ಭಾರತ ಏಕದಿನ ಸರಣಿಯಲ್ಲಿ ನಮಗೆ ದೊಡ್ಡ ಸವಾಲು ಎದುರಾಗಲಿದೆ ಎಂದ ಡ್ಯಾರಿಲ್ ಮಿಚೆಲ್!
ಮುಂದಿನ ಟಿ20 ವಿಶ್ವಕಪ್ ಟೂರ್ನಿಯ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುತ್ತಿಲ್ಲ. ಆದರೆ, ನಾವು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಸೇರಿದಂತೆ ಬಲಿಷ್ಠ ಆಟಗಾರರನ್ನು ಒಳಗೊಂಡಿರುವ ಭಾರತ ತಂಡದ ವಿರುದ್ಧದ ನಡೆಯುವ ಏಕದಿನ ಸರಣಿಯ ಕಡೆಗೆ ಹೆಚ್ಚಿನ ಗಮನ ನೀಡುತ್ತಿದ್ದೇವೆ. ಏಕೆಂದರೆ ಇಲ್ಲಿ ನಮಗೆ ದೊಡ್ಡ ಸವಾಲು ಎದುರಾಗಲಿದೆ ಎಂದು ತಿಳಿಸಿದ್ದಾರೆ.
ಭಾರತ ಒಡಿಐ ಸರಣಿ ಬಗ್ಗೆ ಡ್ಯಾರಿಲ್ ಮಿಚೆಲ್ ಹೇಳಿಕೆ. -
ನವದೆಹಲಿ: ಭಾರತ ಹಾಗೂ ನ್ಯೂಜಿಲೆಂಡ್ (IND vs NZ) ತಂಡಗಳು ಜನವರಿ 11 ರಂದು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕಾದಾಟ ನಡೆಸಲಿವೆ. ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಆಡಲಿದ್ದಾರೆ. ಈ ಬಗ್ಗೆ ಮಾತನಾಡಿದ ಕಿವೀಸ್ ಬ್ಯಾಟ್ಸ್‌ಮನ್ ಡ್ಯಾರಿಲ್ ಮಿಚೆಲ್ (Daryl Mitchell), ಭಾರತ ತಂಡದ ವಿರುದ್ಧದ ಏಕದಿನ ಸರಣಿಯಲ್ಲಿ ನಮಗೆ ಕಠಿಣ ಸವಾಲು ಎದುರಾಗಲಿದೆ. ಹಾಗಾಗಿ ನಾವು ಇನ್ನೂ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯ ಕಡೆಗೆ ಗಮನವನ್ನು ನೀಡುವುದಿಲ್ಲ ಎಂದು ಹೇಳಿದ್ದಾರೆ.
ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಮೊದಲಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕಾದಾಟ ನಡೆಸಲಿವೆ. ಇದಾದ ಬಳಿಕ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಕಾದಾಟ ನಡೆಸಲಿವೆ. ಇದಾದ ಬಳಿಕ ಫೆಬ್ರವರಿ 7 ರಿಂದ ಮಾರ್ಚ್ 8 ರವರೆಗೆ ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ.
"ನಾವು ಒಂದು ತಿಂಗಳಲ್ಲಿ ಟಿ20 ವಿಶ್ವಕಪ್ ಅನ್ನು ನೋಡುತ್ತೇವೆ. ಸದ್ಯಕ್ಕೆ ಭಾರತದ ವಿರುದ್ಧ ಏಕದಿನ ಸರಣಿಯನ್ನು ಆಡುವ ಬಗ್ಗೆ ನಾವು ಚಿಂತಿಸುತ್ತೇವೆ ಮತ್ತು ಬುಮ್ರಾ ಮತ್ತು ಚಕ್ರವರ್ತಿಯಂತಹ ಕೆಲವು ಉತ್ತಮ ಬೌಲರ್‌ಗಳನ್ನು ಅವರು (ಭಾರತ) ಹೊಂದಿದ್ದಾರೆ," ಎಂದು ಟಿಸಿಎಂ ಸ್ಪೋರ್ಟ್ಸ್ ಆಯೋಜಿಸಿದ್ದ ನ್ಯೂಜಿಲೆಂಡ್ ಕ್ರಿಕೆಟ್‌ನ ಗಾಲ್ಫ್ ದಿನದ ಸಂದರ್ಭದಲ್ಲಿ ಡ್ಯಾರಿಲ್ ಮಿಚೆಲ್ ಮಾಧ್ಯಮಗಳಿಗೆ ತಿಳಿಸಿದರು.
2026ರ ಐಸಿಸಿ ಟಿ20 ವಿಶ್ವಕಪ್‌ಗೆ ನ್ಯೂಜಿಲೆಂಡ್ ತಂಡ ಪ್ರಕಟ, ಆರ್‌ಸಿಬಿ ವೇಗಿ ಜಾಕೋಬ್ ಡಫಿಗೆ ಸ್ಥಾನ!
