Rajendra Bhat Column: ಕ್ರಾಂತಿಯ ಕಿಡಿ ನೇತಾಜಿ ಸುಭಾಸ್ ಚಂದ್ರ ಬೋಸ್

Rajendra Bhat Column: ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಜನ್ಮಜಯಂತಿ ಇಂದು. ಕಳೆದ ಹಲವು ವರ್ಷಗಳಿಂದ ನೇತಾಜಿ ಅವರ ಜನ್ಮದಿನವನ್ನು ( ಜನವರಿ 23) ಪರಾಕ್ರಮ ದಿನವಾಗಿ ಆಚರಿಸಲಾಗುತ್ತಿದೆ. ಇದು ನಿಜವಾಗಿಯೂ ಅತ್ಯಂತ ಸೂಕ್ತವಾದ ನಿರ್ಧಾರ.

Subhas Chandra Bose
Profile Ramesh B Jan 23, 2025 10:56 AM

-ರಾಜೇಂದ್ರ ಭಟ್ ಕೆ.

Rajendra Bhat Column: ನೇತಾಜಿ ಸುಭಾಸ್ ಚಂದ್ರ ಬೋಸ್ (Subhas Chandra Bose) ಅವರ ಜನ್ಮಜಯಂತಿಯ 128ನೆಯ ವರ್ಧಂತಿಗೆ ಇಡೀ ದೇಶವು ಸಜ್ಜುಗೊಂಡಿದೆ. ಕಳೆದ ಹಲವು ವರ್ಷಗಳಿಂದ ನೇತಾಜಿ ಅವರ ಜನ್ಮದಿನವನ್ನು (ಜ. 23) ಪ್ರತೀ ವರ್ಷವೂ ಪರಾಕ್ರಮ ದಿನವಾಗಿ ಆಚರಿಸಲು ಕೇಂದ್ರ ಸರ್ಕಾರವು ನಿರ್ಧರಿಸಿತ್ತು. ಇದು ನಿಜವಾಗಿಯೂ ಅತ್ಯಂತ ಸೂಕ್ತವಾದ ನಿರ್ಧಾರವಾಗಿತ್ತು.

ನೇತಾಜಿ ಸುಭಾಸರನ್ನು ದೇಶ ಮರೆಯಬಾರದು

ನೇತಾಜಿ ಅವರನ್ನು ಇಂದಿನ ತಲೆಮಾರಿನ ಜನರು ನಿರಂತರವಾಗಿ ನೆನಪು ಮಾಡಿಕೊಳ್ಳಬೇಕಾದ ಅಗತ್ಯ ಇದೆ. 2004ರಲ್ಲಿ ಶಾಮ್ ಬೆನೆಗಲ್ ನಿರ್ದೇಶನ ಮಾಡಿದ ಶ್ರೇಷ್ಠವಾದ ಸಿನೆಮಾ 'ನೇತಾಜಿ ಸುಭಾಸ್ ಚಂದ್ರ ಬೋಸ್ - ದ ಫಾರ್ಗೊಟನ್ ಹೀರೋ' ನೋಡಿ ನಾನು ಧಾರೆಯಾಗಿ ಕಣ್ಣೀರು ಸುರಿಸಿದ್ದೆ. ಅವರು ಬದುಕಿದ ರೀತಿಯೇ ಹಾಗಿತ್ತು! ಸಾವನ್ನು ಎದುರಿಸುವ ಧೈರ್ಯವು ಅವರಿಗೆ ರಕ್ತಗತವಾಗಿ ಬಂದಿತ್ತು.

ಐಸಿಎಸ್ ಹುದ್ದೆಯನ್ನು ತೊರೆದು ಭಾರತಕ್ಕೆ ಬಂದರು.

