#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Sirsi News: ಫೆ.4ರಿಂದ ಗಿಳಿಲುಗುಂಡಿ, 5ರಿಂದ‌ ಮಂಜುಗುಣಿಯಲ್ಲಿ 'ಉದ್ಯಾಪನಾ ಉತ್ಸವ ಪರ್ವ'

ಫೆ.4ರಂದು ಗಿಳಲುಗುಂಡಿ ಉತ್ಸವ ಮತ್ತು ಅಶ್ವ ರಥೋತ್ಸವ ನಡೆಯಲಿದ್ದು, ನಿತ್ಯ ಪೂಜಾ ನಂತರ ಶ್ರೀದೇವರ ಪ್ರಧಾನ ಉತ್ಸವ ಮೂರ್ತಿಯು ಬೆಳಿಗ್ಗೆ 8.30 ಕ್ಕೆ ಗಿಳಲುಗುಂಡಿಗೆ ಮೌನಯಾತ್ರೆ ಮೂಲಕ ಸವಾರಿ ಹೊರಡಿಸಲಾಗುತ್ತದೆ.

Sirsi News: ಫೆ.4ರಿಂದ ಗಿಳಿಲುಗುಂಡಿ, 5ರಿಂದ‌ ಮಂಜುಗುಣಿಯಲ್ಲಿ 'ಉದ್ಯಾಪನಾ ಉತ್ಸವ ಪರ್ವ'

ದೇವಸ್ಥಾನದ ಪ್ರಧಾನ ಅರ್ಚಕ, ವಿದ್ವಾನ್ ಶ್ರೀನಿವಾಸ ಭಟ್ಟ ಮಂಜುಗುಣಿ

Profile Ashok Nayak Jan 20, 2025 2:17 PM

Source : Sirsi Reporter

ಶಿರಸಿ: ತಾಲ್ಲೂಕಿನ ಮಂಜುಗುಣಿಯ ವೆಂಕಟರಮಣ ದೇವಸ್ಥಾನದಲ್ಲಿ ಮೂಲ ನೆಲೆಯಾದ ಗಿಳಲು ಗುಂಡಿಯಲ್ಲಿ ಫೆ. 4 ರಂದು ಗಿಳಿಲುಗುಂಡಿ ಉತ್ಸವ, ಅಶ್ವರಥೋತ್ಸವ ಹಾಗೂ 5ರಿಂದ 7ರ ತನಕ ಮಂಜುಗುಣಿಯಲ್ಲಿ ಉದ್ಯಾಪನಾ ಉತ್ಸವ ಪರ್ವ ಆಯೋಜಿಸಲಾಗಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ, ವಿದ್ವಾನ್ ಶ್ರೀನಿವಾಸ ಭಟ್ಟ ಮಂಜುಗುಣಿ ಹೇಳಿದರು.

ಅವರು ಮಂಜುಗುಣಿ ದೇವಸ್ಥಾನದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಫೆ.4ರಂದು ಗಿಳಲುಗುಂಡಿ ಉತ್ಸವ ಮತ್ತು ಅಶ್ವ ರಥೋತ್ಸವ ನಡೆಯಲಿದ್ದು, ನಿತ್ಯ ಪೂಜಾ ನಂತರ ಶ್ರೀದೇವರ ಪ್ರಧಾನ ಉತ್ಸವ ಮೂರ್ತಿಯು ಬೆಳಿಗ್ಗೆ 8.30 ಕ್ಕೆ ಗಿಳಲುಗುಂಡಿಗೆ ಮೌನಯಾತ್ರೆ ಮೂಲಕ ಸವಾರಿ ಹೊರಡಿಸ ಲಾಗುತ್ತದೆ.

ಬಳಿಕ 10.30 ರಿಂದ ಶ್ರೀ ದೇವರ ಮೂಲಸ್ಥಾನದಲ್ಲಿ ಪೂಜೆ, ಗೋಪೂಜೆ, ಚಕ್ರಮೂರ್ತಿಗೆ ಶತಧಾರಾ ಕ್ಷೀರಾಭಿಷೇಕ, ತಿರುಮಲಯೋಗಿಗಳ ಪಾದಾಂಕಿತ ಪೂಜೆ, ಗೋಪಾದ ಚಿಹ್ನೆ ಪೂಜೆ, ಗುಹಾಪೂಜೆ, ಶ್ರೀ ವೇಂಕಟೇಶ ಮೂಲಮಂತ್ರ ಹಾಗೂ ಗಾಯತ್ರಿ ಮಂತ್ರ ಹೋಮ, ಶ್ರೀಸೂಕ್ತ ಪುರುಷಸೂಕ್ತ ಹೋಮ, ಸಾಮೂಹಿಕ ಸತ್ಯನಾರಾಯಣ ವ್ರತ ಕಥಾ ಪೂಜಾ, ಸಹಸ್ರನಾಮ, ಮಹಾನೈವೇದ್ಯ, ಮಹಾಮಂಗಳಾರತಿ ನಡೆಯಲಿದೆ.

