#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Saif Ali Khan: ಸೈಫ್‌ ಪ್ರಕರಣದಲ್ಲಿ ಮುಂಬೈ ಪೊಲೀಸರ ಒಂದು ಮಿಸ್ಟೇಕ್‌; ಅಮಾಯಕನ ಕೆಲಸವೂ ಹೋಯ್ತು, ಮದುವೆ ಕ್ಯಾನ್ಸಲ್!

ಸೈಫ್‌ ಅಲಿ ಖಾನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಮಾಡಿದ ಒಂದು ತಪ್ಪಿಗೆ ಅಮಾಯಿಕ ವ್ಯಕ್ತಿಯೊಬ್ಬನ ಜೀವನವೇ ಬರ್ಬಾದ್‌ ಆಗಿದೆ. ಆತ ತನ್ನ ಕೆಲಸ ಕಳೆದುಕೊಂಡಿದ್ದಾನೆ. ಆತನ ಮದುವೆ ರದ್ದಾಗಿದೆ.

ಸೈಫ್‌ ಕೇಸ್‌- ಅಮಾಯಕನನ್ನು ಬಂಧಿಸಿದ್ದ ಪೊಲೀಸರು; ಆತನ ಜೀವನವೇ ಬರ್ಬಾದ್‌

Saif ali Khan Case

Profile Vishakha Bhat Jan 28, 2025 10:44 AM

ಮುಂಬೈ: ನಟ ಸೈಫ್‌ ಅಲಿ ಖಾನ್‌ (Saif ali Khan) ಅವರ ಮೇಲಿನ ಚಾಕು ಇರಿತ ಪ್ರಕರಣೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶ ಮೂಲದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಆದರೆ ಬಂಧಿಸಿರುವ ಆರೋಪಿಯ ಫಿಂಗರ್‌ ಪ್ರಿಂಟ್‌ಗೂ, ಸೈಫ್‌ ಮನೆಯಲ್ಲಿರುವ ಫಿಂಗರ್‌ ಪ್ರಿಂಟ್‌ಗೂ ಹೊಂದಾಣಿಕೆ ಆಗುತ್ತಿಲ್ಲ. ಇದು ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ಈ ಮೊದಲು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದರು. ಆದರೆ ಆತ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ತಿಳಿದು ಬಂದಿತ್ತು. ನಂತರ ಆತನನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ ಯುವಕ ಇದೀಗ ನರಕ ಯಾತನೆ ಅನುಭವಿಸುವಂತಾವಾಗಿದೆ.

ಛತ್ತೀಸ್‌ಗಢ ಮೂಲದ 31 ವರ್ಷದ ಆಕಾಶ್ ಕೈಲಾಶ್ ಕನೋಜಿಯಾ ಎಂಬಾತ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ. ಸೈಫ್ ಮೇಲಿನ ದಾಳಿಯಾದ ಬಳಿಕ ಮುಂಬೈ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ನೋಡಿ ಈತನೇ ಆರೋಪಿ ಇರಬಹುದು ಎಂದು ಊಹಿಸಿದ್ದರು. ಜನವರಿ 18 ರಂದು ಆತ ತನ್ನ ಅಜ್ಜಿಯ ಆರೋಗ್ಯ ಸರಿ ಇಲ್ಲ ಎಂದು ಮುಂಬೈನಿಂದ ಛತ್ತೀಸಘಡದ ನೆಹ್ಲಾಕ್ಕೆ ತೆರಳಿದ್ದ. ಅದೇ ಸಮುಯದಲ್ಲಿ ರೈಲ್ವೆ ಪೊಲೀಸರು ದುರ್ಗ್ ರೈಲು ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದರು. ಬಳಿಕ ರೈಲ್ವೇ ಪೊಲೀಸರು ಕನೋಜಿಯಾನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಿದ್ದರು.

ಸೈಫ್‌ ಮೇಲೆ ದಾಳಿಯಾಗಿ ಎರಡೇ ದಿನದಲ್ಲಿ ಆರೋಪಿಯ ಬಂಧನವಾದ್ದರಿಂದ ಯುವಕನ ಫೋಟೋ ಸಾಮಾಜಿಕ ಜಾಲತಾಣ, ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿತ್ತು. ಆದರೆ ಪ್ರಕರಣದಲ್ಲಿ ಬೇರೇಯೇ ಟ್ವಿಸ್ಟ್‌ ಇತ್ತು. ವಿಚಾರಣೆಯ ವೇಳೆ ಬಂಧಿಸಿರುವ ವ್ಯಕ್ತಿಗೂ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ತಿಳಿದು ಬಂದಿದೆ. ಬಂತರ ಆತನನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಇದೀಗ ಆತನ ಪರಿಸ್ಥಿತಿ ಅಕ್ಷರಶಃ ನರಕದಂತಾಗಿದೆ.

ಈ ಸುದ್ದಿಯನ್ನೂ ಓದಿ : Saif Ali Khan: ಸೈಫ್‌ ಅಲಿ ಖಾನ್‌ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ; ಮ್ಯಾಚ್‌ ಆಗ್ತಿಲ್ಲ ಫಿಂಗರ್‌ ಪ್ರಿಂಟ್‌!!

ಯಾರೋ ಮಾಡಿದ ತಪ್ಪಿಗೆ ಈತ ಶಿಕ್ಷೆಯನ್ನು ಅನುಭವಿಸುವಂತಾಗಿದೆ. ಆಕಾಶ್‌ಗೆ ಮದುವೆ ನಿಶ್ಚಯವಾಗಿತ್ತು. ಆದರೆ ಆತ ಬಂಧನಕ್ಕೊಳಗಾದ ನಂತರ ಮದುವೆ ಮುರಿದು ಬಿದ್ದಿದೆ. ಹುಡುಗಿ ಕುಟುಂಬಸ್ಥರು ಮದುವೆ ಕ್ಯಾನ್ಸಲ್ ಮಾಡಿದ್ದಾರೆ. ಈತ ಭೇಟಿಯಾಗಿ ಪರಿಸ್ಥಿತಿ ವಿವರಿಸಲು ಪ್ರಯತ್ನಿಸಿದ್ದಾನೆ. ಆದರೆ ಹುಡುಗಿ ಕುಟುಂಬಸ್ಥರು ಭೇಟಿಗೂ ಅವಕಾಶ ನೀಡಿಲ್ಲ. ಅಷ್ಟೇ ಅಲ್ಲ ಈತ ತನ್ನ ಕೆಲಸವನ್ನು ಕಳೆದುಕೊಂಡಿದ್ದಾನೆ. ಆಕಾಶ್‌ ತನ್ನನ್ನು ನಿರಪರಾಧಿ ಎಂದು ಘೋಷಿಸಿ ಎಂದು ಪೊಲೀಸರ ಬಳಿ ಮನವಿ ಮಾಡಿದ್ದಾನೆ. ಆದರೆ ಜೀವನದ ಜೊತೆ ಚೆಲ್ಲಾಟವಾಡಿದ ಮುಂಬೈ ಪೊಲೀಸರು ಮಾತ್ರ ಇದ್ಯಾವುದಕ್ಕೂ ತಲೆ ಕಡೆಸಿಕೊಂಡಿಲ್ಲ. ಇದೀಗ ಆಕಾಶ್‌ ಸೈಫ್‌ ಅಲಿ ಖಾನ್‌ ಅವರ ನಿವಾಸದ ಮುಂದೆ ನಿಂತು ಕೆಲಸಕ್ಕಾಗಿ ಮನವಿ ಮಾಡುಕೊಳ್ಳುತ್ತಿದ್ದಾನೆ.