Sheikh Hasina: ಬಾಂಗ್ಲಾದೇಶ ಹತ್ಯಾಕಾಂಡದ ಹಿಂದಿರುವ ಮಾಸ್ಟರ್‌ಮೈಂಡ್ ಮೊಹಮ್ಮದ್ ಯೂನಸ್?
Sheikh Hasina: ಇಂದು, ನನ್ನ ಮೇಲೆ ಸಾಮೂಹಿಕ ಹತ್ಯೆಗಳ ಆರೋಪವಿದೆ. ವಾಸ್ತವದಲ್ಲಿ, ವಿದ್ಯಾರ್ಥಿ ಸಂಘಟನೆಗಳನ್ನು ಬಳಸಿಕೊಂಡು ಸಾಮೂಹಿಕ ಹತ್ಯೆಗಳಲ್ಲಿ ತೊಡಗಿಸಿಕೊಂಡಿರುವವರು ಮಹಮ್ಮದ್ ಯೂನಸ್. ಅವರೇ ಈ ಎಲ್ಲಾ ದುಷ್ಕೃತ್ಯಗಳ ಹಿಂದಿರುವ ಮಾಸ್ಟರ್‌ಮೈಂಡ್. ಹೀಗೆ ಸಾವು ಮುಂದುವರಿದರೆ ಸರ್ಕಾರ ಉಳಿಯುವುದಿಲ್ಲ ಎಂದು ಹೇಳಿದ್ದಾರೆ.

ನ್ಯೂಯಾರ್ಕ್: ಬಾಂಗ್ಲಾದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯದ ಹಿಂದೆ ಹಂಗಾಮಿ ಸರ್ಕಾರದ ನಾಯಕ ಮೊಹಮ್ಮದ್ ಯೂನಸ್(Muhammad Yunus) ಕೈವಾಡ ಇದೆ ಎಂದು ಪದಚ್ಯುತ ಪ್ರಧಾನಿ ಶೇಖ್ ಹಸೀನಾ(Sheikh Hasina) ಆರೋಪಿಸಿದ್ದಾರೆ. ನ್ಯೂಯಾರ್ಕ್‌ನಲ್ಲಿ ನಡೆದ ಅವಾಮಿ ಲೀಗ್‌ನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹಸೀನಾ, ದೇವಾಲಯಗಳು, ಚರ್ಚ್‌ಗಳು ಮತ್ತು ಧಾರ್ಮಿಕ ಸಂಘಟನೆಯಾದ ಇಸ್ಕಾನ್‌ನ ಮೇಲಿನ ದಾಳಿಗಳ ಸರಣಿ ದಾಳಿಯ ಹಿಂದೆ ಇರುವ ಮಾಸ್ಟರ್ ಮೈಂಡ್ ಯೂನಸ್ ಎಂದು ಕಟುವಾಗಿ ಟೀಕಿಸಿದರು.
ಇಂದು, ನನ್ನ ಮೇಲೆ ಸಾಮೂಹಿಕ ಹತ್ಯೆಗಳ ಆರೋಪವಿದೆ. ವಾಸ್ತವದಲ್ಲಿ, ವಿದ್ಯಾರ್ಥಿ ಸಂಘಟನೆಗಳನ್ನು ಬಳಸಿಕೊಂಡು ಸಾಮೂಹಿಕ ಹತ್ಯೆಗಳಲ್ಲಿ ತೊಡಗಿಸಿಕೊಂಡಿರುವವರು ಮಹಮ್ಮದ್ ಯೂನಸ್. ಅವರೇ ಈ ಎಲ್ಲಾ ದುಷ್ಕೃತ್ಯಗಳ ಹಿಂದಿರುವ ಮಾಸ್ಟರ್‌ಮೈಂಡ್. ಹೀಗೆ ಸಾವು ಮುಂದುವರಿದರೆ ಸರ್ಕಾರ ಉಳಿಯುವುದಿಲ್ಲ ಎಂದು ಹೇಳಿದ್ದಾರೆ.
ದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯವನ್ನು ಉಲ್ಲೇಖಿಸಿದ ಹಸೀನಾ, "ಇಂದು, ಶಿಕ್ಷಕರು, ಪೊಲೀಸರು ಎಲ್ಲರ ಮೇಲೆ ಹಲ್ಲೆ ಮತ್ತು ಹತ್ಯೆ ಮಾಡಲಾಗುತ್ತಿದೆ. ಹಿಂದೂಗಳು, ಬೌದ್ಧರು, ಕ್ರಿಶ್ಚಿಯನ್ನರನ್ನು ಗುರಿಯಾಗಿಸಲಾಗುತ್ತಿದೆ. ಚರ್ಚ್‌ಗಳು ಮತ್ತು ಹಲವಾರು ದೇವಾಲಯಗಳ ಮೇಲೆ ದಾಳಿ ಮಾಡಲಾಗಿದೆ. ಅಲ್ಪಸಂಖ್ಯಾತರನ್ನು ಏಕೆ ಗುರಿಯಾಗಿಸಲಾಗುತ್ತಿದೆ? ಎಂದು ಅವರು ಕಟುವಾಗಿ ಪ್ರಶ್ನಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಆಮೂಲಾಗ್ರ ಇಸ್ಲಾಮಿಸ್ಟ್‌ಗಳು ಹಿಂದೂ ಸಮುದಾಯದ ಮೇಲೆ ದಾಳಿಯ ಅಲೆಯ ನಡುವೆ ಯೂನಸ್ ಮೇಲೆ ಕಟುವಾದ ದಾಳಿ ನಡೆದಿದೆ. ಮೂವರು ಹಿಂದೂ ಸನ್ಯಾಸಿಗಳ ಬಂಧನ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಹಿಂಸಾತ್ಮಕ ವಿದ್ಯಾರ್ಥಿಗಳ ಪ್ರತಿಭಟನೆಯ ನಡುವೆ ಆಗಸ್ಟ್ 5 ರಂದು ಹಸೀನಾ ಬಾಂಗ್ಲಾದೇಶದಿಂದ ಪಲಾಯನ ಮಾಡಿದರು, ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ನಂತರ ದೇಶದ ಉಸ್ತುವಾರಿ ವಹಿಸಿಕೊಂಡಿತು.
ತಮ್ಮ ತಂದೆ ಶೇಖ್ ಮುಜಿಬುರ್ ರೆಹಮಾನ್ ಅವರನ್ನು ಹತ್ಯೆಗೈದಂತೆಯೇ ಅವರನ್ನೂ ಹತ್ಯೆ ಮಾಡುವ ಯೋಜನೆ ಇತ್ತು ಎಂದು ಎಂದು ಹೇಳಿರುವ ಹಸೀನಾ, ಹತ್ಯಾಕಾಂಡ ಬಯಸದ ಕಾರಣ ಬಾಂಗ್ಲಾದೇಶವನ್ನು ತೊರೆದಿದ್ದೇನೆ ಎಂದು ಹೇಳಿದರು. "ನನಗೆ ಹತ್ಯಾಕಾಂಡ ಬೇಕಾಗಿಲ್ಲ, ನಾನು ಅಧಿಕಾರವನ್ನು ಹಿಡಿಯಲು ಬಯಸಿದರೆ, ಹತ್ಯಾಕಾಂಡ ನಡೆಯುತ್ತಿತ್ತು. ಜನರನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲುತ್ತಿರುವಾಗ, ನಾನು ಹೋಗಬೇಕೆಂದು ನಿರ್ಧರಿಸಿದೆ, ನನ್ನ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದರೆ, ಅನೇಕರು ಸಾಯುತ್ತಿದ್ದರು. ಅದು ನನಗೆ ಇಷ್ಟವಿರಲಿಲ್ಲ. ನನ್ನನ್ನು ಹತ್ಯೆ ಮಾಡಲು ಶಸ್ತ್ರಸಜ್ಜಿತ ಗುಂಪೊಂದು ಗಾನ ಭವನಕ್ಕೆ ಬಂದಿತ್ತು ಎಂದು ಅವರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: Bangladesh Immigrants: ರಾಜ್ಯದಲ್ಲಿದ್ದಾರೆ ಲಕ್ಷಕ್ಕೂ ಹೆಚ್ಚು ಅಕ್ರಮ ಬಾಂಗ್ಲಾದೇಶಿ ವಲಸಿಗರು!