ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PAK vs NZ: ಪಾಕ್‌ನಲ್ಲಿ ವಿಮಾನಗಳ ಸದ್ದು ಕೇಳಿ ಬೆಚ್ಚಿಬಿದ್ದ ಕಿವೀಸ್‌ ಆಟಗಾರರು

ಬುಧವಾರ ರಾತ್ರಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ನ್ಯೂಜಿಲ್ಯಾಂಡ್‌ ಆರಂಭಿಕ ಆಘಾತ ಬಳಿಕ ವಿಲ್‌ ಯಂಗ್‌ ಮತ್ತು ವಿಕೆಟ್‌ ಕೀಪರ್‌ ಟಾಮ್‌ ಲ್ಯಾಥಂ ಬಾರಿಸಿದ ಆಕರ್ಷಕ ಶತಕಗಳ ನೆರವಿನಿಂದ ಅಂತಿಮವಾಗಿ 5 ವಿಕೆಟಿಗೆ 320 ರನ್‌ ಪೇರಿಸಿತು. ಗುರಿ ಹಿಂಬಾಲಿಸಿದ ಪಾಕಿಸ್ತಾನ 47.2 ಓವರ್‌ಗಳಲ್ಲಿ 260ಕ್ಕೆ ಆಲೌಟ್‌ ಆಯಿತು.

ವಿಮಾನಗಳ ಸದ್ದು ಕೇಳಿ ಬೆಚ್ಚಿಬಿದ್ದ ಕಿವೀಸ್‌ ಆಟಗಾರರು; ವಿಡಿಯೊ ವೈರಲ್‌

Profile Abhilash BC Feb 20, 2025 10:26 AM

ಕರಾಚಿ: ಬುಧವಾರ ನಡೆದ ಚಾಂಪಿಯನ್ಸ್‌ ಟ್ರೋಫಿಯ ಉದ್ಘಾಟನ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ವಿರುದ್ಧ ನ್ಯೂಜಿಲ್ಯಾಂಡ್‌ ತಂಡ ಭರ್ಜರಿ 60 ರನ್‌ ಅಂತರದ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಈ ಪಂದ್ಯ ಆರಂಭಕ್ಕೂ ಮುನ್ನ ಕರಾಚಿ ಕ್ರೀಡಾಂಗಣದ ಮೇಲೆ ಪಾಕಿಸ್ತಾನ ವಾಯುಪಡೆಯ ವಿಮಾನಗಳು ಹಾರಾಟ ನಡೆಸಿದವು. ಈ ವೇಳೆ ಬ್ಯಾಟಿಂಗ್‌ ನಡೆಸಲು ಮುಂದಾಗಿದ್ದ ನ್ಯೂಜಿಲ್ಯಾಂಡ್‌ನ ಬ್ಯಾಟರ್‌ ಡೆವೊನ್‌ ಕಾನ್ವೆ ದಿಢೀರ್‌ ವಿಮಾನಗಳ ಸದ್ದು ಕೇಳಿ ಬೆಚ್ಚಿಬಿದ್ದರು. ಕಾನ್ವೆ ಮಾತ್ರವಲ್ಲದೆ ಪಂದ್ಯ ವೀಕ್ಷಿಸಲು ಬಂದಿದ್ದ ಪಾಕ್‌ ಅಭಿಮಾನಿಗಳು ಕೂಡ ಭಯಭೀತರಾದರು. ಈ ವಿಡಿಯೊ ವೈರಲ್‌ ಆಗಿದ್ದು ಪಾಕ್‌ನಲ್ಲಿ ಈಗಲೂ ಕ್ರಿಕೆಟಿಗರು ಮತ್ತು ಸಾಮನ್ಯ ಜನರು ಜೀವ ಭಯದಿಂದಲೇ ಬದುಕುತ್ತಾರೆ ಎಂದು ನೆಟ್ಟಿಗರು ಟ್ರೋಲ್‌ ಮಾಡಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ನ್ಯೂಜಿಲ್ಯಾಂಡ್‌ ಆರಂಭಿಕ ಆಘಾತ ಬಳಿಕ ವಿಲ್‌ ಯಂಗ್‌ ಮತ್ತು ವಿಕೆಟ್‌ ಕೀಪರ್‌ ಟಾಮ್‌ ಲ್ಯಾಥಂ ಬಾರಿಸಿದ ಆಕರ್ಷಕ ಶತಕಗಳ ನೆರವಿನಿಂದ ಅಂತಿಮವಾಗಿ 5 ವಿಕೆಟಿಗೆ 320 ರನ್‌ ಪೇರಿಸಿತು. ಗುರಿ ಹಿಂಬಾಲಿಸಿದ ಪಾಕಿಸ್ತಾನ 47.2 ಓವರ್‌ಗಳಲ್ಲಿ 260ಕ್ಕೆ ಆಲೌಟ್‌ ಆಯಿತು.



