Viral Video: ಸೋರುತಿಹುದು ಮನೆಯ ಮಾಳಿಗೆ....ಲಂಡನ್ ವಾಸಿ ಭಾರತೀಯನ ಫ್ಲ್ಯಾಟ್ ಹೇಗಿದೆ ಗೊತ್ತಾ?
ಭಾರತದಲ್ಲಿ ಐದು-ಹತ್ತು ಸಾವಿರಕ್ಕೆ ಉತ್ತಮವಾದ ಮನೆ ಬಾಡಿಗೆಗೆ ಸಿಗುತ್ತದೆ. ಅಂತಹದರಲ್ಲಿ ತಿಂಗಳಿಗೆ 1 ಲಕ್ಷ ರೂ, ಬಾಡಿಗೆ ನೀಡಿದರೆ ಐಷಾರಾಮಿ ಮನೆಗಳೇ ಸಿಗುತ್ತವೆ. ಹೀಗಿರುವಾಗ ಲಂಡನ್‍ನಲ್ಲಿ ತಿಂಗಳಿಗೆ 1ಲಕ್ಷ ರೂ ಬಾಡಿಗೆ ಕೊಟ್ಟರೂ ಮನೆ ತುಂಬಾ ನೀರು ಸೋರುತ್ತಿದೆ ಎಂದು ಭಾರತೀಯನೊಬ್ಬ ದೂರಿದ್ದಾನೆ. ಆತನ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ಲಂಡನ್, ಜ.18,205: ಇಂದಿನ ಕಾಲದಲ್ಲಿ ಮನೆ ಬಾಡಿಗೆ ಗಗನಕ್ಕೇರಿದೆ. ಅಂತಹದರಲ್ಲಿ ಇತ್ತೀಚೆಗೆ ತಿಂಗಳಿಗೆ 1 ಲಕ್ಷ ರೂಪಾಯಿಯ ತನ್ನ ಬಾಡಿಗೆಯ ಫ್ಲ್ಯಾಟ್ ತೀರಾ ಕಳಪೆಯದ್ದಾಗಿದೆ ಎಂದು ಭಾರತೀಯ ವ್ಯಕ್ತಿಯೊಬ್ಬರ ದೂರಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆರ್ಯನ್ ಭಟ್ಟಾಚಾರ್ಯ ಎಂಬಾತ, "ಯುಕೆಯಲ್ಲಿ 1,00,000 ರೂ.ಗೆ ಪಡೆದ ಬಾಡಿಗೆ ಫ್ಲ್ಯಾಟ್ ತೀರಾ ಕಳಪೆ ಮಟ್ಟದ್ದು ಎಂಬಂತೆ ಭಾಸವಾಗುತ್ತದೆ" ಎಂದು ವಿಡಿಯೊದಲ್ಲಿ ಹೇಳಿದ್ದಾನೆ. ಹಾಗೇ ನೀರು ಸೋರುತ್ತಿರುವುದನ್ನು ತೋರಿಸಲು ಕ್ಯಾಮೆರಾವನ್ನು ಛಾವಣಿಯ ಕಡೆಗೆ ತಿರುಗಿಸಿದ್ದಾನೆ. ರಾತ್ರಿಯಲ್ಲಿ ಅದನ್ನು ದುರಸ್ತಿ ಮಾಡಲು ಪ್ಲಂಬರ್ ಬರದ ಕಾರಣ ಬೀಳುತ್ತಿರುವ ನೀರನ್ನು ಸಂಗ್ರಹಿಸಲು ಪಾತ್ರೆಗಳನ್ನು ಅದರ ಕೆಳಗೆ ಇಡಬೇಕಾಗಿದೆ" ಎಂದು ಆತ ಹೇಳುತ್ತಿರುವುದನ್ನು ಕಾಣಬಹುದಾಗಿದೆ.
ಇದರಿಂದ ಸಿಟ್ಟಿಗೆದ್ದ ವ್ಯಕ್ತಿಯೊಬ್ಬ ಪೋಸ್ಟ್ ಮಾಡಿ, "ಈ ಬಗ್ಗೆ ಏನು ನಿರ್ಧಾರ ತೆಗೆದುಕೊಳ್ಳುತ್ತೀರಿ? ಅಲ್ಲಿ ವಾಸಿಸುವುದು ದುಬಾರಿ ಎಂದು ತಿಳಿದಿದ್ದರೂ ನೀವು ಯುಕೆಗೆ ಹೋಗಲು ಯಾಕೆ ಆಯ್ಕೆ ಮಾಡಿದ್ದೀರಿ. ನಿಮ್ಮ ಜೀವನಶೈಲಿಯನ್ನು ಸ್ವೀಕರಿಸಿ ಮತ್ತು ಕೆಲಸ ಮಾಡಿ ಅಥವಾ ಅದು ನಿಮಗೆ ಸಮಸ್ಯೆಯಾಗಿದ್ದರೆ ನಿಮ್ಮ ತಾಯ್ನಾಡಿಗೆ ಹಿಂತಿರುಗಿ ಎಂದಿದ್ದಾರೆ. ಆ ವ್ಯಕ್ತಿಗೆ ಬೆಂಬಲ ಸೂಚಿಸಿದ ಇನ್ನೊಬ್ಬರು, "ಇದು ನಿಜ, ಯುಕೆಯಲ್ಲಿ ಬಾಡಿಗೆಗೆ ಮನೆ ಪಡೆಯುವುದು ಕಷ್ಟದ ಕೆಲಸವಾಗಿದೆ" ಎಂದು ಹೇಳಿದ್ದಾನೆ.
ಈ ಸುದ್ದಿಯನ್ನೂ ಓದಿ:Country for Rent: ಬಾಡಿಗೆಗೆ ಲಭ್ಯವಿದ್ದ ದೇಶದ ಬಗ್ಗೆ ಕೇಳಿದ್ದೀರಾ? ಇಲ್ಲಿದೆ ಅಚ್ಚರಿಯ ಮಾಹಿತಿ
ಮೂರನೆಯವರು, "ನಿಮ್ಮ ಸ್ಥಳೀಯ ಕೌನ್ಸಿಲ್ ಅನ್ನು ಸಂಪರ್ಕಿಸಿ ಮತ್ತು ದೂರು ನೀಡಿ - ಮನೆ ಮಾನದಂಡಗಳಿಗೆ ಅನುಗುಣವಾಗಿಲ್ಲದಿದ್ದರೆ ನಿಮ್ಮ ಮಾಲೀಕರು ನಿಮಗೆ ಶುಲ್ಕ ವಿಧಿಸಲು ಸಾಧ್ಯವಿಲ್ಲ." ಎಂದು ಸಲಹೆ ನೀಡಿದ್ದಾನೆ.