Viral Video: ನಾಯಿ ಮರಿಯನ್ನು ನೇಣಿಗೇರಿಸಿ ವಿಕೃತಿ ಮೆರೆದ ಕ್ರೂರಿ- ವಿಡಿಯೊ ಫುಲ್ ವೈರಲ್
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದಕ್ಕೆ ಕೆಲವರು ಏನೆಲ್ಲಾ ಮಾಡುತ್ತಾರೆಂಬುದನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಅಂತಹ ಒಂದು ವಿಡಿಯೋ ಇದೀಗ ವೈರಲ್ ಆಗಿದ್ದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.
ಮುಂಬಯಿ: ಇನ್ ಸ್ಟಾಗ್ರಾಂ (Instagram) ರೀಲ್ (Reel) ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ಲೈಕ್ಸ್ ಮತ್ತು ವ್ಯೂವ್ಸ್ ಹುಚ್ಚಿಗಾಗಿ ಕೆಲವರು ಏನೆಲ್ಲಾ ಮಾಡ್ತಾರೆಂಬುದಕ್ಕೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ (Viral Video) ಒಂದು ಸಾಕ್ಷಿಯಾಗಿದೆ. ಇಲ್ಲಿ ಯುವಕನೊಬ್ಬ ಇನ್ ಸ್ಟಾ ರೀಲ್ ನಲ್ಲಿ ಪಾಪದ ನಾಯಿಯೊಂದನ್ನು ನೇಣಿಗೆ ಹಾಕುವ ಅಣಕು ವಿಡಿಯೋ ಮಾಡಿ ಇದೀಗ ನೆಟ್ಟಿಗರಿಂದ ಮಾತ್ರವಲ್ಲದೇ ಪ್ರಾಣಿಪ್ರಿಯರಿಂದಲೂ (Animal Lovers) ಸಹ ಸಿಕ್ಕಾಪಟ್ಟೆ ಉಗಿಸಿಕೊಳ್ಳುತ್ತಿದ್ದಾನೆ.
ಯುವಕನ ಈ ಕ್ರೂರ ಹುಚ್ಚಾಟ ಇದೀಗ ಎಲ್ಲರನ್ನೂ ಕೆರಳಿಸಿದ್ದು, ಈ ಕೃತ್ಯ ಎಸಗಿದವ ಮತ್ತು ಇದರ ಹಿಂದೆ ಇರುವವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ. ಈ ಶಾಕಿಂಗ್ ವಿಡಿಯೋವನ್ನು ನೀವೂ ಒಮ್ಮೆ ನೋಡಿಬಿಡಿ!
ಈ ವೈರಲ್ ವಿಡಿಯೋದಲ್ಲಿರುವಂತೆ, ಯುವಕನೊಬ್ಬ ಅಮಾಯಕ ನಾಯಿಯೊಂದನ್ನು ಹಿಡಿದುಕೊಂಡು ಅದನ್ನು ಅಲ್ಲೇ ಇದ್ದ ಕುಣಿಕೆ ಹಗ್ಗಕ್ಕೆ ನೇತು ಹಾಕಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಸ್ವಲ್ಪ ಹೊತ್ತು ಆ ನಾಯಿಯನ್ನು ಕುಣಿಕೆಗೆ ಸಿಕ್ಕಿಸಿ ಬಳಿಕ ಅದನ್ನು ಅಲ್ಲೇ ಪಕ್ಕದಲ್ಲಿ ಬಿಟ್ಟುಬಿಡುತ್ತಾನೆ.
ಆದರೆ, ಈ ಸಂದರ್ಭದಲ್ಲಿ ಈ ಯುವಕ ಮತ್ತು ಈತನ ಜೊತೆಗಿದ್ದವರು (ಅವರು ವಿಡಿಯೋದಲ್ಲಿ ಕಾಣಿಸುವುದಿಲ್ಲ) ವಿಕೃತ ಆನಂದವನ್ನು ಅನುಭವಿಸುತ್ತಿರುವುದನ್ನು ಕಾಣಬಹುದಾಗಿದೆ. ಈ ರಿತಿಯಾಗಿ ಕೇವಲ ಪ್ರಚಾರದ ಹುಚ್ಚಿಗಾಗಿ ಅಮಾಯಕ ಪ್ರಾಣಿಯೊಂದರ ಜೀವದ ಜೊತೆ ಚೆಲ್ಲಾಟವಾಡಿರುವ ಈ ಯುವಕರ ಕೃತ್ಯ ಕೇವಲ ಅನೈತಿಕ ಮಾತ್ರವಲ್ಲದೇ ಕಾನೂನುಬಾಹಿರವೂ ಆಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಾಣಿಪ್ರಿಯರು ಮತ್ತು ನೆಟ್ಟಿಗರೂ ಒಟ್ಟಾಗಿ ಈ ಕೃತ್ಯಕ್ಕೆ ಖಂಡನೆ ವ್ಯಕ್ತಪಡಿಸಿದ್ದು, ಇದರ ವಿರುದ್ಧ ಧ್ವನಿ ಎತ್ತಿದ್ದಾರೆ. ಮತ್ತು ಈ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವ ಮೂಲಕ ಆ ಅಮಾಯಕ ನಾಯಿ ಮರಿಗೆ ನ್ಯಾಯ ಒದಗಿಸಿಕೊಡಬೇಕೆಂಬ ಆಗ್ರಹ ವ್ಯಕ್ತವಾಗಿದೆ.
