ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Winter Fashion 2025: ಚಳಿಗಾಲಕ್ಕೆ ಬಂತು ಫುಲ್ ಸ್ಲೀವ್ ಕ್ರಾಪ್ ಟಾಪ್ಸ್

Winter Fashion 2025: ಚಳಿಗಾಲದ ಸೀಸನ್‌ಗೆ ಹೊಂದುವಂತೆ ಫುಲ್ ಸ್ಲೀವ್ ಕ್ರಾಪ್ ಟಾಪ್‌ಗಳು ಬಿಡುಗಡೆಗೊಂಡಿವೆ. ಯಾವ್ಯಾವ ಬಗೆಯವು ಟ್ರೆಂಡಿಯಾಗಿವೆ? ಹೇಗೆಲ್ಲಾ ಧರಿಸಬಹುದು? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ತಿಳಿಸಿದ್ದಾರೆ.

Winter Fashion 2025: ಚಳಿಗಾಲಕ್ಕೆ ಬಂತು ಫುಲ್ ಸ್ಲೀವ್ ಕ್ರಾಪ್ ಟಾಪ್ಸ್

ಚಿತ್ರಕೃಪೆ: ಪಿಕ್ಸೆಲ್

Profile Siddalinga Swamy Jan 17, 2025 7:21 PM

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಈ ಸೀಸನ್‌ನಲ್ಲಿ ಫುಲ್ ಸ್ಲೀವ್ ಕ್ರಾಪ್ ಟಾಪ್‌ಗಳು (Winter Fashion 2025) ಬಂದಿವೆ. ಚಳಿಗಾಲದ ಗಾಳಿಗೆ ಹೊಂದುವಂತಹ ಡಿಸೈನ್‌ನಲ್ಲಿ ಆಗಮಿಸಿವೆ. ನೋಡಲು ಫುಲ್ ಸ್ಲೀವ್ ಆಗಿದ್ದರೂ ಕೂಡ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ! ಲೇಯರ್ಡ್ ಲುಕ್ ಸಾಥ್ ನೀಡಬಹುದಾದಂತಹ ವಿನ್ಯಾಸದಲ್ಲಿ ಫ್ಯಾಬ್ರಿಕ್‌ನಲ್ಲಿ ಬಿಡುಗಡೆಗೊಂಡಿವೆ.

ಡಿಫರೆಂಟ್ ಲುಕ್‌ಗಾಗಿ ಬಲೂನ್ ಫುಲ್ ಸ್ಲೀವ್ ಕ್ರಾಪ್ ಟಾಪ್

ಬಾಡಿಕಾನ್ ಕ್ರಾಪ್ ಟಾಪ್‌ಗಳು ಇದೀಗ ಬಲೂನ್ ಸ್ಲೀವ್‌ನಲ್ಲೂ ದೊರೆಯುತ್ತಿವೆ. ಇವು ನೋಡಲು ಕೊಂಚ ಡ್ರಾಮಾಟಿಕ್ ಆಗಿದ್ದರೂ ಕಂಪ್ಲೀಟ್ ಡಿಫರೆಂಟ್ ಲುಕ್ ನೀಡುತ್ತವೆ. ಫಾರ್ಮಲ್ ಪ್ಯಾಂಟ್‌ನಿಂದ ಹಿಡಿದು ಕ್ಯೂಲ್ಲೊಟ್ಸ್, ನೀ ಲೆಂಥ್ ಪ್ಯಾಂಟ್ ಹಾಗೂ ಸ್ಕಟ್ರ್ಸ್‌ನೊಂದಿಗೂ ಧರಿಸಬಹುದು. ಆದರೆ ಆಯ್ಕೆ ಮಾಡುವಾಗ ಮಾತ್ರ ನಿಮ್ಮ ಬಹುತೇಕ ಉಡುಪಿಗೆ ಹೊಂದುವಂತಹ ಕಾಮನ್ ಕಲರ್‌ನದ್ದನ್ನು ಖರೀದಿಸಬೇಕು ಎಂದು ಸಲಹೆ ನೀಡುತ್ತಾರೆ ಸ್ಟೈಲಿಸ್ಟ್ ದಿಯಾ.

