ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vijayapura (Indi) News: ಕೈಬಾಯಿ ಪರಿಶುದ್ದವಾಗಿರಿಸಿಕೊಂಡು ನಿವೃತ್ತಿ ಹೊಂದುತ್ತಿರುವ ಸುಭಾಷ ರುದ್ರವಾಡಿ ಜನಮಾನಸದಲ್ಲಿದ್ದಾರೆ

ಸುಭಾಷ ರುದ್ರವಾಡಿ ಅಧ್ಯಾತ್ಮಿಕ ಜೀವಿ ದೇವರ ಬಗ್ಗೆ ನಂಬಿಕೆ ಇರುವ ಒಳ್ಳೆಯ ಸಜ್ಜನ ಅಧಿಕಾರಿ ಕಳೆದ 35 ವರ್ಷಗಳ ಸುದೀರ್ಘ ಒಂದೇ ತಾಲೂಕಿನಲ್ಲಿ ನೌಕರಿ ಮಾಡುತ್ತಿರುವುದು ಅವರ ಒಳ್ಳೇತನವೇ ಕಾರಣ ಅನೇಕ ಶಾಸಕರು, ಸಂಸದರು ಜನಪ್ರತಿನಿಧಿಗಳು ಬಂದಿದ್ದಾರೆ ಹೋಗಿದ್ದಾರೆ ಆದರೆ ಯಾರ ಕಣ್ಣಿನಲ್ಲಿಯೂ ವಕ್ರದೃಷ್ಠಿಯಿಂದ ಇವರನ್ನು ಕಂಡಿಲ್ಲ ಬಂದವ ರೆಲ್ಲರೂ ರುದ್ರವಾಡಿಯನ್ನು ಗೌರವದಿಂದ ಕಂಡಿದ್ದಾರೆ

ಸುಭಾಷ ರುದ್ರವಾಡಿ ಪರಿಶುದ್ದ ಅಧಿಕಾರಿ: ಎಂ.ಆರ್ ಪಾಟೀಲ

ಜಿ.ಪಂ ಕಾರ್ಯನಿರ್ವಾಹಕ ಅಭಿಯಂತರರಾಗಿ ಸೇವೆ ಸಲ್ಲಿಸಿದ ಎಸ್.ಆರ್.ರುದ್ರವಾಡಿ ಬೀಳ್ಕೊಡುವ ಕಾರ್ಯಕ್ರಮ ಉದ್ದೇಶಿಸಿ ಎಂ,ಆರ್ ಪಾಟೀಲ ಮಾತನಾಡಿದರು.

Profile Ashok Nayak Mar 2, 2025 2:16 PM

ಇಂಡಿ: ಇಂದಿನ ದಿನಮಾನಗಳಲ್ಲಿ ಸರಕಾರಿ ನೌಕರಿ ಸಿಗುವುದು ಸುಲಭವಲ್ಲ ಸಿಕ್ಕ ಅವ ಕಾಶವನ್ನು ಒಳ್ಳೆಯದಾಗಿ ಸದುಪಯೋಗಪಡಿಸಿಕೊಂಡು ಸಾರ್ವಜನಿಕವಾಗಿ ಕೈಬಾಯಿ ಪರಿಶುದ್ದವಾಗಿರಿಸಿಕೊಂಡು ನಿವೃತ್ತಿ ಹೊಂದುತ್ತಿರುವ ಸುಭಾಷ ರುದ್ರವಾಡಿ ಯವರು ಜನಮಾನಸದಲ್ಲಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡರಾದ ಎಂ.ಆರ್ ಪಾಟೀಲ ಹೇಳಿದರು. ಶುಭಂ ಮಂಗಲ ಕಾರ್ಯಾಲಯದಲ್ಲಿ ಎರ್ಪಡಿಸಿದ ಜಿ.ಪಂ ಕಾರ್ಯ ನಿರ್ವಾ ಹಕ ಅಭಿಯಂತರರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಲಿರುವ ಎಸ್.ಆರ್ ರುದ್ರವಾಡಿ ಅವರಿಗೆ ಬೀಳ್ಕೊಡುವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಸಾರ್ವಜನಿಕ ಕೆಲಸ ದೇವರ ಕೆಲಸ ಎಂದು ತಿಳಿದು ಯಾರು ಜನರ, ಪ್ರೀತಿ, ವಿಶ್ವಾಸ ಗಳಿಸುತ್ತಾರೆ ಅವರನ್ನು ಜನರು ಸದಾ ಸ್ಮರಿಸುತ್ತಾರೆ.

