Viral News: ಮಹಾಕುಂಭ ಮೇಳಕ್ಕೆ ಹೋಗಲು ದರೋಡೆ ಮಾಡಿ ಪೊಲೀಸರ ಅತಿಥಿಯಾದ ಭೂಪ!
ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳಲು ವ್ಯಕ್ತಿಯೊಬ್ಬ ಮೂರು ಮನೆಗಳಿಂದ ಕಳ್ಳತನ ಮಾಡಿದ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ದೆಹಲಿ ಮೂಲದ ವ್ಯಕ್ತಿಯನ್ನ ಬಂಧಿಸಲಾಗಿದೆ. ಪೊಲೀಸರು ದರೋಡೆ ಸೆಲ್ ವಿಚಾರಣೆ ನಡೆಸಿದಾಗ, ಈತ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಪೊಲೀಸ್ ವಿಚಾರಣೆ ವೇಳೆ ಆರೋಪಿ ತಾನು ಮಹಾ ಕುಂಭದಲ್ಲಿ ಪಾಲ್ಗೊಳ್ಳುವ ತಮ್ಮ ಕನಸನ್ನು ನನಸಾಗಿಸಲು ಈ ನಿರ್ಧಾರವನ್ನು ತೆಗೆದುಕೊಂಡಿದ್ದೆ. ವಿಚಾರಣೆ ವೇಳೆ ಆರೋಪಿ ತಾನು ಮತ್ತು ಆತನ ಸ್ನೇಹಿತರು 45 ದಿನಗಳ ಮಹಾ ಕುಂಭದಲ್ಲಿ ಪಾಲ್ಗೊಳ್ಳಲು ಬಯಸಿದ್ದರು ಎಂದು ಬಹಿರಂಗಪಡಿಸಿದ್ದಾನೆ
ನವದೆಹಲಿ: ಮಹಾಕುಂಭ ಮೇಳ(Mahakumbh 2025)ದಲ್ಲಿ ಪಾಲ್ಗೊಳ್ಳಲು ವ್ಯಕ್ತಿಯೊಬ್ಬ ಮೂರು ಮನೆಗಳಿಂದ ಕಳ್ಳತನ ಮಾಡಿದ ಘಟನೆ (theft cases) ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ದೆಹಲಿ ಮೂಲದ ವ್ಯಕ್ತಿಯನ್ನ ಬಂಧಿಸಲಾಗಿದೆ. ಆರೋಪಿ ಯನ್ನು ಅರವಿಂದ್ ಅಲಿಯಾಸ್ ಭೋಲಾ ಎಂದು ಗುರುತಿಸಲಾಗಿದ್ದು, ದಬ್ರಿಯ ರಾಜ್‌ಪುರಿ ಪ್ರದೇಶದಲ್ಲಿ ಮೂರು ಮನೆಗಳಲ್ಲಿ ಆಭರಣ ಮತ್ತು ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದಕ್ಕಾಗಿ ವ್ಯಕ್ತಿಯನ್ನು ಬಂಧಿಸಲಾಗಿದೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ(Viral News) ಭಾರೀ ಸದ್ದು ಮಾಡುತ್ತಿದೆ.
ಈತ ತನ್ನ ಸ್ನೇಹಿತರೊಂದಿಗೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ತೆರಳಲು ಹಣ ಹೊಂದಿಸಲು ಕಳ್ಳತನ ಮಾಡಿದ್ದಾನೆ. ಪೊಲೀಸರು ಪೊಲೀಸರು ವಿಚಾರಣೆ ನಡೆಸಿದಾಗ, ಈತ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಪೊಲೀಸ್ ವಿಚಾರಣೆ ವೇಳೆ ಆರೋಪಿ ತಾನು ಮಹಾಕುಂಭದಲ್ಲಿ ಪಾಲ್ಗೊಳ್ಳುವ ತಮ್ಮ ಕನಸನ್ನು ನನಸಾಗಿಸಲು ಈ ನಿರ್ಧಾರವನ್ನು ತೆಗೆದುಕೊಂಡಿದ್ದೆ. ವಿಚಾರಣೆ ವೇಳೆ ಆರೋಪಿ ತಾನು ಮತ್ತು ಆತನ ಸ್ನೇಹಿತರು 45 ದಿನಗಳ ಮಹಾಕುಂಭದಲ್ಲಿ ಪಾಲ್ಗೊಳ್ಳಲು ಬಯಸಿದ್ದರು ಎಂದು ಬಹಿರಂಗಪಡಿಸಿದ್ದಾರೆ.