ಕಿವೀಸ್‌ ಪರ ವಿಲ್‌ ಯಂಗ್‌ 107 ರನ್‌ ಹೊಡೆದರು (113 ಎಸೆತ, 12 ಬೌಂಡರಿ, 1 ಸಿಕ್ಸರ್‌). ಇದು ಯಂಗ್‌ ಅವರ 4ನೇ ಶತಕ. ಟಾಮ್‌ ಲ್ಯಾಥಂ ಅಜೇಯ 118 ರನ್‌ (104 ಎಸೆತ, 10 ಬೌಂಡರಿ, 3 ಸಿಕ್ಸರ್‌). ಇವರಿಬ್ಬರ 4ನೇ ವಿಕೆಟ್‌ ಜತೆಯಾಟದಲ್ಲಿ 118 ರನ್‌ ಒಟ್ಟುಗೂಡಿತು. ಬಳಿಕ ಲ್ಯಾಥಂ-ಫಿಲಿಪ್ಸ್‌ 5ನೇ ವಿಕೆಟಿಗೆ 125 ರನ್‌ ಬಾರಿಸಿ ತಂಡದ ಬೃಹತ್‌ ಮೊತ್ತಕ್ಕೆ ಕಾರಣರಾದರು. ಬಿರುಸಿನ ಆಟವಾಡಿದ ಫಿಲಿಪ್ಸ್‌ 39 ಎಸೆತಗಳಿಂದ 69 ರನ್‌ ಸಿಡಿಸಿದರು (10 ಬೌಂಡರಿ, 3 ಸಿಕ್ಸರ್‌).

ಇದನ್ನೂ ಓದಿ IND vs BAN: ಇಂದಿನ ಪಂದ್ಯಕ್ಕೆ ಭಾರತ ಆಡುವ ಬಳಗ ಹೇಗಿದೆ?

ಪಾಕಿಸ್ತಾನ ಪರ ಖುಷ್‌ದಿಲ್‌ ಶಾ ಸರ್ವಾಧಿಕ 69, ಬಾಬರ್‌ ಆಜಂ 64, ಸಲ್ಮಾನ್‌ ಆಘಾ 42 ರನ್‌ ಮಾಡಿದರು. ನಾಯಕ ರಿಜ್ವಾನ್‌ ಕೇವಲ 3 ರನ್‌ಗೆ ಸೀಮಿತರಾದರು. ಅಂತಿಮ ಹಂತದಲ್ಲಿ ಬೌಲರ್‌ ಹ್ಯಾರಿಸ್‌ ರಾವುಫ್‌ 3 ಸಿಕ್ಸರ್‌ ಬಾರಿಸಿ ಸೋಲಿನ ಅಂತರವನ್ನು ಕೊಂಚ ತಗ್ಗಿಸಿದರು.



ಸಂಕ್ಷಿಪ್ತ ಸ್ಕೋರ್‌

ನ್ಯೂಜಿಲ್ಯಾಂಡ್‌-5 ವಿಕೆಟಿಗೆ 320 (ವಿಲ್‌ ಯಂಗ್‌ 107, ಲ್ಯಾಥಂ ಔಟಾಗದೆ 118, ಫಿಲಿಪ್ಸ್‌ 61, ನಸೀಮ್‌ ಶಾ 63ಕ್ಕೆ 2, ಹ್ಯಾರಿಸ್‌ ರೌಫ್ 83ಕ್ಕೆ 2). ಪಾಕಿಸ್ತಾನನ-47.2 ಓವರ್‌ಗಳಲ್ಲಿ 260 (ಖುಷ್‌ದಿಲ್‌ 69, ಬಾಬರ್‌ 64, ಓ ರೂರ್ಕ್‌ 47ಕ್ಕೆ 3, ಸ್ಯಾಂಟ್ನರ್‌ 66ಕ್ಕೆ 3, ಹೆನ್ರಿ 25ಕ್ಕೆ 2). ಪಂದ್ಯಶ್ರೇಷ್ಠ: ಟಾಮ್‌ ಲ್ಯಾಥಂ.