ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕನ್ನಡತಿ ಶ್ರೇಯಾಂಕಾ ಬೌಲಿಂಗ್‌ ಕಮಾಲ್‌; 10 ವರ್ಷಗಳ ಬಳಿಕ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಗೆದ್ದ ಭಾರತ

Australia Women vs India Women: ಚೇಸಿಂಗ್‌ ವೇಳೆ ಆಸೀಸ್‌ ಪರ ಆಶ್ಲೀ ಗಾರ್ಡ್ನರ್ ಏಕಾಂಗಿ ಹೋರಾಟ ನಡೆಸಿ ಅರ್ಧಶತ ಬಾರಿಸಿದರು. ಉಳಿದಂತೆ ಫೋಬೆ ಲಿಚ್‌ಫೀಲ್ಡ್ 27 ರನ್‌ ಗಳಿಸಿದರು. ಆಶ್ಲೀ ಗಾರ್ಡ್ನರ್ 5 ಬೌಂಡರಿ ಮತ್ತು ಒಂದು ಸಿಕ್ಸರ್‌ ನೆರವಿನಿಂದ 57 ರನ್‌ ಗಳಿಸಿದರು. ಉಭಯ ಆಟಗಾರ್ತಿಯರದ್ದೇ ತಂಡದ ಪರ ದಾಖಲಾದ ಗರಿಷ್ಠ ಸೋರ್‌.

10 ವರ್ಷಗಳ ಬಳಿಕ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಗೆದ್ದ ಭಾರತ

Shreyanka Patil took two wickets in the powerplay -

Abhilash BC
Abhilash BC Feb 21, 2026 6:08 PM

ಅಡಿಲೇಡ್, ಫೆ.21: ಶನಿವಾರ ಅಡಿಲೇಡ್ ಓವಲ್‌ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ(Australia Women vs India Women)ವನ್ನು 17 ರನ್‌ಗಳಿಂದ ಸೋಲಿಸುವ ಮೂಲಕ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ವಿರುದ್ಧ 2-1 ಸರಣಿ ಜಯ ಸಾಧಿಸಿತು. ಇದು ಆಸ್ಟ್ರೇಲಿಯಾ ವಿರುದ್ಧ ಭಾರತದ ಎರಡನೇ ಸರಣಿ ಗೆಲುವಾಗಿದೆ. ಕೊನೆಯ ಕೊನೆಯ ಬಾರಿಗೆ 2016 ರಲ್ಲಿ ಆಸೀಸ್ ತಂಡವನ್ನು ಭಾರತ ಸೋಲಿಸಿತ್ತು. ಆಗ ಮಿಥಾಲಿ ರಾಜ್ ನೇತೃತ್ವದ ತಂಡ 2-1 ಅಂತರದಿಂದ ಜಯ ಸಾಧಿಸಿತ್ತು. ಇದೀಗ 10 ವರ್ಷದ ಬಳಿಕ ಮತ್ತೊಂದು ಸರಣಿ ಗೆದ್ದ ಸಾಧನೆ ಮಾಡಿದೆ.

ಹತ್ತು ವರ್ಷಗಳ ಹಿಂದೆ, ಪ್ರವಾಸಿ ಭಾರತ ತಂಡವು ಮೊದಲ ಪಂದ್ಯದಲ್ಲಿ ಐದು ವಿಕೆಟ್‌ಗಳಿಂದ ಮತ್ತು ಎರಡನೇ ಪಂದ್ಯದಲ್ಲಿ 10 (ಡಕ್‌ವರ್ತ್ ಲೂಯಿಸ್ ವಿಧಾನ) ಅಂತರದಿಂದ ಜಯಗಳಿಸಿ ಸರಣಿಯನ್ನು ವಶಪಡಿಸಿಕೊಂಡಿತ್ತು. ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ 15 ರನ್‌ಗಳ ಜಯದೊಂದಿಗೆ ಕ್ಲೀನ್ ಸ್ವೀಪ್ ಅವಮಾನ ತಪ್ಪಿಸಿಕೊಂಡಿತ್ತು. ಈ ಬಾರಿಯೂ ವೈಟ್‌ವಾಶ್‌ ಮುಖಭಂಗದಿಂದ ಪಾರಾಯಿತು.

ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಬ್ಯಾಟಿಂಗ್‌ ಆಯ್ದುಕೊಂಡಿತು. ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಜೆಮಿಮಾ ರೋಡಿಗಸ್‌ ಅರ್ಧಶತಕ ಬಾರಿಸುವ ಮೂಲಕ ತಂಡ 6 ವಿಕೆಟ್‌ಗೆ 176 ರನ್‌ ಪೇರಿಸಿತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 9 ವಿಕೆಟ್‌ಗೆ 159 ರನ್‌ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಸ್ಪಿನ್ನರ್‌ಗಳಾದ ಶ್ರೇಯಾಂಕಾ ಪಾಟೀಲ್‌(22ಕ್ಕೆ3) ಮತ್ತು ಶ್ರೀ ಚರಣಿ(32ಕ್ಕೆ3) ವಿಕೆಟ್‌ ಕಿತ್ತು ಆಸೀಸ್‌ ಕುಸಿತಕ್ಕೆ ಕಾರಣರಾದರು.

ಭಾರತ-ದಕ್ಷಿಣ ಆಫ್ರಿಕಾ ಸೂಪರ್-‌8 ಪಂದ್ಯದ ಪಿಚ್‌ ರಿಪೋರ್ಟ್‌, ಸಂಭಾವ್ಯ ತಂಡ ಹೇಗಿದೆ?

ಚೇಸಿಂಗ್‌ ವೇಳೆ ಆಸೀಸ್‌ ಪರ ಆಶ್ಲೀ ಗಾರ್ಡ್ನರ್ ಏಕಾಂಗಿ ಹೋರಾಟ ನಡೆಸಿ ಅರ್ಧಶತ ಬಾರಿಸಿದರು. ಉಳಿದಂತೆ ಫೋಬೆ ಲಿಚ್‌ಫೀಲ್ಡ್ 27 ರನ್‌ ಗಳಿಸಿದರು. ಆಶ್ಲೀ ಗಾರ್ಡ್ನರ್ 5 ಬೌಂಡರಿ ಮತ್ತು ಒಂದು ಸಿಕ್ಸರ್‌ ನೆರವಿನಿಂದ 57 ರನ್‌ ಗಳಿಸಿದರು. ಉಭಯ ಆಟಗಾರ್ತಿಯರದ್ದೇ ತಂಡದ ಪರ ದಾಖಲಾದ ಗರಿಷ್ಠ ಸೋರ್‌.

ಇದಕ್ಕೂ ಮುನ್ನ ಬ್ಯಾಟಿಂಗ್‌ ನಡೆಸಿದ ಭಾರತಕ್ಕೆ ಕುಚಿಕು ಗೆಳತಿಯರಾದ ಸ್ಮೃತಿ ಮತ್ತು ಜೆಮೀಮಾ ಉತ್ತಮ ಜತೆಯಾಟ ನಡೆಸುವ ಮೂಲಕ ಆಧಾರವಾದರು. ಈ ಜೋಡಿ 2ನೇ ವಿಕೆಟ್‌ಗೆ 121 ರನ್‌ಗಳ ಜತೆಯಾಟ ನಡೆಸಿತು. ಮಂಧಾನ 55 ಎಸೆತಗಳಿಂದ 8 ಬೌಂಡರಿ ಮತ್ತು 3 ಸಿಕ್ಸರ್‌ ಸಿಡಿಸಿ 82 ರನ್‌ ಗಳಿಸಿದರೆ, ಜೆಮಿಮಾ 59 ರನ್‌ ಗಳಿಸಿದರು. ಆಸೀಸ್‌ ಪರ ಅನ್ನಾಬೆಲ್ ಸದರ್ಲ್ಯಾಂಡ್ 2 ವಿಕೆಟ್‌ ಕಿತ್ತರು.