#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Waqf Bill: ವಕ್ಫ್ ತಿದ್ದುಪಡಿ ಮಸೂದೆಗೆ ಜಂಟಿ ಸಂಸದೀಯ ಸಮಿತಿ ಅಸ್ತು; ಕೇವಲ 14 ಬದಲಾವಣೆಗೆ ಸಮ್ಮತಿ

ವಕ್ಫ್ ತಿದ್ದುಪಡಿ ಮಸೂದೆಗೆ ಜಂಟಿ ಸಂಸದೀಯ ಸಮಿತಿ ಅನುಮೋದನೆ ದೊರಕಿದ್ದು, ಸಮಿತಿಯ ಅಧ್ಯಕ್ಷ ಜಗದಂಬಿಕಾ ಪಾಲ್‌ ನೇತೃತ್ವದ ಸಮಿತಿ ಪಕ್ಷಗಳು ಪ್ರಸ್ತಾಪಿಸಿದ್ದ 44 ತಿದ್ದುಪಡಿಯನ್ನು ತಿರಸ್ಕರಿಸಿದೆ.

14 ಬದಲಾವಣೆಗಳೊಂದಿಗೆ ವಕ್ಫ್ ಮಸೂದೆಗೆ ಜಂಟಿ ಸಂಸದೀಯ ಸಮಿತಿ ಅನುಮೋದನೆ

Waqf Bill

Profile Vishakha Bhat Jan 27, 2025 3:17 PM

ನವದೆಹಲಿ: ಕಳೆದ ವರ್ಷ ಆಗಸ್ಟ್‌ನಲ್ಲಿ ಸದನದಲ್ಲಿ ಮಂಡಿಸಲಾಗಿದ್ದ ವಕ್ಫ್ ತಿದ್ದುಪಡಿ ಮಸೂದೆಯನ್ನು ((Waqf Bill) , 14 ಬದಲಾವಣೆಗಳೊಂದಿಗೆ ಜಂಟಿ ಸಂಸದೀಯ ಸಮಿತಿ ಸೋಮವಾರ ಮಧ್ಯಾಹ್ನ ಅಂಗೀಕರಿಸಿದೆ. ಆಡಳಿತಾರೂಢ ಬಿಜೆಪಿಯ ಜಗದಂಬಿಕಾ ಪಾಲ್‌ ನೇತೃತ್ವದ ಸಮಿತಿಯು ವಿಪಕ್ಷಗಳು ಪ್ರಸ್ತಾಪಿಸಿದ್ದ 44 ತಿದ್ದುಪಡಿಯನ್ನು ತಿರಸ್ಕರಿಸಿದೆ.

ಈ ಬಗ್ಗೆ ಮಾತನಾಡಿದ ಸಮಿತಿಯ ಅಧ್ಯಕ್ಷ ಜಗದಂಬಿಕಾ ಪಾಲ್‌ ಒಟ್ಟು 44 ತಿದ್ದುಪಡಿಗಳನ್ನು ಚರ್ಚಿಸಲಾಗಿದೆ. 6 ತಿಂಗಳ ವಿಸ್ತೃತ ಚರ್ಚೆಗಳ ನಂತರ, ಈ ನಿರ್ಧಾರಕ್ಕೆ ಬರಲಾಗಿದೆ. ಇದು ನಮ್ಮ ಅಂತಿಮ ಸಭೆ. ಹಾಗಾಗಿ ಬಹುಮತದ ಆಧಾರದ ಮೇಲೆ 14 ತಿದ್ದುಪಡಿಗಳನ್ನು ಸಮಿತಿ ಅಂಗೀಕರಿಸಿದೆ. ವಿರೋಧ ಪಕ್ಷಗಳೂ ತಿದ್ದುಪಡಿಗಳನ್ನು ಸೂಚಿಸಿದ್ದವು. ನಂತರ ಮತದಾನ ನಡೆಸಲಾಯಿತು. ಆಗ ಬೆಂಬಲಕ್ಕೆ 10 ಮತಗಳು ಬಂದಿದ್ದವು. ಇದರಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.



ವಿಪಕ್ಷ ಸಂಸದರು ಸಮಿತಿಯ ಕಾರ್ಯವೈಖರಿಯನ್ನು ನಿರಾಕರಿಸಿದ್ದಾರೆ. ಸಮಿತಿ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ. ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಪಾಲ್‌ ವಿರುದ್ಧ ಕಿಡಿ ಕಾರಿದ್ದಾರೆ. ಪಾಲ್ ಸರ್ವಾಧಿಕಾರಿ ರೀತಿಯಲ್ಲಿ ವರ್ತಿಸಿದ್ದಾರೆ ಅವರು ನಮಗೆ ಏನನ್ನೂ ಮಾತನಾಡಲು ಬಿಡಲಿಲ್ಲ ಎಂದು ಆರೋಪಿಸಿದ್ದಾರೆ.



ಈ ಸುದ್ದಿಯನ್ನೂ ಓದಿ : Waqf Bill: ಸಂಸದೀಯ ಸಮಿತಿ ಸಭೆಯಲ್ಲಿ ಭಾರಿ ಗದ್ದಲ; ಓವೈಸಿ ಸೇರಿದಂತೆ 10 ಸಂಸದರು ಅಮಾನತು

ಈ ಸಂಬಂಧ ಶುಕ್ರವಾರ ನಡೆದಿದ್ದ ಸಭೆಯಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವೆ ಭಾರೀ ಗದ್ದಲ ಏರ್ಪಟ್ಟಿತ್ತು. ಸಭೆಯ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ 10 ವಿಪಕ್ಷ ಸಂಸದರನ್ನು ಒಂದು ದಿನಗಳ ಕಾಲ ಅಮಾನತು ಮಾಡಲಾಗಿತ್ತು.