ಕಟಕ ನಗರದ ಅತ್ಯಂತ ಶ್ರೀಮಂತ ವಕೀಲನ ಮಗನಾಗಿ ಜನಿಸಿದ (1897ರ ಜನವರಿ 23) ಸುಭಾಷರು ತನ್ನ ಹೆತ್ತವರ ಆಸೆಯಂತೆ ಲಂಡನ್ನಿಗೆ ಹೋಗಿ ಕೇಂಬ್ರಿಜ್ ವಿವಿಯಲ್ಲಿ ನಾಲ್ಕನೇ ರಾಂಕ್ ಪಡೆದು ಐಸಿಎಸ್ ಪರೀಕ್ಷೆಯನ್ನು ಪಾಸ್ ಆಗಿದ್ದರು! ಅವರ ಪದವಿಗೆ ಅನುಗುಣವಾಗಿ ಬ್ರಿಟಿಷ್ ಸರಕಾರವು ಅವರಿಗೆ ಅತ್ಯಂತ ದೊಡ್ಡ ಹುದ್ದೆಯ ಆಫರ್ ನೀಡಿತ್ತು. ಆದರೆ ಆಗಲೇ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹರಡಿತ್ತು. ಭಾರತವು ಅವರನ್ನು ಕೈ ಬೀಸಿ ಕರೆದಾಗ ಅವರು ಐಸಿಎಸ್ ಪದವಿಯನ್ನು ತ್ಯಜಿಸಿ ಭಾರತಕ್ಕೆ ಬಂದರು.

ಬಾಲ್ಯದಲ್ಲಿ ಅವರ ಮೇಲೆ ವಿವೇಕಾನಂದರ ದಟ್ಟ ಪ್ರಭಾವ ಆಗಿತ್ತು. ರಾಷ್ಟ್ರಪ್ರೇಮದ ಬೆಂಕಿಯು ಮೊದಲೇ ಅವರ ಒಳಗಿತ್ತು. ಭಾರತಕ್ಕೆ ಬಂದಾಗ ಅವರ ಮೇಲೆ ಆರಂಭದಲ್ಲಿ ಮಹಾತ್ಮ ಗಾಂಧೀಜಿಯವರ ಪ್ರಭಾವವು ಆಗಿತ್ತು. ಆದರೆ ಮುಂದೆ ಕಲ್ಕತ್ತಾದಲ್ಲಿ ಸ್ವರಾಜ್ ಎಂಬ ಪತ್ರಿಕೆಗೆ ಅವರು ಅಗ್ರ ಲೇಖನಗಳನ್ನು ಬರೆಯಲು ತೊಡಗಿದಾಗ ಮಹಾನ್ ಕ್ರಾಂತಿಕಾರಿ ಚಿತ್ತರಂಜನ ದಾಸ್ ಅವರ ಪರಿಚಯವು ಆಯಿತು. ಅದು ಅವರ ಜೀವನದ ಮೇಜರ್ ಟರ್ನಿಂಗ್ ಪಾಯಿಂಟ್ ಆಯಿತು.
ಅಲ್ಲಿಂದ ಮುಂದೆ ಅವರು ಮಹಾನ್ ಕ್ರಾಂತಿಕಾರಿ ಆದರು.

ಅವರ ಮೇಲೆ ಗಾಂಧಿಜಿಯವರ ಪ್ರಭಾವವು ಕಡಿಮೆ ಆಯಿತು. ಅವರ ಬೆಂಕಿ ಉಗುಳುವ ಭಾಷಣಗಳು ಇನ್ನಷ್ಟು ಪ್ರಖರ ಆದವು. ʼ'ನನಗೆ ಗಾಂಧೀಜಿ ಮೇಲೆ ಗೌರವ ಇದೆ. ಆದರೆ ತಕಲಿಯನ್ನು ನೂಲುವುದರಿಂದ, ಉಪವಾಸ ಕೂರುವುದರಿಂದ ಭಾರತಕ್ಕೆ ಸ್ವಾತಂತ್ರ್ಯವು ಖಂಡಿತವಾಗಿ ದೊರೆಯಲು ಸಾಧ್ಯವೇ ಇಲ್ಲ. ಸ್ವಾತಂತ್ರ್ಯವು ಭಿಕ್ಷೆ ಅಲ್ಲ! ಅದಕ್ಕೆ ಅಪ್ರತಿಮ ತ್ಯಾಗ ಮತ್ತು ಹೋರಾಟದ ಅಗತ್ಯ ಇದೆʼʼ ಎಂದು ಅವರು ಭಾಷಣ ಮಾಡುತ್ತಿದ್ದರು.