ಸುಭಾಷ ರುದ್ರವಾಡಿ ಅಧ್ಯಾತ್ಮಿಕ ಜೀವಿ ದೇವರ ಬಗ್ಗೆ ನಂಬಿಕೆ ಇರುವ ಒಳ್ಳೆಯ ಸಜ್ಜನ ಅಧಿಕಾರಿ ಕಳೆದ 35 ವರ್ಷಗಳ ಸುದೀರ್ಘ ಒಂದೇ ತಾಲೂಕಿನಲ್ಲಿ ನೌಕರಿ ಮಾಡುತ್ತಿರು ವುದು ಅವರ ಒಳ್ಳೇತನವೇ ಕಾರಣ ಅನೇಕ ಶಾಸಕರು, ಸಂಸದರು ಜನಪ್ರತಿನಿಧಿಗಳು ಬಂದಿದ್ದಾರೆ ಹೋಗಿದ್ದಾರೆ ಆದರೆ ಯಾರ ಕಣ್ಣಿನಲ್ಲಿಯೂ ವಕ್ರದೃಷ್ಠಿಯಿಂದ ಇವರನ್ನು ಕಂಡಿಲ್ಲ ಬಂದವರೆಲ್ಲರೂ ರುದ್ರವಾಡಿಯನ್ನು ಗೌರವದಿಂದ ಕಂಡಿದ್ದಾರೆ ಇವರು ಮಾಡಿದ ಅನೇಕ ಕೆಲಸ ಕಾರ್ಯಗಳು ಜೀವಂತವಾಗಿರುತ್ತವೆ ಇಂತಹ ಅನುಭವಿ ಅಧಿಕಾರಿ ಯಿಂದ ನಿವೃತ್ತಿ ನಂತರ ಕೂಡಾ ಮಾರ್ಗದರ್ಶಕರಾಗಿ ಮುಂದುವರೆಯಲ್ಲಿ ಮತ್ತಷ್ಟು ಸಮಾಜ ಮುಖಿ ಕಾರ್ಯಗಳು ನಡೆಯಲಿ ಎಂದರು.

ಇದನ್ನೂ ಓದಿ: Vijayanagara News: ನೋಡುವ ದೃಷ್ಟಿ ಪರಿಶುದ್ಧವಾಗಿರಲಿ- ಉಜ್ಜಯಿನಿ ಶ್ರೀ

ಕೆ.ಬಿ.ಜೆ.ಎನ್.ಎಲ್ ಅಧೀಕ್ಷಕ ಅಭಿಯಂತರ ರಾಂಪೂರ ಮನೋಜಕುಮಾರ ಕಡಬಳ್ಳಿ ಮಾತ ನಾಡಿ ಸುಭಾಷ ರುದ್ರವಾಡಿ ಸರಳ ವ್ಯಕ್ತಿ ಕಾಲೇಜಿನಿಂದ ನಿವೃತ್ತಿ ಕೊನೆಯ ಅಂಚಿನ ವರೆಗೂ ಒಳ್ಳೆತನ ಇವರನ್ನು ಎತ್ತರಕ್ಕೆ ಬೆಳೆಸಿದೆ. ಸಿಟ್ಟು ಹಮ್ಮು, ಬಿಮ್ಮು ಅಧಿಕಾರಿ ಎಂಬ ಅಹಂ ಇಲ್ಲದ ಸಾದಾ ಜೀವನ ಸಾಗಿಸಿದ್ದಾರೆ ಇಂದು ಅವರ ನಿವೃತ್ತಿ ಸಮಾರಂಭ ಸಾಕಷ್ಟು ಜನರ ಪ್ರೀತಿ ಗಳಿಸಿದ್ದಾರೆ ಇವರು ನಿವೃತ್ತಿ ನಂತರ ಸಾಮಾಜಿಕ, ಅಧ್ಯಾತ್ಮಿಕ, ಧಾರ್ಮಿಕ ಕಾರ್ಯಗಳಲ್ಲಿ ಸದಾ ತೊಡಗಲಿ ಎಂದರು.

ಜೆಟ್ಟೆಪ್ಪ ರವಳಿ, ಎಸ್.ಅರ್ ಪೊಳ್ಳ, ನಿವೃತ್ತ ಎಇಇಎಸ್.ಸಿ ಕಗ್ಗೋಡ, ಎಇಇ, ಎಲ್.ಟಿ ರಾಠೋಡ, ಗುಡ್ಡದ ಸಾಹುಕಾರ, ಭೀಮಣ್ಣ ಕೌಲಗಿ ನಿವೃತ್ತ ಅಧಿಕಾರಿ ಎಸ್ ಆರ್ ರುದ್ರವಾಡಿ ಇವರ ನಡೆ ಕುರಿತು ಗುಣಗಾನ ಮಾಡಿದರು.

ನಿವೃತ್ತಿ ಹೊಂದಿದ ಸುಭಾಷ ಆರ್ ರುದ್ರವಾಡಿ ತಮ್ಮ ಸುಧೀರ್ಘ ನೌಕರಿ ಮಾಡಲು ಶಾಸಕ ಯಶವಂತ ರಾಯಗೌಡ ಪಾಟೀಲ ಹಾಗೂ ಸಂಸದರಾದ ರಮೇಶ ಜಿಗಜಿಣಗಿ ಸಾಹೇಬರು ಹಾಗೂ ಹಿಂದಿನ ಎಲ್ಲಾ ಜನಪ್ರತಿನಿಧಿಗಳುಮತ್ತು ಸಾರ್ವಜನಿಕರು ಕೂಡಾಸಹಕಾರ ನೀಡಿದ್ದಾರೆ ಅವರ ಖುಣ ಜೀವನದ ಕೊನೆಯ ಕ್ಷಣದ ವರೆಗೂ ಮರೆಯುವುದಿಲ್ಲ ಎಂದು ಅನುಭವ ಸಾರ್ವಜನಿಕರೊಂದಿಗೆ ಹಂಚಿಕೊಂಡರು.