Second PU Result: ದ್ವಿತೀಯ ಪಿಯು ಪಿಯುಸಿ ಫಲಿತಾಂಶ: ಶೇ.73.45ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ
ಪರೀಕ್ಷೆಯಲ್ಲಿ ಎಂದಿನಂತೆ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದು, ಪರೀಕ್ಷೆಯನ್ನು ಬರೆದ 7189 ವಿದ್ಯಾರ್ಥಿನಿಯರ ಪೈಕಿ 5312 ಮಂದಿ ತೇರ್ಗಡೆಯಾಗಿ ಶೇ.73.89 ರಷ್ಟು ಫಲಿತಾಂಶ ಪಡೆದಿದ್ದಾರೆ. 6114 ವಿದ್ಯಾರ್ಥಿಗಳ ಪೈಕಿ 4241 ಮಂದಿ ಉತ್ತೀರ್ಣರಾಗಿ ಶೇ. 69.37 ರಷ್ಟು ಫಲಿತಾಂಶ ಬಂದಿದೆ. ನಗರ ಪ್ರದೇಶದ ವಿದ್ಯಾರ್ಥಿಗಳು ಶೇ.69.71 ರಷ್ಟು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶೇ. 77.44 ಮಂದಿ ಉತ್ತೀರ್ಣರಾಗಿರುವುದು ವಿಶೇಷವಾಗಿದೆ.

ಚಿಕ್ಕಬಳ್ಳಾಪುರ: ದ್ವಿತೀಯ ಪಿಯು ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಯ ಶೇ.73.45ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಎಂದಿನಂತೆ ಉಡುಪಿ ಜಿಲ್ಲೆ ಈ ಬಾರಿಯೂ ಪ್ರಥಮ ಸ್ಥಾನ ಗಳಿಸಿದ್ದರೆ, ಜಿಲ್ಲೆ ಈ ಬಾರಿ 11ನೇ ಸ್ಥಾನವನ್ನು ಪಡೆದಿದ್ದು, ಕಳೆದ ಬಾರಿಗಿಂತ ಉತ್ತಮ ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗಿದೆ. ಕಳೆದ ಸಾಲಿನಲ್ಲಿ ಜಿಲ್ಲೆ ಪಿಯುಸಿ ಫಲಿತಾಂಶದಲ್ಲಿ 18ನೇ ಸ್ಥಾನ ಪಡೆದಿತ್ತು. ಆದರೆ ಈ ಬಾರಿ 7 ಸ್ಥಾನ ಜಿಗಿದಿರುವ ಜಿಲ್ಲೆ 11ನೇ ಸ್ಥಾನ ಪಡೆದಿದೆ. ಇದರಿಂದ ಹೆಚ್ಚು ಒತ್ತಡದಲ್ಲಿದ್ದ ಪದವಿಪೂರ್ವ ಶಿಕ್ಷಣ ಇಲಾಖೆ ಶಿಕ್ಷಣ ಸ್ಮವಲ್ಪ ಮಟ್ಟಿಗೆ ನಿಟ್ಟುಸಿರು ಬಿಟ್ಟಿದೆ. ಉಳಿದಂತೆ ಜಿಲ್ಲೆಯಲ್ಲಿ ಒಟ್ಟು 13,300 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿ ದ್ದರು. ಇದರಲ್ಲಿ 9,553 ಮಂದಿ ಉತ್ತೀರ್ಣರಾಗಿದ್ದಾರೆ.
ಪರೀಕ್ಷೆಯಲ್ಲಿ ಎಂದಿನಂತೆ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದು, ಪರೀಕ್ಷೆಯನ್ನು ಬರೆದ 7189 ವಿದ್ಯಾರ್ಥಿನಿಯರ ಪೈಕಿ 5312 ಮಂದಿ ತೇರ್ಗಡೆಯಾಗಿ ಶೇ.73.89 ರಷ್ಟು ಫಲಿತಾಂಶ ಪಡೆದಿದ್ದಾರೆ. 6114 ವಿದ್ಯಾರ್ಥಿಗಳ ಪೈಕಿ 4241 ಮಂದಿ ಉತ್ತೀರ್ಣರಾಗಿ ಶೇ. 69.37 ರಷ್ಟು ಫಲಿತಾಂಶ ಬಂದಿದೆ. ನಗರ ಪ್ರದೇಶದ ವಿದ್ಯಾರ್ಥಿಗಳು ಶೇ.69.71 ರಷ್ಟು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶೇ. 77.44 ಮಂದಿ ಉತ್ತೀರ್ಣರಾಗಿರುವುದು ವಿಶೇಷವಾಗಿದೆ.
ಇದನ್ನೂ ಓದಿ: 2nd PUC Results 2025: ದ್ವಿತೀಯ ಪಿಯುಸಿ ಫಲಿತಾಂಶ: 18ನೇ ಸ್ಥಾನಕ್ಕೆ ಜಿಗಿದ ಕಲ್ಪತರು ನಾಡು
ಪ್ರಸ್ತುತ ಸಾಲಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಒಟ್ಟು 97 ಮಂದಿ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ತಾಲೂಕುವಾರು ಫಲಿತಾಂಶ ಮತ್ತು ಶಾಲೆಗಳ ಶೇಖಡಾವಾರು ಫಲಿತಾಂಶ ಬುಧವಾರ ಸಿಗಲಿದೆ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ಮರಿಸ್ವಾಮಿ ತಿಳಿಸಿದ್ದಾರೆ. ಪ್ರಸ್ತುತ ಫಲಿತಾಂಶ ಶಿಕ್ಷಣ ಇಲಾಖೆಗೆ ಸಮಾಧಾನ ತಂದಿದ್ದರೂ ಇದರಲ್ಲಿ ಸರ್ಕಾರಿ ಕಾಲೇಜುಗಳ ಫಲಿತಾಂಶ ಎಷ್ಟು ಎಂಬುದು ಪ್ರಶ್ನೆಯಾಗಿದೆ.
ಉಳಿದಂತೆ ಇಂದಿನ ಫಲಿತಾಂಶ ಕೊನೆಯಲ್ಲ. ಶೀಘ್ರದಲ್ಲಿಯೇ ಸರ್ಕಾರ ಪೂರಕ ಪರೀಕ್ಷೆ ನಡೆಸ ಲಿದ್ದು, ಈ ಪೂರಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಮತ್ತೆ ಉತ್ತೀರ್ಣರಾಗಿ ಶೈಕ್ಷಣಿಕ ಜೀವನ ಮುಂದುವರಿಸಬಹುದಾಗಿದೆ. ಹಾಗಾಗಿ ಯಾವುದೇ ಮಕ್ಕಳು ದುಡುಕದೆ ಪೂರಕ ಪರೀಕ್ಷೆಗೆ ಸಿದ್ಧರಾಗಿ, ಅಲ್ಲದೆ ವಿಷಯಗಳು ಕಡಿಮೆ ಇರುವ ಕಾರಣ ಹೆಚ್ಚಿನ ಸಮಯ ವ್ಯಾಸಂಗಕ್ಕೆ ಮೀಸಲಿಟ್ಟು ಅಭ್ಯಾಸ ಮಾಡಿದರೆ ತಪ್ಪದೇ ನೀವು ಜಯಶೀಲರಾಗುವುದರಲ್ಲಿ ಅನುಮಾನವಿಲ್ಲ.