ಅಲ್ಲೇ ಮಧ್ಯಾಹ್ನ 1 ಗಂಟೆಗೆ ಮಹಾಪ್ರಸಾದ ಭೋಜನ, ಮಧ್ಯಾಹ್ನ ಪೂಜೆ, 3:30 ರಿಂದ ಭೇರಿತಾ ಡನ, ಶ್ರೀದೇವರ ಅಶ್ವರಥಾರೋಹಣ, ಬಿಜಯಂಗೈಯುವುದು (ವಿಜಯಯಾತ್ರಾ), ಸಂಜೆ 7 ಗಂಟೆಗೆ ಪುರಪ್ರವೇಶ, ಆಲಯ ಪ್ರವೇಶ, ಮಂಗಳಾರತಿ, ಮಹಾಪ್ರಸಾದ ವಿತರಣೆ ನಡೆಯಲಿದೆ.

ಫೆ.‌೫ ರಂದು ಮಂಜುಗುಣಿಯಲ್ಲಿ ದೇವಸ್ಥಾನದಲ್ಲಿ ಶ್ರೀದೇವರಲ್ಲಿ ಬೆಳಗ್ಗೆ 7 ಗಂಟೆಯಿಂದ ಪೂಜಾ ರಂಭ, 9.30 ಕ್ಕೆ ಶ್ರೀ ದೇವರಿಗೆ ಮಹಾಪೂಜೆ, 11ಗಂಟೆಗೆ ಶ್ರೀ ದೇವರಿಗೆ ಬೆಳ್ಳಿ-ಬಂಗಾರಗಳಿಂದ ತುಲಾ ಭಾರ ನಡೆಯಲಿದೆ ಎಂದರು.

ಐತಿಹಾಸಿಕವಾದ ಈ ತುಲಾಭಾರ ಸೇವೆಯಲ್ಲಿ ಭಕ್ತರು ಸ್ವಹಸ್ತದಿಂದ ಬೆಳ್ಳಿ ಬಂಗಾರಗಳನ್ನು ತುಲಾ ಭಾರ ಪಾತ್ರೆಗೆ ಅರ್ಪಿಸಲು ಅವಕಾಶವಿದೆ. 1 ಗಂಟೆಗೆ ಮಹಾಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 2 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ತ್ರಿವಿಧ ಕಲ್ಯಾಣ: ಭೂ ಸಹಿತನಾದ ವೇಂಕಟೇಶ ದೇವರಿಗೆ ಆತ್ಮಕಲ್ಯಾಣ, ಕುಟುಂಬ ಕಲ್ಯಾಣ, ಲೋಕ ಕಲ್ಯಾಣೋತ್ಸವ ಸೇರಿ ತ್ರಿವಿಧ ಕಲ್ಯಾಣ ಇದೆ ಎಂದರು.

ಸಂಜೆ 4.30 ರಿಂದ ನಿತ್ಯಪೂಜೆ, 5 ಗಂಟೆಗೆ ಸ್ವಾಮಿಗೆ ಕಲ್ಯಾಣೋತ್ಸವ ಆರಂಭವಾಗಲಿದೆ. ಬಳಿಕ ಪಟ್ಟಗಾಣಿಕೆ ಸಮರ್ಪಣೆ, ಪ್ರಪಂಚ ಪುಷ್ಪಾಂಜಲಿ ನಂತರ ಡೋಲೋತ್ಸವ (ಉಯ್ಯಾಲೆ), 8 ಗಂಟೆಗೆ ಮಹಾಪ್ರಸಾದ ಭೋಜನವಿದೆ. ಫೆ. 6 ರಂದು ಶ್ರೀನಿವಾಸ ಸಾಮ್ರಾಜ್ಯ ಪಟ್ಟಬಂಧ ಮಹೋತ್ಸವವಿದೆ.

ಶ್ರೀದೇವರಲ್ಲಿ ಬೆಳಗ್ಗೆ 7 ಗಂಟೆಯಿಂದ ಪೂಜಾರಂಭ, 9.30 ಕ್ಕೆ ಶ್ರೀ ದೇವರಿಗೆ ಮಹಾಪೂಜೆ, 10.15 ಕ್ಕೆ ವೇದಿಕೆಗೆ ಶ್ರೀದೇವರ ಆಗಮನ, ಪೂಜಾರಂಭ, ವಿವಿಧ ದ್ರವ್ಯಗಳಿಂದ ಅಭಿಷೇಕ, ಮುಹೂರ್ತ ವಾಚನ- ದರ್ಶನ, ರಾಜೋಪಚಾರ, ಪಟ್ಟಗಾಣಿಕೆ ಸಮರ್ಪಣೆ, ಭೂದಾನ, ಮಹಾಮಂಗಳಾರತಿ. 1 ಗಂಟೆಗೆ ಮಹಾಪ್ರಸಾದ, ಮಧ್ಯಾಹ್ನ 2 ರಿಂದ ಸಾಂಸ್ಕೃತಿಕ ಕಾರ್ಯಕ್ರಮ,

