#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

U19 Women's T20 World Cup; ವೈಷ್ಣವಿ ಶರ್ಮಾ ಹ್ಯಾಟ್ರಿಕ್‌ ಸಾಧನೆ; ಭಾರತಕ್ಕೆ 10 ವಿಕೆಟ್‌ ಜಯ

U19 Women's T20 World Cup: ಎ ಗುಂಪಿನಲ್ಲಿರುವ ಭಾರತ ಸದ್ಯ ಅಗ್ರಸ್ಥಾನದಲ್ಲಿದೆ. ಮುಂದಿನ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಆಡಲಿದೆ. ಈ ಪಂದ್ಯ ಜ.23 ರಂದು ನಡೆಯಲಿದೆ.

U19 Women's T20 World Cup: ವೈಷ್ಣವಿ ಶರ್ಮಾ ಹ್ಯಾಟ್ರಿಕ್‌ ಸಾಧನೆ; ಭಾರತಕ್ಕೆ 10 ವಿಕೆಟ್‌ ಜಯ

Profile Abhilash BC Jan 21, 2025 3:00 PM

ಕೌಲಾಲಂಪುರ: 19ರ ವಯೋಮಿತಿಯ ಮಹಿಳಾ ಟಿ20 ವಿಶ್ವಕಪ್‌ನಲ್ಲಿ(U19 Women's T20 World Cup) ಭಾರತ(India Women) ತಂಡದ ಗೆಲುವಿನ ಓಟ ಮುಂದುವರಿದಿದೆ. ಮಂಗಳವಾರ(ಜ.21) ನಡೆದ ಆತಿಥೇಯ ಮಲೇಷ್ಯಾ(Malaysia Women U19) ವಿರುದ್ಧದದ ಪಂದ್ಯದಲ್ಲಿ ಭರ್ಜರಿ 10 ವಿಕೆಟ್‌ ಅಂತರದ ಗೆಲುವು ಸಾಧಿಸಿದೆ. ಶ್ರೇಷ್ಠ ಬೌಲಿಂಗ್‌ ಪ್ರದರ್ಶನ ತೋರಿದ ಎಡಗೈ ಸ್ಪಿನ್ನರ್ ವೈಷ್ಣವಿ ಶರ್ಮಾ ತಮ್ಮ ಪದಾರ್ಪಣ ಪಂದ್ಯದಲ್ಲೇ ಹ್ಯಾಟ್ರಿಕ್ ಸಹಿತ ಒಟ್ಟು 5 ವಿಕೆಟ್‌ ಕಿತ್ತು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಇಲ್ಲಿನ ಬೇಯುಮಾಸ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಮಲೇಷ್ಯಾ 31 ರನ್‌ಗೆ ಆಲೌಟಾಯಿತು. ಈ ಮೊತ್ತವನ್ನು ಭಾರತ ಕೇವಲ 17 ಎಸೆತಗಳಲ್ಲಿ 32 ರನ್‌ ಬಾರಿಸಿ ಗೆಲುವು ದಾಖಲಿಸಿತು. ಚೇಸಿಂಗ್‌ ವೇಳೆ ಗೊಂಗಡಿ ತ್ರಿಷಾ(27) ಮತ್ತು ಜಿ ಕಮಲಿನಿ(4) ರನ್‌ ಬಾರಿಸಿದರು.



ವೈಷ್ಣವಿ 5 ವಿಕೆಟ್‌ ಸಾಧನೆ

ದೆಹಲಿಯ ಎಡಗೈ ಸ್ಪಿನ್ನರ್‌ ವೈಷ್ಣವಿ ಶರ್ಮಾ ಈ ಪಂದ್ಯದಲ್ಲಿ ತಮ್ಮ ಸ್ಪಿನ್‌ ಕೈಚಳಕ ತೋರುವ ಮೂಲಕ ಹ್ಯಾಟ್ರಿಕ್‌ ವಿಕೆಟ್‌ ಕಿತ್ತು ಮಿಂಚಿದರು. ಈ ಸಾಧನೆಗೈದ ವಿಶ್ವದ ಎರಡನೇ ಮತ್ತು ಭಾರತದ ಮೊದಲ ಬೌಲರ್‌ ಎನಿಸಿಕೊಂಡರು. ದಕ್ಷಿಣ ಆಫ್ರಿಕಾದ ಮ್ಯಾಡಿಸನ್ ಲ್ಯಾಂಡ್ಸ್‌ಮನ್ 2023ರ ಚೊಚ್ಚಲ ಆವೃತ್ತಿಯಲ್ಲಿ ಹ್ಯಾಟ್ರಿಕ್‌ ಸಹಿತ 4 ವಿಕೆಟ್‌ ಕಿತ್ತಿದ್ದರು. ಒಟ್ಟು 4 ಓವರ್‌ ಬೌಲಿಂಗ್‌ ನಡೆಸಿದ ವೈಷ್ಣವಿ ಒಂದು ಮೇಡನ್‌ ಸಹಿತ 5 ರನ್‌ಗೆ 5 ವಿಕೆಟ್‌ ಕಿತ್ತರು. ಅದು ಕೂಡ ಪದಾರ್ಪಣ ಪಂದ್ಯದಲ್ಲಿ ಎಂಬುದು ವಿಶೇಷ. ಸೋನಮ್ ಯಾದವ್ ಬದಲಿಗೆ ಅವರು ತಂಡದ ಆಡುವ ಬಳಗದಲ್ಲಿ ಅವಕಾಶ ಪಡೆದಿದ್ದರು. ಉಳಿದಂತೆ ಆಯುಷಿ ಶುಕ್ಲಾ 8 ರನ್‌ಗೆ 3 ವಿಕೆಟ್‌ ಕಿತ್ತರು.

ಇದನ್ನೂ ಓದಿ Champions Trophy: ಚಾಂಪಿಯನ್ಸ್ ಟ್ರೋಫಿ ಜೆರ್ಸಿಯಲ್ಲಿ ಪಾಕ್‌ ಹೆಸರು ನಿರಾಕರಿಸಿದ ಬಿಸಿಸಿಐ?

ಎ ಗುಂಪಿನಲ್ಲಿರುವ ಭಾರತ ಸದ್ಯ ಅಗ್ರಸ್ಥಾನದಲ್ಲಿದೆ. ಮುಂದಿನ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಆಡಲಿದೆ. ಈ ಪಂದ್ಯ ಜ.23 ರಂದು ನಡೆಯಲಿದೆ.