ಇರಾನ್ ಮೇಲೆ ಅಮೆರಿಕ ಸುಂಕ; ಭಾರತದ ಮೇಲೆ ಪರಿಣಾಮವೇನು? ಯಾವುದರ ಬೆಲೆ ಹೆಚ್ಚಾಗುತ್ತದೆ?
ಇರಾನ್‌ನಲ್ಲಿ ಆಡಳಿತ ವಿರೋಧಿ ಪ್ರತಿಭಟನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಖಮೇನಿ ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇರಾನ್ ಜೊತೆ ವ್ಯಾಪಾರ ಮಾಡುವ ದೇಶಗಳ ಮೇಲೆ ಶೇ. 25ರಷ್ಟು ಹೆಚ್ಚುವರಿ ಸುಂಕ ಘೋಷಣೆ ಮಾಡಿದ್ದಾರೆ.
ಡೊನಾಲ್ಡ್ ಟ್ರಂಪ್ -
ಇರಾನ್‌ನಲ್ಲಿ ಆಡಳಿತ ವಿರೋಧಿ ಪ್ರತಿಭಟನೆ ದಿನದಿಂದ (Trump Tariffs On Iran) ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಖಮೇನಿ ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇರಾನ್ ಜೊತೆ ವ್ಯಾಪಾರ ಮಾಡುವ ದೇಶಗಳ ಮೇಲೆ ಶೇ. 25ರಷ್ಟು ಹೆಚ್ಚುವರಿ ಸುಂಕ ಘೋಷಣೆ ಮಾಡಿದ್ದಾರೆ. ಈ ಕ್ರಮವು ಇರಾನ್‌ನ ಪ್ರಮುಖ ವ್ಯಾಪಾರ ಪಾಲುದಾರರಲ್ಲಿ ಒಂದಾದ ಭಾರತ ಮತ್ತು ಚೀನಾ ಸೇರಿದಂತೆ, ಜಗತ್ತಿನಾದ್ಯಂತ ಅಮೆರಿಕದ ಪ್ರಮುಖ ವ್ಯಾಪಾರ ಸಂಬಂಧಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ.
ಈ ಹೊಸ ತೆರಿಗೆ ತಕ್ಷಣದಿಂದಲೇ ಜಾರಿಗೆ ಬರಲಿದೆ. ಟ್ರಂಪ್ ಘೋಷಣೆಗೆ ಭಾರತ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸರ್ಕಾರದ ಮೂಲಗಳು ಪ್ರತಿಕ್ರಿಯಿಸಿ, ‘ಇರಾನ್‌ಗೆ ಭಾರತದ ಆಮದು-ರಫ್ತು ತುಂಬಾ ಕಮ್ಮಿ. ಅದು ಟಾಪ್ 50 ವ್ಯಾಪಾರ ಪಾಲುದಾರ ದೇಶಗಳ ಪಟ್ಟಿಯಲ್ಲಿಲ್ಲ. ಹೀಗಾಗಿ ಭಾರತದ ಮೇಲೆ ಪರಿಣಾಮ ತುಂಬಾ ಕಮ್ಮಿ ಎಂದು ಹೇಳಲಾಗುತ್ತಿದೆ. ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಪ್ರಕಾರ, ಭಾರತವು 2024-25ರ ಆರ್ಥಿಕ ವರ್ಷದಲ್ಲಿ ಇರಾನ್‌ಗೆ 1.24 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಸರಕುಗಳನ್ನು ರಫ್ತು ಮಾಡಿದೆ. ಇದೇ ವೇಳೆ ಇರಾನ್‌ನಿಂದ ಭಾರತವು 0.44 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿದೆ. ಉಭಯ ದೇಶಗಳ ನಡುವಿನ ಒಟ್ಟು ವ್ಯಾಪಾರ ಮೌಲ್ಯ, 1.68 ಬಿಲಿಯನ್ ಅಮೆರಿಕನ್ ಡಾಲರ್ (ಸುಮಾರು 14,000-15,000 ಕೋಟಿ ರೂ.) ಇದೆ.
ಆರ್ಗ್ಯಾನಿಕ್ ಕೆಮಿಕಲ್, ಬಾಸ್ಮತಿ ಅಕ್ಕಿ, ಚಹಾ, ಸಕ್ಕರೆ, ಔಷಧಗಳು, ಹಣ್ಣುಗಳು, ಧಾನ್ಯಗಳು, ಆರ್ಟಿಫಿಷಿಯಲ್ ಜ್ಯುವೆಲ್ಲರಿ ಮತ್ತು ಮಾಂಸವನ್ನು ಭಾರತ ಹೆಚ್ಚಾಗಿ ರಫ್ತು ಮಾಡುತ್ತದೆ. ಭಾರತದ ಬಾಸ್ಮತಿ ಅಕ್ಕಿಗೆ ಇರಾನ್ ಅತಿದೊಡ್ಡ ಮಾರುಕಟ್ಟೆಯಾಗಿದೆ. ಅದೇ ರೀತಿ ಇರಾನ್‌ನಿಂದ ಮೆಥೆನಾಲ್, ಪೆಟ್ರೋಲಿಯಂ ಬಿಟುಮೆನ್, ಲಿಕ್ವಿಫೈಡ್ ಪ್ರೊಪೇನ್, ಆ್ಯಪಲ್‌ಗಳು, ಖರ್ಜೂರ ಮತ್ತು ರಾಸಾಯನಿಕಗಳನ್ನು ಹೆಚ್ಚಾಗಿ ಆಮದು ಮಾಡಿಕೊಳ್ಳುತ್ತದೆ.
ಪ್ರತಿಭಟನೆಯಿಂದ ಕಂಗೆಟ್ಟ ಇರಾನ್‌ಗೆ ಮತ್ತೊಂದು ಸವಾಲು, ಅಮೆರಿಕದಿಂದ ಸುಂಕದ ಬರೆ, ಭಾರತಕ್ಕೂ ಬೀಳಲಿದೆ ಭಾರಿ ಹೊರೆ
ಅಮೆರಿಕವು ಭಾರತದ ವಸ್ತುಗಳ ಮೇಲೆ ಶೇ.25ರಷ್ಟು ಆಮದು ತೆರಿಗೆ ವಿಧಿಸಿತ್ತು. ಇದರ ಜತೆಗೆ ರಷ್ಯಾದಿಂದ ತೈಲ ಖರೀದಿಸುತ್ತಿರುವ ಹಿನ್ನೆಲೆಯಲ್ಲಿ ಶೇ.25ರಷ್ಟು ಹೆಚ್ಚುವರಿ ತೆರಿಗೆ ಹೇರಿತ್ತು. ಒಂದು ವೇಳೆ ಇರಾನ್ ಜತೆಗಿನ ವ್ಯಾಪಾರ-ವಹಿವಾಟಿಗಾಗಿ ಇದೀಗ ಮತ್ತೆ ಶೇ.25ರಷ್ಟು ತೆರಿಗೆ ವಿಧಿಸಿದರೆ ಭಾರತದ ಮೇಲೆ ಅಮೆರಿಕ ಒಟ್ಟು ಶೇ.75ರಷ್ಟು ತೆರಿಗೆ ವಿಧಿಸಿದಂತಾಗಲಿದೆ.