Champions Trophy: ʻಆಮೆ-ಮೊಲದ ಕಥೆʼ-ಬಾಬರ್ ಆಝಮ್ ಕಾಲೆಳೆದ ಆರ್ ಅಶ್ವಿನ್!
R Ashwin sly dig at Babar Azam: ನ್ಯೂಜಿಲೆಂಡ್ ವಿರುದ್ಧ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ನಿಧಾನಗತಿಯ ಅರ್ಧಶತಕ ಸಿಡಿಸಿದ ಪಾಕಿಸ್ತಾನ ಮಾಜಿ ನಾಯಕ ಬಾಬರ್ ಆಝಮ್ ಅವರನ್ನು ಭಾರತದ ಸ್ಪಿನ್ ದಿಗ್ಗಜ ಆರ್ ಅಶ್ವಿನ್ ಟೀಕಿಸಿದ್ದಾರೆ. ಈ ಪಂದ್ಯದಲ್ಲಿ 90 ಎಸೆತಗಳನ್ನು ಎದುರಿಸಿದ್ದ ಬಾಬರ್ ಆಝಮ್, 64 ರನ್‌ಗಳನ್ನು ಗಳಿಸಿದ್ದರು.

ಬಾಬರ್ ಆಝಮ್ ಕಾಲೆಳೆದ ಅಶ್ವಿನ್!

ಕರಾಚಿ: ನ್ಯೂಜಿಲೆಂಡ್ ವಿರುದ್ಧ2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟ್ ಮಾಡಿದ ಪಾಕಿಸ್ತಾನ ತಂಡದ ಮಾಜಿ ನಾಯಕ ಬಾಬರ್ ಆಝಮ್ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದಾರೆ. ಅದರಂತೆ ಭಾರತ ಸ್ಪಿನ್ ಆರ್ ಅಶ್ವಿನ್ ಅವರು ಕೂಡ ಬಾಬರ್ ಆಝಮ್ ಅವರನ್ನು ಟೀಕಿಸಿದ್ದಾರೆ. ಈ ಪಂದ್ಯದಲ್ಲಿ 321 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಪಾಕಿಸ್ತಾನ ತಂಡ, ಬ್ಯಾಟಿಂಗ್ ವೈಫಲ್ಯದಿಂದ 260 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ 60 ರನ್‌ಗಳಿಂದ ಸೋಲು ಒಪ್ಪಿಕೊಂಡಿತ್ತು.
ಇಲ್ಲಿನ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದಿದ್ದ ಟೂರ್ನಿಯ ಮೊದಲನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್ ತಂಡ, ವಿಲ್ ಯಂಗ್ ಮತ್ತು ಟಾಮ್ ಲೇಥಮ್ ಅವರ ತಲಾ ಶತಕಗಳ ಬಲದಿಂದ ತನ್ನ ಪಾಲಿನ 50 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 320 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಪಾಕಿಸ್ತಾನ ತಂಡಕ್ಕೆ ಒಳ್ಳೆಯ ಆತಂಭ ಸಿಗಲಿಲ್ಲ. ಆರಂಭಿಕ ಸೌದ್ ಶಕಿಲ್ ಬಹುಬೇಗ ವಿಕೆಟ್ ಒಪ್ಪಿಸಿದರು. ನಂತರ ನಾಯಕ ಮೊಹಮ್ಮದ್ ರಿಝ್ವಾನ್ ಹಾಗೂ ಫಖಾರ್ ಝಮಾನ್ ಅವರು ಕೂಡ ಕ್ರೀಸ್‌ನಲ್ಲಿ ಹೆಚ್ಚು ಸಮಯ ಕಳೆಯಲಿಲ್ಲ.
PAK vs NZ: ನಿಧಾನಗತಿಯ ಅರ್ಧಶತಕ ಸಿಡಿಸಿದ ಬಾಬರ್ ಆಝಮ್ ವಿರುದ್ದ ಫ್ಯಾನ್ಸ್ ಗರಂ!
ನಿಧಾನಗತಿಯ ಬ್ಯಾಟ್ ಮಾಡಿದ ಬಾಬರ್ ಅಝಮ್, ಪಾಕಿಸ್ತಾನ ತಂಡವನ್ನು ಮೇಲೆತ್ತುವ ಕೆಲಸವನ್ನು ಮಾಡಿದ್ದರು. ಆದರೆ, ಬಾಬರ್ ಆಝಮ್ ಅವರು ತೀರಾ ನಿಧಾನಗತಿಯ ಬ್ಯಾಟ್ ಮಾಡಿದ ಕಾರಣ ಮತ್ತೊಂದು ತುದಿಯಲ್ಲಿ ಇನ್ನಿತರ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೆಚ್ಚಾಯಿತು. ಈ ಹಿನ್ನೆಲೆಯಲ್ಲಿ ಸಲ್ಮಾನ್ ಅಘಾ ಕೇವಲ 28 ಎಸೆತಗಳಲ್ಲಿ 42 ರನ್‌ಗಳನ್ನು ಸಿಡಿಸಿದ್ದರು. ಆದರೆ, ವೇಗವಾಗಿ ರನ್ ಗಳಿಸುವ ಭರದಲ್ಲಿ ವಿಕೆಟ್ ಒಪ್ಪಿಸಿದರು. ಬಾಬರ್ ಆಝಮ್ ಮಾತ್ರ ತಮ್ಮ ಬ್ಯಾಟಿಂಗ್ ವೇಗವನ್ನು ಹೆಚ್ಚಿಸಲು ಮನಸು ಮಾಡಲಿಲ್ಲ. ಅವರು ಆಡಿದ 90 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ 64 ರನ್‌ಗಳನ್ನು ಕಲೆ ಹಾಕಿದರು. ಆದರೆ, ಅವರನ್ನು ಮಿಚೆಲ್ ಸ್ಯಾಂಟ್ನರ್ ಔಟ್ ಮಾಡಿದರು.
