Vishwavani Editorial: ಇದು ಆತ್ಮವಿಮರ್ಶೆಯ ಹೊತ್ತು
ರಾಜಕಾರಣಿಗಳು, ಅವರ ಹಿಂಬಾಲಕರು ಗುಂಪು ಘರ್ಷಣೆಯಲ್ಲಿ ತೊಡಗುವುದು, ಅಧಿಕಾರಿಗಳು ಕಚೇರಿಯಲ್ಲೇ ರಾಸಲೀಲೆ ನಡೆಸುವುದು, ಸಮಾಜದ ಮೌಲ್ಯಗಳ ಪ್ರತಿನಿಧಿಗಳೆಂದೇ ಗೌರವಿಸ ಲ್ಪಡುವ ಪೀಠಾಧಿಪತಿಗಳು, ಸನ್ಯಾಸಿಗಳು ಅನೈತಿಕ ಸಂಬಂಧವನ್ನು ಹೊಂದಿರುವುದು... ನಿತ್ಯ ಇಂತಹ ಸುದ್ದಿಗಳನ್ನೇ ಕೇಳುತ್ತ, ನೋಡುತ್ತ, ಇಡೀ ವ್ಯವಸ್ಥೆಯ ಬಗ್ಗೆಯೇ ಅನುಮಾನ ಬರುವಂತಾ ಗಿದೆ. ಸದ್ಯ ಕೆಲವು ಬಹಿರಂಗವಾಗಿವೆ ಅಷ್ಟೇ
-
ರಾಜಕಾರಣಿಗಳು, ಅವರ ಹಿಂಬಾಲಕರು ಗುಂಪು ಘರ್ಷಣೆಯಲ್ಲಿ ತೊಡಗುವುದು, ಅಧಿಕಾರಿಗಳು ಕಚೇರಿಯಲ್ಲೇ ರಾಸಲೀಲೆ ನಡೆಸುವುದು, ಸಮಾಜದ ಮೌಲ್ಯಗಳ ಪ್ರತಿನಿಧಿಗಳೆಂದೇ ಗೌರವಿಸ ಲ್ಪಡುವ ಪೀಠಾಧಿಪತಿಗಳು, ಸನ್ಯಾಸಿಗಳು ಅನೈತಿಕ ಸಂಬಂಧವನ್ನು ಹೊಂದಿರುವುದು... ನಿತ್ಯ ಇಂತಹ ಸುದ್ದಿಗಳನ್ನೇ ಕೇಳುತ್ತ, ನೋಡುತ್ತ, ಇಡೀ ವ್ಯವಸ್ಥೆಯ ಬಗ್ಗೆಯೇ ಅನುಮಾನ ಬರುವಂತಾ ಗಿದೆ. ಸದ್ಯ ಕೆಲವು ಬಹಿರಂಗವಾಗಿವೆ ಅಷ್ಟೇ.
ಜನರ ಬಾಯಿಮಾತಿಗೆ ತುತ್ತಾಗಿ ಒಳಗೊಳಗೇ ಮಾಡಬಾರದ್ದನ್ನೆಲ್ಲ ಮಾಡುತ್ತ, ಅದೃಷ್ಟವಶಾತ್ ಕುಣಿಕೆಯಿಂದ ತಪ್ಪಿಸಿಕೊಂಡವರ ಸಂಖ್ಯೆ ಅಗಾಧಪ್ರಮಾಣದಲ್ಲಿದೆ. ನಮ್ಮ ಸುತ್ತಮುತ್ತ ಎತ್ತ ನೋಡಿದರತ್ತ ಅನೈತಿಕತೆ ತಾಂಡವವಾಡುತ್ತ ಇರುವುದನ್ನು ನೋಡಿದರೂ ಸುಮ್ಮನಿರಬೇಕಾದ ಹತಾಶೆ ಪ್ರಾಮಾಣಿಕರದ್ದು. ಅದೃಷ್ಟವಶಾತ್ ಪಾರಾದವರದ್ದು ಒಂದು ರೀತಿಯಾದರೆ, ಯೋಜಿತ ವಾಗಿ ಎಲ್ಲವನ್ನೂ ನಡೆಸಿ ತಪ್ಪಿಸಿಕೊಳ್ಳುವವರ ಸಂಖ್ಯೆಯನ್ನು ಹೇಳಲು ಸಾಧ್ಯವಿಲ್ಲ.