ಮನೆಯಲ್ಲಿ ಆರ್ಥಿಕ ತೊಂದರೆ ಇರುವುದರಿಂದ ತಂದೆ ಕೂಲಿ, ತಾಯಿ ಮನೆಗೆಲಸ ಮಾಡುತ್ತಿದ್ದು, ಏಳು ಜನ ಒಡಹುಟ್ಟಿದವರಿದ್ದು, ಕುಟುಂಬಕ್ಕೆ ಪ್ರಯಾಣ ವೆಚ್ಚ ಭರಿಸಲು ಕಷ್ಟವಾಗುತ್ತಿದೆ ಎಂದು ಭೋಲಾ ತಿಳಿಸಿದ್ದಾನೆ. ಪೊಲೀಸರ ಪ್ರಕಾರ, ಆತನ ವಿರುದ್ಧ 16 ಕಳ್ಳತನ ಮತ್ತು ದರೋಡೆ ಪ್ರಕರಣಗಳು ದಾಖಲಾಗಿ ದಾಖಲಾಗಿವೆ.
ಇದನ್ನು ಓದಿ: Viral News: ಕೆಲ್ಸ ಕೊಡಿಸೋ ನೆಪದಲ್ಲಿ ನಡೆಯುತ್ತಿದೆ ಭಾರೀ ವಂಚನೆ-ಯುವಕರೇ ಎಚ್ಚರ...ಎಚ್ಚರ!
ಮಾದಕ ವ್ಯಸನದ ಚಟಕ್ಕೆ ಬಿದ್ದಿದ್ದ ಅರವಿಂದ ದುಡ್ಡಿಗಾಗಿ ಕಳ್ಳತನಕ್ಕಿಳಿದ್ದ ಎನ್ನಲಾಗಿದೆ. ಪೊಲೀಸರು ಕದ್ದ ವಸ್ತುಗಳನ್ನು ಈಗಾಗಲೇ ವಶಪಡಿಸಿಕೊಂಡಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಸೌದಿ ಶೇಖ್ ಅವತಾರದಲ್ಲಿ ಮಹಾಕುಂಭ ಮೇಳಕ್ಕೆ ಬಂದ ಯೂಟ್ಯೂಬರ್
ಸದ್ಯ ಕುಂಭ ಮೇಳದಲ್ಲಿ ಐಐಟಿ ಬಾಬಾ , ಕೆಲ ನಾಗಾ ಸಾಧುಗಳು ಹಾಗೂ ಮೊನಾಲಿಸಾ ಸೇರಿದಂತೆ ಹಲವರು ವೈರಲ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದಾರೆ. ಇದೀಗ ಮಹಾ ಕುಂಭಮೇಳದಲ್ಲಿ ತಮಾಷೆಗಾಗಿ ದುಬೈ ಶೇಖ್‌ನಂತೆ ವೇಷ ಧರಿಸಿದ್ದ ಯೂಟ್ಯೂಬರ್ ಒಬ್ಬರನ್ನು ಸಾಧುಗಳು ಥಳಿಸಿದ್ದಾರೆ. ಸದ್ಯ ವಿಡಿಯೋ ವೈರಲ್ (Viral Video) ಆಗಿದೆ.
ರಾಜಸ್ಥಾನ ಮೂಲದ ಯೂಟ್ಯೂಬರ್ ಒಬ್ಬರು ಸೌದಿ ಶೇಖ್‌ನಂತೆ ವೇಷ ಧರಿಸಿ ತನ್ನನ್ನು ತಾನು ಶೇಖ್ ಪ್ರೇಮಾನಂದ ಎಂದು ಗುರುತಿಸಿಕೊಂಡಿದ್ದು, ಮಹಾ ಕುಂಭಮೇಳದಲ್ಲಿ ಸಾಧುಗಳ ಗುಂಪಿನಿಂದ ಥಳಿಸಲಾಗಿದೆ ಎಂದು ವರದಿಯಾಗಿದೆ. ಯೂಟ್ಯೂಬರ್ ಸೌದಿ ಶೇಖ್‌ನಂತೆ ವೇಷ ಧರಿಸಿ ಸಾಧುಗಳು ಇರುವ ಸ್ಥಳಕ್ಕೆ ತೆರಳಿದ್ದಾನೆ. ನಂತರ ಆತ ಸಾಧುಗಳ ಎದುರಿಆಗೆ ವಿಚಿತ್ರವಾಗಿ ನಡೆದುಕೊಂಡಿದ್ದಾನೆ. ಆತನ ಉಡುಗೆ ಮತ್ತು ನಡವಳಿಕೆಯಿಂದ ಸಾಧುಗಳು ಮನನೊಂದು ಆತನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಸಾಧುಗಳು ಹಲ್ಲೆ ಮಾಡಲು ಪ್ರಾರಂಭಿಸಿದಾಗ ಯೂಟ್ಯೂಬರ್‌ನ ಸಹಚರರು ತಾವು ತಮಾಷೆಗಾಗಿ ವಿಡಿಯೋ ಮಾಡುತ್ತಿದ್ದೇವೆ ಎಂದು ಸತ್ಯ ಹೇಳಿದ್ದಾರೆ.