ಪಾಕ್ ಕಾಶ್ಮೀರವನ್ನು ಅಂತಾರಾಷ್ಟ್ರೀಯಗೊಳಿಸುವಲ್ಲಿ ಯಶಸ್ವಿಯಾಗಿದೆ: ಒಮರ್ ಅಬ್ದುಲ್ಲಾ
ಕದನ ವಿರಾಮ ಒಪ್ಪಂದ ಸ್ವಲ್ಪ ತಡವಾಯಿತು. ಈ ಹಿಂದೆಯೇ ಕದನ ವಿರಾಮ ಬಂದಿದ್ದರೆ, ಬಹುಶಃ ನಾವು ನೋಡಿದ ರಕ್ತಪಾತ ನಡೆಯುತ್ತಿರಲಿಲ್ಲ. ಕೆಲವರ ಅಮೂಲ್ಯ ಜೀವ ಸುರಕ್ಷಿತವಾಗಿರುತಿತ್ತು. ಜಮ್ಮು, ಪೂಂಚ್, ರಜೌರಿ, ತಂಗ್‌ಧಾರ್ ಮತ್ತಿತರ ಗಡಿ ಪ್ರದೇಶಗಳಲ್ಲಿ ಗಡಿಯಾಚೆಗಿನ ಶೆಲ್ ದಾಳಿಯಿಂದ ಸಾಕಷ್ಟು ನಷ್ಟ ಸಂಭವಿಸಿದೆ ಎಂದು - ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.


ಶ್ರೀನಗರ: ಪಹಲ್ಗಾಮ್ ದಾಳಿಯು(pahalgam attack) ಆರ್ಥಿಕತೆ ಮತ್ತು ರಾಜತಾಂತ್ರಿಕತೆಯ ದೃಷ್ಟಿಯಿಂದ ವರ್ಷಗಳ ಶ್ರಮವನ್ನು ವ್ಯರ್ಥ ಮಾಡಿದೆ ಎಂದು ಜಮ್ಮು- ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ(Omar Abdullah) ಹೇಳಿದ್ದಾರೆ. ಈ ದಾಳಿ ಬಹಳ ಸಮಯದ ನಂತರ ಚೇತರಿಸಿಕೊಂಡಿದ್ದ ರಾಜ್ಯದ ಪ್ರವಾಸೋದ್ಯಮಕ್ಕೆ ಆಘಾತವನ್ನುಂಟು ಮಾಡಿದೆ ಮತ್ತು ಪಾಕಿಸ್ತಾನವು ಕಾಶ್ಮೀರವನ್ನು ಮತ್ತೆ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಬಿಂಬಿಸಲು ಅವಕಾಶ ಮಾಡಿಕೊಟ್ಟಿದೆ ಎಂದರು.
"ನಾವು ನಿರೀಕ್ಷಿಸದ ಸ್ಥಳದಲ್ಲಿದ್ದೇವೆ. ರಕ್ತಪಾತದ ಯಾತನೆ ಇರುವ ಸ್ಥಳದಲ್ಲಿದ್ದೇವೆ. ವರ್ಷದ ಈ ಸಮಯದಲ್ಲಿ ನಾವು ಪ್ರವಾಸಿಗರಿಂದ ತುಂಬಿರಬೇಕಿತ್ತು. ಆರ್ಥಿಕತೆಯು ಉತ್ತಮವಾಗಬೇಕಿತ್ತು. ಮಕ್ಕಳು ಶಾಲೆಗೆ ಹೋಗಬೇಕಿತ್ತು. ವಿಮಾನ ನಿಲ್ದಾಣಗಳು ದಿನಕ್ಕೆ 50-60 ವಿಮಾನಗಳೊಂದಿಗೆ ಕಾರ್ಯನಿರ್ವಹಿಸಬೇಕಿತ್ತು. ಆದರೆ ಉಗ್ರರ ದಾಳಿ ಎಲ್ಲವನ್ನು ಕೆಡಿಸಿತು. ಈಗ ಕಣಿವೆ ರಾಜ್ಯ ಖಾಲಿಯಾಗಿದೆ. ಶಾಲೆಗಳನ್ನು , ವಿಮಾನ ನಿಲ್ದಾಣ ಮತ್ತು ವಾಯುಪ್ರದೇಶನ್ನು ಮುಚ್ಚಲ್ಪಟ್ಟಿದೆ" ಎಂದು ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅಬ್ದುಲ್ಲಾ ತಿಳಿಸಿದ್ದಾರೆ.
"ನಾವು ಕೇವಲ ಮೂರು ವಾರಗಳ ಹಿಂದೆ ಬಹಲ್ಗಾ ಪ್ರದೇಶವನ್ನು ನೋಡಿದಾಗ ಅದು ಗದ್ದಲದ ಸ್ಥಳವಾಗಿತ್ತು. ಪ್ರವಾಸಿಗರಿಂದ ತುಂಬಿತ್ತು. ಆದರೆ ಈಗ ಭಯಾನಕ ಹತ್ಯಾಕಾಂಡದ ಸ್ಥಳವಾಗಿ ಮಾರ್ಪಟ್ಟಂತಿದೆ" ಎಂದು ಹೇಳಿದರು.
ಇದನ್ನೂ ಓದಿ Operation Sindoor: ಆಪರೇಷನ್ ಸಿಂದೂರ್ ಮೂಲಕ ಭಾರತ ಸಾಧಿಸಿದ್ದೇನು?
"ಕದನ ವಿರಾಮ ಒಪ್ಪಂದ ಸ್ವಲ್ಪ ತಡವಾಯಿತು. ಈ ಹಿಂದೆಯೇ ಕದನ ವಿರಾಮ ಬಂದಿದ್ದರೆ, ಬಹುಶಃ ನಾವು ನೋಡಿದ ರಕ್ತಪಾತ ನಡೆಯುತ್ತಿರಲಿಲ್ಲ. ಕೆಲವರ ಅಮೂಲ್ಯ ಜೀವ ಸುರಕ್ಷಿತವಾಗಿರುತಿತ್ತು. ಜಮ್ಮು, ಪೂಂಚ್, ರಜೌರಿ, ತಂಗ್‌ಧಾರ್ ಮತ್ತಿತರ ಗಡಿ ಪ್ರದೇಶಗಳಲ್ಲಿ ಗಡಿಯಾಚೆಗಿನ ಶೆಲ್ ದಾಳಿಯಿಂದ ಸಾಕಷ್ಟು ನಷ್ಟ ಸಂಭವಿಸಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಶಾಶ್ವತ ಸ್ನೇಹಕ್ಕಾಗಿ ತಮ್ಮ ಪಕ್ಷವು ಯಾವಾಗಲೂ ಸಿದ್ಧ. ಆದರೆ, ನಂಬಿಕೆಯ ಕೊರತೆಯನ್ನು ನಿವಾರಿಸುವ ಪ್ರಾಥಮಿಕ ಜವಾಬ್ದಾರಿಯು ಪಾಕಿಸ್ತಾನದ ಮೇಲಿದೆ ಎಂದು ಫಾರೂಕ್ ಅಬ್ದುಲ್ಲಾ ಹೇಳಿದರು.