Viral Video: ಸೆಲ್ಫ್ ಅಪರೇಷನ್ ಮಾಡ್ಕೊಂಡ ವೈದ್ಯ – ಅಷ್ಟಕ್ಕೂ ಈತ ಮಾಡ್ಕೊಂಡ ಸರ್ಜರಿ ಯಾವುದು ಗೊತ್ತಾ?
ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ವಿಚಿತ್ರ ಮತ್ತು ವೈಶಿಷ್ಟ್ಯಪೂರ್ಣ ಘಟನೆಗಳು ನಡೆಯುತ್ತಿರುತ್ತವೆ. ಅದಕ್ಕೊಂದು ನಿದರ್ಶನವೆಂಬಂತೆ ಚೈನಿಸ್ ತೈಪೆಯಲ್ಲಿ ವೈದ್ಯರೊಬ್ಬರು ತಮಗೆ ಅಗತ್ಯವಿದ್ದ ಶಸ್ತ್ರಚಿಕಿತ್ಸೆಯನ್ನು ತಾವೇ ಮಾಡಿಕೊಂಡಿದ್ದಾರೆ. ಇಷ್ಟಕ್ಕೂ ಅವರು ಒಳಗಾದ ಶಸ್ತ್ರಚಿಕಿತ್ಸೆ ಯಾವುದು ಗೊತ್ತಾ..?
ತೈವಾನ್: ನಮ್ಮ ಪ್ರೀತಿ ಪಾತ್ರರಿಗೆ ಬೆಲೆ ಬಾಳುವ ಅಥವಾ ಅವರಿಗೆ ತುಂಬಾ ಇಷ್ಟವಾಗಿರುವ ಗಿಫ್ಟ್ (Gift) ಕೊಡುವುದು ಸರ್ವೇ ಸಾಮಾನ್ಯ. ಇನ್ನು ಪತ್ನಿಗೆ ಆಕೆಯ ಪತಿ ಕೊಡುವ ಗಿಫ್ಟ್ ಸಹ ಬಹುಕಾಲ ನೆನಪಿನಲ್ಲಿ ಉಳಿಯುವಂತದ್ದಾಗಿರುತ್ತದೆ. ಆದರೆ ಇಲ್ಲೊಬ್ಬರು ಡಾಕ್ಟರ್ ಸ್ವತಃ ತಾವೇ ವ್ಯಾಸೆಕ್ಟಮಿ (Vasectomy) (ಸಂತಾನಹರಣ) ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಇದನ್ನು ತನ್ನ ಪತ್ನಿಗೆ ತಾನು ನೀಡುತ್ತಿರುವ ಗಿಫ್ಟ್ ಎಂದು ಹೇಳಿಕೊಂಡಿರುವ ಸುದ್ದಿಯೊಂದು ಇದೀಗ ಸಿಕ್ಕಾಪಟ್ಟೆ ವೈರಲ್ (Viral Video) ಆಗುತ್ತಿದೆ.
ತೈವಾನ್ ತೈಪೆಯಲ್ಲಿ ಈ ವಿಚಿತ್ರ ವಿದ್ಯಮಾನ ನಡೆದಿದ್ದು, ಡಾ. ಚೆನ್ ವೈ-ನಾಂಗ್ ಎನ್ನುವ ವೈದ್ಯರೊಬ್ಬರು ತಮಗೆ ತಾವೇ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನವನ್ನು ಸೆಳೆದಿದೆ. ತನ್ನ ಪತ್ನಿಗೆ ಮಕ್ಕಳಾಗುವುದು ಬೇಡವೆಂದಿದ್ದು, ಅದಕ್ಕಾಗಿ ತಾನು ಆಕೆಗೆ ಈ ಗಿಫ್ಟನ್ನು ನೀಡುತ್ತಿರುವುದಾಗಿ ಡಾ. ಚೆನ್ ಹೇಳಿಕೊಂಡಿದ್ದಾರೆ.
ಫೇಸ್‌ಬುಕ್ ಹಾಗೂ ಇನ್ ಸ್ಟಾಗ್ರಾಂಗಳಲ್ಲಿ ಪೋಸ್ಟ್ ಮಾಡಿರುವ ಈ ವಿಡಿಯೊ ಇದಿಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮತ್ತು ಈಗಾಗಲೇ 2 ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ ಹಾಗೂ 61 ಸಾವಿರ ಲೈಕ್ಸ್ ಪಡೆದುಕೊಂಡಿದೆ. ಈ ವಿಡಿಯೋದಲ್ಲಿ ಡಾ.ಚೆನ್ ವ್ಯಾಸೆಕ್ಟಮಿ ವಿಧಾನದ 11 ಹಂತಗಳನ್ನು ವಿವರಿಸಿದ್ದು, ಇದನ್ನು ಅವರು ತಾವೇ ಸ್ವತಃ ಈ ಶಸ್ತ್ರಚಿಕಿತ್ಸೆಗೆ ಮಾಡಿಕೊಂಡು ಸಂತಾನಹರಣ ಶಸ್ತ್ರಚಿಕಿತ್ಸೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಿದ್ದಾರೆ.
