Viral News: ಕೆಲ್ಸ ಕೊಡಿಸೋ ನೆಪದಲ್ಲಿ ನಡೆಯುತ್ತಿದೆ ಭಾರೀ ವಂಚನೆ-ಯುವಕರೇ ಎಚ್ಚರ...ಎಚ್ಚರ!

ಓದು ಮುಗಿದ ಬಳಿಕ ಒಂದೊಳ್ಳೆ ಕೆಲಸಕ್ಕೆ ಸೇರಿ ಕೈತುಂಬಾ ಸಂಬಳ ಪಡೆದುಕೊಳ್ಳಬೇಕೆಂಬುದು ಹಲವರ ಕನಸು. ಆದರೆ ಇಂತಹ ಯುವ ಸಮುದಾಯವನ್ನೇ ಗುರಿಯಾಗಿಸಿಕೊಂಡು ಅವರಿಗೆ ವಂಚಿಸುವ ಒಂದು ವರ್ಗ ಎಲ್ಲೆಲ್ಲೂ ಸಕ್ರಿಯವಾಗಿದೆ. ಅಂತಹ ಒಂದು ಸುದ್ದಿ ಇಲ್ಲಿದೆ...

ಕೆಲಸದ ಹುಡುಕಾಟದಲ್ಲಿರುವ ಯುವ ಸಮುದಾಯವನ್ನು ವಂಚಿಸುವವರಿದ್ದಾರೆ ಜೋಕೆ..!
Profile Sushmitha Jain Jan 20, 2025 1:18 PM

ನವದೆಹಲಿ: ಸಂದರ್ಶನಗಳನ್ನು (Interview) ಎದುರಿಸುವುದೆಂದರೆ ಅದೊಂದು ಮಹಾಯುದ‍್ಧವನ್ನು ಎದುರಿಸಿದಂತೆಯೇ ಸರಿ. ಸಂದರ್ಶಕರು ಕೇಳುವ ಪ್ರಶ್ನೆಗಳ ಬಾಣಗಳನ್ನು ಎದುರಿಸಿ ಅದಕ್ಕೆ ಉತ್ತರಗಳೆಂಬ ಪ್ರತ್ಯಸ್ತ್ರಗಳನ್ನು ಬಿಟ್ಟು ಕೆಲಸವೆಂಬ ವಿಜಯಲಕ್ಷ್ಮಿಯನ್ನು ಒಲಿಸಿಕೊಳ್ಳುವುದು ಸುಲಭದ ಮಾತಲ್ಲ! ಆದರೆ ಇಲ್ಲೊಬ್ಬ ಹೊಸದಾಗಿ ಪದವಿ ಮುಗಿಸಿದ ಅಭ್ಯರ್ಥಿ ತಾನು ಸಾಫ್ಟ್‌ವೇರ್‌ ಎಂಜಿನಿಯರ್ (Software Engineer) ಪೋಸ್ಟ್‌ಗಾಗಿ ಎದುರಿಸಿದ ‘ಭಯಾನಕ ಸಂದರ್ಶನದ’ ಅನುಭವವನ್ನು ಬಿಚ್ಚಿಟ್ಟಿದ್ದುಇದೀಗ ಈ ಸುದ್ದಿ ಸೋಷಿಯಲ್ ಮೀಡಿಯಾ (Social media) ದಲ್ಲಿ ಸಿಕ್ಕಾಪಟ್ಟೆ ವೈರಲ್ (Viral News) ಆಗಿದೆ.

ಯಾವುದೇ ಪದವಿ ಮುಗಿಸಿ ಕೆಲಸಕ್ಕಾಗಿ ಪ್ರಯತ್ನಿಸುತ್ತಿರುವ ಯುವಕರಿಗೆ ಸಹಕಾರಿಯಾಗಲೆಂದು ಈ ವ್ಯಕ್ತಿ ತನ್ನ ಸಂದರ್ಶನದ ಭೀಕರ ಅನುಭವಗಳನ್ನು ಬಹಿರಂಗಗೊಳಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಮತ್ತು ಕೆಲಸದ ನೆಪದಲ್ಲಿ ಅಭ್ಯರ್ಥಿಗಳು ತಮ್ಮ ಮೋಸದ ಬಲೆಗೆ ಬೀಳಿಸಿಕೊಳ್ಳುವ ವಂಚಕರ ಬಗ್ಗೆಯೂ ಎಚ್ಚರಿಕೆಯಿಂದರಬೇಕೆಂಬ ಕಾರಣಕ್ಕೆ ಈ ಅನುಭವವನ್ನು ಹಂಚಿಕೊಳ್ಳುತ್ತಿರುವುದಾಗಿ ಆತ ಹೇಳಿಕೊಂಡಿದ್ದಾನೆ.

ನಡೆದಿದ್ದೇನು?

‘ನಾನು ಪದವಿ ಮುಗಿಸಿದ್ದ ಸಂದರ್ಭದಲ್ಲಿ ದೆಹಲಿಯಲ್ಲಿ ನಾನು ಎದುರಿಸಿದ ಸಂದರ್ಶನವೊಂದು ನನ್ನ ಪಾಲಿಗೆ ಭಯಾನಕವಾಗಿತ್ತು, ಆಗ ತಾನೆ ನಾನು ಪದವಿ ಮುಗಿಸಿ ಕೆಲಸದ ಹುಡುಕಾಟದಲ್ಲಿದ್ದೆ. ಆ ಸಂದರ್ಭದಲ್ಲಿ ನನಗೆ ಕನ್ ಸಲ್ಟೆನ್ಸಿಯೊಂದರಿಂದ ಸಂದರ್ಶನಕ್ಕಾಗಿ ಕರೆ ಬರುತ್ತದೆ ಮತ್ತು ಏಜೆನ್ಸಿಯೊಂದರ ಮೂಲಕ ನಾವು ದೊಡ್ಡ ದೊಡ್ಡ ಕಂಪೆನಿಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದೇವೆ ಎಂದು ಅವರು ಹೇಳುತ್ತಾರೆ. ಮತ್ತು ಆ ಮೂಲಕ ನಿಮಗೊಂದು ಜಾಬ್ ಕೊಡಿಸುವಲ್ಲಿ ನಾವು ಸಹಾಯ ಮಾಡಲಿದ್ದೇವೆ’ ಎಂಬ ಭರವಸೆಯನ್ನು ಅವರು ನೀಡುತ್ತಾರೆ.

ಒಂದು ಜನಪ್ರಿಯ ಜಾಬ್ ಪೋರ್ಟಲ್ ನಲ್ಲಿ ಈ ಕೆಲಸದ ಬಗ್ಗೆ ನೋಡಿದ ಕಾರಣ ಯಾವುದೇ ಸಂಶಯವಿಲ್ಲದೇ ತಾನು ಸಂದರ್ಶನವನ್ನು ಎದುರಿಸಲು ಅಲ್ಲಿಗೆ ಹೊಗಿದ್ದಾಗಿಯೂ ಆ ವ್ಯಕ್ತಿ ಹೇಳಿಕೊಂಡಿದ್ದಾರೆ.

