Saif Ali Khan: ಸೈಫ್ ಅಲಿ ಖಾನ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ; ಮ್ಯಾಚ್ ಆಗ್ತಿಲ್ಲ ಫಿಂಗರ್ ಪ್ರಿಂಟ್!!
ಬಾಲಿವುಡ್ ನಟ ಸೈಫ್ ಅಲಿಖಾನ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸದ್ಯ ಸೈಫ್ ನಿವಾಸದಿಂದ 19 ಸೆಟ್ ಬೆರಳಚ್ಚುಗಳನ್ನು ಸಂಗ್ರಹಿಸಲಾಗಿತ್ತು. ಆದರೆ ಅದು ಈಗ ಬಂಧಿತ ಆರೋಪಿ ಬೆರಳಚ್ಚಿಗೆ ಹೊಂದಾಣಿಕೆ ಆಗುತ್ತಿಲ್ಲ ಎಂದು ತಿಳಿದು ಬಂದಿದೆ.
![ಸೈಫ್ ಅಲಿ ಖಾನ್ ಕೇಸ್: ಮ್ಯಾಚ್ ಆಗ್ತಾ ಇಲ್ಲ ಆರೋಪಿಯ ಫಿಂಗರ್ ಪ್ರಿಂಟ್!](https://cdn-vishwavani-prod.hindverse.com/media/original_images/Saif_Ali_Khan__stabbing_2_ZDNQofD.jpg)
Saif Ali Khan stabbing
![Profile](https://vishwavani.news/static/img/user.png)
ಮುಂಬೈ: ನಟ ಸೈಫ್ ಅಲಿ ಖಾನ್ (Saif Ali Khan) ಅವರಿಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಒಂದು ದೊರೆಕಿದೆ. ಸದ್ಯ ಪ್ರಕರಣದ ಆರೋಪಿಯನ್ನು ಬಂಧಿಸಿರುವ ಮುಂಬೈನ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಖಾನ್ ಮನೆಗೆ ನುಗ್ಗಿದ ಆರೋಪಿಯ ದೃಶ್ಯಗಳನ್ನು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸದ್ಯ ಸೈಫ್ ನಿವಾಸದಿಂದ 19 ಸೆಟ್ ಬೆರಳಚ್ಚುಗಳನ್ನು ಸಂಗ್ರಹಿಸಲಾಗಿತ್ತು. ಆದರೆ ಅದು ಈಗ ಆರೋಪಿ ಬೆರಳಚ್ಚಿಗೆ ಹೊಂದಾಣಿಕೆ ಆಗುತ್ತಿಲ್ಲ ಎಂದು ತಿಳಿದು ಬಂದಿದೆ.
ಮೂಲಗಳ ಪ್ರಕಾರ, ಮುಂಬೈ ಪೊಲೀಸರು ಖಾನ್ ಅವರ ಮನೆಯಲ್ಲಿ ಪತ್ತೆಯಾದ ಬೆರಳಚ್ಚುಗಳನ್ನು ರಾಜ್ಯ ಅಪರಾಧ ತನಿಖಾ ಇಲಾಖೆಯ (ಸಿಐಡಿ) ಫಿಂಗರ್‌ಪ್ರಿಂಟ್ ಬ್ಯೂರೋಗೆ ಕಳುಹಿಸಿದ್ದಾರೆ. ಅದರ ವರದಿಯಲ್ಲಿ ಆರೋಪಿ ಶರೀಫುಲ್ ಇಸ್ಲಾಂ ಬೆರಳಚ್ಚಿಗೆ ಹೊಂದಾಣಿಕೆ ಆಗುತ್ತಿಲ್ಲ ಎಂದು ತಿಳಿದು ಬಂದಿದೆ. ಪರೀಕ್ಷೆಯ ಫಲಿತಾಂಶ ನೆಗೆಟಿವ್ ಎಂದು ಮುಂಬೈ ಪೊಲೀಸರಿಗೆ ಸಿಐಡಿ ಮಾಹಿತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಜ.16 ರ ಮಧ್ಯರಾತ್ರಿ ಬಾಂದ್ರಾದಲ್ಲಿರುವ ಸೈಫ್ ಅಲಿ ಖಾನ್ ಅವರ ನಿವಾಸಕ್ಕೆ ಆರೋಪಿ ನುಗ್ಗಿದ್ದಾನೆ. ನಂತರ ಖಾನ್ ಅವರ ಬಳಿ 1 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾನೆ. ಆದರೆ ಅವರು ನಿರಾಕರಿಸಿದ ಕಾರಣ ಆತ ಚಾಕುವಿನಿಂದ ಅವರ ಮೇಲೆ ಹಲ್ಲೆ ಮಾಡಿದ್ದ. ಆರೋಪಿ ಶರೀಫುಲ್ ಬಾಂಗ್ಲಾದೇಶದ ಪ್ರಜೆಯಾಗಿದ್ದು, ಅಕ್ರಮವಾಗಿ ಭಾರತಕ್ಕೆ ಪ್ರವೇಶ ಮಾಡಿದ್ದ ಎಂದು ತಿಳಿದು ಬಂದಿದೆ. ಪೊಲೀಸರು ಆರೋಪಿಯನ್ನು ವರ್ಲಿಯ ಬಳಿ ಬಂಧಿಸಿದ್ದರು.
ಈ ಸುದ್ದಿಯನ್ನೂ ಓದಿ : Saif Ali Khan: 2-3 ದಿನಗಳಲ್ಲಿ ಸೈಫ್ ಅಲಿ ಖಾನ್ ಡಿಸ್‌ಚಾರ್ಜ್? ಲೀಲಾವತಿ ಆಸ್ಪತ್ರೆಯ ವೈದ್ಯರು ಹೇಳಿದ್ದೇನು?
ಸದ್ಯ ಸೈಫ್ ಅಲಿ ಖಾನ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಅವರು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಪೊಲೀಸರು ಖಾನ್ ಅವರ ಬಳಿ ಹೇಳಿಕೆ ತೆಗೆದುಕೊಂಡಿದ್ದು, ಅದನ್ನು ದಾಖಲಿಸಿದ್ದಾರೆ. ಸದ್ಯ ಆರೋಪಿಯ ಕಸ್ಟಡಿ ಅವಧಿ ವಿಸ್ತಾರವಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.