Narendra Modi: ಫ್ರಾನ್ಸ್‌ಗೆ ಬಂದಿಳಿದ ಪ್ರಧಾನಿ ಮೋದಿಗೆ ಅಧ್ಯಕ್ಷ ಮ್ಯಾಕ್ರನ್ ಅದ್ಧೂರಿ = ಸ್ವಾಗತ
ಪ್ರಧಾನಿ ನರೇಂದ್ರ ಮೋದಿ ಮೂರು ದಿನಗಳ ಭೇಟಿಗಾಗಿ ಸೋಮವಾರ ಫ್ರಾನ್ಸ್‌ಗೆ ತೆರಳಿದ್ದಾರೆ. ಫ್ರಾನ್ಸ್‌ನಲ್ಲಿ ನಡೆಯುತ್ತಿರುವ 'AI ಆಕ್ಷನ್ ಶೃಂಗಸಭೆಯಲ್ಲಿ ಭಾಗವಹಿಸಲು ಅವರು ತೆರಳಿದ್ದಾರೆ. ಫ್ರಾನ್ಸ್‌ಗೆ ಬಂದಿಳಿಯುತ್ತಲೇ ಮೋದಿ ಅವರಿಗೆ ಅದ್ಧೂರಿ ಸ್ವಾಗತ ದೊರಕಿದೆ. AI ಶೃಂಗಸಭೆಯ ಸಹ-ಅಧ್ಯಕ್ಷತೆಯನ್ನು ಪ್ರಧಾನಿ ಮೋದಿ ವಹಿಸಲಿದ್ದಾರೆ.
![ಫ್ರಾನ್ಸ್‌ನಲ್ಲಿ ಮೋದಿಗೆ ಅದ್ಧೂರಿ ಸ್ವಾಗತ](https://cdn-vishwavani-prod.hindverse.com/media/original_images/Narendra_Modi_3_zl0w0Wh.jpg)
Narendra Modi
![Profile](https://vishwavani.news/static/img/user.png)
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಮೂರು ದಿನಗಳ ಭೇಟಿಗಾಗಿ ಸೋಮವಾರ ಫ್ರಾನ್ಸ್‌ಗೆ (France) ತೆರಳಿದ್ದಾರೆ. ಫ್ರಾನ್ಸ್‌ನಲ್ಲಿ ನಡೆಯುತ್ತಿರುವ 'AI ಆಕ್ಷನ್ ಶೃಂಗಸಭೆಯಲ್ಲಿ (AI summit) ಭಾಗವಹಿಸಲು ಅವರು ತೆರಳಿದ್ದಾರೆ. ಫ್ರಾನ್ಸ್‌ಗೆ ಬಂದಿಳಿಯುತ್ತಲೇ ಮೋದಿ ಅವರಿಗೆ ಅದ್ಧೂರಿ ಸ್ವಾಗತ ದೊರಕಿದೆ. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ (Emmanuel Macron) ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. AI ಶೃಂಗಸಭೆಯ ಸಹ-ಅಧ್ಯಕ್ಷತೆಯನ್ನು ಪ್ರಧಾನಿ ಮೋದಿ ವಹಿಸಲಿದ್ದಾರೆ.
Ravi de retrouver mon ami le Président Macron à Paris. @EmmanuelMacron pic.twitter.com/AFpYQOP3z4
— Narendra Modi (@narendramodi) February 10, 2025
AI ಶೃಂಗಸಭೆಯ ಸಹ-ಅಧ್ಯಕ್ಷತೆ ವಹಿಸುವ ಮೊದಲು ಪ್ಯಾರಿಸ್‌ನಲ್ಲಿ ನಡೆದ ಭೋಜನಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಅಪ್ಪುಗೆಯ ಮೂಲಕ ಸ್ವಾಗತಿಸಿದರು. ಭೋಜನಕೂಟದಲ್ಲಿ, ಪ್ರಧಾನಿ ಮೋದಿ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರನ್ನು ಭೇಟಿಯಾಗಿದ್ದಾರೆ. ಮೋದಿ ಫ್ರಾನ್ಸ್‌ಗೆ ಆಗಮಿಸುತ್ತಿದ್ದಂತೆ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಭಾರತೀಯ ವಲಸಿಗರು "ಮೋದಿ, ಮೋದಿ ಹಾಗೂ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಿದ್ದಾರೆ.
Welcome to Paris, my friend @NarendraModi! Nice to meet you dear @VP Vance! Welcome to all our partners for the AI Action Summit.
— Emmanuel Macron (@EmmanuelMacron) February 10, 2025
Let’s get to work! pic.twitter.com/yatkrVYv9x
Here are highlights from the memorable welcome in Paris yesterday. pic.twitter.com/lgsWBlZqCl
— Narendra Modi (@narendramodi) February 11, 2025
ಈ ಸುದ್ದಿಯನ್ನೂ ಓದಿ: Narendra Modi: AI ಆ್ಯಕ್ಷನ್ ಶೃಂಗಸಭೆಗೆ ಭಾಗವಹಿಸಲು ಫ್ರಾನ್ಸ್‌ಗೆ ತೆರಳಿದ ಪ್ರಧಾನಿ; ಮಹತ್ವದ ಚರ್ಚೆ ಸಾಧ್ಯತೆ
AI ಆಕ್ಷನ್ ಶೃಂಗಸಭೆಯಲ್ಲಿ ತಂತ್ರಜ್ಞಾನ ಪರಮಾಣು ಶಕ್ತಿ ಸೇರಿದಂತೆ ಪ್ರಮುಖ ವಿಷಯಗಳನ್ನು ಚರ್ಚಿಸಲಾಗುತ್ತದೆ. ಶೃಂಗಸಭೆಯ ನಂತರ, ಮೋದಿ ಮತ್ತು ಮ್ಯಾಕ್ರನ್ ಬಂದರು ನಗರಿ ಮಾರ್ಸಿಲ್ಲೆಗೆ ಪ್ರಯಾಣಿಸಲಿದ್ದಾರೆ, ಅಲ್ಲಿ ಅವರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಫೆಬ್ರವರಿ 12 ರಂದು ಹೊಸ ಭಾರತೀಯ ರಾಯಭಾರಿ ಕಚೇರಿಯನ್ನು ಉದ್ಘಾಟಿಸಲಿದ್ದಾರೆ. ಚೀನಾದ ಡೀಪ್‌ಸೀಕ್ ಸೇರಿದಂತೆ ಹಲವು ವಿಷಯಗಳ ಮೇಲೆ ಚರ್ಚೆ ನಡೆಯಲಿದೆ.