ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Vishwavani Editorial: ಬಡಿದಾಡಲು ಜನರು ಚುನಾಯಿಸಿಲ್ಲ

ಬಣ ಬಡಿದಾಟದಲ್ಲಿ ವ್ಯಸ್ತರಾಗಲು ಜನರು ತಮ್ಮನ್ನು ಚುನಾಯಿಸಿಲ್ಲ ಎಂಬ ಸತ್ಯವನ್ನು ರಾಜ್ಯ ಬಿಜೆಪಿಗರು ಇನ್ನಾದರೂ ಅರಿಯಲಿ. ಒಂದು ಕಾಲಕ್ಕೆ ‘ಶಿಸ್ತಿನ ಪಕ್ಷ’ ಎಂದು ಕರೆಸಿಕೊಳ್ಳು ತ್ತಿದ್ದ ಬಿಜೆಪಿಯ ಒಡನಾಡಿಗಳು ಹೀಗೆ ಅಶಿಸ್ತಿಗೆ ಒಡ್ಡಿಕೊಳ್ಳುವುದು ತರವಲ್ಲ.

Vishwavani Editorial: ಬಡಿದಾಡಲು ಜನರು ಚುನಾಯಿಸಿಲ್ಲ

ರಾಜ್ಯ ಬಿಜೆಪಿ

Profile Ashok Nayak Feb 22, 2025 6:58 AM

ರಾಜ್ಯ ಬಿಜೆಪಿಯ ಒಂದಷ್ಟು ಪ್ರಭೃತಿಗಳಿಗೆ ಜನರ ಸಂಕಟ ಇನ್ನೂ ಅರ್ಥವಾದಂತಿಲ್ಲ, ಜನಪರ ಕಾಳಜಿಯಿಟ್ಟುಕೊಂಡು ಅಹರ್ನಿಶಿ ದುಡಿಯಬೇಕು ಎಂಬ ಸಂಕಲ್ಪ ಅವರಲ್ಲಿ ಇನ್ನೂ ಗಟ್ಟಿಗೊಂಡಂತಿಲ್ಲ. ಒಂದೊಮ್ಮೆ ಹಾಗೆ ಆಗಿದ್ದಿದ್ದರೆ, ಈಗ ಅವರು ವರ್ತಿಸು ತ್ತಿರುವ ರೀತಿಯಲ್ಲಿ ಅವರ ಮಾತು ಮತ್ತು ಧೋರಣೆ ಇರುತ್ತಿರಲಿಲ್ಲ. ಸರಕಾರವನ್ನು ನಡೆಸುತ್ತಿರುವವರು ತಮ್ಮ ನಿಗದಿತ ಪಥ ದಿಂದ ವಿಮುಖರಾಗದೆ ಹೆಜ್ಜೆಹಾಕುವಂತಾಗುವು ದಕ್ಕೆ, ಅಭಿವೃದ್ಧಿ ಮತ್ತು ಜನ ಕಲ್ಯಾಣದ ನಿಟ್ಟಿನಲ್ಲಿ ಅವರನ್ನು ಸದಾ ಸನ್ನದ್ಧರಾಗಿರು ವಂತೆ ಚುರುಕು ಮುಟ್ಟಿಸುವುದಕ್ಕೆ ಕಾರಣ ವಾಗಬೇಕಾದ ರಾಜ್ಯ ಬಿಜೆಪಿಯ ನಾಯಕರು ಸ್ವತಃ ಅಂತಃಕಲಹದಲ್ಲಿ ವ್ಯಸ್ತರಾಗಿ ಬಿಟ್ಟಿದ್ದಾರೆ.

Vishwavani Editorial: ಬಿರುಬಿಸಿಲು: ಮುನ್ನೆಚ್ಚರಿಕೆ ಇರಲಿ

ಇವರಿಗೆ ಜನಕಲ್ಯಾಣಕ್ಕಿಂತಲೂ ವೈಯಕ್ತಿಕ ಹಿತಾಸಕ್ತಿಗಳ ಈಡೇರಿಕೆಯೇ ಹೆಚ್ಚಾಗಿರುವುದು ವಿಷಾದನೀಯ ಎನ್ನಲಡ್ಡಿಯಿಲ್ಲ. ಇಷ್ಟೆಲ್ಲಾ ನಡೆಯುತ್ತಿದ್ದರೂ, ಸಂಬಂಧಪಟ್ಟವರಿಗೆ ಮೂಗುದಾಣ ಹಾಕಿ ಸರಿದಾರಿಗೆ ತರಬೇಕಿದ್ದ ದೆಹಲಿಯಲ್ಲಿನ ಪಕ್ಷದ ವರಿಷ್ಠರು, ರಾಜ್ಯ ಬಿಜೆಪಿಗರ ಹಾರಾಟ ಮತ್ತು ಕೂಗಾಟಗಳನ್ನು ಮನರಂಜನೆ ಎಂದು ಭಾವಿಸಿ ಸುಮ್ಮನಿದ್ದು ಬಿಟ್ಟಿದ್ದಾರಾ? ಎಂಬ ಸಂದೇಹ ಒಮ್ಮೊಮ್ಮೆ ಕಾಡುತ್ತದೆ.

ಗದ್ದುಗೆಯಲ್ಲಿ ಪ್ರತಿಷ್ಠಾಪನೆಗೊಂಡಿರುವ ಆಡಳಿತ ಪಕ್ಷದಂತೆ, ಕಾಲಾನುಕಾಲಕ್ಕೆ ಅದರ ಕಿವಿಹಿಂಡಿ ಸರಿದಾರಿಯಲ್ಲಿ ನಡೆಸಬೇಕಾದ ಸಮರ್ಥ ಪ್ರತಿಪಕ್ಷವೂ ಇರಬೇಕಾದ್ದು ಪ್ರಜಾ ಪ್ರಭುತ್ವದ ಆಶಯ ಮತ್ತು ನಿರೀಕ್ಷೆ. ಆದರೆ ಕರ್ನಾಟಕದಲ್ಲಿ ಈ ಆಶಯ ನೆರವೇರುತ್ತಿಲ್ಲ ಎಂಬುದು ಹಸಿಮಣ್ಣಿನ ಮೇಲೆ ಗಾಜಿನಿಂದ ಬರೆದ ಅಕ್ಷರದಷ್ಟೇ ನಿಚ್ಚಳವಾದ ಸಂಗತಿ ಯಾಗಿದೆ.

ಜನರ ಹಿತಾಸಕ್ತಿಯ ರಕ್ಷಣೆಯಲ್ಲಿ ಉದಾಸೀನ ತೋರಿದರೆ ಅಥವಾ ‘ಚುನಾವಣೆಗೆ ಇನ್ನೂ ಸಾಕಷ್ಟು ಕಾಲವಿದೆಯಲ್ಲಾ, ಆಮೇಲೆ ನೋಡಿಕೊಂಡರಾಯಿತು’ ಎಂಬ ಧೋರಣೆಯಲ್ಲಿ ಅವರನ್ನು ನಿರ್ಲಕ್ಷಿಸಿದರೆ, ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಆದ ಗತಿಯೇ ಭವಿಷ್ಯದಲ್ಲಿ ಕರ್ನಾಟಕದ ಬಿಜೆಪಿಗೂ ಒದಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.

ಈಗಲೂ ಕಾಲ ಮಿಂಚಿಲ್ಲ. ಹೀಗೆ ಬಣ ಬಡಿದಾಟದಲ್ಲಿ ವ್ಯಸ್ತರಾಗಲು ಜನರು ತಮ್ಮನ್ನು ಚುನಾಯಿಸಿಲ್ಲ ಎಂಬ ಸತ್ಯವನ್ನು ರಾಜ್ಯ ಬಿಜೆಪಿಗರು ಇನ್ನಾದರೂ ಅರಿಯಲಿ. ಒಂದು ಕಾಲಕ್ಕೆ ‘ಶಿಸ್ತಿನ ಪಕ್ಷ’ ಎಂದು ಕರೆಸಿಕೊಳ್ಳುತ್ತಿದ್ದ ಬಿಜೆಪಿಯ ಒಡನಾಡಿಗಳು ಹೀಗೆ ಅಶಿಸ್ತಿಗೆ ಒಡ್ಡಿಕೊಳ್ಳುವುದು ತರವಲ್ಲ.