ಕೋಲ್ಕತಾದಲ್ಲಿ ಸರಣಿ ಕ್ರಾಂತಿಕಾರಿ ಚಟುವಟಿಕೆ, ರಾಲಿಗಳು, ಅಸಹಕಾರ ಚಳುವಳಿಗಳು ನಿರಂತರ ನಡೆದಾಗ ಬ್ರಿಟಿಷ್ ಸರಕಾರ ಅವರನ್ನು ಬಂಧಿಸಿ ಸೆರೆಮನೆಗೆ ತಳ್ಳಿತು. ಆಗಲೂ ಗಾಂಧೀಜಿಯವರು ಸುಭಾಸ್ ಬೋಸ್ ಅವರನ್ನು ಕರೆದು ಪ್ರೀತಿಯಿಂದ ಮಾತಾಡಿಸಿದರು.

ಆಗ ಕೂಡಾ ಬೋಸರು ಹೇಳಿದ್ದು - ʼʼಮಹಾತ್ಮ, ನಿಮ್ಮ ದಾರಿ ನಿಮಗೆ. ನನ್ನ ದಾರಿ ನನಗೆ. ನನಗೆ ನಿಮ್ಮ ಬಗ್ಗೆ ಗೌರವವಿದೆ. ನಮ್ಮಿಬ್ಬರ ಗುರಿಯೂ ಒಂದೇ. ಆದರೆ ದಾರಿ ಬೇರೆ ಬೇರೆ!ʼʼ. ಮುಂದೆ ಸುಭಾಸರು ಕೋಲ್ಕತಾ ನಗರದ ಮೇಯರ್ ಆಗಿ ಆಯ್ಕೆ ಆದರು. 1923ರಲ್ಲಿ ಅಖಿಲ ಭಾರತ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ಕೂಡ ಆಯ್ಕೆಆದರು. ಆಗೆಲ್ಲವೂ ಸುಭಾಷರನ್ನು ಬ್ರಿಟಿಷ್ ಸರಕಾರವು ಬಂಧಿಸಿ ಮತ್ತೆ ಮತ್ತೆ ಸೆರೆಮನೆಗೆ ಹಾಕುತ್ತಿತ್ತು. ಒಮ್ಮೆ ಕ್ಷಯ ರೋಗ ಉಲ್ಬಣಿಸಿ ಬದುಕಿದ್ದೆ ಒಂದು ಪವಾಡ!

ಮುಸೊಲಿನಿ ಕರಗಿದರು ನೇತಾಜಿ ವ್ಯಕ್ತಿತ್ವಕ್ಕೆ

1930ರಲ್ಲಿ ಯುರೋಪ್ ಖಂಡದ ಪ್ರವಾಸವನ್ನು ಮಾಡಿ ಅಲ್ಲಿನ ಭಾರತೀಯರನ್ನು ಸಂಘಟನೆ ಮಾಡಿ ಬಂದರು. ಅದೇ ಸಂದರ್ಭದಲ್ಲಿ ವರ್ಚಸ್ವೀ ನಾಯಕ ಮುಸೊಲಿನಿಯ ಭೇಟಿ ಮಾಡಿದರು. ಸುಭಾಸರ ವರ್ಚಸ್ವಿ ವ್ಯಕ್ತಿತ್ವ ಮತ್ತು ನೇರಾನೇರವಾದ ಮಾತುಗಳು ಅವರಿಗೆ ಯುರೋಪನಲ್ಲಿ ಭಾರೀ ಹೆಸರು, ಕೀರ್ತಿ ಮತ್ತು ಜನಪ್ರಿಯತೆಯನ್ನು ತಂದುಕೊಟ್ಟವು.

ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷನಾಗಿ ಆಯ್ಕೆ

1938ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಅವರು ಆಯ್ಕೆಯಾದರು. ಆಗ ಅವರಿಗೆ ಕೇವಲ 41 ವರ್ಷ ಪ್ರಾಯ ಆಗಿತ್ತು! ಆಗ ಅವರು ತುರುಸಿನ ಚುನಾವಣೆಯಲ್ಲಿ ಸೋಲಿಸಿದ್ದು ಗಾಂಧೀಜಿಯವರ ಕಟ್ಟಾ ಅನುಯಾಯಿಯಾದ ಪಟ್ಟಾಭಿ ಸೀತಾರಾಮಯ್ಯ ಅವರನ್ನು! ಅಂದು ಬೋಸರು ಮಾಡಿದ ಚಾರಿತ್ರಿಕ ಭಾಷಣವು ಹೀಗಿತ್ತು.

