ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gubbi News: ಹಾಗಲವಾಡಿ ಕೆರೆಗೆ ಈ ವರ್ಷವೇ ನೀರು ಹರಿಸಲು ಕ್ರಮ ಕೈಗೊಳ್ಳಿ : ಶಾಸಕ ಎಸ್.ಆರ್.ಶ್ರೀನಿವಾಸ್ ಸೂಚನೆ

ರಸಗೊಬ್ಬರ ಕೊರತೆ ಬಾರದಂತೆ ಕೃಷಿ ಅಧಿಕಾರಿಗಳು ನಿಗಾ ವಹಿಸಬೇಕು. ಖಾಸಗಿ ಅಂಗಡಿಗಳು ಕಾಳ ಸಂತೆ ಮಾರಾಟ ಮಾಡಿದಂತೆ ಕ್ರಮ ಕೈಗೊಳ್ಳಬೇಕು. ಮಳೆಗಾಲದ ಈ ಸಮಯ ಕೃಷಿ ಇಲಾಖೆಯ ಕೆಲಸ ಹೆಚ್ಚು. ಬಿತ್ತನೆ ಬೀಜ, ಗೊಬ್ಬರ ಇನ್ನಿತರ ಪರಿಕರಗಳ ಕೊರತೆ ಬಾರದಂತೆ ನಿಗಾ ವಹಿಸಿ ಎಂದು ಸೂಚಿಸಿದ ಶಾಸಕರು ಶಿಕ್ಷಣ ಇಲಾಖೆ ಕೂಡಲೇ ಹಳೆಯ ಶಾಲಾ ಕಟ್ಟಡಗಳು, ಶಿಥಿಲಾವಸ್ಥೆಯ ಕೊಠಡಿಗಳು ಕೆಡವಿ ನಿವೇಶನ ಮಾಡಲು ಪಟ್ಟಿ ತಯಾರಿಸಬೇಕು

ಹಾಗಲವಾಡಿ ಕೆರೆಗೆ ಈ ವರ್ಷವೇ ನೀರು ಹರಿಸಲು ಕ್ರಮ ಕೈಗೊಳ್ಳಿ

Ashok Nayak Ashok Nayak Aug 7, 2025 1:08 PM

ಗುಬ್ಬಿ: ಹಾಗಲವಾಡಿ ಕೆರೆಗೆ ನೀರು ಪೂರೈಕೆಗೆ ಈಗಾಗಲೇ ಎಲ್ಲಾ ತಾಂತ್ರಿಕ ಸಮಸ್ಯೆ ಬಗೆಹರಿಸ ಲಾಗಿದೆ. ಕೊನೆಯ 6 ಕಿಮೀ ದೂರದ ಕಾಮಗಾರಿಗೆ ಕೆಲ ರೈತರಿಂದ ತೊಡಕಾದ ಹಿನ್ನಲೆ ನಾನೇ ಖುದ್ದು ರೈತರೊಟ್ಟಿಗೆ ಚರ್ಚಿಸುತ್ತೇನೆ. ಹೇಮಾವತಿ ಅಧಿಕಾರಿಗಳು ವಿಳಂಬ ಮಾಡದೆ ಈ ವರ್ಷ ದಲ್ಲೇ ಕೆರೆಗೆ ನೀರು ಹರಿಸಲು ಶ್ರಮ ಪಡುವಂತೆ ಶಾಸಕ ಎಸ್.ಆರ್ ಶ್ರೀನಿವಾಸ್ ಸೂಚನೆ ನೀಡಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ತ್ರೈಮಾಸಿಕ ಸಭೆಯಲ್ಲಿ ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು ಹೇಮಾವತಿ ನೀರು ಹರಿಸುವ ಮಹತ್ವದ ಯೋಜನೆಗಳಾದ ಹಾಗಲವಾಡಿ, ಮಠದಹಳ್ಳ ಕೆರೆ ಹಾಗೂ ಬಿಕ್ಕೆಗುಡ್ಡ ಕೆರೆ ಯೋಜನೆ ಈಗಾಗಲೇ ವಿಳಂಬ ಆಗಿತ್ತು. ಈ ನಿಟ್ಟಿನಲ್ಲಿ ಈ ವರ್ಷದಲ್ಲಿ ಮೂರು ಯೋಜನೆ ಅನುಷ್ಠಾನ ಗೊಳ್ಳಲಿದೆ ಎಂದರು.

ಇದನ್ನೂ ಓದಿ: Roopa Gururaj Column: ಬೇಟೆಗಾರನ ಅಚಲ ವಿಶ್ವಾಸಕ್ಕೆ ಒಲಿದ ಶ್ರೀ ಕೃಷ್ಣ

16 ಕಿಮೀ ದೂರದ ನಾಲೆ ಕೆಲಸಕ್ಕೆ ಕೊನೆಯ 6 ಕಿಮೀ ಮಾತ್ರ ಬಾಕಿ ಇದೆ. ಉಳಿದ 10 ಕಿಮೀ ಈಗಾಗಲೇ ಕೆಲಸ ಸಂಪೂರ್ಣಗೊಂಡಿದೆ. ಈ ಜೊತೆಗೆ ಉಪ ಮುಖ್ಯಮಂತ್ರಿ ಅವರಿಂದ ಚಾಲನೆ ಗೊಂಡ ಮಠದಹಳ್ಳ ಕೆರೆ ಯೋಜನೆಯ ಪೈಪ್ ಗಳ ಪರಿಶೀಲನೆ ನಡೆದಾಗಿದೆ. ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದ ಅವರು ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕಾದ ಅಬಕಾರಿ ಇಲಾಖೆ ಜಾಣ ಕುರುಡುತನ ತೋರುತ್ತಿದೆ. ಎಲ್ಲೆಲ್ಲಿ ಅಕ್ರಮ ಮದ್ಯ ಮಾರಾಟ, ಸಾಗಣೆ, ಯಾರಿಂದ ಯಾರಿಗೆ ಎಲ್ಲವೂ ತಿಳಿದಿದ್ದು ಅಧಿಕಾರಿಗಳು ಮಾರಾಟದ ಗುರಿ ಮುಟ್ಟಿಸುವ ಕೆಲಸ ಮಾಡಬೇಕಿದೆ ಎಂದು ಇಲಾಖೆಯ ಅಸಹಾಯಕತೆ ಎತ್ತಿ ಹಿಡಿದರು.