‘ನಾನಲ್ಲಿಗೆ ಹೋದ ಸಂದರ್ಭದಲ್ಲಿ, ಆ ಕಟ್ಟಡ ಕತ್ತಲೆ ಜಾಗದಲ್ಲಿದ್ದಂತೆ ಕಂಡಿತು. ಮತ್ತು ಅಲ್ಲಿ ಹೊರಗಡೆ ಬಾಡಿ ಗಾರ್ಡ್ ಗಳು ನಿಂತುಕೊಂಡಿದ್ದರು! ಇದನ್ನು ನೋಡಿ ನನಗೆ ಸ್ವಲ್ಪ ಭಯವಾಯಿತು. ಅವರಲ್ಲೊಬ್ಬರಲ್ಲಿ ನಾನು, ‘ಇಲ್ಲಿ ಸಂದರ್ಶನ ನಡೆಯುವ ಸ್ಥಳ ಎಲ್ಲಿ..?’ ಎಂದು ಕೇಳಿದೆ. ಅದಕ್ಕವನು ಹೇಳಿದೆ, ‘ಒಳಗಡೆಗೆ ಹೋಗಿ ಎಂದು. ಅಲ್ಲಿ ಹೆಚ್.ಆರ್. ಇರಬಹುದು ಎಂದು ನಾನು ಅಂದುಕೊಂಡು ಒಳಗಡೆಗೆ ಹೋದೆ. ನಾನು ಅಲ್ಲಿ ಕೋಣೆಯೊಳಗೆ ಹೊದೆ, ಮತ್ತು ಅಲ್ಲಿ 30 ವರ್ಷ ಆಸುಪಾಸಿನ ಮಹಿಳೆ ನನ್ನನ್ನು ಸ್ವಾಗತಿಸಿದರು’ ಎಂದು ಅವರು ಬರೆದುಕೊಂಡಿದ್ದಾರೆ.

ಸಂದರ್ಶಕರು ತನಗೆ ಟಾಪ್ ಕಂಪೆನಿಗಳ ಜೊತೆ ಸಂಪರ್ಕವಿದೆ ಎಂದು ಹೇಳಿ, ತಮ್ಮ ಮೂಲಕ ಮೈಕ್ರೋಸಾಫ್ಟ್ ಕಂಪೆನಿಗೆ ನೇಮಕವಾಗಿದ್ದಾರೆಂದು ವ್ಯಕ್ತಿಯೊಬ್ಬರ ‘ಫೇಕ್’ ದಾಖಲೆಗಳನ್ನು ನನಗೆ ತೋರಿಸಿದರು. ಬಳಿಕ ಇವರ ಸಾಫ್ಟ್ ವೇರ್ ಕೌಶಲಗಳ ಬಗ್ಗೆ ಆಕೆ ಪ್ರಶ್ನೆಗಳನ್ನು ಕೇಳಿದಾಗ ಅವರಿಗೆ ಸಂಶಯ ಬರಲಾರಂಭಿಸಿತು.

‘ಮತ್ತು ನಾನು ಬೇಕೆಂದೇ ಆಕೆಗೆ ತಪ್ಪು ಉತ್ತರಗಳನ್ನು ನೀಡುತ್ತಾ ಹೋದೆ. ಆದರೆ, ನನ್ನ ಉತ್ತರಗಳನ್ನು ಕೇಳಿ ಆಕೆ ನನ್ನನ್ನು ಹೊಗಳಲಾರಂಭಿಸಿದಳು. ಆಗ್ಲೇ ನನಗೆ ಇಲ್ಲಿ ಎಲ್ಲವೂ ಸರಿಯಿಲ್ಲ ಎಂದು ಗೊತ್ತಾಗಿತ್ತು. ಬಳಿಕ ಆ ಮಹಿಳೆ ಮೂರು ಸಾವಿರ ರೂಪಾಯಿಗಳನ್ನು ನೀಡುವಂತೆ ಸೂಚಿಸಿದಳು’ ಎಂದು ಆತ ತನಗಾದ ಅನುಭವಗಳನ್ನು ವಿವರಿಸಿದ್ದಾರೆ.

