ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

16,000 ಉದ್ಯೋಗಿಗಳನ್ನು ವಜಾಗೊಳಿಸಿದ ಅಮೆಜಾನ್; ಭಾರತದಲ್ಲೂ ನೂರಾರು ಉದ್ಯೋಗಿಗಳ ಮೇಲೆ ಪರಿಣಾಮ

Amazon layoffs: ಅಮೆಜಾನ್ 16,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ್ದು, ಭಾರತದಲ್ಲೂ ನೂರಾರು ಉದ್ಯೋಗಿಗಳು ಇದರ ಪರಿಣಾಮಕ್ಕೆ ಒಳಗಾಗಿದ್ದಾರೆ. ಈ ಹೊಸ ಲೇಆಫ್ ಕಂಪನಿಯ ಜಾಗತಿಕ ಮರುರಚನೆಯ ಭಾಗವಾಗಿದೆ. ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್‌ನಂತಹ ನಗರಗಳಲ್ಲಿ ಕೆಲಸಮಾಡುತ್ತಿರುವ ಹಲವರ ಮೇಲೆ ಪರಿಣಾಮ ಬೀರಿದೆ.

16,000 ಉದ್ಯೋಗಿಗಳನ್ನು ವಜಾಗೊಳಿಸಿದ ಅಮೆಜಾನ್

16,000 ಉದ್ಯೋಗಿಗಳನ್ನು ವಜಾಗೊಳಿಸಿದ ಅಮೆಜಾನ್ -

Priyanka P
Priyanka P Jan 30, 2026 11:29 AM

ನವದೆಹಲಿ: ಅಮೆಜಾನ್ ಈ ವಾರ ಜಾಗತಿಕ ಮಟ್ಟದಲ್ಲಿ ಸುಮಾರು 16,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವ ಬಗ್ಗೆ ದೃಢಪಡಿಸಿದೆ. ಇದರಲ್ಲಿ ಭಾರತವೂ ಒಳಗೊಂಡಿದೆ. ಲೇಆಫ್‌ಗಳ (Amazon lays off) ಹೆಚ್ಚಿನ ಭಾಗವು ಅಮೆರಿಕದಲ್ಲಿ ನಡೆದಿದ್ದರೂ, ಭಾರತದಲ್ಲಿ ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್‌ನಂತಹ ನಗರಗಳಲ್ಲಿ ವಿವಿಧ ತಂಡಗಳಿಗೆ ಸೇರಿದ ನೂರಾರು ಉದ್ಯೋಗಿಗಳ (employees) ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ.

ಈ ಘೋಷಣೆಯ ನಂತರ, ಕಂಪನಿಯು ತನ್ನ ಉದ್ಯೋಗಿಗಳಿಗೆ ಅಧಿಕೃತ ಇಮೇಲ್‌ಗಳ ಮೂಲಕ ಅಧಿಸೂಚನೆ ಹೊರಡಿಸಲು ಪ್ರಾರಂಭಿಸಿದೆ. ಇತ್ತೀಚಿನ ಲೇಆಫ್‌ಗಳು ಕೇವಲ ಮೂರು ತಿಂಗಳಲ್ಲಿ FAANG ಕಂಪನಿಯ ಎರಡನೇ ಪ್ರಮುಖ ಸುತ್ತಿನ ಉದ್ಯೋಗ ಕಡಿತವಾಗಿದೆ. 2025ರ ಅಂತ್ಯದ ವೇಳೆಗೆ ಈಗಾಗಲೇ ಸುಮಾರು 14,000 ಹುದ್ದೆಗಳನ್ನು ರದ್ದುಪಡಿಸಿದ್ದಕ್ಕೆ ಸೇರಿವೆ.

ವಜಾ ಪ್ಯಾಕೇಜ್‌ಗಳು, ವರ್ಗಾವಣೆಯ ಅವಧಿಗಳು ಮತ್ತು ಮುಂದುವರಿದ ಪ್ರಯೋಜನಗಳನ್ನು ವಿವರಿಸುವ ಇಮೇಲ್‌ಗಳು, ಅಮೆಜಾನ್ ಉದ್ಯೋಗಿಗಳ ಇನ್‌ಬಾಕ್ಸ್‌ಗಳಲ್ಲಿ ಬರುತ್ತಿದೆ. ಇ-ಕಾಮರ್ಸ್ ದೈತ್ಯ ಅಮೆಜಾನ್‍ನಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ.

ಭಾರತದ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ 500 ಹೆಚ್ಚುವರಿ ವಿದ್ಯಾರ್ಥಿವೇತನಗಳ ಘೋಷಿಸಿದ ಅಮೆಜಾನ್ ಇಂಡಿಯಾ

ಅಮೆಜಾನ್ 16,000 ಉದ್ಯೋಗಗಳನ್ನು ಕಡಿತಗೊಳಿಸುತ್ತಿದೆ

ಅಮೆಜಾನ್ ಬುಧವಾರ, ಜನವರಿ 28ರಂದು, ತನ್ನ ಚೀಫ್ ಪೀಪಲ್ ಆಫೀಸರ್ ಬೆತ್ ಗ್ಯಾಲೆಟ್ಟಿ ಬರೆದ ಬ್ಲಾಗ್ ಪೋಸ್ಟ್ ಮೂಲಕ ಲೇಆಫ್‌ಗಳನ್ನು ಅಧಿಕೃತವಾಗಿ ಘೋಷಿಸಿದೆ. ಈ ಘೋಷಣೆಯಲ್ಲಿ, ಹೆಚ್ಚುವರಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಬಗ್ಗೆ ಕಂಪನಿ ದೃಢಪಡಿಸಿದ್ದು, ಜಾಗತಿಕ ಮಟ್ಟದಲ್ಲಿ ಸುಮಾರು 16,000 ಹುದ್ದೆಗಳ ಮೇಲೆ ಇದರ ಪರಿಣಾಮ ಬೀರುವುದಾಗಿ ತಿಳಿಸಿದೆ.