ʼ'ನನ್ನ ಭಾರತಕ್ಕೆ ಸ್ವಾತಂತ್ರ್ಯವು ಕ್ರಾಂತಿ ಮತ್ತು ಸಂಘರ್ಷದ ಮೂಲಕವೇ ಬರುತ್ತದೆ. ಅದನ್ನು ಯಾವ ಪ್ರಬಲ ಶಕ್ತಿಯೂ ತಡೆಯಲು ಸಾಧ್ಯವೇ ಇಲ್ಲ. ಆದರೆ ನಮ್ಮಲ್ಲಿ ಈಗಲೇ ತುಷ್ಟೀಕರಣ ನೀತಿಯು ನುಸುಳಲು ಆರಂಭ ಆಗಿದೆ. ಮುಂದೆ ಭಾರತವು ಸ್ವಾತಂತ್ರ್ಯ ಪಡೆಯುವಾಗ ವಿಭಜನೆ ಆಗುವ ಸಾಧ್ಯತೆ ಇದೆ!'ʼ ಎಂದಿದ್ದರು.

ಮುಂದೆ ಅವರ ಮಾತು ಎಷ್ಟೊಂದು ನಿಜ ಆಯ್ತು ನೋಡಿ! ರಾಷ್ಟ್ರೀಯ ಅಧ್ಯಕ್ಷರಾದರೂ ಅವರಿಗೆ ಆಂತರಿಕ ಕಿರುಕುಳ ತಪ್ಪಲಿಲ್ಲ. ಅದರಿಂದ ತುಂಬಾ ನೊಂದುಕೊಂಡ ಬೋಸರು ತಮ್ಮ ಕಾಂಗ್ರೆಸ್ ಪಕ್ಷದ ಅಧ್ಯಕ್ಷನ ಹುದ್ದೆಗೆ ರಾಜೀನಾಮೆ ನೀಡಿ ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ಎಂಬ ಪಕ್ಷ ಕಟ್ಟಿದರು. ಬಂಗಾಳದ ಮೂಲೆ ಮೂಲೆಯಲ್ಲಿ ಬಿಸಿ ರಕ್ತದ ಯುವಕ ಯುವತಿಯರನ್ನು ದೊಡ್ಡ ಮಟ್ಟದಲ್ಲಿ ಸಂಘಟನೆ ಮಾಡಿ ಹೋರಾಟಕ್ಕೆ ಸಜ್ಜುಗೊಳಿಸಿದರು.

ಬ್ರಿಟಿಷ್ ಸರ್ಕಾರವು ಈ ಬಾರಿ ಅವರನ್ನು ಗೃಹ ಬಂಧನ ಮಾಡಿತು. ಆದರೆ ಸಿಂಹವನ್ನು ಗುಹೆಯಲ್ಲಿ ಬಂಧಿಸಿ ಇಡಲು ಸಾಧ್ಯವೇ ಇರಲಿಲ್ಲ! 1941ರಲ್ಲಿ ಅವರು ತನ್ನ ವೇಷವನ್ನು ಮರೆಸಿಕೊಂಡು ಮನೆಯಿಂದ ಹೊರಬಂದರು. ರಶಿಯಾ ಮೂಲಕ ಜರ್ಮನಿಗೆ ಬಂದು ತಲುಪಿದರು. ಹಿಟ್ಲರನನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಹಿಟ್ಲರ್ ಕೂಡ ಸುಭಾಸರ ವ್ಯಕ್ತಿತ್ವಕ್ಕೆ ಮಾರು ಹೋದರು.

ಆಂಗ್ಲರ ವಿರುದ್ಧ ಬೋಸರು ಬೃಹತ್ ಸೇನೆಯನ್ನೇ ಕಟ್ಟಿದರು!

