Viral Video: ಡಿಕ್ಕಿ ಹೊಡೆದ ಕಾರಿನ ಮೇಲೆ ಶ್ವಾನದ ರಿವೇಂಜ್ ಹೇಗಿತ್ತು ಗೊತ್ತಾ? ಶಾಕ್ ಆದ ಮನೆಯವರು!
ಮದುವೆಯಲ್ಲಿ ಭಾಗವಹಿಸಲು ಕಾರಿನಲ್ಲಿ ಹೊರಟ ಕುಟುಂಬವೊಂದು ರಸ್ತೆಯಲ್ಲಿ ತಿರುವು ತೆಗೆದುಕೊಳ್ಳುವಾಗ ನಾಯಿಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ನಾಯಿಗೆ ಯಾವುದೇ ಗಾಯಗಳಾಗಿರದಿದ್ದರೂ ಆನಂತರ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಆ ನಾಯಿ ಸೇಡು ತೀರಿಸಿಕೊಂಡಿದ್ದನ್ನು ಕೇಳಿದರೆ ನೀವು ಶಾಕ್ ಆಗ್ತೀರಿ. ಇದೀಗ ವೈರಲ್(Viral Video) ಆಗಿದೆ.
ಭೋಪಾಲ್: ನಾಯಿಗಳು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡುವುದರಿಂದ ಕೆಲವೊಮ್ಮೆ ರಸ್ತೆಯಲ್ಲಿ ಹೋಗುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆಯುವುದು ಸಾಮಾನ್ಯ. ಆದರೆ ಇಲ್ಲೊಂದು ನಾಯಿ ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಘಟನೆ ಮಧ್ಯಪ್ರದೇಶದ ಸಾಗರ್‌ನಲ್ಲಿ ನಡೆದಿದೆ. ಅದರ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡಿದ್ದು, ಸಖತ್ ವೈರಲ್(Viral Video) ಆಗಿದೆ.
ನಗರದ ತಿರುಪತಿಪುರಂ ಕಾಲೋನಿ ನಿವಾಸಿ ಪ್ರಹ್ಲಾದ್ ಸಿಂಗ್ ಘೋಷಿ ಮದುವೆಯಲ್ಲಿ ಭಾಗವಹಿಸಲು ಕುಟುಂಬದೊಂದಿಗೆ ಹೊರಟಿದ್ದರು. ಇವರ ಕಾರು ಮನೆಯ ಬಳಿ ತಿರುವು ತೆಗೆದುಕೊಳ್ಳುವಾಗ ರಸ್ತೆ ಬದಿಯಲ್ಲಿದ್ದ ನಾಯಿಗೆ ಆಕಸ್ಮಿಕವಾಗಿ ಡಿಕ್ಕಿ ಹೊಡೆದಿದೆ. ಇದರಿಂದ ನಾಯಿಗೆ ಯಾವುದೇ ಗಾಯಗಳಾಗಿರಲಿಲ್ಲ. ಆದರೆ ನಾಯಿ ಕಾರನ್ನು ಬೆನ್ನಟ್ಟಿ ಕಾರು ಕಣ್ಮರೆಯಾಗುವ ತನಕ ಬೊಗಳಿತ್ತು.
📍 Madhya Pradesh | #Watch: Dog's Revenge In Madhya Pradesh After Being Hit By Car Owner
— NDTV (@ndtv) January 21, 2025
Read more: https://t.co/yuaRCwr2LQ#Viral #MadhyaPradesh pic.twitter.com/hycjT406eJ
ಮದುವೆ ಮುಗಿಸಿ ಅವರು ಮನೆಗೆ ಬಂದು ಕಾರನ್ನು ಮನೆಯ ಮುಂದೆ ಪಾರ್ಕ್ ಮಾಡಿದ ಸ್ವಲ್ಪ ಸಮಯದಲ್ಲೇ, ನಾಯಿ ಕಾರಿನ ಮೇಲೆ ದಾಳಿ ಮಾಡಿ ಕಾರಿನ ಮೇಲೆ ಪರಚಿದೆ. ಮನೆಯವರು ಇದು ತುಂಟ ಮಕ್ಕಳ ಕೈವಾಡ ಎಂದು ಭಾವಿಸಿದ್ದರು. ಆದರೆ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದಾಗ ಕುಟುಂಬಕ್ಕೆ ಶಾಕ್ ಆಗಿದೆ. ಅದರಲ್ಲಿ ಕಪ್ಪು ಬಣ್ಣದ ನಾಯಿ ಕಾರಿನ ಮೇಲೆ ಎರಗಿ ತನ್ನ ಉಗುರುಗಳಿಂದ ಗೀರುತ್ತಿರುವುದು ಸೆರೆಯಾಗಿತ್ತು. ಆ ಮೂಲಕ ನಾಯಿ ಕಾರಿನ ಮೇಲೆ ಸೇಡು ತೀರಿಸಿಕೊಂಡಿದೆ.
ನಾಯಿಗೆ ಸಂಬಂಧಪಟ್ಟ ಮತ್ತೊಂದು ಪ್ರಕರಣ ಹೀಗಿತ್ತು. ಮಧ್ಯಪ್ರದೇಶದ ರೇವಾದಲ್ಲಿ ಪೊಲೀಸ್ ವಾಹನ ಚಾಲಕನ ನಿರ್ಲಕ್ಷ್ಯದ ಪ್ರಕರಣವೊಂದು ವರದಿಯಾಗಿತ್ತು. ತಡರಾತ್ರಿ ಪೊಲೀಸ್ ವಾಹನ ಚಾಲಕ ರಸ್ತೆ ಮಧ್ಯದಲ್ಲಿ ಕುಳಿತಿದ್ದ ಬೀದಿ ನಾಯಿಯ ಮೇಲೆ ಹರಿಸಿದ್ದಾನೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಈ ಸುದ್ದಿಯನ್ನೂ ಓದಿ:Viral Video: ನೋಡನೋಡ್ತಿದ್ದಂತೆ ಮನೆಗೆ ನುಗ್ಗಿದ ಕಾಡಾನೆ- ಆಮೇಲೆ ಏನಾಯ್ತು ಗೊತ್ತಾ? ಬೆಚ್ಚಿಬೀಳಿಸುವ ವಿಡಿಯೊ ವೈರಲ್
ರೇವಾದ ದೂಧ್ ಮಂಡಿ ಪ್ರದೇಶದಲ್ಲಿ ಪೊಲೀಸ್ ವಾಹನ ಗಸ್ತು ತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಆದರೆ ಘಟನೆಯ ಬಳಿಕ ನಾಯಿ ಜೀವಂತವಾಗಿದೆಯೇ ಅಥವಾ ಇಲ್ಲವೇ ಎಂದು ನೋಡಲು ಪೊಲೀಸರು ಪ್ರಯತ್ನಿಸಲಿಲ್ಲ. ರಸ್ತೆ ಬದಿಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಈ ದೃಶ್ಯ ಸೆರೆಯಾಗಿದೆ. ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವಿಡಿಯೊ ವೈರಲ್ ಆದ ಕೂಡಲೇ, ಈ ವಿಷಯದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.