ಈ ವಿಡಿಯೋವನ್ನು ಪ್ರಾಣಿಪ್ರಿಯರೊಬ್ಬರು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ಅದರಲ್ಲಿ ಅವರು, ‘ಪ್ರಮುಖ ಮಾಹಿತಿ… ಪ್ರಾಣಿ ಹಿಂಸೆ ಯಾವತ್ತೂ ಸರಿ ಇಲ್ಲ.. ಪ್ರಾಣಿಗಳು, ನಾಯಿ ಮರಿಗಳನ್ನು ಕೇವಲ ಮನರಂಜನೆಗಾಗಿ ವಿಶ್ವದೆಲ್ಲೆಡೆ ಹಿಂಸೆಗೊಳಪಡಿಸುತ್ತಿರುವ ರೀತಿಯ ವಿಡಿಯೋಗಳು ಹರಿದಾಡುತ್ತಿರುತ್ತವೆ, ಇದನ್ನು ನೋಡಿದಾಗ ಖೇದವೆಣಿಸುತ್ತದೆ’ ಎಂದು ಬರೆದುಕೊಂಡಿದ್ದಾರೆ.
‘ಕೇವಲ ವಿಡಿಯೋ ಮಾಡುವ ಉದ್ದೇಶದಿಂದ ಈ ನಾಯಿ ಮರಿಯನ್ನು ಈ ರೀತಿ ಹಿಂಸಿಸುವುದು ಮತ್ತು ಭೀತಿಗೊಳಪಡಿಸುವುದು ಸ್ವೀಕಾರಾರ್ಹವಲ್ಲ..’ ಎಂದು ಅವರು ಈ ವಿಡಿಯೋ ಜೊತೆ ವರೆದುಕೊಂಡಿದ್ದಾರೆ.
‘ಯಾವುದೇ ಪ್ರಾಣಿಯನ್ನು ಯಾವತ್ತೂ ಸಹ ಒತ್ತಡ, ನೋವು, ಹಿಂಸೆಗೆ ಒಳಡಿಸಿ ಸಂತೋಷಪಡಬಾರದು. ಯಾರಿಗಾದರೂ ಈ ಕೃತ್ಯ ಎಸಗಿದ ವ್ಯಕ್ತಿಯ ಪರಿಚಯವಿದ್ದಲ್ಲಿ ನೀವು ಸ್ವಇಚ್ಛೆಯಿಂದ ಮುಂದೆ ಬಂದು ಮಾಹಿತಿ ನೀಡುವ ಮೂಲಕ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗುವಂತೆ ಮಾಡುವಲ್ಲಿ ಸಹಕರಿಸಬೇಕು’ ಎಂದು ಈ ವಿಡಿಯೋದಲ್ಲಿ ವಿನಂತಿಸಿಕೊಳ್ಳಲಾಗಿದೆ.
ಇದನ್ನೂ ಓದಿ: Viral Video: ಫುಲ್ ಕ್ಯಾಶ್ ನೀಡಿ ಐಫೋನ್ 16 ಪ್ರೊ ಮ್ಯಾಕ್ಸ್ ಖರೀದಿಸಿದ ಭಿಕ್ಷುಕ! ವೈರಲ್ ಆಯ್ತು ಈ ವಿಡಿಯೋ
ಪ್ರಾಣಿ ಹಿಂಸೆ ಬಗ್ಗೆ ಮಾಹಿತಿ ನೀಡುವುದು ಹೇಗೆ?
- ಪ್ರಾಣಿ ಹಿಂಸೆ ಬಗ್ಗೆ ನಿಮ್ಮಲ್ಲಿ ಯಾವುದೇ ಮಾಹಿತಿ ಇದ್ದಲ್ಲಿ, ನೀವು ಈ ಕೆಳಗಿನ ಕ್ರಮಗಳನ್ನ ಕೈಗೊಳ್ಳುವಂತೆ ಕೇಳಿಕೊಳ್ಳಲಾಗಿದೆ.
- ನಿಮ್ಮ ಪ್ರದೇಶದ ಪೊಲೀಸರನ್ನು ಅಥವಾ ಪ್ರಾಣಿ ಸಂರಕ್ಷಣಾ ತಂಡವನ್ನು ಸಂಪರ್ಕಿಸಿ
- ತನಿಖೆಗೆ ಸಹಕಾರಿಯಾಗುವಂತೆ ಪೂರಕ ವಿಡಿಯೋ ಅಥವಾ ಫೊಟೋಗಳಿದ್ದಲ್ಲಿ ಅವುಗಳನ್ನು ಒದಗಿಸಿ
- ಪ್ರಾಣಿಗಳನ್ನು ಕೆಡುಗಳಿಂದ ಸಂರಕ್ಷಿಸುವ ಕುರಿತಾಗಿ ಅರಿವನ್ನು ಮೂಡಿಸಲು ಪ್ರಯತ್ನಿಸಿ