ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻಟಾಕ್ಸಿಕ್ʼ ಟೀಸರ್‌: ಯಶ್ ಜೊತೆ ರೊಮ್ಯಾನ್ಸ್ ಮಾಡಿದ ಬ್ರೆಜಿಲ್ ಬೆಡಗಿ ಇನ್‌ಸ್ಟಾಗ್ರಾಮ್ ಡಿಲೀಟ್! ಅಸಲಿ ಕಾರಣವೇನು?

Toxic Movie Actress: ಬ್ರೆಜಿಲ್ ಮಾಡೆಲ್ ಬೀಟ್ರಿಜ್ ಟೌಫೆನ್‌ಬಾಚ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ಡಿಲೀಟ್ ಮಾಡಿದ್ದಾರೆ. ಯಶ್ ಜೊತೆಗಿನ ಬೋಲ್ಡ್ ದೃಶ್ಯದ ಮೂಲಕ ಸುದ್ದಿಯಾಗಿದ್ದ ಇವರು, ದಿಢೀರ್ ಪ್ರಚಾರ ಅಥವಾ ಟೀಸರ್ ವಿವಾದದಿಂದ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಊಹಿಸಲಾಗಿದೆ. ನಿರ್ದೇಶಕಿ ಗೀತು ಮೋಹನ್‌ದಾಸ್ ಇವರ ಹೆಸರನ್ನು ರಿವೀಲ್ ಮಾಡಿದ್ದರು.

Toxic: ಯಶ್ ಜೊತೆ ರೊಮ್ಯಾನ್ಸ್ ಮಾಡಿದ್ದ ನಟಿ ಇನ್‌ಸ್ಟಾಗ್ರಾಮ್‌ದಿಂದ ಔಟ್!

-

Avinash GR
Avinash GR Jan 14, 2026 9:55 AM

ಬ್ರೆಜಿಲ್ ಮೂಲದ ನಟಿ ಮತ್ತು ಮಾಡೆಲ್ ಬೀಟ್ರಿಜ್ ಟೌಫೆನ್‌ಬಾಚ್ ಅವರು 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಟೀಸರ್‌ನಲ್ಲಿ ಯಶ್ ಜೊತೆಗಿನ ರೊಮ್ಯಾಂಟಿಕ್‌ ಸೀನ್‌ನಲ್ಲಿ ಕಾಣಿಸಿಕೊಂಡ ಮೇಲೆ ಜಾಗತಿಕವಾಗಿ ಭಾರಿ ಸುದ್ದಿಯಲ್ಲಿದ್ದಾರೆ. ಆದರೆ ಈ ದೃಶ್ಯದ ಸುತ್ತ ವಿವಾದ ಉಂಟಾದ ಹಿನ್ನೆಲೆಯಲ್ಲಿ ಬೀಟ್ರಿಜ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ಡಿಲೀಟ್ ಮಾಡಿದ್ದಾರೆ ಅಥವಾ ಡಿಆಕ್ಟಿವೇಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ ಅಥವಾ ಬೇರೆಯದೇ ಕಾರಣಗಳಿಗೆ ಅವರು ಈ ನಿರ್ಧಾರ ತೆಗೆದುಕೊಂಡ್ರಾ? ಮುಂದೆ ಓದಿ,

ಬೀಟ್ರಿಜ್ ಟೌಫೆನ್‌ಬಾಚ್ ಹೆಸರು ಹೇಳಿದ್ದ ಗೀತು

ಯಶ್‌ ಹುಟ್ಟುಹಬ್ಜದ ದಿನ (ಜನವರಿ 8) ಬಿಡುಗಡೆಯಾದ 'ಟಾಕ್ಸಿಕ್' ಚಿತ್ರದ ಟೀಸರ್‌ನಲ್ಲಿ ಯಶ್ ಮತ್ತು ಬೀಟ್ರಿಜ್ ನಡುವಿನ ರೊಮ್ಯಾಂಟಿಕ್‌ ಸೀನ್‌ಗಳು ಭಾರಿ ಚರ್ಚೆಗೆ ಕಾರಣವಾಗಿದ್ದವು. ಸ್ಮಶಾನದ ಒಳಗಿರುವ ಕಾರಿನಲ್ಲಿ ಚಿತ್ರೀಕರಿಸಲಾದ ಈ ದೃಶ್ಯವು ಅತ್ಯಂತ ಬೋಲ್ಡ್ ಆಗಿದೆ ಎಂಬ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿತ್ತು. ಆನಂತರ ಆ ಸೀನ್‌ನಲ್ಲಿ ನಟಿಸಿದ ನಟಿ ಯಾರು ಎಂಬ ಹುಡುಕಾಟ ಕೂಡ ಮಾಡಲಾಯ್ತು. ಅಂತಿಮವಾಗಿ ನಿರ್ದೇಶಕಿ ಗೀತು ಮೋಹನ್‌ದಾಸ್‌ ಅವರೇ ಬೀಟ್ರಿಜ್ ಟೌಫೆನ್‌ಬಾಚ್ ಅವರನ್ನು ಪರಿಚಯಿಸಿದ್ದರು.

ರಾಜ್ಯ ರಾಜಕಾರಣಕ್ಕೆ ಕುಮಾರಸ್ವಾಮಿ ರೀ ಎಂಟ್ರಿ?; ಟಾಕ್ಸಿಕ್‌ ಸ್ಟೈಲ್‌ನಲ್ಲಿ ಎಚ್‌ಡಿಕೆ ವಿಡಿಯೋ ರಿಲೀಸ್‌!

ನಟಾಲಿಯಾ ಬರ್ನ್ ಅಲ್ಲ, ಬೀಟ್ರಿಜ್

ಇದೀಗ ಬೀಟ್ರಿಜ್ ಅವರ ಇನ್‌ಸ್ಟಾಗ್ರಾಮ್ ಖಾತೆಯ ಬಗ್ಗೆ ಗೊಂದಲವಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಹುಡುಕಾಟ ನಡೆಸಿದಾಗ ಅವರ ಪ್ರೊಫೈಲ್ ಲಿಂಕ್ ನಿಷ್ಕ್ರಿಯಗೊಂಡಿರುವುದು ಕಂಡುಬಂದಿದೆ. ಕೆಲವು ಅಭಿಮಾನಿಗಳ ಖಾತೆಗಳು ಮಾತ್ರ ಸದ್ಯ ಲಭ್ಯವಿವೆ. ಆದರೆ ಅಂದು ಗೀತು ಮೋಹನ್‌ದಾಸ್‌ ಟ್ಯಾಗ್‌ ಮಾಡಿದ್ದ ಖಾತೆ ಈಗ ಕಾಣಿಸುತ್ತಿಲ್ಲ. ಆರಂಭದಲ್ಲಿ ಯಶ್ ಜೊತೆ ನಟಿಸಿದ್ದ ನಟಾಲಿಯಾ ಬರ್ನ್ ಎಂದು ವದಂತಿಗಳು ಹಬ್ಬಿದ್ದವು. ಆದರೆ ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ಟೀಸರ್‌ನಲ್ಲಿ ಇರುವುದು ಬೀಟ್ರಿಜ್ ಟೌಫೆನ್‌ಬಾಚ್ ಎಂದು ಖಚಿತಪಡಿಸಿದ್ದರು..‌

Toxic Teaser:‌ ಯಶ್ ಜೊತೆ ಕಾರಿನಲ್ಲಿದ್ದ ಆ ಸುಂದರಿ 'ನಟಾಲಿಯಾ' ಅಲ್ಲ! 'ಟಾಕ್ಸಿಕ್' ಮಿಸ್ಟರಿ ಹುಡುಗಿ ಬಗ್ಗೆ ಬಿಗ್ ಟ್ವಿಸ್ಟ್ ಕೊಟ್ಟ ಡೈರೆಕ್ಟರ್!‌

ಬೀಟ್ರಿಜ್ ಟೌಫೆನ್‌ಬಾಚ್‌ಗೆ ಕಿರಿಕಿರಿ ಆಯ್ತಾ?

ಇನ್ನೊಂದು ಅಂಶ ಗಮನಿಸಿದರೆ, ಬೀಟ್ರಿಜ್ ಟೌಫೆನ್‌ಬಾಚ್ ಅವರ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಇದ್ದದ್ದು ಬರೀ ಸಾವಿರ ಫಾಲೋವರ್ಸ್.‌ ಅಲ್ಲದೇ, ಅವರು ತಮ್ಮ ಖಾತೆಯನ್ನು ಪ್ರೈವೆಟ್‌ ಇಟ್ಟುಕೊಂಡಿದ್ದರು. ಸುಲಭವಾಗಿ ಯಾರು ಅವರ ಖಾತೆಯನ್ನು ಫಾಲೋ ಮಾಡಲು ಸಾಧ್ಯವಿರಲಿಲ್ಲ. ಯಶ್‌ ಜೊತೆ ನಟಿಸಿರುವುದು ನಟಾಲಿಯಾ ಬರ್ನ್ ಎಂದು ಗೊತ್ತಾದ ಕೆಲವೇ ಗಂಟೆಗಳಲ್ಲಿ ಅವರ ಇನ್‌ಸ್ಟಾಗ್ರಾಮ್‌ ಫಾಲೋವರ್ಸ್‌ ಸಂಖ್ಯೆ 50 ಸಾವಿರ ಜಾಸ್ತಿ ಆಗಿತ್ತು.

ಆನಂತರ ಅದು ನಟಾಲಿಯಾ ಅಲ್ಲ, ಬೀಟ್ರಿಜ್ ಟೌಫೆನ್‌ಬಾಚ್ ಎಂದು ಗೊತ್ತಾದಾಗ, ಬಹುಶಃ ಅವರಿಗೂ ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ರಿಕ್ವೆಸ್ಟ್‌ಗಳು ಜಾಸ್ತಿ ಆಗಿರಬೇಕು. ಇದರಿಂದ ಏನಾದರೂ ಅವರಿಗೆ ಕಿರಿಕಿರಿ ಆಯ್ತಾ? ಆ ಕಾರಣಕ್ಕೆ ಅಕೌಂಟ್‌ನ ಡಿಲೀಟ್‌ ಅಥವಾ ಇನ್‌ಆಕ್ಟೀವ್‌ ಮಾಡಿದ್ರಾ ಎಂಬ ಮಾತುಗಳು ಕೇಳಿಬಂದಿವೆ. ಸದ್ಯ ಈ ಟೀಸರ್‌ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಈ ದೃಶ್ಯವು 'ಅಶ್ಲೀಲ' ಮತ್ತು 'ನೈತಿಕವಾಗಿ ಅಸಹ್ಯಕರ' ಎಂದು ಕೆಲವು ಸಾಮಾಜಿಕ ಕಾರ್ಯಕರ್ತರು, ವಕೀಲರು ಸೆನ್ಸಾರ್ ಮಂಡಳಿಗೆ (CBFC) ದೂರು ನೀಡಿವೆ.