Viral News : ರಾತ್ರೋರಾತ್ರಿ ಚೇಂಜ್ ಆಯ್ತು ಲಕ್! ಪ್ಲಂಬರ್‌ಗೆ 1.5 ಕೋಟಿ ರೂ ಲಾಟರಿ
Viral News : ಹರಿಯಾಣದ ಸಿರ್ಸಾದಲ್ಲಿ ವಾಸಿಸುವ ಮಂಗಲ್ ಎಂಬುವವರು ಬರೋಬ್ಬರಿ ಲಾಟರಿಯಲ್ಲಿ 1.5 ಕೋಟಿ ರೂ ಗೆದ್ದಿದ್ದು, ಕುಟುಂಬಸ್ಥರಲ್ಲಿ ಸಂತಸ ಮನೆ ಮಾಡಿದೆ.

ಚಂಡೀಗಢ : ಅದೃಷ್ಟ ಎಂಬುದು ಯಾವಾಗ ಹೇಗೆ ಯಾವಾಗ ಯಾರಿಗೆ ಒಲಿಯುತ್ತಾಳೆ ಎಂದು ಊಹಿಸಲೂ ಸಾಧ್ಯವಿಲ್ಲ. ಹಾಗೇ ಒಲಿದ ಅದೃಷ್ಟದಿಂದ ಹಲವರು ಕೋಟ್ಯಾಧಿಪತಿಗಳಾದ ಉದಾಹರಣೆಯೂ ಇದೆ. ಅದರಂತೆ ಇಲ್ಲೊಬ್ಬ ವ್ಯಕ್ತಿಯ ಲಕ್ ರಾತ್ರೋರಾತ್ರಿ ಬದಲಾಗಿದೆ. ಐದಾರು ವರ್ಷಗಳಿಂದ ಲಾಟರಿ ಟಿಕೆಟ್ ಖರೀದಿ ಮಾಡುತ್ತಿದ್ದವನಿಗೆ ಕಡೆದೂ ಅದೃಷ್ಟ ಲಕ್ಷ್ಮಿ ಒಲಿದಿದ್ದಾಳೆ. ಲಾಟರಿಯಲ್ಲಿ (Lottery) ಆತ ಬರೋಬ್ಬರಿ 1.5 ಕೋಟಿ ರೂ. ಗೆದ್ದಿದ್ದಾನೆ(Viral News).
ಹರಿಯಾಣದ (Haryana) ಸಿರ್ಸಾದಲ್ಲಿ ವಾಸಿಸುವ ಮಂಗಲ್ ಎಂಬುವವರು ಬರೋಬ್ಬರಿ ಲಾಟರಿಯಲ್ಲಿ 1.5 ಕೋಟಿ ರೂ ಗೆದ್ದಿದ್ದು, ಕುಟುಂಬಸ್ಥರಲ್ಲಿ ಸಂತಸ ಮನೆ ಮಾಡಿದೆ. ಬುಧವಾರ ಮಂಗಲ್ ಸಿಂಗ್ ಮತ್ತು ಅವರ ಕುಟುಂಬದವರು ಸಿಹಿ ಹಂಚಿ ಡೋಲು ಬಾರಿಸುವ ಮೂಲಕ ಸಂತಸ ವ್ಯಕ್ತಪಡಿಸಿದರು. ಮಂಗಳವಾರ ರಾತ್ರಿ 8 ಗಂಟೆಗೆ ಲಾಟರಿ ಡ್ರಾ ನಡೆದಾಗ ಲಾಟರಿ ಮಾರಾಟಗಾರ ಲಲಿತ್ ಗುಂಬರ್ ಎನ್ನುವವರು ಮಂಗಲ್ ಸಿಂಗ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಒಂದೂವರೆ ಕೋಟಿ ರೂಪಾಯಿ ಬಹುಮಾನ ಗೆದ್ದ ಖುಷಿಯಲ್ಲಿ ತನಗೆ ಮತ್ತವರ ನನ್ನ ಕುಟುಂಬಕ್ಕೆ ಇಡೀ ರಾತ್ರಿ ನಿದ್ದೆಯೇ ಬರಲಿಲ್ಲ ಎಂದು ಅವರು ಹೇಳಿದ್ದಾರೆ.