ಬ್ರಿಟಿಷ್ ವಿರೋಧಿಗಳನ್ನು ಒಗ್ಗೂಡಿಸುವ ಅವರ ಪ್ರಯತ್ನಕ್ಕೆ ಭಾರೀ ಬೆಂಬಲವು ದೊರೆಯಿತು. ಜರ್ಮನಿಯ ಬರ್ಲಿನನಲ್ಲಿ 4,500 ದೇಶಭಕ್ತ ಸೈನಿಕರ ಬಹಳ ದೊಡ್ಡದಾದ ಪಡೆಯನ್ನು ಕಟ್ಟಲು ಅವರಿಗೆ ಸಾಧ್ಯವಾಯಿತು. ಮುಂದೆ ಸುಭಾಸರು ಸಿಂಗಾಪುರ್, ಬರ್ಮಾ, ಜಪಾನ್ ದೇಶಗಳನ್ನು ತಿರುಗಿದರು. ಅಲ್ಲೆಲ್ಲ ಅವರು ಮಾಡಿದ ಐತಿಹಾಸಿಕ ಭಾಷಣದ ಕೊನೆಯ ವಾಕ್ಯ ಹೀಗಿರುತ್ತಿತ್ತು - ʼʼನನಗೆ ನಿಮ್ಮ ರಕ್ತ ಕೊಡಿ. ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ!ʼʼ.

'ಜೈ ಹಿಂದ್' ಎಂದು ಸಿಂಹನಾದವನ್ನು ಮಾಡಿದ್ದು, ಜಪಾನ್ ಸರಕಾರವನ್ನು ಬೆಂಬಲಕ್ಕೆ ಆಗ್ರಹಿಸಿದ್ದು, ಜಪಾನ್ ದೇಶದಲ್ಲಿ 40,000 ಬಲಿಷ್ಟ ಸೈನಿಕರ ಇಂಡಿಯನ್ ನ್ಯಾಷನಲ್ ಆರ್ಮಿ ಎಂಬ ಮಹಾಸೈನ್ಯವನ್ನು ಕಟ್ಟಿ ಅವರಿಗೆ ಶಸ್ತ್ರಾಸ್ತ್ರಗಳ ತರಬೇತಿಯನ್ನು ಕೊಟ್ಟದ್ದು, ಚಲೋ ದಿಲ್ಲಿ ಎಂಬ ಮಹಾ ಘೋಷಣೆಯನ್ನು ಕೂಗಿದ್ದು.......ಹೀಗೆ ಹತ್ತು ಹಲವು ರೀತಿ ಸುಭಾಸಚಂದ್ರ ಬೋಸರು ವಿದೇಶದ ನೆಲದಲ್ಲಿ ಕುಳಿತು ಬ್ರಿಟಿಷರನ್ನು ಮಣಿಸುವ ಎಲ್ಲಾ ಪ್ರಯತ್ನವನ್ನು ಮಾಡಿದರು.

1943ರ ಅಕ್ಟೋಬರ್ 21ರಂದು ಸಿಂಗಾಪುರದಲ್ಲಿ ಅವರು 'ಸ್ವತಂತ್ರ ಭಾರತದ ಪ್ರಾವಿಷನಲ್ ಸರ್ಕಾರವನ್ನು' ಭಾರೀ ಧೈರ್ಯವಾಗಿ ರಚಿಸಿಯೆ ಬಿಟ್ಟರು! ಈ ಭಾರತ ಸರ್ಕಾರದ ಪ್ರಸ್ತಾವನೆಗೆ ಅತ್ಯಂತ ಬಲಿಷ್ಟ ರಾಷ್ಟ್ರಗಳಾದ ಜರ್ಮನಿ, ಇಟೆಲಿ, ಜಪಾನ್ ಮತ್ತು ಮಯನ್ಮಾರಗಳು ಮಾನ್ಯತೆ ಕೂಡ ಕೊಟ್ಟವು!

