Mahanayaka: ಗಣರಾಜ್ಯೋತ್ಸವ ಪ್ರಯುಕ್ತ ಜೀ ಕನ್ನಡದಿಂದ ಮನರಂಜನೆಯ ಮಹಾಪೂರ; ಪ್ರಸಾರವಾಗಲಿದೆ ಮಹಾನಾಯಕ ಸೀರಿಯಲ್‌ನ ಮಹಾಸಂಚಿಕೆ
ಡಾ ಬಿ ಆರ್ ಅಂಬೇಡ್ಕರ್ ಅವರ ಜೀವನ ಆಧಾರಿತ ಧಾರಾವಾಹಿ ಮಹಾನಾಯಕ, ಜ 26 ಗಣರಾಜ್ಯೋತ್ಸವದ ಪ್ರಯುಕ್ತ ಮಹಾಸಂಚಿಕೆ ರೂಪದಲ್ಲಿ ಬೆಳಗ್ಗೆ 9:30 ರಿಂದ 1 ಗಂಟೆಯವರೆಗೆ ಪ್ರಸಾರಗೊಳ್ಳಲಿದೆ.

Mahanayaka

ಬೆಂಗಳೂರು : ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ಜೀವನ ಆಧಾರಿತ ಧಾರಾವಾಹಿ ಮಹಾನಾಯಕ (Mahanayaka) ಜನಮನ್ನಣೆ ಗಳಿಸಿದೆ. ಇದೀಗ ಧಾರವಾಹಿಯು ಮುಕ್ತಾಯ ಹಂತಕ್ಕೆ ಬಂದಿದ್ದು, ಪ್ರೇಕ್ಷಕರಿಗೆ ಮಹಾಸಂಚಿಕೆಯ ಮೂಲಕ ರಸದೌತಣ ನೀಡಲು ಸೀರಿಯಲ್ ತಂಡ ಸಜ್ಜಾಗಿದೆ. ಜ. 26 ಗಣರಾಜ್ಯೋತ್ಸವದ ಪ್ರಯುಕ್ತ ಮಹಾಸಂಚಿಕೆ ರೂಪದಲ್ಲಿ ಬೆಳಗ್ಗೆ 9:30 ರಿಂದ 1 ಗಂಟೆಯವರೆಗೆ ಪ್ರಸಾರಗೊಳ್ಳಲಿದೆ.
ಜೀ ಕನ್ನಡದಲ್ಲಿ ಐದು ವರ್ಷಗಳ ಹಿಂದೆ 2020 ರ ಜುಲೈ 4 ರಂದು ಪ್ರಾರಂಭವಾಗಿದ್ದ ಮಹಾನಾಯಕ ಸೀರಿಯಲ್ ಕನ್ನಡ ನಾಡಿನ ಜನತೆಗೆ ಅಂಬೇಡ್ಕರ್ ಅವರ ಬದುಕಿನ ಚಿತ್ರಣವನ್ನು ನೀಡುತ್ತಿದೆ. ಕನ್ನಡ ಕಿರುತೆರೆ ಇತಿಹಾಸದಲ್ಲಿ ಒಂದು ಮೈಲಿಗಲ್ಲು ಎನಿಸಿರುವ ‘ಮಹಾನಾಯಕ’ನನ್ನು ವೀಕ್ಷಕರು ಸಂಭ್ರಮದಿಂದ ಸ್ವಾಗತಿಸಿದ್ದರು. ಅಲ್ಲದೆ ಈ ಧಾರಾವಾಹಿಯ ಶೀರ್ಷಿಕೆ ಗೀತೆ ಕೂಡ ಜನರ ಮನಸೂರೆಗೊಂಡಿತ್ತು.
ಮಹಾನಾಯಕ ಧಾರಾವಾಹಿ ವೀಕ್ಷಿಸಿ ಎಂಬ ಪೋಸ್ಟರ್ ಗಳನ್ನು ವೀಕ್ಷಕರು ಸ್ವಯಂ ಪ್ರೇರಿತರಾಗಿ ಪ್ರಮುಖ ವೃತ್ತಗಳಲ್ಲಿ ಅಂಟಿಸಿದ್ದರು. ಮಹಾನಾಯಕನ ಆಗಮನದ ದಿನ ಟಿ.ವಿ.ಗೆ ಆರತಿ ಬೆಳಗಿದ್ದರು. ಅಂಬೇಡ್ಕರ್ ಅವರ ಬಾಲ್ಯದಿಂದ ಹಿಡಿದೂ ಅವರ ಪ್ರತಿಯೊಂದು ಪ್ರಮುಖ ಘಟ್ಟಗಳ ಅದ್ಭುತ ಚಿತ್ರಣವನ್ನು ಧಾರಾವಾಹಿ ಕಟ್ಟಿ ಕೊಟ್ಟಿತ್ತು. ಇದೀಗ ಮಹಾನಾಯಕ ಮುಕ್ತಾಯ ಹಂತಕ್ಕೆ ಬಂದು ನಿಂತಿದೆ. ಗಣರಾಜ್ಯೋತ್ಸವ ದಂದು ಮಹಾ ಸಂಚಿಕೆಯೊಂದಿಗೆ ಮುಕ್ತಾಯವಾಗಲಿದೆ.
ಈ ಸುದ್ದಿಯನ್ನೂ ಓದಿ : Puttakkana Makkalu: ಕಂಠಿಯ ವಿರುದ್ಧ ಮೊದಲ ಬಾರಿ ಸಿಡಿದೆದ್ದ ಸ್ನೇಹಾ! ಮಹಾತಿರುವಿನಲ್ಲಿ ಪುಟ್ಟಕ್ಕನ ಮಕ್ಕಳು ಸೀರಿಯಲ್
ಮನರಂಜನೆಗಳ ಮಹಾಪೂರ
ಜೀ ಕನ್ನಡ ಸದಾ ಹೊಸ ಪ್ರಯತ್ನವನ್ನು ಮಾಡಿ ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡುತ್ತಿರುತ್ತದೆ. ಪುಟ್ಟಕ್ಕನ ಮಕ್ಕಳು, ಅಮೃತಧಾರೆ, ಅಣ್ಣಯ್ಯ, ಸರಿಗಮಪ, ಕಾಮಿಡಿ ಕಿಲಾಡಿಗಳಂತಹ ಹಿಟ್ ಶೋಗಳನ್ನು ನೀಡುತ್ತಿದೆ. ಇದೀಗ ಮತ್ತೆ ಹೊಸ ಸೀರಿಯಲ್ ಒಂದು ಪ್ರಾರಂಭವಾಗಲಿದ್ದು, ತಾಯಿ ಮಗಳ ಬಾಂಧ್ಯವವನ್ನು ಹೇಳಲು ಮತ್ತೆ ಕಥೆಯನ್ನು ಹೊತ್ತು ಬರುತ್ತಿದ್ದಾರೆ. ಧಾರಾವಾಹಿಯಲ್ಲಿ ಹಿಟ್ ಚಿತ್ರಗಳನ್ನು ನೀಡಿದ್ದ ನೀತಾ ಅಶೋಕ್ ಬಣ್ಣ ಹಚ್ಚಿದ್ದಾರೆ. ಸೀರಿಯಲ್ ಜ. 27 ರಿಂದ ಪ್ರಸಾರಗೊಳ್ಳಲಿದೆ.