Vishwavani Editorial: ಬಿರುಬಿಸಿಲು: ಮುನ್ನೆಚ್ಚರಿಕೆ ಇರಲಿ
ವಿಶೇಷವಾಗಿ ಹಿರಿಯ ನಾಗರಿಕರು, ಮಕ್ಕಳು ಹೆಚ್ಚು ನೀರು ಕುಡಿಯಬೇಕು. ಮಜ್ಜಿಗೆ, ಗ್ಲೂಕೋಸ್, ಒಆರ್ ಎಸ್ ತಂಪು ಪದಾರ್ಥಗಳನ್ನು ಹೆಚ್ಚು ಉಪಯೋಗಿಸಬೇಕು. ರೈತರು, ಕೃಷಿ ಕಾರ್ಮಿಕರು ಹೊರಗೆ ಕೆಲಸ ಮಾಡುತ್ತಿದ್ದರೆ ಟೋಪಿ ಅಥವಾ ಛತ್ರಿ ಬಳಸಬೇಕು. ತಲೆ, ಕುತ್ತಿಗೆ, ಮುಖ ಮತ್ತು ಕೈಕಾಲುಗಳ ಮೇಲೆ ಒದ್ದೆ ಬಟ್ಟೆಯನ್ನು ಉಪಯೋಗಿಸಬೇಕು. ಸಾಧ್ಯವಾದಷ್ಟು ತಂಪಾದ ಸ್ಥಳ ಗಳಲ್ಲಿ ಉಳಿಯಲು ಪ್ರಯತ್ನಿ ಸಬೇಕು


ಚಳಿಗಾಲ ತೆರೆಮರೆಗೆ ಸರಿಯುತ್ತಿದ್ದು, ಬಿರು ಬೇಸಿಗೆ ಎಡೆ ಆವರಿಸುತ್ತಿದೆ. ಕಳೆದ ವರ್ಷ ಜನವರಿ ಯಲ್ಲಿ ಒಂದಿಷ್ಟು ಮಳೆಯಾಗಿತ್ತು. ಮೋಡಕವಿದ ವಾತಾವರಣ ಇರುತ್ತಿತ್ತು. ಆದರೆ ಈ ಬಾರಿ ಮಳೆ ಯ ಸುಳಿವೇ ಇಲ್ಲ. ಮೋಡ ಕವಿದ ವಾತಾವರಣ ಇರಲಿ ಗಗನದಲ್ಲಿ ಅಂಗೈ ಅಗಲದಷ್ಟು ಮೋಡ ವೂ ಇಲ್ಲ. ಮುಂದಿನ ಮೂರ‍್ನಾಲ್ಕು ತಿಂಗಳು ಇನ್ನೂ ಬಿಸಿಲಿನ ಧಗೆ ಹೆಚ್ಚಲಿದ್ದು, ತೀವ್ರ ಶಾಖದ ಅಲೆಗಳಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಸೂರ್ಯಾಘಾತ ಹಾಗೂ ಉಷ್ಣಾ ಘಾತ ಆಗುವ ಸಾಧ್ಯತೆಗಳಿರುತ್ತವೆ. ದೇಹದಲ್ಲಿ ಸೋಡಿಯಂ ಮತ್ತು ಪೋಟ್ಯಾ ಸಿಯಂ ಅಂಶ ಕಡಿಮೆಯಾಗಿ ಏರಿಳಿತ ಕಂಡು ಬಂದು ದೇಹ ತೀವ್ರ ನಿತ್ರಾಣಕ್ಕೆ ಬರುತ್ತದೆ.
