Rinku Singh: ರಿಂಕು ಸಿಂಗ್ ಜತೆ ಮದುವೆ; ಖಚಿತಪಡಿಸಿದ ಸಂಸದೆ ಪ್ರಿಯಾ ತಂದೆ
Rinku Singh: ರಿಂಕು ಸಿಂಗ್, 2023ರ ಐಪಿಎಲ್ನಲ್ಲಿ ಸತತ 5 ಸಿಕ್ಸರ್ ಸಿಡಿಸಿ ಕೆಕೆಆರ್ ತಂಡವನ್ನು ಗೆಲ್ಲಿಸುವ ಮೂಲಕ ಜನಪ್ರಿಯತೆ ಪಡೆದಿದ್ದರು.
ಲಕ್ನೋ: ಎರಡು ದಿನಗಳ ಹಿಂದಷ್ಟೇ ಟೀಮ್ ಇಂಡಿಯಾ ಮತ್ತು ಕೆಕೆಆರ್ ತಂಡದ ಸ್ಟಾರ್ ಎಡಗೈ ಬ್ಯಾಟರ್ ರಿಂಕು ಸಿಂಗ್, ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿತ್ತು. ಇದೀಗ ಪ್ರಿಯಾ ಸರೋಜ್ ಅವರ ತಂದೆ ತುಪಾನಿ ಸರೋಜ್ ಅವರು ರಿಂಕು ಜತೆ ಮಗಳ ವಿವಾಹವನ್ನು ಖಚಿತಪಡಿಸಿದ್ದಾರೆ.
'ರಿಂಕು ಮತ್ತು ಪ್ರಿಯಾ ಸುಮಾರು ಒಂದು ವರ್ಷದಿಂದ ಪರಸ್ಪರ ಇಷ್ಟಪಟ್ಟಿದ್ದಾರೆ. ವಿವಾಹಕ್ಕೆ ಇಬ್ಬರ ಕುಟುಂಬಸ್ಥರ ಒಪ್ಪಿಗೆ ಕೂಡ ಇದೆ. ಸಂಸತ್ ಅಧಿವೇಶನ ಬಳಿಕ ನಿಶ್ಚಿತಾರ್ಥ ಮತ್ತು ವಿವಾಹ ದಿನಾಂಕವನ್ನು ನಿಗದಿಪಡಿಸಲಾಗುವುದು, ಲಖನೌನಲ್ಲಿ ಎಂಗೇಜ್ ಮೆಂಟ್ ನಡೆಯಲಿದೆ' ಎಂದು ತುಪಾನಿ ಪಿಟಿಐ ಜತೆಗಿನ ಸಂದರ್ಶದನಲ್ಲಿ ಹೇಳಿದ್ದಾರೆ. ತುಪಾನಿ ಕೂಡ ಸಮಾಜವಾದಿ ಪಕ್ಷದ ಶಾಸಕರಾಗಿದ್ದಾರೆ.
Jaunpur, Uttar Pradesh: Samajwadi Party MLA and father of SP MP Priya Saroj, Tufani Saroj, says, "The matter is in its First stage. Both Priya Saroj and Rinku Singh have expressed mutual agreement, saying that they will proceed with marriage if their guardians approve. No… pic.twitter.com/bC78T2jcRp
— IANS (@ians_india) January 18, 2025
26 ವರ್ಷದ ಪ್ರಿಯಾ ಸರೋಜ್ ದೇಶದ ಹಾಲಿ 2ನೇ ಅತಿ ಕಿರಿಯ ಸಂಸದೆ ಎನಿಸಿದ್ದಾರೆ. 3 ಬಾರಿಯ ಸಂಸದ ಹಾಗೂ ಉತ್ತರ ಪ್ರದೇಶದ ಹಾಲಿ ಶಾಸಕ ತುಾನಿ ಸರೋಜ್ ಪುತ್ರಿಯಾಗಿರುವ ಪ್ರಿಯಾ, 2024ರ ಲೋಕಸಭಾ ಚುನಾವಣೆಯಲ್ಲಿ ಮಚ್ಲಿಶಹರ್ ಕ್ಷೇತ್ರದಿಂದ ಚುನಾಯಿತರಾಗಿದ್ದರು. ವಾರಣಸಿಯಲ್ಲಿ ಜನಿಸಿರುವ ಪ್ರಿಯಾ, ವೃತ್ತಿಯಲ್ಲಿ ವಕೀಲೆ ಆಗಿದ್ದಾರೆ.
ಇದನ್ನೂ ಓದಿ Rinku Singh: ಅತಿ ಕಿರಿಯ ಸಂಸದೆ ಪ್ರಿಯಾ ಜತೆ ರಿಂಕು ಸಿಂಗ್ ನಿಶ್ಚಿತಾರ್ಥ?
ರಿಂಕು ಸಿಂಗ್, 2023ರ ಐಪಿಎಲ್ನಲ್ಲಿ ಸತತ 5 ಸಿಕ್ಸರ್ ಸಿಡಿಸಿ ಕೆಕೆಆರ್ ತಂಡವನ್ನು ಗೆಲ್ಲಿಸುವ ಮೂಲಕ ಜನಪ್ರಿಯತೆ ಪಡೆದಿದ್ದರು. ಇದುವರೆಗೆ ರಿಂಕು ಭಾರತ ಪರ 2 ಏಕದಿನ ಮತ್ತು 20 ಟಿ20 ಪಂದ್ಯಗಳನ್ನು ಆಡಿದ್ದಾರೆ. ಸದ್ಯ ರಿಂಕು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಕೋಲ್ಕತಾದಲ್ಲಿ ಭಾರತ ತಂಡದ ಜತೆಗೆ ಅಭ್ಯಾಸ ನಿರತರಾಗಿದ್ದಾರೆ.