"ನ್ಯೂಜಿಲೆಂಡ್ ಕ್ರಿಕೆಟ್ ತಂಡವಾಗಿ ನಮಗೆ ನಿಜವಾಗಿಯೂ ಪ್ರಮುಖ ಮೌಲ್ಯವೆಂದರೆ ನಮ್ಮ ಪಾದಗಳು ಇರುವ ಸ್ಥಳದಲ್ಲಿಯೇ ಇರುವುದು ಮತ್ತು ಅದರರ್ಥ ವರ್ತಮಾನದಲ್ಲಿರುವುದು ಮತ್ತು ಆ ಕ್ಷಣದಲ್ಲಿ ಸವಾಲು ಏನೆಂಬುದು," ಎಂದರು.
"ರೋಮಾಂಚಕಾರಿ ವಿಷಯವೆಂದರೆ ನಾವು ವಿಶ್ವ ದರ್ಜೆಯ ಭಾರತ ತಂಡದ ವಿರುದ್ಧ ಮೂರು ಏಕದಿನ ಪಂದ್ಯಗಳನ್ನು ಭಾರತೀಯ ಪರಿಸ್ಥಿತಿಗಳಲ್ಲಿ ಹಾಗೂ ಪೂರ್ಣ ಜನಸಂದಣಿಯ ಮುಂದೆ ಆಡುವುದು. ಆದ್ದರಿಂದ ನಾವು ನಮ್ಮ ಪಾದಗಳು ಇರುವ ಸ್ಥಳದಲ್ಲಿಯೇ ಇರುತ್ತೇವೆ. ನಾವು ಈಗ ನಿಯಂತ್ರಣದಲ್ಲಿದ್ದೇವೆ ಮತ್ತು ಒಂದು ತಿಂಗಳಲ್ಲಿ ವಿಶ್ವಕಪ್ ಟೂರ್ನಿಗಾಗಿ ಎದುರು ನೋಡುತ್ತೇವೆ," ಎಂದು ಅವರು ಹೇಳಿದ್ದಾರೆ.
ಭಾರತ ಏಕದಿನ ತಂಡದಲ್ಲಿ ಜಸ್‌ಪ್ರೀತ್ ಬುಮ್ರಾ ಹಾಗೂ ವರುಣ್ ಚಕ್ರವರ್ತಿ ಆಡುತ್ತಿಲ್ಲ. ಈ ಇಬ್ಬರೂ ಆಟಗಾರರು ಟಿ20ಐ ಸರಣಿಯಲ್ಲಿ ಆಡಲಿದ್ದಾರೆ. ಭಾರತದ ಕಂಡೀಷನ್ಸ್‌ಗೆ ಹೊಂದಿಕೊಳ್ಳುವುದು ಇಲ್ಲಿನ ಕೀ ಸಂಗತಿಯಾಗಲಿದೆ ಎಂದು ಡ್ಯಾರಿಲ್ ಮಿಚೆಲ್ ತಿಳಿಸಿದ್ದಾರೆ.
ಐಪಿಎಲ್ ತೊರೆದ ಬೆನ್ನಲ್ಲೆ ಪಾಕಿಸ್ತಾನ ಸೂಪರ್ ಲೀಗ್‌ಗೆ ಸೇರ್ಪಡೆಯಾದ ಮುಸ್ತಾಫಿಝುರ್ ರೆಹಮಾನ್!
"ನಾನು ಸ್ವಲ್ಪ ಸಮಯದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದೇನೆ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಭಾಗವಾಗಿ ನೀವು ಪ್ರಪಂಚದಾದ್ಯಂತದ ವಿಭಿನ್ನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಬೇಕು," ಎಂದು ಅವರು ಹೇಳಿದ್ದಾರೆ.
"ನೀವು ಈ ಭಾಗಗಳಿಗೆ ಬಂದಾಗ ಅದು ಒಂದು ದೊಡ್ಡ ಸವಾಲು. ನ್ಯೂಜಿಲೆಂಡ್‌ನವನಾಗಿ, ನೀವು ಈ ರೀತಿಯ ಮೇಲ್ಮೈಗಳಲ್ಲಿ ಬೆಳೆಯುವುದಿಲ್ಲ. ಆದ್ದರಿಂದ ಕಳೆದ ಕೆಲವು ವರ್ಷಗಳಲ್ಲಿ ನಾನು ಅನುಭವಿಸಿದ ಅನುಭವಗಳನ್ನು ನಾನು ಬಳಸಿಕೊಳ್ಳಲು ಮತ್ತು 2023 ರಲ್ಲಿ ನಡೆಯುವ ಏಕದಿನ ವಿಶ್ವಕಪ್‌ನಂತಹ ಸಕಾರಾತ್ಮಕ ಅಂಶಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ," ಎಂದು ಅವರು ತಿಳಿಸಿದ್ದಾರೆ.