ಇದನ್ನೂ ಓದಿ: Vishwavani Editorial: ಬಾಲ್ಯ ವಿವಾಹಗಳಿಗೆ ಕಡಿವಾಣ ಬೀಳಲಿ
ರಕ್ತದೊತ್ತಡ ಕೂಡ ಇಳಿಕೆಯಾಗಬಹುದು. ಹೀಗಾಗಿ ಸಾರ್ವಜನಿಕರು ಕೆಲವು ಮುನ್ನಚ್ಚರಿಕೆಗಳನ್ನು ವಹಿಸಬೇಕಾಗುವುದು ಅಗತ್ಯ. ವಿಶೇಷವಾಗಿ ಮಧ್ಯಾಹ್ನ 12 ರಿಂದ 3 ರವರೆಗೆ ಬಿಸಿಲಿನಲ್ಲಿ ಹೋಗು ವುದನ್ನು ತಪ್ಪಿಸಬೇಕು. ಆಲ್ಕೋಹಾಲ್, ಚಹಾ, ಕಾಫಿ ಮತ್ತು ಕಾರ್ಬೊನೇಟೆಡ್ ತಂಪು ಪಾನೀಯ ಗಳನ್ನು ತಪ್ಪಿಸಬೇಕು. ಹೆಚ್ಚು ಬಾಯಾರಿಕೆ ಇಲ್ಲದಿದ್ದರೂ ಸಾಕಷ್ಟು ನೀರು ಕುಡಿಯಬೇಕು.
ವಿಶೇಷವಾಗಿ ಹಿರಿಯ ನಾಗರಿಕರು, ಮಕ್ಕಳು ಹೆಚ್ಚು ನೀರು ಕುಡಿಯಬೇಕು. ಮಜ್ಜಿಗೆ, ಗ್ಲೂಕೋಸ್, ಒಆರ್‌ಎಸ್ ತಂಪು ಪದಾರ್ಥಗಳನ್ನು ಹೆಚ್ಚು ಉಪಯೋಗಿಸಬೇಕು. ರೈತರು, ಕೃಷಿ ಕಾರ್ಮಿಕರು ಹೊರಗೆ ಕೆಲಸ ಮಾಡುತ್ತಿದ್ದರೆ ಟೋಪಿ ಅಥವಾ ಛತ್ರಿ ಬಳಸಬೇಕು. ತಲೆ, ಕುತ್ತಿಗೆ, ಮುಖ ಮತ್ತು ಕೈಕಾಲುಗಳ ಮೇಲೆ ಒದ್ದೆ ಬಟ್ಟೆಯನ್ನು ಉಪಯೋಗಿಸಬೇಕು. ಸಾಧ್ಯವಾದಷ್ಟು ತಂಪಾದ ಸ್ಥಳ ಗಳಲ್ಲಿ ಉಳಿಯಲು ಪ್ರಯತ್ನಿಸಬೇಕು.
ಹಗುರವಾದ, ತಿಳಿ ಬಣ್ಣದ, ಸಡಿಲವಾದ ಹತ್ತಿಯ ಬಟ್ಟೆಯನ್ನು ಧರಿಸಿ, ರಕ್ಷಣಾತ್ಮಕ ಕನ್ನಡಕ ಗಳನ್ನು ಬಳಸಬೇಕು. ಹೆಚ್ಚಿನ ಪ್ರೋಟೀನ್ ಆಹಾರವನ್ನು ಸೇವಿಸಬಾರದು. ಶಾಖಾಘಾತದ ಕ್ಷಣ ಗಳನ್ನು ಹೊಂದಿರುವ ವ್ಯಕ್ತಿಗಳನ್ನು ತಂಪಾದ ಜಾಗದಲ್ಲಿರಿಸಬೇಕು. ಶಾಖದ ಹೊಡೆತದಿಂದ ಬಳಲುತ್ತಿರುವ ವ್ಯಕ್ತಿಯು ಹತ್ತಿ ಬಟ್ಟೆಯನ್ನು ಹೊಂದಿರುವಂತೆ ನೋಡಿಕೊಂಡು ವ್ಯಕ್ತಿಗೆ ತಣ್ಣೀರಿ ನಿಂದ ಸ್ಪಾಂಜ್ ಮಾಡಬೇಕು. ಹಾಗೆಯೇ ಪ್ರಾಣಿ-ಪಕ್ಷಿಗಳ ಬಗ್ಗೆಯೂ ಜಾಗರೂಕವಾ ಗಿರಬೇಕು. ಪ್ರಾಣಿಗಳನ್ನು ನೆರಳಿನಲ್ಲಿ ಇರಿಸಿ ಮತ್ತು ಅವುಗಳಿಗೆ ಕುಡಿಯಲು ಸಾಕಷ್ಟು ನೀರು ನೀಡಬೇಕು.