Babar’s journey to 50 coupled with Salman Ali Agha’s batting has to be the best depiction of “ The Tortoise and Rabbit story” . #ChampionsTrophy
— Ashwin 🇮🇳 (@ashwinravi99) February 19, 2025
The 50 I hope will come soon enough🤞
ಬಾಬರ್ ಆಝಮ್ ಕಾಲೆಳೆದ ಅಶ್ವಿನ್
ಬಾಬರ್ ಆಝಮ್ ವಿಕೆಟ್ ಒಪ್ಪಿಸಿದ ಬೆನ್ನಲ್ಲೆ ಅಭಿಮಾನಿಗಳು ಪಾಕ್ ಮಾಜಿ ನಾಯಕನನ್ನು ಟೀಕಿಸಿದರು. ಇದರ ಜೊತೆಗೆ ಕೆಲ ಮಾಜಿ ಕ್ರಿಕೆಟಿಗರು ಕೂಡ ಬಾಬರ್ ಆಝಮ್ ಅವರನ್ನು ಟ್ರೋಲ್ ಮಾಡಿದರು. ಅದರಂತೆ ಭಾರತದ ಸ್ಪಿನ್ ದಿಗ್ಗಜ ಆರ್ ಅಶ್ವಿನ್ ಕೂಡ ಬಲಗೈ ಬ್ಯಾಟ್ಸ್‌ಮನ್ ಅನ್ನು ವಿಭಿನ್ನವಾಗಿ ಟೀಕಿಸಿದ್ದಾರೆ. ಬಾಬರ್ ಆಝಮ್ ತಮ್ಮ ಇನಿಂಗ್ಸ್‌ನಲ್ಲಿ ಒಟ್ಟು 52 ಡಾಟ್ ಬಾಲ್‌ಗಳನ್ನು ಆಡಿದ್ದರು.
"50 ರನ್ ಗಳಿಸಿದ ಬಾಬರ್ ಅಝಮ್ ಮತ್ತು ಸಲ್ಮಾನ್ ಅಘಾ ಅವರ ಬ್ಯಾಟಿಂಗ್ ಒಂದು ರೀತಿಯಲ್ಲಿ ʻಆಮೆ-ಮೊದಲ ಕಥೆಯʼ ರೀತಿ ಇತ್ತು," ಎಂದು ಆರ್ ಅಶ್ವಿನ್ ಟ್ವೀಟ್ ಮಾಡುವ ಮೂಲಕ ಪಾಕಿಸ್ತಾನ ಮಾಜಿ ನಾಯಕನನ್ನು ಟ್ರೋಲ್ ಮಾಡಿದ್ದಾರೆ.
PAK vs NZ: ಪಾಕ್‌ನಲ್ಲಿ ವಿಮಾನಗಳ ಸದ್ದು ಕೇಳಿ ಬೆಚ್ಚಿಬಿದ್ದ ಕಿವೀಸ್ ಆಟಗಾರರು
ತ್ರಿಕೋನ ಏಕದಿನ ಸರಣಿಯಲ್ಲಿಯೂ ವಿಫಲರಾಗಿದ್ದ ಆಝಮ್
ಚಾಂಪಿಯನ್ಸ್ ಟ್ರೋಫಿಗೂ ಮುನ್ನ ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ದ ನಡೆದಿದ್ದ ತ್ರಿಕೋನ ಏಕದಿನ ಸರಣಿಯಲ್ಲಿಯೂ ಬಾಬರ್ ಆಝಮ್ ವೈಫಲ್ಯ ಅನುಭವಿಸಿದ್ದರು. ಇದರಿಂದಾಗಿ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಇದೀಗ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿಯೂ ತಮ್ಮ ಕಡಿಮೆ ಸ್ಟ್ರೈಕ್‌ರೇಟ್‌ನಿಂದ ಬಾಬರ್ ಆಝಮ್ ಟೀಕೆಗಳಿಗೆ ಗುರಿಯಾಗಿದ್ದಾರೆ.