Salman Khan Sikandar: ಸಲ್ಮಾನ್ ಖಾನ್ ನಟನೆಯ ಸಿಕಂದರ್ ಶೂಟಿಂಗ್ ಜೋರು! ಸೆಟ್‌ನಿಂದ ವಿಡಿಯೊ ಲೀಕ್
ಆಕ್ಷನ್ ಡ್ರಾಮಾ, ಕಥೆಯುಳ್ಳ ಸಿಕಂದರ್ ಬಹಳಷ್ಟು ದಿನಗಳಿಂದ ಸುದ್ದಿಯಲ್ಲಿದೆ. ಇತ್ತೀಚೆಗೆ, ಸಲ್ಮಾನ್ ಖಾನ್ ಮುಂಬೈ ನಲ್ಲಿ ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದು ಶೂಟಿಂಗ್ ಚಿತ್ರೀಕರಣದ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದೆ. ವೈರಲ್ ವಿಡಿಯೊದಲ್ಲಿ ಸಲ್ಮಾನ್ ಖಾನ್ ತಂಡವು ಶೂಟಿಂಗ್ ಸ್ಪಾಟ್ಸ್ ಬರುತ್ತಿರುವುದನ್ನು ಕಾಣಬಹುದು. ವಿಡಿಯೊದಲ್ಲಿ, ಸಲ್ಮಾನ್ ಖಾನ್ ಕಾಲಿ ಪೀಲಿ ಟ್ಯಾಕ್ಸಿಯಿಂದ ರಗಡ್ ಲುಕ್‌ನಲ್ಲಿ ಹೊರಬರುವುದನ್ನು ಕಾಣಬಹುದು.
ಮುಂಬೈ: ಬಾಲಿವುಡ್‌ನ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ (Salman Khan) ಪ್ರಸ್ತುತ ಮುಂಬೈನಲ್ಲಿ ಸಿಕಂದರ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಶೂಟಿಂಗ್ ಭರದಿಂದಲೇ ಸಾಗಿದ್ದು ಇತ್ತೀಚೆಗೆ, ಸಿಕಂದರ್ ಸೆಟ್‌ನಿಂದ ವಿಡಿಯೊ ಒಂದು ಲೀಕ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೊ ಸಖತ್ ಸದ್ದು ಮಾಡುತ್ತಿದ್ದು, ಅಭಿಮಾನಿಗಳಲ್ಲಿ ಸಿನಿಮಾ ಕುರಿತ ಕುತೂಹಲವನ್ನು ಮತ್ತಷ್ಟು ಹೆಚ್ಚಿದೆ. ಆಕ್ಷನ್ ಡ್ರಾಮಾ, ಕಥೆಯುಳ್ಳ ಸಿಕಂದರ್ ಬಹಳಷ್ಟು ದಿನಗಳಿಂದ ಸುದ್ದಿಯಲ್ಲಿದೆ. ಇತ್ತೀಚೆಗೆ, ಸಲ್ಮಾನ್ ಖಾನ್ ಮುಂಬೈ ನಲ್ಲಿ ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದು ಶೂಟಿಂಗ್ ಚಿತ್ರೀಕರಣದ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದೆ.
ʻಸಿಕಂದರ್' ಸೆಟ್‌ನಿಂದ ಲೀಕ್ ಆಗಿರುವ ವಿಡಿಯೊದಲ್ಲಿ ನಟ ಸಲ್ಮಾನ್ ಕಾರಿನಿಂದ ಇಳಿದು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ವೈರಲ್ ವಿಡಿಯೊದಲ್ಲಿ ಸಲ್ಮಾನ್ ಖಾನ್ ತಂಡವು ಶೂಟಿಂಗ್ ಸ್ಪಾಟ್ಗೆ ಬರುತ್ತಿರುವುದನ್ನು ಕಾಣ ಬಹುದು.ತಾಹಿರ್ ಜಾಸುಸ್ ರನ್ನುವ Instagram ಪೇಜ್ ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ, ಸಲ್ಮಾನ್ ಖಾನ್ ಕಾಲಿ ಪೀಲಿ ಟ್ಯಾಕ್ಸಿಯಿಂದ ರಗಡ್ ಲುಕ್‌ನಲ್ಲಿ ಹೊರ ಬರುವುದನ್ನುಕಾಣಬಹುದು.
ನಟ ಸಲ್ಮಾನ್ ಅಸ್ತವ್ಯಸ್ತವಾಗಿರುವ ಶರ್ಟ್ ಮತ್ತು ಜೀನ್ಸ್ ಧರಿಸಿಕೊಂಡಿದ್ದು ಟ್ಯಾಕ್ಸಿ ಡ್ರೈವರ್ ಸಲ್ಮಾನ್ ಮತ್ತು ಅಲ್ಲಿದ್ದ ಜನರನ್ನು ಕರೆಯುವುದನ್ನು ವಿಡಿಯೊ ತೋರಿಸುತ್ತದೆ. ಭಾಯ್ಜಾನ್ ಹೆಚ್ಚಿನ ಭದ್ರತೆಯೊಂದಿಗೆ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಭಾರೀ ಭದ್ರತೆಯ ಹೊರತಾಗಿಯೂ, ಚಿತ್ರದ ಸೆಟ್‌ಗಳಿಂದ ವಿಡಿಯೊ ಈಗ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ.
ಇದನ್ನು ಓದಿ: Viral Video: ಡಿಕ್ಕಿ ಹೊಡೆದ ಕಾರಿನ ಮೇಲೆ ಶ್ವಾನದ ರಿವೇಂಜ್ ಹೇಗಿತ್ತು ಗೊತ್ತಾ? ಶಾಕ್ ಆದ ಮನೆಯವರು!
ಈ ವಿಡಿಯೊ ಇದೀಗ ಬಹಳಷ್ಟು ವೈರಲ್ ಆಗಿದ್ದು ಅಭಿಮಾನಿಗಳು ಚಿತ್ರದ ಬಿಡುಗಡೆಗಾಗಿ ಕಾತುರರಾಗಿದ್ದಾರೆ. ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಸಿಕಂದರ್ ಈ ಚಿತ್ರವನ್ನು ಎ.ಆರ್. ಮುರುಗದಾಸ್ ಅವರು ನಿರ್ದೇಶಿಸಿದ್ದು ಚಿತ್ರವನ್ನು ಸಾಜಿದ್ ನಾಡಿಯಾಡ್ವಾಲಾ ಅವರ ಪ್ರೊಡಕ್ಷನ್ ಹೌಸ್ ಮೂಲಕ ನಿರ್ಮಿಸಲಾಗಿದೆ. ಸಲ್ಮಾನ್ ಖಾನ್ ಜೊತೆಗೆ ರಶ್ಮಿಕಾ ಮಂದಣ್ಣ ನಟಿಸಲಿದ್ದು ಕಾಜಲ್ ಅಗರ್ವಾಲ್, ಸುನೀಲ್ ಶೆಟ್ಟಿ, ಶರ್ಮಾನ್ ಜೋಶಿ, ಅಂಜಿನಿ ಧವನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈದ್ ಉಡುಗೊರೆಯಾಗಿ 2025ರ ಮಾರ್ಚ್ 30 ರಂದು ಸಿನಿಮಾ ಬಿಡುಗಡೆ ಆಗಲಿದೆ.