Cricket in Chikkaballapur: ಬಿಸಿಸಿ ವತಿಯಿಂದ ಬೇಸಿಗೆ ಕ್ರಿಕೆಟ್ ಪಂದ್ಯಾವಳಿಗಳು
ವಾರಂತ್ಯದ ಭಾನುವಾರದಂದು ಪಂದ್ಯಾವಳಿಗಳು ನಡೆಯಲಿದ್ದು ಆಸಕ್ತ ಕ್ರಿಕೆಟ್ ಕ್ರೀಡಾ ಪ್ರೇಮಿಗಳು ಭಾಗವಹಿಸಿ ಕ್ರೀಡಾ ಸ್ರ‍್ಧಾ ಮನೋಭಾವ ಬೆಳೆಸಿಕೊಳ್ಳಬೇಕೆಂದು ಕರೆ ಕೊಟ್ಟರು. ಶಿಕ್ಷಕರ ತಂಡದ ನಾಯಕರಾದ ಶ್ರೀಧರ್ ಮಾತನಾಡಿ, ಕ್ರೀಡಾ ಸ್ಪೂರ್ತಿಯಿಂದ ಪಂದ್ಯಾವಳಿಯಲ್ಲಿ ಭಾಗವಹಿಸಿ ಜಡತ್ವವನ್ನು ನಿವಾರಿಸಿಕೊಳ್ಳಬೇಕೆಂದು ತಿಳಿಸಿದರು


ಗೌರಿಬಿದನೂರು : ಪಟ್ಟಣದ ಆಚರ‍್ಯ ಕೃಷಿ ಮೈದಾನದಲ್ಲಿ ಬ್ಯಾಂಕ್ ಕ್ರಿಕೆಟ್ ಕ್ಲಬ್ ರವರು ಭಾನುವಾರ ದ ಬಿಡುವು ಎಂಬ ಶರ‍್ಷಿಕೆ ಅಡಿಯಲ್ಲಿ ಬೇಸಿಗೆ ಶಿಬಿರದ ಕ್ರಿಕೆಟ್ ಪಂದ್ಯಾವಳಿ ಗಳನ್ನು ನಡೆಸಿದವು. ಅಗ್ನಿಶಾಮಕ ದಳದ ತಂಡ ಪ್ರಥಮ ಸ್ಥಾನ ಗಳಿಸಿದರೆ, ಶಿಕ್ಷಕರ ತಂಡ ದ್ವಿತೀಯ ಸ್ಥಾನ ಪಡೆದು ಕೊಂಡಿತು. ಬ್ಯಾಂಕ್ ಕ್ರಿಕೆಟ್ ಕ್ಲಬ್ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು. ಬಿಸಿಸಿ ಸಂಚಾಲಕ ಯೂನಿ ಯನ್ ಬ್ಯಾಂಕ್ ಪ್ರಬಂಧಕರಾದ ಎಂ.ಚಂದ್ರಶೇಖರ್ ಚಾಲನೆ ನೀಡಿ ಮಾತನಾಡಿ, ಪ್ರತಿದಿನ ಬೆಳಗ್ಗೆ ಅಭ್ಯಾಸ ಪಂದ್ಯಗಳು ನಡೆಯಲಿವೆ.
ಇದನ್ನೂ ಓದಿ: Chikkaballapur News: ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನಗಳು ಹತ್ತಿಕ್ಕಲ್ಪಡುತ್ತಿರುವುದು ಆತಂಕಕಾರಿ ಸಂಗತಿ
ವಾರಂತ್ಯದ ಭಾನುವಾರದಂದು ಪಂದ್ಯಾವಳಿಗಳು ನಡೆಯಲಿದ್ದು ಆಸಕ್ತ ಕ್ರಿಕೆಟ್ ಕ್ರೀಡಾ ಪ್ರೇಮಿಗಳು ಭಾಗವಹಿಸಿ ಕ್ರೀಡಾ ಸ್ರ‍್ಧಾ ಮನೋಭಾವ ಬೆಳೆಸಿಕೊಳ್ಳಬೇಕೆಂದು ಕರೆ ಕೊಟ್ಟರು. ಶಿಕ್ಷಕರ ತಂಡದ ನಾಯಕರಾದ ಶ್ರೀಧರ್ ಮಾತನಾಡಿ, ಕ್ರೀಡಾ ಸ್ಪೂರ್ತಿಯಿಂದ ಪಂದ್ಯಾವಳಿಯಲ್ಲಿ ಭಾಗವಹಿಸಿ ಜಡತ್ವವನ್ನು ನಿವಾರಿಸಿಕೊಳ್ಳಬೇಕೆಂದು ತಿಳಿಸಿದರು. ಶಿಕ್ಷಕರ ಸಂಘದ ಪ್ರತಿನಿಧಿಯಾದ ಸಿಂಹಾದ್ರಿ ಮಾತನಾಡಿ, ಕ್ರೀಡಾ ಚಟುವಟಿಕೆಗಳು ದೇಹಕ್ಕೆ ವ್ಯಾಯಾಮ ನೀಡಿ ಮನಸ್ಸನ್ನು ಉಲ್ಲಾಸ ಗೊಳಿಸು ತ್ತವೆ ಎಂದು ತಿಳಿಸಿದರು.
ಶಿಕ್ಷಕರ ತಂಡದ ಉಪನಾಯಕ ಬಾಬಾ ಜಾನ್ ಮಾತನಾಡಿ, ಸದೃಢ ದೇಹ ಸದೃಢ ಆರೋಗ್ಯವನ್ನು ಹೆಚ್ಚಿಸುತ್ತದೆ ಹಾಗೂ ಮಾನಸಿಕ ಒತ್ತಡವನ್ನು ಕಡಿಮೆ ಗೊಳಿಸುತ್ತದೆ ಎಂದು ತಿಳಿಸಿದರು. ಕ್ರೀಡಾ ಪಟುಗಳಾದ ಜಗದೀಶ್, ಶ್ರೀನಿವಾಸ್, ಕೃಷ್ಣ ಮತ್ತು ಇತರೆ ತಂಡದ ಸದಸ್ಯರು ಉಪಸ್ಥಿತರಿದ್ದರು.