Sonu Nigam Concert: ಗಾಯಕ ಸೋನು ನಿಗಂನತ್ತ ಕಲ್ಲು, ಬಾಟಲ್ ಎಸೆದ ಪ್ರೇಕ್ಷಕರು; ಕಾರಣವೇನು?
Sonu Nigam: ದಿಲ್ಲಿಯಲ್ಲಿ ಕಾರ್ಯಕ್ರಮ ನಡೆಸುತ್ತಿದ್ದ ಪ್ರಸಿದ್ದ ಗಾಯಕ ಸೋನು ನಿಗಂ ಅವರತ್ತ ಉದ್ರಿಕ್ತ ಗುಂಪು ಕಲ್ಲು, ಬಾಟಲ್ ತೂರಿದ ಘಟನೆ ನಡೆದಿದೆ. ಹೀಗಾಗಿ ಮಧ್ಯದಲ್ಲೇ ಅವರು ತಮ್ಮ ಕಾರ್ಯಕ್ರಮ ನಿಲ್ಲಿಸಬೇಕಾಯ್ತು. ಪರಿಸ್ಥಿತಿ ತಿಳಿಯಾದ ಬಳಿಕ ತಮ್ಮ ಕಾನ್ಸರ್ಟ್ ಮುಂದುವರಿಸಿದರು.

ಸೋನು ನಿಗಂ.

ಹೊಸದಿಲ್ಲಿ: ಪ್ರಸಿದ್ದ ಗಾಯಕ ಸೋನು ನಿಗಂ (Sonu Nigam) ದಿಲ್ಲಿ ಟೆಕ್ನಾಲಾಜಿಕಲ್ ವಿಶ್ವ ವಿದ್ಯಾನಿಲಯ (Delhi Technological University-DTU)ದ ಎಂಜಿಫೆಸ್ಟ್ 2025 (Engifest 2025)ರಲ್ಲಿ ಭಾಗವಹಿಸಿ ಹಾಡುತ್ತಿದ್ದ ವೇಳೆ ಉದ್ರಿಕ್ತ ಗುಂಪು ವೇದಿಕೆಯತ್ತ ಕಲ್ಲು, ಬಾಟಲ್ ತೂರಿದ ಘಟನೆ ನಡೆದಿದೆ. ಹೀಗಾಗಿ ಮಧ್ಯದಲ್ಲೇ ಅವರು ತಮ್ಮ ಕಾರ್ಯಕ್ರಮ ನಿಲ್ಲಿಸಬೇಕಾಯ್ತು (Sonu Nigam Concert). ಅದಾಗ್ಯೂ ಕೋಪಗೊಳ್ಳದೆ ಶಾಂತ ರೀತಿಯಿಂದ ವರ್ತಿಸಿ ಅವರು ಪರಿಸ್ಥಿತಿಯನ್ನು ಹತೋಟಿಗೆ ತರಲು ನೆರವಾದರು. ಈ ರೀತಿ ವರ್ತಿಸದಂತೆ ಮನವಿ ಮಾಡಿದ್ದಲ್ಲದೆ ಪರಿಸ್ಥಿತಿ ತಿಳಿಯಾದ ಬಳಿಕ ತಮ್ಮ ಕಾನ್ಸರ್ಟ್ ಮುಂದುವರಿಸಿದರು. ಸದ್ಯ ಅವರ ಈ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ʼʼನಾನು ನಿಮಗಾಗಿಯೇ ಇಲ್ಲಿಗೆ ಬಂದಿದ್ದೇನೆ. ಹೀಗಾಗಿ ಖುಷಿಯಿಂದ ಇರೋಣ. ಕಾರ್ಯಕ್ರಮ ಇಷ್ಟವಾಗದಿದ್ದರೆ ದಯವಿಟ್ಟು ಈ ರೀತಿಯ ವರ್ತನೆ ತೋರಬೇಡಿ. ಬೇಕಾದರೆ ಎದ್ದು ಹೋಗಬಹುದುʼʼ ಎಂದು ಮನವಿ ಮಾಡಿದರು.
ಸೋನು ನಿಗಂ ಅವರ ಕಾರ್ಯಕ್ರಮ ವಿಡಿಯೊ ನೋಡಿ:
The way crowd was cheering "Pookie-Pookie" after this😭🎀#SonuNigam pic.twitter.com/S2xTyibmsv
— 𝐏.𝐒. (@Its_Pragya_S) March 24, 2025
A night to remember....
