#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Waqf Amendment Bill: ವಕ್ಫ್‌ ತಿದ್ದುಪಡಿ ಮಸೂದೆ; ಇದು ಹೊಸ ಆರಂಭ ಎಂದ ಮುಸ್ಲಿಂ ಮಂಚ್‌

ಮುಸ್ಲಿಂ ರಾಷ್ಟ್ರೀಯ ಮಂಚ್ (MRM) ಸಂಚಾಲಕ ಶಾಹಿದ್ ಸಯೀದ್ ಸೇರಿದಂತೆ ಇನ್ನು ಹಲವು ಸದಸ್ಯರು ಮಂಗಳವಾರ (ಜ. 28) ವಕ್ಫ್ ತಿದ್ದುಪಡಿ ಮಸೂದೆಯನ್ನು ಸ್ವಾಗತಿಸಿದ್ದಾರೆ. ಇದು ಹಿಂದುಳಿದ ಸಮುದಾಯಗಳನ್ನು ಸಬಲೀಕರಣಗೊಳಿಸುವ ಮಹತ್ವದ ಕ್ರಮ ಎಂದು ಶ್ಲಾಘಿಸಿದ್ದಾರೆ. ವಕ್ಫ್ ಆಸ್ತಿಗಳು ಇನ್ನು ಮುಂದೆ ಧಾರ್ಮಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದಂತಹ ಕ್ಷೇತ್ರಗಳಿಗೂ ಬಳಸಿಕೊಳ್ಳಲಾಗುವುದು ಎಂದಿದ್ದಾರೆ.

ವಕ್ಫ್‌ ತಿದ್ದುಪಡಿ ಮಸೂದೆಯನ್ನು ಶ್ಲಾಘಿಸಿದ ಮುಸ್ಲಿಂ ಮಂಚ್

Waqf Amendment Bill

Profile Deekshith Nair Jan 28, 2025 6:29 PM

ನವದೆಹಲಿ: ಮುಸ್ಲಿಂ ರಾಷ್ಟ್ರೀಯ ಮಂಚ್ (MRM) ಸಂಚಾಲಕ ಶಾಹಿದ್ ಸಯೀದ್ (Shahid Sayeed) ಅವರು ಮಂಗಳವಾರ (ಜ. 28) ವಕ್ಫ್ ತಿದ್ದುಪಡಿ ಮಸೂದೆಯನ್ನು(Waqf Amendment Bill) ಸ್ವಾಗತಿಸಿದ್ದಾರೆ. ಇದು ಹಿಂದುಳಿದ ಸಮುದಾಯಗಳನ್ನು ಸಬಲೀಕರಣಗೊಳಿಸುವ ಮಹತ್ವದ ಕ್ರಮ ಎಂದು ಶ್ಲಾಘಿಸಿದ್ದಾರೆ. ''ವಕ್ಫ್ ಆಸ್ತಿಗಳು ಇನ್ನು ಮುಂದೆ ಧಾರ್ಮಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದಂತಹ ಕ್ಷೇತ್ರಗಳಿಗೂ ಬಳಸಿಕೊಳ್ಳಲಾಗುವುದು'' ಎಂದು ಸಯೀದ್ ಹೇಳಿದ್ದಾರೆ.