3

ಸ್ಕಿನ್ ಟೈಟ್ ಸ್ಟ್ರೇಚಬಲ್ ಸ್ಲೀವ್ ಕ್ರಾಪ್ ಟಾಪ್

ಹೆಚ್ಚು ಡಿಸೈನ್ ಇಲ್ಲದ ಸ್ಟ್ರೇಚಬಲ್ ಫ್ಯಾಬ್ರಿಕ್‌ನ ಕ್ರಾಪ್ ಟಾಪ್‌ಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ನೋಡಲು ಸ್ಲೀಕ್ ಲುಕ್ ನೀಡುವ ಇವು ನಾರ್ಮಲ್ ಹಾಗೂ ಸ್ಲಿಮ್ ಬಾಡಿಟೈಪ್‌ನವರಿಗೆ ಮಾತ್ರ ಸೂಟ್ ಆಗುತ್ತವೆ. ಪ್ಲಂಪಿಯಾಗಿರುವವರಿಗೆ ನಾಟ್ ಓಕೆ. ಈ ಸ್ಟ್ರೆಚಬಲ್ ಸ್ಲೀವ್‌ನ ಕ್ರಾಪ್ ಟಾಪ್‌ಗಳನ್ನು ಲೇಯರ್ಡ್ ಲುಕ್‌ಗಾಗಿ ಧರಿಸುವುದು ಹೆಚ್ಚಾಗಿದೆ. ಈ ಟಾಪ್‌ನ ಮೇಲೆ ಆರಾಮವಾಗಿ ಜಾಕೆಟ್ ಕೋಟ್ ಹಾಗೂ ಯಾವುದೇ ವೇಸ್ಟ್‌ಕೋಟ್ ಧರಿಸಬಹುದು ಎನ್ನುತ್ತಾರೆ ಸ್ಟೈಲಿಸ್ಟ್ ಧನ್ಯಾ.

ಈ ಸುದ್ದಿಯನ್ನೂ ಓದಿ | Winter Jacket Styling 2025: ಚಳಿಗಾಲದ ಜಾಕೆಟ್‌ನಲ್ಲೂ ಸ್ಟೈಲಿಶ್ ಆಗಿ ಕಾಣಿಸಲು ಇಲ್ಲಿದೆ ಸಿಂಪಲ್ ಐಡಿಯಾ

4

ಬೆಚ್ಚಗಿಡುವ ಟರ್ಟಲ್ ನೆಕ್ ಫುಲ್ ಸ್ಲೀವ್ ಕ್ರಾಪ್ ಟಾಪ್

ಕುತ್ತಿಗೆಯವರೆಗೂ ಇರುವ ಟರ್ಟಲ್ ನೆಕ್‌ನ ಟೀ ಶರ್ಟ್ ಶೈಲಿಯ ಫುಲ್ ಸ್ಲೀವ್ ಕ್ರಾಪ್ ಟಾಪ್‌ಗಳು ಮಾನ್ಸೂನ್ ಹಾಗೂ ವಿಂಟರ್ ಲುಕ್‌ಗೆ ಹೇಳಿ ಮಾಡಿಸಿದಂತಿರುತ್ತವೆ. ಇವುಗಳ ಮೇಲೆ ಯಾವುದೇ ಬಗೆಯ ಓವರ್‌ಕೋಟ್, ಬ್ಲೇಝರ್ ಧರಿಸಬಹುದು ಎಲ್ಲದಕ್ಕೂ ಸೂಟ್ ಆಗುತ್ತದೆ. ನೋಡಲು ಕಾರ್ಪೋರೇಟ್ ಲುಕ್ ನೀಡುತ್ತದೆ ಎನ್ನುತ್ತಾರೆ ಫ್ಯಾಷನಿಸ್ಟ್‌ ದಾಮಿನಿ.

* ಇವು ನೋಡಲು ಸ್ಟೈಲಿಶ್ ಆಗಿ ಕಾಣಿಸುತ್ತವೆ.

* ಟೀನೇಜ್ ಹುಡುಗಿಯರಿಗೆ ಬೆಸ್ಟ್ ಟಾಪ್‌ಗಳಿವು.

* ಗ್ಲಾಮರಸ್ ಲುಕ್ ನೀಡುತ್ತವೆ.

(ಲೇಖಕಿ: ಫ್ಯಾಷನ್ ಪತ್ರಕರ್ತೆ)