ವೃತ್ತಿಯಲ್ಲಿ ಪ್ಲಂಬರ್ ಆಗಿ ಕೆಲಸ ಮಾಡುತ್ತಿದ್ದ ಮಂಗಲ್ ಕಳೆದ ನಾಲ್ಕು ವರ್ಷಗಳಿಂದ ಲಾಟರಿ ಖರೀದಿಸುತ್ತಿದ್ದರಂತೆ. ಪ್ರತಿ ಬಾರಿ ಲಲಿತ್ ಗುಂಬರ್ ಅವರಿಂದ ಖರೀದಿಸುತ್ತಿದ್ದು, ಈ ಬಾರಿಯೂ ಅವರಿಂದ 200 ರೂ.ಗೆ ಖರೀದಿಸಿದ್ದರು. ಇದರ ಡ್ರಾ ಡಿಸೆಂಬರ್ 3 ರಂದು ರಾತ್ರಿ 8 ಗಂಟೆಗೆ ನಡೆದಿದೆ. ಮಂಗಳವಾರ ರಾತ್ರಿ ಏಜೆಂಟ್ ಲಲಿತ್ ಗುಂಬರ್ ಮತ್ತು ಏಜೆನ್ಸಿ ಮಾಲೀಕ ಸುಮಿತ್ ಅವರಿಂದ ಕರೆ ಬಂದಿದ್ದು, ಒಂದೂವರೆ ಕೋಟಿ ರೂಪಾಯಿ ಮೊದಲ ಬಹುಮಾನ ಸಿಕ್ಕಿದೆ ಎಂದು ಹೇಳಿದ್ದಾರೆ.
ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದ ಮಂಗಲ್ ತಾನು ಬಡ ಕುಟುಂಬದಿಂದ ಬಂದಿದ್ದು, ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇವೆ. ಲಾಟರಿ ಹಣದಲ್ಲಿ ಮೊದಲು ಮನೆ ಕಟ್ಟುತ್ತೇನೆ. ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಅಪೇಕ್ಷೆಯಿದೆ. ತನಗೆ ಐದು ವರ್ಷದ ಮಗಳಿದ್ದು, ಅವಳ ಭವಿಷ್ಯಕ್ಕಾಗಿ ಹಣ ಕೂಡಿಡಬೇಕಾಗಿದೆ ಎಂದು ಹೇಳಿದ್ದಾರೆ.
ಪ್ರತ್ಯೇಕ ಘಟನೆಯಲ್ಲಿ ಥೈಲಾಂಡ್‌ನ ವ್ಯಕ್ತಿಯೊಬ್ಬ ಲಾಟರಿಯಲ್ಲಿ ಹಣ ಗೆದ್ದ ನಂತರ ಹಣ ಕಳೆದುಕೊಂಡ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಲಾಟರಿಯಲ್ಲಿ ಗೆದ್ದ ಹಣವನ್ನು ತನ್ನ ಹೆಂಡತಿಯ ಖಾತೆಗೆ ವರ್ಗಾವಣೆ ಮಾಡಿದ್ದ. ಆದರೆ ಅವನ ದುರಾದೃಷ್ಟವೆಂಬಂತೆ ಆತನ ಪತ್ನಿ ಹಣದ ಜೊತೆ ತನ್ನ ಗೆಳೆಯನೊಟ್ಟಿಗೆ ಪರಾರಿಯಾಗಿದ್ದಾಳೆ. ಇದೀಗ ಆತ ಪೊಲೀಸರ ಮೊರೆ ಹೋಗಿದ್ದು, ಪತ್ನಿಯ ವಿರುದ್ಧ ದೂರು ದಾಖಲಿಸಿದ್ದಾನೆ.
ಈ ಸುದ್ದಿಯನ್ನೂ ಓದಿ : Aishwarya Rai: ಡಿವೋರ್ಸ್ ರೂಮರ್ ನಡುವೆ ಐಶ್ವರ್ಯ ರೈ ಇನ್ಸ್ಟಾ ಪೋಸ್ಟ್ ಫುಲ್ ವೈರಲ್! ಅಂತಹದ್ದೇನಿದೆ?