ಸಂಜೆ 5 ಗಂಟೆಯಿಂದ ಸಾಮೂಹಿಕ ಪ್ರಾರ್ಥನೆಯೊಂದಿಗೆ ನೌಕಾವಿಹಾರೋತ್ಸವ ಪ್ರಾರಂಭ ವಾಗಲಿದೆ. ತೀರ್ಥ-ತೀರ-ವಿಹಾರ, ತೀರ್ಥಾರತಿ, ಆಲಯ ಪ್ರವೇಶದೊಂದಿಗೆ ಉತ್ಸವ ಸಂಪನ್ನ, 8 ಗಂಟೆಗೆ ಮಹಾಪ್ರಸಾದ ವಿತರಣೆ ಇದೆ.

ಫೆ. 7 ರಂದು ಶ್ರೀದೇವರಲ್ಲಿ ಬೆಳಿಗ್ಗೆ 7 ಗಂಟೆಯಿಂದ ಪೂಜಾರಂಭ, 9.30 ಕ್ಕೆ ಶ್ರೀದೇವರಿಗೆ ಮಹಾ ಪೂಜೆ, 10 ಗಂಟೆಗೆ ವೇದಿಕೆಯಲ್ಲಿ ಸಾಮೂಹಿಕ ಸತ್ಯನಾರಾಯಣ ವ್ರತಕಥಾ ಪೂಜಾರಂಭ ಹಾಗೂ ಶ್ರೀದೇವಸ್ಥಾನದಲ್ಲಿ ಪ್ರಾಕಾರ ಬಲಿ ಉತ್ಸವ ಪ್ರಾರಂಭ, ಏಕಾಂತ ಸೇವೆ, ಭಾಗವತ ಸೇವೆ, ರಥಾ ರೋಹಣ, ದರ್ಶನ, ಸಾಮೂಹಿಕ ಸತ್ಯನಾರಾಯಣ ವ್ರತಕಥಾ ಪೂಜೆಯ ಮಹಾಮಂಗಳಾರತಿ, ಕಥಾಶ್ರವಣ, ಪ್ರಸಾದ ವಿತರಣೆ, 1 ಗಂಟೆಗೆ ಮಹಾಪ್ರಸಾದ ನಡೆಯಲಿದೆ. 15 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ಕೊನೇಯ‌ ದಿ‌ನದ ಸಂಜೆ 4 ರಿಂದ ಸಭಾ ಕಾರ್ಯಕ್ರಮವಿದ್ದು, ಸಿದ್ದಾಪುರ ತಾಲ್ಲೂಕಿನ ಶಿರಳಗಿಯ ಚೈತನ್ಯ ರಾಜಾರಾಮ ಕ್ಷೇತ್ರದ ಸ್ವಾಮಿ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸುವರು‌. ಮಹಾಬಲೇಶ್ವರ ಜೋತಿ ಕಾನ್ಮೂಲೆ ಉಪಸ್ಥಿತರಿರುವರು. ಇದೇ ವೇಳೆ ಗಂಗಾವತಿಯ ಶ್ರೀಪಾದ ರಾಯ್ಕರ ದಂಪತಿ ಹಾಗೂ ಧಾರವಾಡದ ವೇಂಕಟೇಶ ಬಿಜಾಪೂರ ದಂಪತಿ, ಮಂಗಳೂರಿನ ಸದಾ ಶಿವ ಹೆಗಡೆ ದಂಪತಿಯನ್ನು ಸನ್ಮಾನಿಸಲಾಗುತ್ತಿದೆ. ನಂತರ ರಥನಯನ ಅಷ್ಟಾವಧಾನ, ಮಂಗಳಾ ರತಿ, 8 ಗಂಟೆಗೆ ಮಹಾಪ್ರಸಾದ ನಡೆಯಲಿದೆ. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿ ಗಳು ಪಾಲ್ಗೊಂಡು ಶ್ರೀದೇವರ ಕೃಪೆಗೆ ಪಾತ್ರರಾಗಬೇಕೆಂದು ಕೋರಿದರು‌. ಈ ವೇಳೆ ಎಂ.ಎನ್.ಹೆಗಡೆ ಕೂರ್ಸೆ, ಅನಂತ ಪೈ, ನಾಗೇಂದ್ರ ಶೇಟ್ ಇದ್ದರು‌.

ಇದನ್ನೂ ಓದಿ: Sirsi Breaking: ಎರಡನೇ ದಿನದ ಸಾಹಿತ್ಯ ಸಮ್ಮೇಳನ: ಶಾಸಕ ಭೀಮಣ್ಣ ನಾಯ್ಕ ಭಾಗಿ