ರಸಗೊಬ್ಬರ ಕೊರತೆ ಬಾರದಂತೆ ಕೃಷಿ ಅಧಿಕಾರಿಗಳು ನಿಗಾ ವಹಿಸಬೇಕು. ಖಾಸಗಿ ಅಂಗಡಿಗಳು ಕಾಳ ಸಂತೆ ಮಾರಾಟ ಮಾಡಿದಂತೆ ಕ್ರಮ ಕೈಗೊಳ್ಳಬೇಕು. ಮಳೆಗಾಲದ ಈ ಸಮಯ ಕೃಷಿ ಇಲಾಖೆಯ ಕೆಲಸ ಹೆಚ್ಚು. ಬಿತ್ತನೆ ಬೀಜ, ಗೊಬ್ಬರ ಇನ್ನಿತರ ಪರಿಕರಗಳ ಕೊರತೆ ಬಾರದಂತೆ ನಿಗಾ ವಹಿಸಿ ಎಂದು ಸೂಚಿಸಿದ ಶಾಸಕರು ಶಿಕ್ಷಣ ಇಲಾಖೆ ಕೂಡಲೇ ಹಳೆಯ ಶಾಲಾ ಕಟ್ಟಡಗಳು, ಶಿಥಿಲಾ ವಸ್ಥೆಯ ಕೊಠಡಿಗಳು ಕೆಡವಿ ನಿವೇಶನ ಮಾಡಲು ಪಟ್ಟಿ ತಯಾರಿಸಬೇಕು. ತಡವಾದರೆ ಮಳೆಗೆ ಅನಾಹುತ ಜರುಗಲಿದೆ ಎಂದು ಎಚ್ಚರಿಕೆ ನೀಡಿದರು.

ಗುಬ್ಬಿ ಸರ್ಕಾರಿ ಆಸ್ಪತ್ರೆಗೆ ಎಚ್ ಎಎಲ್ ಘಟಕದಿಂದ ಡಯಾಲಿಸಿಸ್ ಯೂನಿಟ್ ಸಿಗಲಿದೆ. ಡಾಕ್ಟರ್ ಇದರ ಸದುಪಯೋಗ ಮಾಡಿ ರೋಗಿಗಳಿಗೆ ಚಿಕಿತ್ಸೆ ನೀಡಬೇಕು. ಈ ಜೊತೆಗೆ ನಾಯಿ ಕಡಿತ, ಹಾವು ಕಡಿತದ ಔಷಧಿ ಸದಾಕಾಲ ದಾಸ್ತಾನು ಇರಿಸಬೇಕು ಎಂದು ಸಲಹೆ ನೀಡಿ, ಕಾರ್ಮಿಕ ಇಲಾಖೆ ನೀಡಿದ ಕೂಲಿ ಕಾರ್ಮಿಕರ ಕಾರ್ಡ್ ಬಹುತೇಕ ಅನರ್ಹರಿಗೆ ದೊರಕಿದೆ. ಈ ಫೇಕ್ ಕಾರ್ಡ್ ಸ್ಥಳ ಮಹಜರು ಮಾಡಿ ರದ್ದು ಮಾಡುವಂತೆ ಕಾರ್ಮಿಕ ನಿರೀಕ್ಷಕರಿಗೆ ಸೂಚನೆ ನೀಡಿದರು. ಅರಣ್ಯ ಇಲಾಖೆ ರಸ್ತೆ ಬದಿ ಗಿಡ ನೆಟ್ಟು ಪೋಷಿಸುವ ದಾಖಲೆ ಪೇಪರ್ ನಲ್ಲಿದೆ. ವಾಸ್ತವದಲ್ಲಿ ಗಿಡಗಳು ಇಲ್ಲ. ಇದ್ದರೂ ವಿದ್ಯುತ್ ಕಂಬಗಳು ಕೆಳಗೆ ಹಾಕಿ ಮರ ಕಡಿಯುವಂತಿಲ್ಲ, ತಂತಿ ಬದಲಿಸುವಂತಿಲ್ಲ. ಈ ರೀತಿ ಸಮಸ್ಯೆಗಳೇ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮೀನುಗಾರಿಕೆ, ಪಶು ಸಂಗೋಪನಾ ಇಲಾಖೆ ಹೀಗೆ ಎಲ್ಲಾ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದರು.

ಸಭೆಯಲ್ಲಿ ತಾಪಂ ಆಡಳಿತಾಧಿಕಾರಿ ಬಿ.ಎಲ್.ಕೃಷ್ಣಪ್ಪ, ತಾಪಂ ಇಓ ಶಿವಪ್ರಕಾಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವೆಂಕಟೇಶ್ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿ ಗಳು ಇತರರು ಇದ್ದರು.