ಈ ಶಸ್ತ್ರಚಿಕಿತ್ಸೆ ಬಗ್ಗೆ ಜನರಲ್ಲಿರುವ ದುಗುಡವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಡಾ. ಚೆನ್ ತಮಗೆ ಸ್ವತಃ ತಾವೇ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಈ ಶಸ್ತ್ರಚಿಕಿತ್ಸೆಗೆ ಹೆಚ್ಚೆಂದರೆ 15 ನಿಮಿಷಗಳ ಅವಧಿ ಬೆಕಾಗಿರುತ್ತದೆ, ಆದರೆ ಚೆನ್ ತಾವೃ ಸ್ವತಃ ಈ ಶಸ್ತ್ರಚಿಕಿತ್ಸೆಗೆ ಒಳಗಾದ ಕಾರಣ ಅವರಿಗೆ ಒಂದು ಗಂಟೆಗಳ ಕಾಲ ಹಿಡಿಯಿತು.
ಇದನ್ನೂ ಓದಿ: Viral Video: ಜಪಾನ್‌ನಲ್ಲೂ 'ಮೈಸೂರು ಕೆಫೆ'- ಕನ್ನಡತಿಯ ರಿಯಾಕ್ಷನ್ ಹೇಗಿತ್ತು ಗೊತ್ತಾ?
ಈ ವಿಧಾನವನ್ನು ನಡೆಸುತ್ತಲೇ ಮಾತನಾಡಿದ ಡಾ.ಚೆನ್, ‘ಇದು ನಿಜವಾಗಿಯೂ ನೋವಿನಿಂದ ಕೂಡಿತ್ತು ಮತ್ತು ನಿಮ್ಮ ದೇಹದ ಭಾಗಕ್ಕೆ ನೀವೇ ಹೊಲಿಗೆ ಹಾಕುವ ಸಂದರ್ಭದಲ್ಲಿ ವಿಚಿತ್ರ ಅನುಭವವಾಗುತ್ತದೆ’ ಎಂದು ಹೇಳಿಕೊಂಡಿದ್ದಾರೆ. ಅಲ್ಪ ಸ್ವಲ್ಪ ಕಿರಿಕಿರಿಯ ನಡುವೆಯೂ ಡಾ. ಚೆನ್ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.
ಈ ವಿಡಿಯೋದಲ್ಲಿ ಡಾ.ಚೆನ್ ಚೈನೀಸ್ ಭಾಷೆಯಲ್ಲಿ ವಿಧಾನಗಳನ್ನು ವಿವರಿಸುತ್ತಿರುವುದರಿಂದ ನಮಗದು ಅರ್ಥವಾಗುವುದಿಲ್ಲ. ಆದರೂ ಡಾಕ್ಟರ್ ಈ ವಿಧಾನದುದ್ದಕ್ಕೂ ಲವಲವಿಕೆಯಿಂದಿರುವುದನ್ನು ಹಾಗೂ ಆತ್ಮವಿಶ್ವಾಸದಿಂದ ಇರುವುದನ್ನು ಕಾಣಬಹುದಾಗಿದೆ.
ಈ ವಿಡಿಯೋದ ಕೊನೆಯಲ್ಲಿ ಡಾ. ಚೆನ್ ತಾನು ಆರೋಗ್ಯದಿಂದಿರುವುದಾಗಿ ಹೇಳಿಕೊಂಡಿದ್ದು, ಮರುದಿನ ಬೆಳಿಗ್ಗೆ ತಾನು ಆರಾಮದಿಂದ ಇದ್ದುದಾಗಿ ಡಾಕ್ಟರ್ ಹೇಳಿಕೊಂಡಿದ್ದಾರೆ. ಡಾ. ಚೆನ್ ಅವರು ತಮ್ಮ ಸಂತಾನ ಹರಣ ಶಸ್ತ್ರಚಿಕಿತ್ಸೆಯನ್ನು ತಾವೇ ಮಾಡಿಕೊಳ್ಳಲು ನಿರ್ಧರಿಸಿರುವುದನ್ನು ನೆಟ್ಟಿಗರು ಪ್ರಶಂಸಿದ್ದು, ಅವರ ಈ ದೈರ್ಯಕ್ಕೆ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.