Viral Video: ಫುಲ್ ಕ್ಯಾಶ್ ನೀಡಿ ಐಫೋನ್ 16 ಪ್ರೊ ಮ್ಯಾಕ್ಸ್ ಖರೀದಿಸಿದ ಭಿಕ್ಷುಕ! ವೈರಲ್ ಆಯ್ತು ಈ ವಿಡಿಯೋ
ಶ್ರೀಮಂತರು ಮತ್ತು ಸ್ವಲ್ಪ ಮಟ್ಟಿಗೆ ಹಣಕಾಸಿನಲ್ಲಿ ಸ್ಥಿತಿವಂತರು ಮಾತ್ರ ಐಷಾರಾಮಿ ಐಫೋನ್ಗಳನ್ನು ಖರೀದಿಸಬಹುದು. ಸಾಮಾನ್ಯ ಜನರು ಇಂತಹ ಮೊಬೈಲ್ ಫೋನ್‌ನಲ್ಲಿ ಇಷ್ಟೊಂದು ಹಣವನ್ನ ಖರ್ಚು ಮಾಡಲು ಸಾಧ್ಯವಿಲ್ಲ. ಆದರೆ ಈ ಮಾತನ್ನು ಇಲ್ಲೊಂದು ಘಟನೆಯ ವಿಡಿಯೋ ಸುಳ್ಳು ಮಾಡಿದೆ ನೋಡಿ.


ನವದೆಹಲಿ: ಐಫೋನ್ ಎಂದೊಡನೆ ನಮ್ಮ ತಲೆಗೆ ಮೊದಲು ಫ್ಲಾಶ್ ಆಗೋದು, ಅದು ಕಾಸ್ಟ್ಲಿ ಫೋನ್ ಕೇವಲ ಶ್ರೀಮಂತರೂ ಬಳಸುವ ಫೋನ್ ಅಂತ. ಅದ್ರಲ್ಲಂತೂ ಐ-ಫೋನ್‌ನ ಬೆಲೆ ಬಗ್ಗೆ ಕೇಳೋ ಹಾಗೆ ಇಲ್ಲ ಬಿಡಿ. ಲಕ್ಷ ಲಕ್ಷ ಬೆಲೆ ಬಾಳುವ ಈ ಫೋನ್ ಅನ್ನು ಕೊಳ್ಳೋಕೆ ನಮ್ಮ ಕಿಡ್ನಿಯನ್ನೆ ಮಾರಬೇಕಾಗುತ್ತೆ ಎನ್ನುವವರೇ ಹೆಚ್ಚು.. ಯಾಕೆಂದರೆ ಸಾಮಾನ್ಯವಾಗಿ ಸ್ಥಿತಿವಂತರೇ ಐಫೋನ್‌ನ (iphone 16) ದುಬಾರಿ ಬೆಲೆಯ ಕಾರಣಕ್ಕೆ ಅದನ್ನು ಕೊಳ್ಳಲು ಹಿಂದೆ ಮುಂದೆ ನೋಡುತ್ತಾರೆ. ಹೀಗಿರುವಾಗ ಜನ ಸಾಮಾನ್ಯರಂತು ಇದನ್ನು ಕೊಳ್ಳಲು ಸಾಲವೇ ಮಾಡಬೇಕಷ್ಟೇ, ಇಲ್ಲವೇ ಇಎಂಐ ಎಂಬ ಹೊರೆಯನ್ನು ಮೈಮೇಲೆ ಹಾಕೋಬೇಕಾಗುತ್ತದೆ.
ಇನ್ನು ನಮ್ಮಲ್ಲಿ ಆಗತಾನೆ ಬಿಡುಗಡೆಯಾದ ಐಫೋನ್ (iPhone) ಅನ್ನು ಖರೀದಿ ಮಾಡುವುದು ಎಂದರೆ ಅದು ಅನೇಕರಿಗೆ ಸ್ಟೇಟಸ್ ಸಿಂಬಲ್ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು, ನಮ್ಮಲ್ಲಿ ಹೊಸ ದುಬಾರಿ ಫೋನ್, ಕಾರು, ಬಂಗಲೆ ಎಲ್ಲವನ್ನೂ ಜನರು ಶ್ರೀಮಂತಿಕೆಯ ಸಂಕೇತ ಅಂತಾನೆ ನೋಡುತ್ತಾರೆ. ಏಕೆಂದರೆ ಶ್ರೀಮಂತರು ಮತ್ತು ಸ್ವಲ್ಪ ಮಟ್ಟಿಗೆ ಹಣಕಾಸಿನಲ್ಲಿ ಸ್ಥಿತಿವಂತರು ಮಾತ್ರ ಇಂತಹ ಐಷಾರಾಮಿಗಳನ್ನು ಖರೀದಿಸಬಹುದು ಮತ್ತು ಅದರ ಅನುಭವ ಪಡೆಯಬಹುದು ಎಂಬ ಮಾತು ನಮ್ಮಲ್ಲಿದೆ.
ಸಾಮಾನ್ಯ ಜನರು ಇಂತಹ ಮೊಬೈಲ್ ಫೋನ್‌ನಲ್ಲಿ ಇಷ್ಟೊಂದು ಹಣವನ್ನ ಖರ್ಚು ಮಾಡಲು ಸಾಧ್ಯವಿಲ್ಲ. ಆದರೆ ಈ ಮಾತನ್ನು ಇಲ್ಲೊಂದು ಘಟನೆಯ ವಿಡಿಯೋ ಸುಳ್ಳು ಮಾಡಿದೆ ನೋಡಿ.
ಹೌದು ಭಿಕ್ಷುಕನೋರ್ವ ಐಫೋನ್ 16 ಪ್ರೊ ಮ್ಯಾಕ್ಸ್ ಖರೀದಿಸಿದ್ದು, ಹಣವಂತರೇ, ಸ್ಥಿತಿವಂತರು ಮಾತ್ರ ಇಂತಹ ವಸ್ತುಗಳನ್ನು ಸಾಧ್ಯ ಎಂಬ ನಂಬಿಕೆಗಳನ್ನೆಲ್ಲ ಹುಸಿ ಮಾಡಿದ್ದಾನೆ. ರಾಜಸ್ಥಾನದ ಅಜ್ಮೇರ್ ನಲ್ಲಿ ಈ ಘಟನೆ ನಡೆದಿದ್ದು, ಇಲ್ಲೊಬ್ಬ ಭಿಕ್ಷುಕ ಫುಲ್ ಹ್ಯಾಂಡ್ ಕ್ಯಾಶ್ ನೀಡಿ ಹಣದಿಂದ ಐಫೋನ್ 16 ಪ್ರೊ ಮ್ಯಾಕ್ಸ್ ಖರೀದಿಸಿದ್ದಾನೆ. ಸದ್ಯ ಈ ವೀಡೀಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾಮಾನ್ಯ ಜನರು ಆತನ ಕೈಯಲ್ಲಿರುವ ಫೋನ್ ನೋಡಿ ಶಾಕ್ ಆಗಿದ್ದಾರೆ.
ಈ ಸುದ್ದಿಯನ್ನು ಓದಿ: Tiktok: ಅಮೆರಿಕದಲ್ಲಿ ಬ್ಯಾನ್ ಆಗಿದ್ದ ಟಕ್‌ಟಾಕ್ ಮತ್ತೆ ಕಾರ್ಯಾರಂಭ ; ನಿಷೇಧ ವಾಪಾಸ್ ಪಡೆದ ಟ್ರಂಪ್
ಸುಮಾರು 1,44,900. ರೂ ಮೌಲ್ಯದ ಐಫೋನ್ ಅನ್ನು ವಿಶೇಷ ಚೇತನ ಭಿಕ್ಷುಕ ಖರೀದಿಸಿದ್ದು, ಆ ಭಿಕ್ಷುಕ ತನ್ನ ಕೈಯಲ್ಲಿ ಐಫೋನ್ 16 ಪ್ರೊ ಮ್ಯಾಕ್ಸ್ ಹಿಡಿದಿರುವ ವಿಡಿಯೊ ಇನ್ ಸ್ಟಾಗ್ರಾಮ್ ಬಳಕೆದಾರ ರೋಹಿತ್ ಎಂಬುವರು ಹಂಚಿಕೊಂಡಿದ್ದಾರೆ. ಇನ್ನು ಈ ವೀಡೀಯೋ ಸಾಕಷ್ಟು ಕಮೆಂಟ್ಸ್ ಗಳು ಬಂದಿದ್ದು, ಭಿಕ್ಷುಕ ಕೂಡ ಹೇಗೆ ಐಫೋನ್ ಖರೀದಿಸಬಹುದು ಎಂದು ಅಚ್ಚರಿಗೊಳಪಟ್ಟಿದ್ದಾರೆ. ಅಲ್ಲದೇ ಮತೋರ್ವರು ನಾನು ಇನ್ಮುಂದೆ ಭಿಕ್ಷೆ ನೀಡುವುದಿಲ್ಲ, ನೀವು ನೀಡಬೇಡಿ ಎಂದು ಹೇಳಿದ್ದು, ಹೊಟ್ಟೆಪಾಡಿಗಾಗಿ ಎಂದು ನೀಡಿದ ಹಣವನ್ನು ಈ ರೀತಿ ವೇಸ್ಟ್ ಮಾಡುವುದರ ಬದಲು ಬೇರೆ ರೀತಿಯಲ್ಲಿ ಸದುಪಯೋಗ ಮಾಡಿಕೊಳ್ಳಬಹುದಿತ್ತು ಎಂದು ಹೇಳಿದ್ದಾರೆ. ಒಬ್ಬ ಬಳಕೆದಾರರು ‘‘ಇದು ಸ್ಕ್ರಿಪ್ಟ್ ತಯಾರಿಸಿಕೊಂಡು ಮಾಡಿದ ವಿಡಿಯೋ ಆಗಿದೆ. ಇವನು ಭಿಕ್ಷುಕನಂತೆ ಕಾಣುತ್ತಿಲ್ಲ’’ ಎಂದು ಹೇಳಿದರು.
ಇನ್ನು ಈ ಹಿಂದೆ ಮಧ್ಯ ಪ್ರದೇಶದಲ್ಲಿ ಒಬ್ಬ ಭಿಕ್ಷುಕ ತನ್ನ ಪತ್ನಿಗೆ ಉಡುಗೊರೆಯಾಗಿ 90 ಸಾವಿರ ಮೌಲ್ಯದ ಮೊಪೆಡ್ ಖರೀದಿಸಿ, ಅದನ್ನು ಗಿಫ್ಟ್ ಆಗಿ ಕೊಟ್ಟಿದ್ದ. ಛಿಂದ್ವಾರದ ಅಮರವಾರ ಗ್ರಾಮದ ಸಂತೋಷ್ ಸಾಹು ಎಂಬಾತ ತನ್ನ ಪತ್ನಿ ಮುನ್ನಿಗೆ ಮೊಪೆಡ್ ಖರೀದಿಸಿದ್ದ. ಈತ ಪತ್ನಿಗೆ ವಾಹನ ಖರೀದಿಸಲು ಕಳೆದ ನಾಲ್ಕು ವರ್ಷಗಳಿಂದ ಹಣ ಸಂಗ್ರಹಿಸಿದ್ದ ಎನ್ನಲಾಗಿದೆ.