Saif Ali Khan: 2-3 ದಿನಗಳಲ್ಲಿ ಸೈಫ್ ಅಲಿ ಖಾನ್ ಡಿಸ್‌ಚಾರ್ಜ್? ಲೀಲಾವತಿ ಆಸ್ಪತ್ರೆಯ ವೈದ್ಯರು ಹೇಳಿದ್ದೇನು?
Saif Ali Khan: ಸೈಫ್ ಅಲಿ ಖಾನ್ ಅವರ ಆರೋಗ್ಯದ ಬಗ್ಗೆ ಮುಂಬೈಯ ಲೀಲಾವತಿ ಆಸ್ಪತ್ರೆಯ ವೈದ್ಯರು ಮಾಹಿತಿಯನ್ನು ನೀಡಿದ್ದು, ಇನ್ನು ಎರಡು, ಮೂರು ದಿನಗಳಲ್ಲಿ ಡಿಸ್‌ಚಾರ್ಜ್ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಸೈಫ್ ಆರೋಗ್ಯ ಸ್ಥಿರವಾಗಿದ್ದು ಅವರು ನಡೆದಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ (Saif Ali Khan) ಅವರ ಮನೆ ಮೇಲೆ ದರೋಡೆಕೋರನೊಬ್ಬ ಬುಧವಾರ ಮಧ್ಯರಾತ್ರಿ ಸುಮಾರು 2.30ರ ಸರಿಸುಮಾರಿಗೆ ದಾಳಿ ನಡೆಸಿದ್ದಾನೆ. ಈ ಘಟನೆಯಲ್ಲಿ ಸೈಫ್ ಅಲಿ ಖಾನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಆರೋಪಿಯು ಸೈಫ್ ಆಲಿ ಖಾನ್ ಅವರಿಗೆ 6 ಬಾರಿ ಚಾಕುವಿನಿಂದ ಇರಿದಿದ್ದಾನೆ. ಇದರಿಂದ ಖಾನ್ ಎದೆ, ಬೆನ್ನುಹುರಿ ಸೇರಿದಂತೆ ಹಲವು ಕಡೆ ಗಂಭೀರ ಗಾಯಗಳಾಗಿದ್ದು, ಬೆನ್ನುಹುರಿಯಲ್ಲಿ 2.5 ಇಂಚಿನ ಚಾಕು ಇತ್ತು ಎಂದು ಹೇಳಲಾಗಿದೆ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ.
ಗಾಯಗೊಂಡ ಅವರನ್ನು ಮಧ್ಯರಾತ್ರಿ ಆಟೋದಲ್ಲಿ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ಖಾನ್ ಆಪ್ತರು ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ಹೇಳಿದ್ದಾರೆ. ಇದೀಗ ಲೀಲಾವತಿ ಆಸ್ಪತ್ರೆಯ ನರಶಸ್ತ್ರಚಿಕಿತ್ಸಕ ಡಾ.ನಿತಿನ್ ಮಾತನಾಡಿ, "ನಾವು ಅವರ ಪ್ರಗತಿಯನ್ನು ಗಮನಿಸುತ್ತಿದ್ದೇವೆ ಮತ್ತು ಅವರು ನಮ್ಮ ನಿರೀಕ್ಷೆಗೆ ತಕ್ಕಂತೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ನಾವು ಅವರಿಗೆ ಒಂದು ತಿಂಗಳು ಬೆಡ್ ರೆಸ್ಟ್ ಸೂಚಿಸಿದ್ದೇವೆ. ಅವರು ಆರಾಮವಾಗಿದ್ದಾರೆ. ಐಸಿಯುನಿಂದ ಶಿಫ್ಟ್ ಮಾಡಲಾಗಿದ್ದು, ನಮ್ಮ ನಿಗಾದಲ್ಲಿದ್ದಾರೆ. ಎರಡು ಮೂರು ದಿನಗಳಲ್ಲಿ ನಾವು ಅವನನ್ನು ಡಿಸ್‌ಚಾರ್ಜ್ ಮಾಡುತ್ತೇವೆʼʼ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ : Saif Ali Khan : ಕುಟುಂಬವನ್ನು ಕಾಪಾಡಲು ತನ್ನ ಜೀವವನ್ನೇ ಪಣಕ್ಕಿಟ್ಟರಾ ಸೈಫ್ ಅಲಿ ಖಾನ್ ? ಆ 30 ನಿಮಿಷದಲ್ಲಿ ನಡೆದಿದ್ದಾದರೂ ಏನು?
ಸೈಫ್ ಅಲಿ ಖಾನ್ ಅವರ ಕುಟುಂಬ ಬಾಂದ್ರಾದಲ್ಲಿ ಅಪಾರ್ಟ್‌ಮೆಂಟ್ ಒಂದರ 11 ಮತ್ತು 12ನೇ ಮಹಡಿಯಲ್ಲಿ ವಾಸಿಸುತ್ತಿದೆ. ದರೋಡೆಕೋರ ಇವರ ಮನೆಗೆ ನುಗ್ಗಿ, ಖಾನ್ ಅವರ ಕಿರಿಯ ಮಗ ಜಹಾಂಗೀರ್ ಕೋಣೆಗೆ ದಾಳಿ ನಡೆಸಿದ್ದ. ಜಹಾಂಗೀರ್‌ನ ದಾದಿ ಎಲಿಯಮ್ಮ ಫಿಲಿಪ್ ದರೋಡೆಕೋರನನ್ನು ವಿರೋಧಿಸಿದ್ದು, ಆತ ಆಕೆಯ ಕೈಗೆ ಚಾಕುವಿನಿಂದ ಹೊಡೆದಿದ್ದಾನೆ. ನಂತರ ಸೈಫ್ ಅಲಿ ಖಾನ್ ಅವರು ಬರುತ್ತಲೇ ಅವರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದ. ಆತ 1 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದು, ಕೊಡದೇ ಹೋದಾಗ ಖಾನ್ ಅವರಿಗೆ ಚಾಕುವಿನಿಂದ ಇರಿದಿದ್ದಾನೆ. ಶಂಕಿತನ ಮುಖ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮುಂಬೈ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.