ಈ ಇತ್ತೀಚಿನ ಹಂತದ ಅಮೆಜಾನ್‌ನಲ್ಲಿ ನಡೆದ ಉದ್ಯೋಗ ಕಡಿತಗಳ ಸಂಖ್ಯೆ ಸುಮಾರು 30,000ಕ್ಕೆ ತಲುಪಿದ್ದು, 2023ರಲ್ಲಿ ಘೋಷಿಸಲಾದ 27,000 ಲೇಆಫ್‌ಗಳ ಸಂಖ್ಯೆಯನ್ನು ಮೀರಿಸಿದೆ.

ಅಧಿಕಾರಶಾಹಿ ಮತ್ತು ಲೇಯರ್ಸ್ ಅನ್ನು ಕಡಿತಗೊಳಿಸಲು ಬಯಸುತ್ತದೆ ಎಂದ ಅಮೆಜಾನ್

ಅಮೆಜಾನ್ ಪ್ರಕಾರ, ಪ್ರಸ್ತುತ ನಡೆಯುತ್ತಿರುವ ಲೇಆಫ್‌ಗಳು ಕಂಪನಿಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಸರಳಗೊಳಿಸುವ ಗುರಿಯನ್ನು ಹೊಂದಿರುವ ವ್ಯಾಪಕ ಸಂಘಟನಾ ಮರುಹೊಂದಾಣಿಕೆಯ ಭಾಗವಾಗಿದೆ. ಅಕ್ಟೋಬರ್‌ನಲ್ಲಿ ನಾನು ಹಂಚಿಕೊಂಡಂತೆ, ಲೇಯರ್ಸ್ ಕಡಿತಗೊಳಿಸುವುದು, ಜವಾಬ್ದಾರಿಯನ್ನು ಹೆಚ್ಚಿಸುವುದು ಮತ್ತು ಬ್ಯೂರೋಕ್ರಸಿಯನ್ನು ದೂರಮಾಡುವ ಮೂಲಕ ನಮ್ಮ ಸಂಸ್ಥೆಯನ್ನು ಬಲಪಡಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಗ್ಯಾಲೆಟ್ಟಿ ತಿಳಿಸಿದ್ದಾರೆ.

ಕಳೆದ ವರ್ಷ ಅನೇಕ ತಂಡಗಳು ಮರುರಚನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದರೂ, ಇನ್ನೂ ಕೆಲವು ತಂಡಗಳು ಇತ್ತೀಚೆಗೆ ಮಾತ್ರ ಈ ಪ್ರಕ್ರಿಯೆಯನ್ನು ಅಂತಿಮಗೊಳಿಸಿದ್ದರಿಂದಲೇ ಈ ಹೆಚ್ಚುವರಿ ಲೇಆಫ್‌ಗಳಿಗೆ ಕಾರಣವಾಯಿತು ಎಂದು ಅವರು ಹೇಳಿದ್ದಾರೆ.

ಅಮೆಜಾನ್ ನಿಂದ ಹಬ್ಬದ ಋತು ಹತ್ತಿರವಾಗುತ್ತಿದ್ದಂತೆ ದೇಶಾದ್ಯಂತ 150,000 ಋತು ಆಧರಿತ ಉದ್ಯೋಗಾವಕಾಶಗಳ ಸೃಷ್ಟಿ

ಭಾರತವೂ ಸೇರಿ ಯಾರು ಪರಿಣಾಮಕ್ಕೆ ಒಳಗಾಗಿದ್ದಾರೆ?

ಅಮೆಜಾನ್‌ನಲ್ಲಿ ನಡೆದ ಇತ್ತೀಚಿನ ಲೇಆಫ್‌ಗಳು, ಮುಖ್ಯವಾಗಿ ಕಾರ್ಪೊರೇಟ್ ವರ್ಕ್‌ಫೋರ್ಸ್‌ ಮೇಲೆ ಕೇಂದ್ರೀಕೃತವಾಗಿದ್ದು, ಗೋದಾಮುಗಳಲ್ಲಿ ಕೆಲಸ ಮಾಡುವ ಫ್ರಂಟ್‌ಲೈನ್ ಅಥವಾ ಫುಲ್ಫಿಲ್‌ಮೆಂಟ್ ಸಿಬ್ಬಂದಿಗೆ ಇದರಿಂದ ನೇರ ಪರಿಣಾಮ ಆಗಿಲ್ಲ ಎಂದು ಕಂಪನಿ ತಿಳಿಸಿದೆ.

ಈ ಉದ್ಯೋಗ ಕಡಿತದ ಪರಿಣಾಮಕ್ಕೆ ಒಳಗಾದ ತಂಡಗಳಲ್ಲಿ ತಂತ್ರಜ್ಞಾನ ವಿಭಾಗ, ಆನ್‌ಲೈನ್ ರಿಟೇಲ್ ಕಾರ್ಯಾಚರಣೆಗಳು, ಅಮೆಜಾನ್ ವೆಬ್ ಸರ್ವಿಸಸ್ (AWS), ಪ್ರೈಮ್ ವೀಡಿಯೊ, ಮೀಡಿಯಾ ವಿಭಾಗಗಳು, ಜೊತೆಗೆ ಮಾನವ ಸಂಪನ್ಮೂಲ (HR), ಆಂತರಿಕ ಬೆಂಬಲ ಮತ್ತು ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸುವ ಘಟಕಗಳು ಸೇರಿವೆ.