ವಕ್ಫ್ ತಿದ್ದುಪಡಿ ಮಸೂದೆಗೆ ಜಂಟಿ ಸಂಸದೀಯ ಸಮಿತಿ (JLP) ಸೋಮವಾರ (ಜ. 27) ಅನುಮೋದನೆ ನೀಡಿದೆ. 2024ರ ಆಗಸ್ಟ್‌ನಲ್ಲಿ ವಕ್ಫ್‌ ತಿದ್ದುಪಡಿ ಮಸೂದೆಯ ಕರಡನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ವಿಪಕ್ಷಗಳ ಅಸಮಾಧಾನದ ನಡುವೆಯೂ ಮಸೂದೆ ಜಾರಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಈ ಮಧ್ಯೆ ವಕ್ಫ್‌ ತಿದ್ದುಪಡಿ ಮಸೂದೆಯ ವಿಚಾರದಲ್ಲಿ ಕೇಂದ್ರದ ನಡೆಯನ್ನು ಮುಸ್ಲಿಂ ಮಂಚ್‌ನ ಮಹಿಳಾ ವಿಭಾಗದ ಮುಖ್ಯಸ್ಥೆ ರಾಷ್ಟ್ರೀಯ ಸಂಚಾಲಕಿ ಶಾಲಿನಿ ಅಲಿ ಕೂಡ ಶ್ಲಾಘಿಸಿದ್ದಾರೆ. ಇದು ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸುತ್ತದೆ ಎಂದು ಅವರು ಹೇಳಿದ್ದಾರೆ. ಮಸೂದೆಯ ಅನುಮೋದನೆಯು ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ:Waqf Bill: ವಕ್ಫ್ ತಿದ್ದುಪಡಿ ಮಸೂದೆಗೆ ಜಂಟಿ ಸಂಸದೀಯ ಸಮಿತಿ ಅಸ್ತು; ಕೇವಲ 14 ಬದಲಾವಣೆಗೆ ಸಮ್ಮತಿ

MRM ಸದಸ್ಯ ಶಾಹಿದ್ ಅಖ್ತರ್, ವಕ್ಫ್ ತಿದ್ದುಪಡಿ ಮಸೂದೆಯು ಸಾಮಾಜಿಕ ಸಮಾನತೆ ಮತ್ತು ಅಭಿವೃದ್ಧಿಯ ಮೈಲಿಗಲ್ಲು ಎಂದರು. ಇದು ಸಮಾಜಕ್ಕೆ "ಹೊಸ ಆರಂಭ" ಎಂದು ಗುಣಗಾನ ಮಾಡಿದರು.



ಸೋಮವಾರ (ಜ. 27) ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಕ್ಫ್‌ ತಿದ್ದುಪಡಿ ಮಸೂದೆಯಲ್ಲಿ ಎನ್‌ಡಿಎ ಸದಸ್ಯರು ಮಂಡಿಸಿದ್ದ 14 ತಿದ್ದುಪಡಿಗಳನ್ನು ಜೆಪಿಸಿ ಅಂಗೀಕರಿಸಿದ್ದರೆ, ಜೆಎಲ್‌ಪಿಯ ವಿಪಕ್ಷಗಳ ಸದಸ್ಯರು ಮಂಡಿಸಿದ ತಿದ್ದುಪಡಿಗಳನ್ನು ತಿರಸ್ಕರಿಸಲಾಗಿದೆ. ಈ ಮಸೂದೆಯು ದೇಶಾದ್ಯಂತ ಮುಸ್ಲಿಂ ದತ್ತಿ ಆಸ್ತಿಗಳ ನಿರ್ವಹಣೆ ವಿಧಾನದಲ್ಲಿ 44 ಬದಲಾವಣೆಗಳನ್ನು ತರಲಿದೆ. ಧಾರ್ಮಿಕ ಉದ್ದೇಶಗಳಿಗಾಗಿ ವಕ್ಫ್‌ ಆಸ್ತಿಗಳನ್ನು ಬಳಕೆಯ ನೀತಿಯ ಆಧಾರದ ಮೇಲೆ ಪ್ರಶ್ನಿಸದೇ ಇರುವ ಅಧಿಕಾರವನ್ನು ತೆಗೆದುಹಾಕುತ್ತಿರುವುದು ಮುಸ್ಲಿಂ ಸಮುದಾಯದ ವಿರೋಧಕ್ಕೆ ಕಾರಣವಾಗಿದೆ.

14 ಬದಲಾವಣೆಗಳನ್ನು ಅಂಗೀಕರಿಸುವ ಮತದಾನ ಜನವರಿ 29ರಂದು ನಡೆಯಲಿದ್ದು, ಅಂತಿಮ ವರದಿಯನ್ನು ಜನವರಿ 31ರೊಳಗೆ ಸಲ್ಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ.