಮನೆಗೆ ಹೋಗಿ ತಂದೆಯನ್ನು ವಾಪಸ್ ಕರೆತಂದಿದ್ದರು ಎಂಬ ಮಾಹಿತಿ ತಿಳಿದುಬಂದಿದೆ.
ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ನಾನು ಗಾಲ್ಫ್ ಅಸೋಸಿಯೇಷನ್‌ನಲ್ಲಿ ಇದ್ದಾಗ, ಪಕ್ಕದ ಮನೆ ನಿವಾಸಿಯೊಬ್ಬರು ಕರೆ ಮಾಡಿ ನನಗೆ ಮಾಹಿತಿ ನೀಡಿದರು. ನಿಮ್ಮ ತಂದೆಯವರು ಕೆಳಗೆ ಬಿದ್ದಿದ್ದಾರೆ ಎಂದು ತಿಳಿಸಿದರು. 5.45ಕ್ಕೆ ಮನೆಗೆ ಬಂದೆ. ನಾನು ಮನೆಗೆ ಬರುವ ಮುನ್ನ ಪೊಲೀಸರು ಮತ್ತು ಸಾರ್ವಜನಿಕರು ತುಂಬಿಕೊಂಡಿದ್ದರು. ತಂದೆಯವರ ತಲೆ ಮತ್ತು ದೇಹದ ತುಂಬಾ ರಕ್ತದ ಕಲೆಗಳು ಇತ್ತು. ದೇಹದ ಪಕ್ಕದಲ್ಲಿ ಹೊಡೆದ ಬಾಟಲ್ ಮತ್ತು ಚಾಕು ಇದ್ದವು. ನಂತರ ದೇಹವನ್ನು ಸೇಂಟ್ ಜಾನ್ಸ್ ಶವಾಗಾರಕ್ಕೆ ಕಳುಹಿಸಲಾಯಿತು ಎಂದು ಕಾರ್ತೀಕೇಶ್ ಮಾಹಿತಿ ನೀಡಿದ್ರು.
ತಾಯಿ ಪಲ್ಲವಿ ಮತ್ತು ತಂಗಿ ಕೃತಿ ಖಿನ್ನತೆಯಿಂದ ಬಳಲುತ್ತಿದ್ದರು ಅಂತ ಕಾರ್ತೀಕೇಶ್ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ. ಪ್ರತಿನಿತ್ಯ ತಮ್ಮ ತಂದೆಯೊಂದಿಗೆ ಜಗಳ ಮಾಡುತ್ತಿದ್ದರು. ಇಬ್ಬರೂ ಸೇರಿ ಈ ಕೃತ್ಯವೆಸಗಿರಬೇಕು. ಈ ಬಗ್ಗೆ ಕಾನೂನು ಕ್ರಮ ಜರುಗಿಸಬೇಕೆಂದು ಕಾರ್ತೀಕೇಶ್ ದೂರು ನೀಡಿದರು. ಈ ದೂರಿನ ಮೇರೆಗೆ, ಎ1 ಪಲ್ಲವಿ ಮತ್ತು ಎ2 ಕೃತಿ ಮೇಲೆ ಕೊಲೆ ಶಂಕೆಯ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಬಿಎನ್ ಎಸ್ 103(1)3(5) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Om Prakash murder: ಗನ್ ತೋರಿಸಿ ಬೆದರಿಸುತ್ತಿದ್ದ ಓಂಪ್ರಕಾಶ್, 10 ಬಾರಿ ಚೂರಿಯಿಂದ ಇರಿದ ಪತ್ನಿ