— Neena Sinhaa (@NeenaSinha) March 24, 2025
Sonu Nigam at Delhi Technological University #Engifest #dtu #SonuNigam pic.twitter.com/SBTj7HJzx6
ಕಾರ್ಯಕ್ರಮದ ಬಳಿಕ ಸೋನು ನಿಗಂ ಅನೇಕ ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ. ಆದರೆ ಘಟನೆಯನ್ನೂ ಎಲ್ಲೂ ಉಲ್ಲೇಖಿಸಿಲ್ಲ. ಯಾಕಾಗಿ ವಿದ್ಯಾರ್ಥಿಗಳು ಈ ರೀತಿಯಾಗಿ ವರ್ತಿಸಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಮೂಲಗಳ ಪ್ರಕಾರ ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷಕ್ಕಿಂತ ಅದಿಕ ಮಂದಿ ಭಾಗವಹಿಸಿದ್ದರು. ಮಾಧ್ಯಮದ ಜತೆ ಮಾತನಾಡಿದ ಕೆಲವು ವಿದ್ಯಾರ್ಥಿಗಳು ವೇದಿಕೆಯತ್ತ ಕಲ್ಲು ತೂರಾಟ ನಡೆಸಿದ ಘಟನೆಯನ್ನು ದುರದೃಷ್ಟಕರ, ನಾಚಿಕೆಗೇಡು ಎಂದು ಕರೆದಿದ್ದಾರೆ. ʼʼಕೆಲವು ಪ್ರೇಕ್ಷಕರ ಕೃತ್ಯದಿಂದ ನಾವು ತಲೆ ತಗ್ಗಿಸಬೇಕಾಯ್ತು. ಕಾರ್ಯಕ್ರಮವನ್ನು ಅರ್ಧದಲ್ಲಿ ನಿಲ್ಲಿಸಿದ ಸೋನು ನಿಗಂ ಅಸಮಾಧಾನಗೊಳ್ಳದೆ, ಶಾಂತವಾಗಿ ವರ್ತಿಸುವಂತೆ ಪ್ರೇಕ್ಷಕರಲ್ಲಿ ಮನವಿ ಮಾಡಿದ್ದರುʼʼ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಮತ್ತೆ ಸುದ್ದಿಯಾದ ಗಾಯಕ ಸೋನು ನಿಗಮ್; ಸಂಗೀತ ಕಾರ್ಯಕ್ರಮದ ಮಧ್ಯೆ ಪ್ರೇಕ್ಷಕರಿಗೆ ಗದರಿದ್ದೇಕೆ?
ವಿದ್ಯಾರ್ಥಿನಿ ಗೀತಿಕಾ ಮಾತನಾಡಿ, ʼʼಕೆಲವು ಪ್ರೇಕ್ಷಕರ ಅಶಿಸ್ತಿನ ವರ್ತನೆಯಿಂದಾಗಿ ಸೋನು ನಿಗಂ ಅವರಂತಹ ಶ್ರೇಷ್ಠ ಗಾಯಕನಿಗೆ ಅವಮಾನವಾಗಿದೆ. ಆದರೆ ಅವರು ತಮ್ಮ ತಾಳ್ಮೆಯನ್ನು ಕಳೆದುಕೊಳ್ಳದೆ ಶಾಂತವಾಗಿ ವರ್ತಿಸಿ ಮಾದರಿ ನಡೆ ತೋರಿದ್ದಾರೆʼʼ ಎಂದು ಹೇಳಿದ್ದಾರೆ. ಅಭಿಷೇಕ್ ರಾತ್ರ ಮಾತನಾಡಿ ಸೋನು ನಿಗಂ ಅವರ ವರ್ತನೆಯನ್ನು ಶ್ಲಾಘಿಸಿದ್ದಾರೆ. ʼʼಗಲಾಟೆ ನಡೆಯುವ ವೇಳೆಯಲ್ಲಿಯೂ ಅವರು ಶಾಂತವಾಗಿದ್ದರು. ತಮ್ಮ ಧ್ವನಿಯನ್ನೂ ಏರಿಸಿ ಮಾತನಾಡಲಿಲ್ಲ. ಅವರ ಈ ವರ್ತನೆ ಪ್ರತಿಯೊಬ್ಬರಿಗೂ ಮಾದರಿʼʼ ಎಂದಿದ್ದಾರೆ. ಸದ್ಯ ಸೋನು ನಿಗಂ ಅವರ ಈ ಕಾರ್ಯಕ್ರಮದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹಲವರು ಅಶಿಸ್ತು ತೋರಿದ ಪ್ರೇಕ್ಷಕರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಘಟನೆಗೆ ಕಾರಣವೇನು ಎನ್ನುವುದು ತಿಳಿದು ಬಂದಿಲ್ಲ.
ಸಂಗೀತ ಕಾರ್ಯಕ್ರಮದ ಮಧ್ಯೆ ಗದರಿದ್ದ ಸೋನು ನಿಗಂ
ಸೋನು ನಿಗಂ ಅವರ ಕಾರ್ಯಕ್ರಮಕ್ಕೆ ಪ್ರೇಕ್ಷಕರು ಅಡ್ಡಿಪಡಿಸಿದ ಘಟನೆ ಈ ಹಿಂದೆಯೂ ನಡೆದಿತ್ತು. ಈ ವರ್ಷದ ಫೆಬ್ರವರಿಯಲ್ಲಿ ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ನಡೆದ ರಸ ಮಂಜರಿ ವೇಳೆ ಎದ್ದುನಿಂತು ಗುಂಪೊಂದು ಗಲಾಟೆ ಆರಂಭಿಸಿತ್ತು. ಈ ಗುಂಪನ್ನು ನಿಯಂತ್ರಿಸಲು ಸ್ವತಃ ಸೋನು ನಿಗಮ್ ಅವರೇ ಮೈಕ್ ಕೈಗೆತ್ತಿಕೊಂಡಿದ್ದರು.