ಇಷ್ಟೆಲ್ಲಾ ಆಗುವಷ್ಟರಲ್ಲಿ ಅವರಿಗೆ ಸಾಕಾಗಿ ಹೋಗಿತ್ತು. ಅಲ್ಲಿಂದ ಒಮ್ಮೆ ಹೊರ ಹೋದರೆ ಸಾಕೆಂದಾಗಿತ್ತು. ಆದರೆ ಹೊರಗೆ ಬೌನ್ಸರ್ ಗಳಿರುವುದನ್ನು ನೆನೆದಾಗ ಭಯವಾಗುತ್ತಿತ್ತು!. ‘ಪುಣ್ಯಕ್ಕೆ ನನ್ನಲ್ಲೊ 500 ರೂಪಾಯಿಗಳ ಒಂದು ನೋಟು ಮಾತ್ರ ಇತ್ತು. ಅದನ್ನು ಆಕೆಗೆ ನೀಡಿ, ಇನ್ನುಳಿದ ಹಣವನ್ನು ಹೊರಗೆ ಹೋಗಿ ತಂದುಕೊಡುವುದಾಗಿ ಹೇಳಿ ಆಕೆಗೆ ಕನ್ವಿನ್ಸ್ ಮಾಡಿ ಹೊರ ಹೊರಟಾಗ, ಒಬ್ಬ ಬಾಡಿಗಾರ್ಡ್ ತನ್ನನ್ನೇ ಫಾಲೋ ಮಾಡ್ಕೊಂಡು ಬಂದ! ಆ ಕಟ್ಟಡದಿಂದ ಸ್ವಲ್ಪ ದೂರ ಬಂದ ಕೂಡಲೇ ನಾನು ‘ಬದುಕಿದ್ರೆ ಬೇಡಿ ತಿಂದೇನು..!’ ಎಂದು ಒಂದೇ ಉಸಿರಿನಲ್ಲಿ ಮೆಟ್ರೋದತ್ತ ಓಡಲಾರಂಭಿಸಿದೆ, ಜನಸಂದಣಿ ಇರುವಲ್ಲಿ ಅವರು ಪಾಲೋ ಮಾಡ್ಕೊಂಡು ಬರ್ಲಿಕ್ಕಿಲ್ಲ ಅಂತ ನನ್ನ ಅನಿಸಿಕೆಯಾಗಿತ್ತು.’ ಎಂದು ಆ ವ್ಯಕ್ತಿ ತಾನಲ್ಲಿಂದ ಎಸ್ಕೇಪ್ ಆದ ಬಗೆಯನ್ನು ವಿವರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video: ನಾಯಿ ಮರಿಯನ್ನು ನೇಣಿಗೇರಿಸಿ ವಿಕೃತಿ ಮೆರೆದ ಕ್ರೂರಿ- ವಿಡಿಯೊ ಫುಲ್‌ ವೈರಲ್‌

‘ಈ ವಂಚನೆ ನನ್ನನ್ನು ಆ ಸಂದರ್ಭದಲ್ಲಿ ಖಿನ್ನತೆಗೆ ದೂಡಿತು. ಅಮಾಯಕರನ್ನು ವಂಚಿಸುವ ಇಂತವರ ಬಗ್ಗೆ ನಾವೆಲ್ಲರೂ ಜಾಗರೂಕತೆಯಿಂದರಬೇಕಿದೆ.’ ಎಂದು ಆತ ಬರೆದುಕೊಂಡಿದ್ದಾರೆ. ಈ ಸಾಫ್ಟ್‌ವೇರ್‌ ಇಂಜಿನಿಯರ್ ತನಗಾದ ಕಹಿ ಅನುಭವವನ್ನು ಹಂಚಿಕೊಳ್ಳುತ್ತಿದ್ದಂತೆ ಹಲವರು ತಮಗಾಗಿರುವ ಅನುಭವಗಳನ್ನೂ ಹಂಚಿಕೊಳ್ಳಲಾರಂಭಿಸಿದ್ದಾರೆ ಮತ್ತು ಇವರಿಗೆ ಬೆಂಬಲ ಸೂಚಿಸಿ ಕಮೆಂಟ್ ಹಾಕುತ್ತಿದ್ದಾರೆ.

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?