ಇದನ್ನೂ ಓದಿ: Vishwavani Editorial: ಸರಿಯಾಗಿ ಬಿಸಿ ಮುಟ್ಟಿಸಬೇಕಿದೆ
ಬಹುತೇಕ ರಾಜಕಾರಣಿಗಳು, ಅಧಿಕಾರಿಗಳು, ದೊಡ್ಡ ಕಂಪನಿಗಳ ಮುಖ್ಯಸ್ಥರು ಇದೇ ವ್ಯಾಪ್ತಿಯಲ್ಲಿ ಬರುತ್ತಾರೆ. ಇಂತಹದ್ದೊಂದು ಸಮಾಜವನ್ನು ನೋಡಿಕೊಂಡು, ಈ ಅಶುದ್ಧ, ಅಶಕ್ತ, ಅನೀತಿ ಯುಕ್ತ, ಆತ್ಮವಂಚಕ ವ್ಯವಸ್ಥೆಯಲ್ಲೇ ಬೆಳೆಯುವ ಯುವ ಜನತೆಯ ಮನಸ್ಥಿತಿ ಏನಾಗಬಹುದು? ಭಾರತಕ್ಕೆ ಹೊರಗಿನ ಶತ್ರುಗಳು ದೊಡ್ಡ ಸಮಸ್ಯೆ ಎನ್ನುವುದಕ್ಕಿಂತ ಆಂತರಿಕವಾಗಿರುವ ದುಸ್ಥಿತಿ ಯೇ ಬಹಳ ಕಷ್ಟವೆನಿಸುತ್ತಿದೆ.
ಸಮಾಜವನ್ನು ನಡೆಸುವ ಒಬ್ಬ ಅಧಿಕಾರಿ, ಜನನಾಯಕ, ಶ್ರೀಗಳು ಎಲ್ಲ ಅನಾಚಾರ ಮಾಡಿಯೂ ತಾವು ಮಾಡಿಲ್ಲ ಎಂದು ಸಾಧಿಸಲು ಹೆಣಗಾಡುತ್ತಾರೆ. ಆದರೆ ಅವರಿಗೆ ತಮ್ಮ ತಪ್ಪಿನ ಬಗ್ಗೆ ಕಿಂಚಿತ್ತೂ ಕಳವಳವಿರುವುದಿಲ್ಲ. ತಾವು ಸಿಕ್ಕಿಹಾಕಿಕೊಂಡಿದ್ದಷ್ಟೇ ಅವರಿಗೆ ಬೇಸರದ ಸಂಗತಿ ಯಾಗಿರುತ್ತದೆ. ನಾವು ತಾರೆಯರು ಎಂದು ಕರೆಯುವ ಸಿನಿಮಾ ನಟರು ಮುಲಾಜಿಲ್ಲದೇ ಕೊಲೆ ಮಾಡುತ್ತಾರೆ ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ.
ಇಂತಹ ಅನಾರೋಗ್ಯಕಾರಿ ಸಮಾಜದ ಭಾಗವಾಗುವ ಹೊಸಪೀಳಿಗೆ ಮುಂದೆ ಎಂತಹ ವ್ಯಕ್ತಿಗಳಾಗಿ ಬೆಳೆಯಬಹುದು? ಇದರಿಂದ ಅವರು ಬೇಸತ್ತು ದೇಶ ತೊರೆಯಲು ನಿರ್ಧರಿಸಿದರೆ ಅವರನ್ನು ನಿಂದಿಸಬೇಕೇ? ಪ್ರತಿಯೊಬ್ಬರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಹೊತ್ತಿದು.