Viral Video: ರೈಲ್ವೆ ಟ್ರ್ಯಾಕ್ ಮೇಲಿದ್ದ ಸಿಂಹವನ್ನು ಕೋಲು ಹಿಡಿದು ಓಡಿಸಿದ ಭೂಪ! ವಿಡಿಯೊ ನೋಡಿ
ಗುಜರಾತ್ ಅರಣ್ಯ ಇಲಾಖೆಯ ಕಾವಲುಗಾರರೊಬ್ಬರು ಕೋಲನ್ನು ಹಿಡಿದುಕೊಂಡು ರೈಲ್ವೆ ಹಳಿಯ ಮೇಲಿದ್ದ ಸಿಂಹವನ್ನು ಓಡಿಸಲು ಅದರ ಬಳಿ ಬಂದಿದ್ದಾರೆ. ಈ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಅನೇಕ ಗಮನ ಸೆಳೆದು ಸಖತ್ ವೈರಲ್(Viral Video) ಆಗಿದೆ. ನೆಟ್ಟಿಗರು ಕಾವಲುಗಾರನ ಧೈರ್ಯವನ್ನು ಹೊಗಳಿದ್ದಾರೆ.
Vishwavani News
Jan 11, 2025 2:58 PM
ಗಾಂಧಿನಗರ : ಸಿಂಹವೆಂದರೆ ಬೆಚ್ಚಿಬೀಳುತ್ತಾರೆ ಆದರೆ ಗುಜರಾತ್ ಅಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಕೋಲನ್ನು ಹಿಡಿದುಕೊಂಡು ರೈಲ್ವೆ ಹಳಿಯ ಮೇಲಿದ್ದ ಸಿಂಹವನ್ನು ಓಡಿಸಲು ಅದರ ಬಳಿ ಬಂದಿದ್ದಾರೆ. ಈ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಅನೇಕ ಗಮನ ಸೆಳೆದು ಸಖತ್ ವೈರಲ್(Viral Video) ಆಗಿದೆ. ಜನವರಿ 6 ರಂದು ನಡೆದ ಈ ಘಟನೆಯಲ್ಲಿ, ಅರಣ್ಯ ಇಲಾಖೆ ಸಿಬ್ಬಂದಿ ಹಳಿಯ ಮೇಲಿದ್ದ ಸಿಂಹವನ್ನು ಕೋಲು ಹಿಡಿದು ಓಡಿಸಿದ್ದಾರೆ. ದಾರಿತಪ್ಪಿದ ಹಸು ಅಥವಾ ಕುರಿಯನ್ನು ನಿಭಾಯಿಸುವಂತೆ ಸಿಂಹವನ್ನು ಓಡಿಸಿದ ಇವರನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. ಸಿಂಹ ಕೂಡ ಆತನ ಮೇಲೆ ಆಕ್ರಮಣ ಮಾಡದೇ ಸುಮ್ಮನೇ ಎದ್ದು ಹೋಗಿದೆ.
ಮಧ್ಯಾಹ್ನ 3 ಗಂಟೆ ಸುಮಾರಿಗೆ ಲಿಲಿಯಾ ರೈಲ್ವೆ ನಿಲ್ದಾಣದ ಗೇಟ್ ಸಂಖ್ಯೆ ಎಲ್ಸಿ -31 ರಲ್ಲಿ ಈ ಘಟನೆ ನಡೆದಿದೆ ಎಂದು ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಂಭುಜಿ ಹೇಳಿದ್ದಾರೆ. ಕಾವಲುಗಾರನ ಈ ಧೈರ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಪ್ರಶಂಸೆ ಸಿಕ್ಕಿದೆ. ನೆಟ್ಟಿಗರು ಕಾವಲುಗಾರನ ಧೈರ್ಯವನ್ನು ಹಾಡಿ ಹೊಗಳಿದ್ದಾರೆ.
*रेलवे ट्रैक पर आया शेर, गाय की तरह हांकने लगा वनकर्मी*गुजरात के भावनगर में रेलवे ट्रैक पर शेर आ गया, जिसे वन विभाग के कर्मचारी ने बिना किसी डर के गाय की तरह हांक दिया pic.twitter.com/mTxhT8H5uc— Prakash singh Baghel (@Prakash64244262) January 9, 2025
ವನ್ಯಜೀವಿಗಳಿಗೆ ಸಂಬಂಧಪಟ್ಟ ಮತ್ತೊಂದು ಪೋಸ್ಟ್‌ನಲ್ಲಿ ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ತೊರ್ಷಾ ನದಿಯಿಂದ ಆನೆ ಮರಿಯನ್ನು ರಕ್ಷಿಸಿದ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಅವರು ರಕ್ಷಿಸಿದ ಬಿಯರ್ ಎಂಬ ಹೆಸರಿನ ಆನೆಮರಿ ಕೆಲವೇ ದಿನಗಳ ಹಿಂದೆಯಷ್ಟೇ ಜನಿಸಿತ್ತು ಎನ್ನಲಾಗಿದೆ. ಪಾರ್ಕ್ ಸಿಬ್ಬಂದಿ ಚೆರಾನ್ ಸುಬ್ಬಾ ಅವರು ಬೀಯರ್ ಆನೆಮರಿ ಬೇಗ ಚೇತರಿಸಿಕೊಳ್ಳಲು ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ. ಯಾಕೆಂದರೆ ಅವರು ಮೊದಲ ನಾಲ್ಕು ತಿಂಗಳು ಅದರ ಪಕ್ಕದಲ್ಲಿಯೇ ಮಲಗಿ ಆರೈಕೆ ಮಾಡಿದ್ದಾರಂತೆ.
ಈ ಸುದ್ದಿಯನ್ನೂ ಓದಿ:ತಪ್ಪಿಸಿಕೊಂಡು ಓಡುತ್ತಿದ್ದ ಚಿರತೆಯ ಬಾಲ ಹಿಡಿದು ಗ್ರಾಮಸ್ಥರನ್ನು ರಕ್ಷಿಸಿದ! ವಿಡಿಯೊ ವೈರಲ್
ನಾಲ್ಕು ವರ್ಷಗಳ ನಂತರ, ಬಿಯರ್ ಅನ್ನು ರಾಷ್ಟ್ರೀಯ ಉದ್ಯಾನವನಕ್ಕೆ ನೀಡಲಾಗಿದೆ. ಇದೀಗ ಅರಣ್ಯ ಅಧಿಕಾರಿಗಳೊಂದಿಗೆ ಬಿಯರ್ ಆಡುವ ಹೃದಯಸ್ಪರ್ಶಿ ವಿಡಿಯೊವನ್ನು ಕಸ್ವಾನ್ ಅವರು ಹಂಚಿಕೊಂಡಿದ್ದು, ಈ ಪೋಸ್ಟ್ ಅನೇಕರ ಹೃದಯವನ್ನು ಸ್ಪರ್ಶಿಸಿದೆ.