ಅಲ್ಲಿಗೆ ಭಾರತದ ಕಂಪನಿ ಸರ್ಕಾರವು ನಡುಗಲು ಆರಂಭ ಆಗಿತ್ತು! ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಲು ಇದು ಕೂಡ ಮುಖ್ಯ ಕಾರಣ ಎಂದು ಬ್ರಿಟಿಷ್ ಪ್ರಧಾನಿಯವರು ಮುಂದೆ ಒಪ್ಪಿಕೊಂಡಿದ್ದಾರೆ! ಆಗ ಭಾರತದ ಯುವಕರಲ್ಲಿ ಯಾವ ರೀತಿ ಬೋಸರ ಕ್ರೇಜ್ ಇತ್ತು ಅಂದರೆ ಭಾರತ ಸ್ವಾತಂತ್ರ್ಯ ಪಡೆಯುವುದು ಖಂಡಿತ, ಆಗ ನೇತಾಜಿ ಭಾರತದ ಮೊದಲ ಪ್ರಧಾನಿ ಆಗುತ್ತಾರೆ ಎಂದು ಅವರು ಗಾಢವಾಗಿ ನಂಬಿದ್ದರು! ಆದರೆ ಸ್ವಾತಂತ್ರ್ಯದ ಮೊದಲ ಕಿರಣಗಳನ್ನು ನೋಡುವ ಭಾಗ್ಯವು ಅವರಿಗೆ ಬರಲೇ ಇಲ್ಲ. ಅಥವಾ ಸುಭಾಸರನ್ನು ಉಳಿಸಿಕೊಳ್ಳುವ ಭಾಗ್ಯವು ನಮಗೆ ದೊರೆಯಲಿಲ್ಲ.

ಈ ಸುದ್ದಿಯನ್ನೂ ಓದಿ: Rajendra Bhat Column: ಅವರು ಬದುಕಿದ್ದರೆ ಈಗ ನೂರು ತುಂಬುತ್ತಿತ್ತು!

ಅಮರರಾದರು ನೇತಾಜಿ

1945ರ ಆಗಸ್ಟ್ 18ರಂದು ಭಾರತಕ್ಕೆ ಬರುತ್ತಿದ್ದ ವಿಮಾನವು ಅಪಘಾತದಲ್ಲಿ ಅವರು ನಿಧನರಾದರು ಎಂದು ಬಿಬಿಸಿಯು ವಾರ್ತೆ ನುಡಿಯಿತು. ಆದರೆ ಅದರ ದೇಹದ ಅವಶೇಷಗಳು ದೀರ್ಘ ಅವಧಿಗೆ ದೊರೆಯಲಿಲ್ಲ. ಅವರು ಸತ್ತಿಲ್ಲ, ಇನ್ನೂ ಬದುಕಿದ್ದಾರೆ ಎಂಬ ಊಹೆಗಳು, ಸುದ್ದಿಗಳು ಎಲ್ಲೆಡೆಯಿಂದಲೂ ಕೇಳಿಬಂದವು. ಆದರೆ ಮುಂದೆ ಬಂದ ಸ್ವತಂತ್ರ ಭಾರತದ ಮೊದಲ ಕೆಲವು ಸರಕಾರಗಳು ಈ ಬಗ್ಗೆ ತನಿಖೆಗೆ ಆಗ್ರಹವನ್ನು ಮಾಡಲಿಲ್ಲ. ಎಲ್ಲಕಿಂತ ಹೆಚ್ಚಾಗಿ ಇತಿಹಾಸದ ಪುಟಗಳಿಂದ ನೇತಾಜಿ ಹೆಸರನ್ನು ಅಳಿಸಿ ಹಾಕುವ ಎಲ್ಲಾ ಒಳಗಿನ ಪ್ರಯತ್ನಗಳೂ ನಡೆದವು. ಆದರೆ ನೇತಾಜಿಯವರ ಹೋರಾಟ, ಆಸೀಮ ತ್ಯಾಗ ಮತ್ತು ದಿಟ್ಟತನವನ್ನು ಭಾರತವು ಎಂದಿಗೂ ಮರೆಯಲಿಲ್ಲ! ದೇಶಪ್ರೇಮಿಗಳಿಗೆ ಅವರು ಇಂದಿಗೂ ರಿಯಲ್ ಹೀರೋ! ಜನವರಿ 23ರಂದು ಅವರ ಜನ್ಮದಿನ. ಭಾರತದಲ್ಲಿ ಪರಾಕ್ರಮ ದಿನ.

ಭಾರತ ಮಾತೆಯ ಶ್ರೇಷ್ಟವಾದ ವರಪುತ್ರನಿಗೆ ನಮ್ಮ ಕೋಟಿ ನಮನಗಳು.

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

urea
2:13 PM January 22, 2025

ಕೃಷಿ ಸಬ್ಸಿಡಿಗೆ ರೈತರು ಬಿಟ್ಟು ಉಳಿದವರೆಲ್ಲ ಫಲಾನುಭವಿಗಳು!

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು